2006, ಜೂನ್ 26. ಭಾರತದ ಕ್ಷಿಪಣಿ ಜನಕ, ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ರವರು ಭಾರತೀಯ ವಾಯುಪಡೆಯ ಸೂಪರ್ ಸಾನಿಕ್ ಯುದ್ಧ ವಿಮಾನ
"ಸುಖೋಯ್- 30 ಎಂ.ಕೆ.ಐನಲ್ಲಿ 40 ನಿಮಿಷಗಳ ಕಾಲ ಹಾರಾಡವ ಮೂಲಕ ದೇಶದ ಗಮನ ಸೆಳೆದಿದ್ದರು. ಕಾರಣ ಡಾ. ಅಬ್ದುಲ್ ಕಲಾಂರವರು ವಾಯುಪಡೆಯ ಯುದ್ಧ ವಿಮಾನದಲ್ಲಿ ಹಾರಾಡಿದ ದೇಶದ ಪ್ರಪ್ರಥಮ ರಾಷ್ಟ್ರಪತಿಯಾಗಿದ್ದರು. ರಾಷ್ಟ್ರಪತಿಯವರು "ಸುಖೋಯ್" ನಲ್ಲಿ ಕುಳಿತು ಆಕಾಶಕ್ಕೆ ನೆಗೆಯುವ ಮುಂಚೆ ವಾಯುಪಡೆಯ ಅಧಿಕಾರಿಗಳು ಗುರುತ್ವಾಕರ್ಷಣ ಒತ್ತಡಗಳ ಬದಲಾವಣೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ರಾಷ್ಟ್ರಪತಿಯವರಿಗೆ "ಜಿ ಸೂಟ್" ಎಂಬ ರಕ್ಷಣಾ ಕವಚವನ್ನು ತೊಡಿಸಿದ್ದರು .
****************
1969 ಜುಲೈ 16.
ಭೂಮಿಯಿಂದ ಎರಡೂವರೆ ಲಕ್ಷ ಮೈಲು ದೂರದಲ್ಲಿರುವ ಚಂದ್ರನಲ್ಲಿಗೆ ಅಮೇರಿಕಾದ ನೀಲ್ ಆರ್ಮ್‌ಸ್ಟ್ರಾಂಗ್, ಎಡ್ವಿನ್ ಅಲ್ಡ್ರಿನ್ ಹಾಗೂ ಮೈಕಲ್ ಕಾಲಿನ್ಸ್ ಎಂಬ ಮೂರು ಗಗನಯಾತ್ರಿಗಳು ಅಪ್ಪೋಲೋ 11 ಎಂಬ ನೌಕೆಯ ಮೂಲಕ ಪಯಣಿಸಿ ವಿಶ್ವದ ಗಮನ ಸೆಳೆದಿದ್ದರು. ಯಾಕೆಂದರೆ, ಅದು ಚಂದ್ರನಲ್ಲಿಗೆ ಮಾನವನ ಮೊದಲ ಯಾತ್ತೆಯಾಗಿತ್ತು.
ಅಮೆರಿಕಾದ ಫ್ಲೋರಿಡಾದ ಕೊಕ್ಕೋವಾ ಬೀಚ್'ನಿಂದ ಗಗನಯಾತ್ರಿಗಳು ಅಪೋಲೋ 11 ನೌಕೆಯನ್ನು ಏರುವ ಮುಂಚೆ ಅಂತರಿಕ್ಷದ ಪ್ರತಿಕೂಲ ಪರಿಸರವನ್ನು ಎದುರಿಸಲು ದುಬಾರಿ ಬೆಲೆಬಾಳುವ ಹಾಗೂ ಭಾರವಾದ ಸ್ಪೇಸ್ ಸೂಟ್ ( ಅಂತರಿಕ್ಷ ತೊಡುಗೆ) ಮತ್ತು ಹೆಲ್ಮೆಟ್ ( ದೊಡ್ಡ ಶಿರಸ್ತ್ರಾಣ) ಧರಿಸಿದ್ದರು. ಜೊತೆಗೆ ಕೋಟ್ಯಂತರ ಡಾಲರ್ ವೆಚ್ಚದ oxygen (ಆಮ್ಲಜನಕ) ಮತ್ತು ಸಾಕಷ್ಟು ನೀರನ್ನು ಹೊತ್ತೊಯ್ದಿದ್ದರು.
*****************
ರಜಬ್ 27. ಪವಿತ್ರ ಮಕ್ಕಾದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಫ್ಯಾಲಸ್ತೀನಿನ ಮಸ್ಜಿದುಲ್ ಅಖ್ಸಾಕ್ಕೆ ಬುರಾಖ್ ಎಂಬ ವಾಹನದ ಮೂಲಕ ಇಸ್ರಾಅ್ ( ನಿಶಾಯಾನ ) ನಡೆಸಿ ನಂತರ ಅಲ್ಲಿಂದ ಸಪ್ತ ಗಗನಗಳಾಚೆಯ ಸಿದ್ರತುಲ್ ಮುಂತಹಾಕ್ಕೆ ತೆರಳಿ ಅದೇ ರಾತ್ರಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲರವರು ಸುರಕ್ಷಿತವಾಗಿ ಮಕ್ಕಾಕ್ಕೆ ಮರಳಿ ಬಂದರು.
ಪ್ರಸ್ತುತ ಮೂರು ಘಟನೆಗಳನ್ನು ಅವಲೋಕಿಸುವಾಗ ನಿಮ್ಮಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಬಹುದು. ಭೂಮಿಯಿಂದ ಕೇವಲ 25 ಸಾವಿರ ಅಡಿಗಳ ಎತ್ತರದಲ್ಲಿ ಹಾರಾಡಿದ ರಾಷ್ಟ್ರಪತಿಯವರು ಗುರುತ್ವಾಕರ್ಷಣ ಬಲದ ತೀವ್ರತೆಯನ್ನು ಕ್ಷೀಣಗೊಳಿಸಲು "ಜಿ-ಸೂಟ್" ಅನ್ನು ಧರಿಸಿದ್ದರೆ, ಭೂಮಿಯಿಂದ ಎರಡೂವರೆ ಲಕ್ಷ ಮೈಲು ದೂರದಲ್ಲಿರುವ ಚಂದ್ರನಲ್ಲಿಗೆ ಪಯಣಿಸುವಾಗ ಗಗನಯಾನಿಗಳು ಅಲ್ಲಿನ ಪ್ರತಿಕೂಲ ಪರಿಸರವನ್ನು ಎದುರಿಸಲು ಸ್ಪೇಸ್ ಸೂಟನ್ನೂ ಹೆಲ್ಮೆಟನ್ನೂ ಧರಿಸಿದ್ದರು. ಆದರೆ ಚಂದ್ರನಿಗಿಂತಲೂ ಕೋಟ್ಯಂತರ ಮೈಲುಗಳಾಚೆಯ ಲೋಕಕ್ಕೆ ಪ್ರಯಾಣ ಮಾಡಿದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಇಂತಹ ಸುರಕ್ಷಾ ಕವಚವನ್ನು ಧರಿಸದೆ ಹೇಗೆ ಪ್ರಯಾಣ ಮಾಡಿದರು?
ಕೆಲವೆಡೆ ಚರ್ಮ ಸುಡುವಷ್ಟು ಉಷ್ಣತೆ ಮತ್ತು ಕೆಲವೆಡೆ ದೇಹ ಮರಗಟ್ಟಿ ಹೋಗುವಷ್ಟು ಚಳಿಯಿರುವ ಪರಿಸರದಲ್ಲಿ ತಮ್ಮನ್ನು ಒಗ್ಗಿಸಿಕೊಳ್ಳಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ಹೇಗೆ ಸಾಧ್ಯವಾಯಿತು?
ಮಾರಕ ವಿಕಿರಣಗಳು ಮತ್ತು ಕಣಗಳಿಂದ ತುಂಬಿದ ಅಂತರಿಕ್ಷದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ
ವಸಲ್ಲಮರವರು ಹೇಗೆ ಸುರಕ್ಷಿತ ಪ್ರಯಾಣ ಬೆಳೆಸಿದರು? ಉಸಿರಾಡಲು ಗಾಳಿ ಇಲ್ಲದಿರುವ ಅಂತರಿಕ್ಷಕ್ಕೆ ಗಗನಯಾನಿಗಳು ಕೋಟಿ ಡಾಲರ್ ವೆಚ್ಚ ಮಾಡಿ ಆಕ್ಸಿಜನ್ ಸಿಲಿಂಡರ್ ಗಳನ್ನು ಕೊಂಡೊಯ್ದಿರುವಾಗ ಆಕ್ಸಿಜನ್ ಇಲ್ಲದ ಲೋಕದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಗೆ ಉಸಿರಾಡಿದರು? ನೀರಿಲ್ಲದೆ ಹೇಗೆ ಬದುಕಿದರು?
ಅಷ್ಟೇ ಏಕೆ, ಭೂಮಿಯಿಂದ ಚಂದ್ರನಲ್ಲಿಗೆ ಹೋಗಿ, ಅಲ್ಲಿ ಕೆಲ ತಾಸುಗಳ ಕಾಲ ವಿಹರಿಸಿ ಮತ್ತೆ ಭೂಮಿಗೆ ಮರಳಲು ಗಗನಯಾನಿಗಳಿಗೆ ಕನಿಷ್ಠ ಒಂದು ವಾರ ಬೇಕಾಯಿತು. ಭೂಮಿಯಿಂದ ಕೋಟ್ಯಂತರ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹಕ್ಕೆ ಹೋಗಿ ಬರಲು ಕನಿಷ್ಠ ಐದಾರು ತಿಂಗಳುಗಳು ಅಥವಾ ಹತ್ತಾರು ತಿಂಗಳುಗಳೇ ಬೇಕಾಗಬಹುದು ಎಂದು ಬಾಹ್ಯಾಕಾಶ ವಿಜ್ಞಾನಿಗಳು ಅಂದಾಜಿಸುತ್ತಾರೆ. ಹಾಗಾದರೆ ಚಂದ್ರ ಮತ್ತು ಮಂಗಳ ಗ್ರಹಕ್ಕಿಂತ ಕೋಟ್ಯಂತರ ಮೈಲುಗಳಾಚೆಯ ಸಪ್ತಗಗನಗಳನ್ನು ದಾಟಿ ಪೂರ್ವಿಕ ಪ್ರವಾದಿಗಳನ್ನು ಭೇಟಿಮಾಡಿ, ಅಲ್ಲಿನ ವೈಭವವನ್ನು ಕಂಡು, ಅಲ್ಲಾಹನ ದಿವ್ಯ ದರ್ಶನ ಪಡೆದು ಅದೇ ರಾತ್ರಿ ಮರಳಿ ಬರಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ಹೇಗೆ ಸಾಧ್ಯವಾಯಿತು ?
ಹೀಗೆ ಪ್ರಶ್ನೆಗಳ ಪಟ್ಟಿಯು ಬೆಳೆಯುತ್ತಲೇ ಹೋಗುತ್ತದೆ. ಹೇಗೆ ಸಾಧ್ಯ ? ಎಂಬ ಪ್ರಶ್ನೆಗಳು ದೀರ್ಘವಾದಂತೆ ಮಿಅ್'ರಾಜ್ ಯಾತ್ರೆಯು ಒಂದು ಅದ್ಭುತ ಯಾತ್ರೆಯಾಗಿತ್ತು ಎಂಬುದು ಮತ್ತಷ್ಟು ಖಚಿತವಾಗುತ್ತದೆ. ಯಾಕೆಂದರೆ, ಒಂದು ಘಟನೆಯು ಅದ್ಭುತವೆನಿಸುವುದು ಅದು ವಿವರಣೆಗೆ ನಿಲುಕದ ವರ್ಣನಾತೀತವಾದಾಗ. ವರ್ಣನೆ ಅಥವಾ ವಿವರಣೆಗೆ ಸಾಧ್ಯವಾದರೆ ಅದು ಅದ್ಭುತವೆನಿಸುವುದಿಲ್ಲ.
ವೈಜ್ಞಾನಿಕ ಉಪಕರಣಗಳ ಸಹಾಯದೊಂದಿಗೆ, ಸುರಕ್ಷಾ ಕವಚಗಳೊಂದಿಗೆ, ಆಕ್ಸಿಜನ್ ಮತ್ತು ನೀರಿನೊಂದಿಗೆ ಚಂದ್ರನಲ್ಲಿಗೆ ಪಯಣಿಸುವುದನ್ನು ಆಧುನಿಕ ಜಗತ್ತು ಅದ್ಭುತವಾಗಿ ಪರಿಗಣಿಸುವಾಗ 6ನೇ ಶತಮಾನದಲ್ಲಿ ಯಾವ ತಂತ್ರಜ್ಞಾನದ ಸಹಾಯವಿಲ್ಲದೆ ಮಿಅ್'ರಾಜ್ ಯಾತ್ರೆಯು ನಡೆದಿರುವುದು ನಿಜಕ್ಕೂಅದ್ಭುತವಲ್ಲವೇ?
ಪ್ರಸ್ತುತ ಇಸ್ರಾಅ್ (ನಿಶಾಯಾನ) ಮತ್ತು ಮಿಅ್'ರಾಜ್ (ಆಕಾಶಾರೋಹಣ) ಎಂಬ ಎರಡು ಅದ್ಭುತ ಘಟನೆಗಳನ್ನು ಮುಸ್ಲಿಮ್ ಜಗತ್ತು ಸಂಶಯಾತೀತವಾಗಿ ಅಂಗೀಕರಿಸುತ್ತದೆ. ಈ ಅಂಗೀಕಾರವು ಮುಸ್ಲಿಮನ ದೃಢವಿಶ್ವಾಸದ ಸಂಕೇತವಾಗಿದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರ ಮೇಲಿರುವ ನಂಬಿಕೆ ಮತ್ತು ಪ್ರೇಮದ ದ್ಯೋತಕವಾಗಿದೆ.
ಸಾಮಾನ್ಯ ಮನುಷ್ಯನನ್ನು ಚಂದ್ರನಲ್ಲಿಗೆ ಕಳುಹಿಸಲು ಶಕ್ತನಾದ ಅಲ್ಲಾಹನಿಗೆ ಅಸಾಮಾನ್ಯ ಮನುಷ್ಯ ಹಾಗೂ ಸಯ್ಯಿದುಲ್ ಬಶರ್ ಆದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಅದಕ್ಕಿಂತಲೂ ದೂರವಿರುವ ಸಿದ್ರತುಲ್ ಮುಂತಹಾಕ್ಕೆ ಕಳುಹಿಸಲು ಸಾಧ್ಯವಿಲ್ಲವೇ ಎಂದು ಸತ್ಯವಿಶ್ವಾಸಿಯ ಮನಸ್ಸು ಪ್ರಶ್ನಿಸುತ್ತದೆ. ಮಕ್ಕಾ ಮುಶ್ರಿಕರು ಪ್ರಸ್ತುತ ಘಟನೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಅಪಹಾಸ್ಯ ಮಾಡಿದರೆ , ಮಹಾತ್ಮರಾದ ಅಬೂಬಕರ್ ಸಿದ್ದೀಖ್ (ರ) ರವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಅದಕ್ಕಿಂತಲೂ ಅದ್ಭುತವಾದುದನ್ನು ಹೇಳಿದರೂ ನಾನದನ್ನು ಅಂಗೀಕರಿಸುವೆ ಎಂದು ಹೇಳಿ ತಮ್ಮ ಅಚಂಚಲ ವಿಶ್ವಾಸ ಮತ್ತು ದೃಢ ನಂಬಿಕೆಯನ್ನು ಹೊರಗೆಡಹಿದರು.
#ಮಕ್ಕಾದಿಂದ_ಮಸ್ಜಿದುಲ್_ಅಖ್ಸಾಕ್ಕೆ_ಪಯಣಿಸಿದ್ದೇಕೆ?
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ಮಕ್ಕಾದಿಂದ ನೇರವಾಗಿ ಆಕಾಶಾರೋಹಣ ನಡೆಸಬಹುದಿತ್ತಲ್ಲವೇ? ಮಸ್ಜಿದುಲ್ ಅಖ್ಸಾಕ್ಕೆ ಯಾಕೆ ಹೋಗಬೇಕಿತ್ತು? ಎಂಬ ಪ್ರಶ್ನೆ ಸಹಜ. ಯಾವುದೇ ಪುಣ್ಯ ಯಾತ್ರೆಯನ್ನು ಸಜ್ಜನರ ಸಂದರ್ಶನದೊಂದಿಗೆ ಪ್ರಾರಂಭಗೊಳಿಸಬೇಕೆಂಬ ಸಂದೇಶವನ್ನು ತಮ್ಮ ಸಮುದಾಯಕ್ಕೆ ನೀಡಲು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಅಲ್ಲಾಹನು ಪೂರ್ವಿಕ ಪ್ರವಾದಿಗಳು ಅಂತ್ಯ ವಿಶ್ರಮಗೊಂಡಿರುವ ಮಸ್ಜಿದುಲ್ ಅಖ್ಸಾಕ್ಕೆ ಕರೆತಂದು ಅವರ ಪುಣ್ಯ ಸಂದರ್ಶನದೊಂದಿಗೆ ಮಿಅ್'ರಾಜ್ ಯಾತ್ರೆಯನ್ನು ಪ್ರಾರಂಭಿಸಿದನು. ಯಾತ್ರಿಕನು ತನ್ನ ಯಾತ್ರೆಯಲ್ಲಿ ಸಮೃದ್ಧಿಯನ್ನು ಪಡೆಯಲು ಹಾಗೂ ಸಜ್ಜನರಿಗೆ ಗೌರವ ಅರ್ಪಿಸುವ ನಿಟ್ಟಿನಲ್ಲಿ ಪುಣ್ಯಪುರುಷರ ಸಂದರ್ಶನವು ಅತ್ಯಂತ ಸೂಕ್ತವೆನಿಸುತ್ತದೆ.
#ದೈಹಿಕವಾಗಿ_ನಡೆದ_ಅದ್ಭುತ_ಯಾತ್ರೆ
ಇಸ್ರಾಅ್ - ಮಿಅ್'ರಾಜ್ ಯಾತ್ರೆಯು ಕನಸಾಗಿರಲಿಲ್ಲ.
ಅದು ದೈಹಿಕವಾಗಿ ನಡೆದ ಯಾತ್ರೆಯಾಗಿತ್ತು. ಇದನ್ನು ಪವಿತ್ರ ಖುರ್'ಆನ್ ಸೂಕ್ತಗಳು ಸ್ಪಷ್ಟಪಡಿಸುತ್ತದೆ. " ತನ್ನ ದಾಸನನ್ನು ನಿಶಾ ಪ್ರಯಾಣ ಮಾಡಿಸಿದವನು ಎಷ್ಟು ಪರಿಶುದ್ಧನು "(ಸೂರತುಲ್ ಇಸ್ರಾಅ್-1) ಎಂಬ ಸೂಕ್ತದಲ್ಲಿ ತನ್ನ "ದಾಸನನ್ನು" ಎಂದು ಬಳಸಿರುವುದು ಗಮನಾರ್ಹ. ಅಷ್ಟೇ ಅಲ್ಲ, ಈ ಯಾತ್ರೆಯು ಬರೀ ಕನಸಾಗಿದ್ದಿದ್ದರೆ ಅದನ್ನು ಪವಿತ್ರ ಖುರ್'ಆನ್ ನಲ್ಲಿ ಪ್ರಸ್ತಾಪಿಸುವ ಅಗತ್ಯವಿತ್ತೇ?
ಅದೂ ಅಲ್ಲದೆ, ಆ ಸೂಕ್ತದ ಪ್ರಾರಂಭದಲ್ಲಿ " ಸುಬ್'ಹಾನಲ್ಲಾಹ್ "ಎಂಬ ಆಶ್ಚರ್ಯಸೂಚಕ ಪದವನ್ನು ಬಳಸಿ ಅದನ್ನು ಪ್ರಸ್ತಾಪಿಸುವ ಅಗತ್ಯವೇನಿತ್ತು? ಕನಸಿನಲ್ಲಿ ಕಾಣುವುದೆಲ್ಲ ಅದ್ಭುತವೆನಿಸುತ್ತದೆಯೇ? ಆ ಯಾತ್ರೆಯು ಕನಸೇ ಅಗಿದ್ದರೆ ಮಕ್ಕಾದ ಶತ್ರುಗಳು ಯಾಕೆ
ಅದನ್ನು ತಿರಸ್ಕರಿಸಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಅಪಹಾಸ್ಯ ಮಾಡಿದರು? ಕನಸಿನಲ್ಲಿ ಕಂಡದ್ದನ್ನು ಪ್ರಸ್ತಾಪಿಸಿದರೆ ಅದನ್ನು ತಿರಸ್ಕರಿಸುವ ಅಗತ್ಯವೇ ಇಲ್ಲವಲ್ಲ? ಈ ಎಲ್ಲಾ ಅಂಶಗಳು ಯಾತ್ರೆಯು ದೈಹಿಕವಾಗಿ ನಡೆದಿತ್ತೆಂಬುವುದನ್ನು ಒತ್ತಿ ಹೇಳುತ್ತದೆ.
#ಸ್ವರ್ಗ_ನರಕ_ದರ್ಶನ
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ತಮ್ಮ ಮಿಅ್'ರಾಜ್ ಯಾತ್ರೆಯಲ್ಲಿ ಸ್ವರ್ಗ ಹಾಗೂ ನರಕವನ್ನು ಕಂಡಿದ್ದಾರೆ ಎಂಬುವುದು ಗಮನಾರ್ಹ. ಮೊದಲನೆಯ ಆಕಾಶಕ್ಕೆ ಪ್ರವೇಶಿಸುತ್ತಿದ್ದಂತೆ ಆದಿಪಿತ ಅದಂ (ಅ) ರಿಂದ ಭವ್ಯ ಸ್ವಾಗತ ಲಭಿಸಿತು. ಆದಮ್ (ಅ) ರವರ ಬಲಭಾಗದಲ್ಲಿ ಅವರು ಸ್ವರ್ಗವನ್ನೂ ಎಡಭಾಗದಲ್ಲಿ ನರಕವನ್ನೂ ಕಂಡರು. ಜೊತೆಗೆ ಸ್ವರ್ಗದ ವೈಭವವನ್ನು ನರಕದ ಭಯಾನಕತೆಯನ್ನು ವೀಕ್ಷಿಸಿದರು. ಒಟ್ಟಿನಲ್ಲಿ ಪ್ರವಾದಿಗಳ ಪೈಕಿ ಬೇರೆ ಯಾರಿಗೂ ಸಿಗದ ಮಹತ್ತರವಾದ ಸ್ಥಾನವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ನೀಡುವ ಉದ್ದೇಶದಿಂದ ಪರಲೋಕದ ಚಿತ್ರಣವನ್ನೂ ಸ್ವರ್ಗ ಮತ್ತು ನರಕದ ಸ್ವರೂಪವನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ಅವರ ಜೀವಿತ ಕಾಲದಲ್ಲೇ ಕಾಣಿಸಿ ಕೊಡಲಾಯಿತು.
#ಮಿಅ್_ರಾಜ್_ಗಿಫ್ಟ್
ದೂರದ ಧರೆಯಿಂದ ಏಳಾಕಾಶಗಳನ್ನು ಹಾದು ಬಂದ ಅತಿಥಿಗೆ ಅಲ್ಲಾಹನು ನಮಾಝ್ ಎಂಬ ಅತ್ಯಮೂಲ್ಯ ಪಾರಿತೋಷಕವನ್ನು ನೀಡಿ ಗೌರವಿಸಿದನು. ಪ್ರವಾದಿ ಮೂಸಾ (ಅ) ರವರ ಸಲಹೆಯಂತೆ ಒಂಬತ್ತು ಬಾರಿ ಅಲ್ಲಾಹನ ಬಳಿ ಸಾಗಿ 50 ಹೊತ್ತಿನ ನಮಾಜಿನ ಪುಣ್ಯ ವಿರುವ ಅಮೂಲ್ಯ ಉಡುಗೊರೆಯೊಂದಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ ರವರು ಪವಿತ್ರ ಮಕ್ಕಾಕ್ಕೆ
ಮರಳಿದರು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ತನ್ನ ಬಳಿಗೆ ಕರೆಸಿ ನೀಡಿದ ಅಮೂಲ್ಯ ಉಡುಗೊರೆ ಎಂಬ ನೆಲೆಯಲ್ಲಿ ನಮಾಝಿಗೆ ಇತರ ಎಲ್ಲಾ ಆರಾಧನಾ ಕರ್ಮಗಳಿಗಿಂತ ಹೆಚ್ಚಿನ ಶ್ರೇಷ್ಠತೆ ಇದೆ.
ಕೊನೆಯದಾಗಿ, ರಜಬ್ ತಿಂಗಳಲ್ಲಿ ಮಾತ್ರ ಮಿಅ್'ರಾಜ್ ನೆನಪಾದರೆ ಸಾಲದು. ನಮ್ಮ ಜೀವನಪರ್ಯಂತ ಮಿಅ್'ರಾಜ್'ನ ಸ್ಮರಣೆಯು ಜೀವಂತವಾಗಿರಬೇಕು. ಅದಕ್ಕಿರುವ ವ್ಯವಸ್ಥೆಯನ್ನು ಅಲ್ಲಾಹನು ನಮಾಝ್ ಮೂಲಕ ನಮಗೆ ಮಾಡಿಕೊಟ್ಟಿದ್ದಾನೆ.
ಮಿಅ್'ರಾಜ್ ಉಡುಗೊರೆಯಾಗಿ ನೀಡಲ್ಪಟ್ಟ ನಮಾಝನ್ನು ಪ್ರತಿದಿನವೂ ನಿರ್ವಹಿಸುವ ಮೂಲಕ ಸತ್ಯವಿಶ್ವಾಸಿಯು ಮಿಅ್'ರಾಜನ್ನು ಸದಾ ಸ್ಮರಿಸುತ್ತಿರುತ್ತಾನೆ.
( #2006ರ ಅಗಸ್ಟ್ ತಿಂಗಳ #ಉರ್_ಮಾಲ್_ಮಾಸ_ಪತ್ರಿಕೆಗೆ
ಬರೆದ ಲೇಖನ )
ಎಂ.ಎ. ಇಸ್ಮಾಈಲ್ ನ'ಈಮಿ ಮಂಗಳಪೇಟೆ

Comments