Skip to main content

ಮಾನವನೆಂಬ ಅದ್ಭುತ ಜೀವಿ ಭಾಗ 👉‌2

ಮಾನವನೆಂಬ ಅದ್ಭುತ ಜೀವಿ
ಭಾಗ 👉‌2

*ಮುನ್ನೂರು ವರ್ಷ ಆಕಾಶ ನೋಡದ ಹಝ್ರತ್ ಆದಮ್!*

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


   ▪  *ಬೇರೊಂದು* ಗಮನಾರ್ಹ ಸಂಗತಿಯೆಂದರೆ, ಅಲ್ಲಾಹನು ಆದಮರಿಗೆ ಸುಜೂದು ಮಾಡಲು ನಿರ್ದೇಶಿಸಿದಾಗ ಪ್ರಥಮವಾಗಿ ಸುಜೂದು ಮಾಡಿದ್ದು ಇಸ್‌ರಾಫೀಲ್ (ಅ) ಆಗಿತ್ತು. ಆ ಕಾರಣದಿಂದ ಅಲ್ಲಾಹನ ಭಾಗದ ಕಾಣಿಕೆ ಮತ್ತು ಗೌರವ ಎಂಬಂತೆ, ಅವರು ಸುಜೂದು ಮಾಡಿ ಎದ್ದೇಳಿದಾಗ ಅವರ ಹಣೆಯಲ್ಲಿ ಪವಿತ್ರ ಖುರ್‌ಆನ್ ಸಂಪೂರ್ಣವಾಗಿ ಬರೆಯಲಾಗಿತ್ತು. (printing)
   ▪ *ಅಲ್ಲಾಹನು* ಮನುಷ್ಯ ಪಿತಾ ಹಝ್ರತ್ ಆದಮ್ (ಅ) ರನ್ನು ಸೃಷ್ಟಿಸಿ ನಂತರ ಸ್ವರ್ಗ ಪ್ರವೇಶಿಸಿ  ಅಲ್ಲಿರುವ ಎಲ್ಲಾ ಸುಖ ಸೌಖರ್ಯಗಳನ್ನು ಬಳಸಲು ಅನುಮತಿ ಕೊಟ್ಟು ನಂತರ ಒಂದು ಮರದತ್ತ ಸನ್ನೆ ಮಾಡಿ *"ಈ ಮರದತ್ತ ನೀವು ಬರಬಾರದು. ಮಾತ್ರವಲ್ಲ ಅದರಿಂದ ಯಾವುದೇ ಹಣ್ಣನ್ನು ಕಿತ್ತು ತಿನ್ನಬಾರದು"* ಎಂದು ಆಜ್ಞಾಪಿಸಿದನು. ಆ ಆಜ್ಞೆಗೆ ಸಂಪೂರ್ಣವಾಗಿ‌ ವಿಧೇಯನಾದ ಹಝ್ರತ್ ಆದಮರು *"ನಾನು ಮತ್ತು ನನ್ನ ಬಾಳ ಸಂಗಾತಿ ಬೀವಿ ಹವ್ವಾ ಎಂದಿಗೂ ನಿನ್ನ ಆಜ್ಞೆ ಉಲ್ಲಂಘನೆ ಮಾಡಲಾರೆವು."* ಎಂದು ಕರಾರು ಮಾಡಿದರು.
   ▪  *ಆದರೆ* ಇಬ್‌ಲೀಸನ ಕುತಂತ್ರಕ್ಕೆ ಬಲಿಯಾದ ಅವರು ಅಲ್ಲಾಹನಾಗಿ ಮಾಡಿದ ಕರಾರನ್ನು ಮರೆತು ನಿಷೇಧಿತ ಮರದಿಂದ ಹಣ್ಣು ಕಿತ್ತು ತೆಗೆದರು. ಅರಬಿ ಭಾಷೆಯಲ್ಲಿ *"نسيان"* (ನಿಸ್‌ಯಾನ್) ಎಂದರೆ ಮರೆತು ಹೋಗುವುದು ಎಂದರ್ಥ. ಆದ್ದರಿಂದ ಮನುಷ್ಯನಿಗೆ ಮರೆತು ಹೋಗುವವ ಎಂದರ್ಥ ಬರುವ *"إنسان"* (ಮನುಷ್ಯ) ಎಂಬ ಹೆಸರು ಬಂತೆಂದು ಖ್ಯಾತ ಖುರ್‌ಆನ್ ವ್ಯಾಖ್ಯಾನಗಾರ ಇಬ್‌ನು ಅಬ್ಬಾಸ್ (ರ) ಅಭಿಪ್ರಾಯ ಪಟ್ಟಿದ್ದಾರೆ.
   ▪ *ಸ್ವರ್ಗದಲ್ಲಿ* ಮಾಡಿದ ಒಂದು ಪುಟ್ಟ ತಪ್ಪಿನಿಂದ ಸ್ವರ್ಗ ತೊರೆದು ಭೂಮಿಗಿಳಿದಾಗ ಏಳು ಲಕ್ಷ ಭಾಷೆ ಸಂಪೂರ್ಣವಾಗಿ ತಿಳಿದಿದ್ದ ಆದಮ್ (ಅ) ಒಂದೇ ಗಳಿಗೆಯಲ್ಲಿ ಅರಬಿಯಲ್ಲದ ಎಲ್ಲಾ ಭಾಷೆಗಳನ್ನು ಮರೆತು ಹೋದರು. ನಂತರ ಅವರಿಗೆ  ಪ್ರವಾದಿವ ಪಟ್ಟ (ನುಬುವ್ವತ್) ಸಿಗುವ ತನಕ ಅರಬಿಯಲ್ಲದ ಯಾವುದೇ ಭಾಷೆ ಗೊತ್ತಿರಲಿಲ್ಲ. ನುಬುವ್ವತ್ ಸಿಕ್ಕಿದಾಗ ಪುನಃ ಮೊದಲಿನಂತೆಯೇ ಎಲ್ಲಾ ಭಾಷೆಗಳು ತಿಳಿಯ ತೊಡಗಿತು.
   ▪ *ಪ್ರಖ್ಯಾತ* ಖುರ್‌ಆನ್ ವ್ಯಾಖ್ಯಾನಗಾರ ಸ್ವಹಾಬಿ ಇಬ್‌ನ್ ಅಬ್ಬಾಸ್ (ರ) ರವರು ಹೇಳುತ್ತಾರೆ.  "ಭೂಮಿ ತಲುಪಿದ ಹಝ್ರತ್ ಆದಮ್ (ಅ) ಮತ್ತು ಪತ್ನಿ ಬೀವಿ ಹವ್ಬಾಃ (ರ) ನಷ್ಟವಾದ ಸುಖ ಸೌಕರ್ಯಗಳನ್ನು ನೆನೆಸಿ ಸುಮಾರು ಇನ್ನೂರು ವರ್ಷಗಳ ಕಾಲ ಅಳುತ್ತಲೇ ಇದ್ದರು. ಆ ಕಾಲದಲ್ಲಿ ಒಮ್ಮೆಯೂ ಹೊಟ್ಟೆ ತುಂಬಿ ತಿನ್ನಲಿಲ್ಲ. ಸುಮಾರು ನೂರು ವರ್ಷ ಲೈಂಗಿಕವಾಗಿ ಸಂಪರ್ಕ ನಡೆಸಲಿಲ್ಲ."
   ▪ *ಒಂದು* ಅಭಿಪ್ರಾಯ ಪ್ರಕಾರ ಜಗತ್ತಿನ ಅಂತ್ಯ ದಿನದ ತನಕವಿರುವ ಎಲ್ಲರ ಕಣ್ಣೀರನ್ನು ಕ್ರೋಡೀಕರಿಸಿದರೆ ಹಝ್ರತ್ ಆದಮ್ (ಅ) ರವರು ಒಬ್ಬರು ಸುರಿಸಿದ ಕಣ್ಣೀರಿಗೆ ತಲುಪದು. ಸುಮಾರು ಮುನ್ನೂರು ವರ್ಷ ನಾಚಿಕೆಯಿಂದ ಆಕಾಶದತ್ತ ತಲೆಯೆತ್ತಿ ನೋಡಲಿಲ್ಲ.
   ▪  *ಹಝ್ರತ್* ಆದಮ್ (ಅ) ಮತ್ತು ಅವರ ಬಾಳ ಸಂಗಾತಿ ಬೀವಿ ಹವ್ವಾ (ರ) ರವರು ಪರಲೋಕದ ಒಂದು ದಿನ ಕೂಡ ಪೂರ್ತಿಯಾಗಿ ಸ್ವರ್ಗದಲ್ಲಿ ವಾಸಿಸಿಲ್ಲ ಎಂಬುದು ಬಲವಾದ ಅಭಿಪ್ರಾಯ. ಅವರು ಈ ಭೂಲೋಕಕ್ಕೆ ಬರುವ ಮುಂಚೆ ಇಲ್ಲಿ ಜಿನ್ನುಗಳ ಒಂದು ಸಾಮ್ರಾಜ್ಯವಿತ್ತು. ನಾವಿಂದು ಮನುಷ್ಯರು ವಾಸಿಸುವಂತೆ ಕಟ್ಢಡಗಳು, ಸೇತುವೆಗಳು, ಮಳಿಗೆಗಳು ಎಲ್ಲವೂ ಕಡಲಿನಲ್ಲೂ ಪರ್ವತದಲ್ಲೂ ಸಾಮಾನ್ಯ ನೆಲದಲ್ಲೂ ಇತ್ತು. ಅವರಿಗೂ ಕಾಲ ಬದಲಾಗುವುದಕ್ಕೆ ಅನುಸಾರವಾಗಿ ಬೇರೆ ಬೇರೆ ಪ್ರವಾದಿಗಳು ಮತ್ತು ನಮ್ಮಂತೆಯೇ ಬೇರೆ ಬೇರೆ ಶರೀಅತುಗಳು ಬದಲಾಗುತ್ತಿತ್ತು. ಆದರೆ ಅವರು ಅನ್ಯಾಯ ಅಕ್ರಮ ಮಾಡಿ ಭ್ರಷ್ಟಾಚಾರದಲ್ಲಿ ಮುಳುಗಿದಾಗ ಅಲ್ಲಾಹನು ಮಲಕುಗಳನ್ನು ಕಳುಹಿಸಿ ಅವರನ್ನು ಭೂಮಿಯ ಸಾಮಾನ್ಯ ವಾಸಸ್ಥಳದಿಂದ ಸಮುದ್ರದ ಮಧ್ಯದಲ್ಲಿರುವ ಕೆಲವು ದ್ವೀಪಗಳಿಗೆ ಓಡಿಸಲಾಯಿತು. ನಂತರದ ಚರಿತ್ರೆ ನಮ್ಮ ಅಂಕಣದ ಭಾಗವಲ್ಲದ ಕಾರಣ ಓದುಗರ ಗಮನವನ್ನು ಆ ಕಡೆ ಸೆಳೆಯುವುದಿಲ್ಲ. ಒಟ್ಟಿನಲ್ಲಿ ಆದಮ್ (ಅ) ರಿಂದ ಇಂದಿಗೆ ಗರಿಷ್ಠವೆಂದರೆ,  ಸುಮಾರು ಹತ್ತು ಹನ್ನೆರಡು ಸಾವಿರ ವರ್ಷವಾಗಿರಬಹುದು.
   ▪ *ಪವಿತ್ರ* ಖುರ್‌ಆನಿನ "ಅಲ್ ಅಸ್‌ರ್" ಅಧ್ಯಾಯದಲ್ಲಿ "ಸತ್ಯವಿಶ್ವಾಸವಿಡದ, ಸತ್ಕರ್ಮ ಮಾಡದ, ಸತ್ಯವನ್ನು ಮತ್ತು ಸಹನೆಯನ್ನು ಪಾಲಿಸಲು ಪರಸ್ಪರ ಉಪದೇಶ ಮಾಡದ ಮನುಷ್ಯರು ಖಂಡಿತವಾಗಿಯೂ‌ ಬಹಳ ನಷ್ದಲ್ಲಿರುವರು" ಎಂದು ಅಲ್ಲಾಹನು ಕಾಲದ ಮೇಲೆ‌ ಹಾಣೆಹಾಕಿ ಹೇಳಿದ್ದಾನೆ. ಆದ್ದರಿಂದ ಎರಡು ಮುಸ್ಲಿಂ ಸಹೋದರರು ಪರಸ್ಪರ ಬೇಟಿಯಾಗಿ ಬೀಳ್ಕೊಡುವ ಮೊದಲು ಈ ಸೂರತಿನ‌ ಮೊದಲಿನ ಎರಡು ಸೂಕ್ತಗಳನ್ನು ಓದಬೇಕೆಂದು ಇಮಾಮ್ ತ್ವಬ್‌ರಾನಿ ತನ್ನ ಪ್ರಸಿದ್ಧ ಗ್ರಂಥವಾದ "ಅಲ್ ಮುಅ್‌ಜಮ್ ಅಲ್ ಅವ್‌ಸತನಲ್ಲಿ" ವ್ಯಕ್ತಪಡಿಸಿದ್ದಾರೆ.
   ▪ *ಮಲಕುಗಳು* ಯಾವುದೇ ತಪ್ಪುಮಾಡದೆ ಅಲ್ಲಾಹನ ಆಜ್ಞೆಗಳನ್ನು ಪಾಲಿಸಿ ಅವನಿಗೆ ಆರಾಧನೆ ಮಾಡುವವರಾದರೂ ಯಾವತ್ತು ಮನುಷ್ಯನ ಸ್ಥಾನಮಾನ ಅವರಿಗಿಲ್ಲ. ಸದಾಚಾರಿಯಾದ ಮನುಷ್ಯನೊಬ್ಬ ಉತ್ತುಂಗ ಸ್ಥಾನಕ್ಕೆ ತಲುಪಿದರೆ *"ಅವನ ಕೈಕಾಲುಗಳು ನಾನಾಗುತ್ತೇನೆ"* ಎಂದು ಅಲ್ಲಾಹನು ಖುದುಸಿಯಾದ ಹದೀಸಿನಲ್ಲಿ ಹೇಳಿದ್ದು ಇದಕ್ಕೆ ಎತ್ತಿ ಹಿಡಿದ ಕನ್ನಡಿಯಾಗಿದೆ. ಫಲಸ್ತೀನಿನಿಂದ ಸಾವಿರಾರು ಕಿಲೋಮೀಟರ್ ದೂರವಿರುವ ಯಮನಿನಿಂದ ಬಲ್‌ಖೀಸ್ ರಾಣಿಯ ಸಿಂಹಾಸನವನ್ನು *ಇಫ್‌ರೀತ್* ಎಂಬ ಜಿನ್ನ್ ಆರು ಗಂಟೆಯಲ್ಲಿ ಮುಟ್ಟಿಸಿ ಕೊಡಬಹುದೆಂದು ಹೇಳಿದಾಗ ಅದು ಬೇಡ ನಾನು ನೀವು ಕಣ್ಣು ಮುಚ್ಚಿ ತರೆಯುವುದರೆಡೆಯಲ್ಲಿ ಮುಟ್ಟಿಸಿ ಕೊಡುವೆನೆಂದು ಮನುಷ್ಯ ಕುಲದಲ್ಲಿ ಜನಿಸಿದ ಒಬ್ಬ ಸದಾಚಾರಿಯಾದ ಪಂಡಿತರು ಹೇಳಿ ಸವಾಲು ಹಾಕಿದ್ದಾರೆ ಎಂದಾದರೆ, ಮನುಷ್ಯನು ಸದಾಚಾರದೊಂದಿಗೆ ಎಷ್ಷೋ ದೊಡ್ಡ ಪದವಿಗೆ ತಲುಪುವನು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅದಾಗ್ಯೂ ಮಾನವನು ಕೆಟ್ಟವನಾದರೆ ಕೆಲವೊಮ್ಮೆ ಜಾನುವಾರುಗಳಿಗಿಂತಲೂ ಕೆಟ್ಟವನಾಗುವನು ಎಂದು ಪವಿತ್ರ ಖುರ್‌ಆನಿನಲ್ಲಿದೆ.
   ▪ *ಅಬ್ಬಾಸಿಯ್ಯಾ* ಆಡಳಿತ ಕಾಲದಲ್ಲಿ ಅಮೀರ್ ಆಗಿದ್ದ *ಮೂಸಾ ಬಿನ್ ಈಸಾ ಅಲ್‌ಹಾಷಿಮಿಯವರು* ತನ್ನ ಪತ್ನಿಯನ್ನು ಮಿತಿಮೀರಿ ಪ್ರೀತಿಸುತ್ತಿದ್ದರು. ಪ್ರೀತಿಯು ನಿಯಂತ್ರಣ ಬಿಟ್ಟಾಗ ಒಮ್ಮೆ ತನ್ನ ಪತ್ನಿಯಲ್ಲಿ ಹೇಳಿದರು. *"ನೀನು ಹದಿನಾಲ್ಕನೇ ರಾತ್ರಿಯ ಚಂದ್ರನಷ್ಟು ಸುಂದರಿಯಲ್ಲದಿದ್ದರೆ ನಿನ್ನನ್ನು ನಾನು ಮೂರು ತ್ವಲಾಖ್ ಹೇಳಿರುತ್ತೇನೆ"* ಸುಬ್‌ಹಾನಲ್ಲಾಹ್.. ಮಹಾನುಭಾವರಿಗೆ ತನ್ನ ಮಾತಿನ ಗೌರವ ತಿಳಿಯುವುದು *"ಕೆಟ್ಡ ಮೇಲೆ ಬುದ್ಧಿ"* ಎಂಬಂತೆ ಹೇಳಿದ ನಂತರವಾಗಿತ್ತು.
▪ *ತನ್ನ* ಪತಿಯ ಬಾಯಿಯಿಂದ ಈ ಮಾತು ಬಂದ ಕೂಡಲೇ ಪತ್ನಿಯು ಪತಿಯಿಂದ ದೂರವಾದರು. ಒಟ್ಟಿನಲ್ಲಿ ಪತಿಯು ಏನು ಮಾಡಬೇಕೆಂದು ತಿಳಿಯದೆ ಗಲಿಬಿಲಿಯಾಗಿ ಮೂಲೆ ಗುಂಪಾದರು.
   ▪ *ಮಾರನೇ* ದಿನ ಬೆಳಿಗ್ಗೆಯೇ ಸಮಕಾಲಿಕ ಪಂಡಿತರನ್ನು ಬೇಟಿಯಾಗಿ ತನ್ನ ಸಮಸ್ಯೆಯನ್ನು ಅವರ ಮುಂದಿಟ್ಟರು. ಎಲ್ಲಾ ಉಲಮಾಗಳು *"ತ್ವಲಾಖ್ ನಡೆದಿದೆ. ಇನ್ನು ನಿಮಗೆ ಒಂದೇ ಮಾರ್ಗವಿರುವುದೇನೆಂದರೆ, ಅವಳ "ಇದ್ದ" ಮುಗಿದು ಬೇರೊಬ್ಬ ಮದುವೆಯಾಗಿ ಅದರ "ಇದ್ದ" ಮುಗಿದ ನಂತರವೇ ಮದುವೆಯಾಗಬೇಕು"* ಎಂಬ ಫತ್ವಾ ಕೊಟ್ಟರು. ಆದರೆ ಆ ಕಾಲದ ಜ್ಞಾನಸೂರ್ಯ ಪಂಡಿತ ನಮ್ಮ ಮದ್‌ಹಬಿನ ಇಮಾಮ್, ಇಮಾಮ್ ಶಾಫಿಯವರನ್ನು ಸಮೀಪಿಸಿದಾಗ ಅವರು ಹೇಳಿದರು. "ತ್ವಲಾಖ್ ಆಗುವುದಿಲ್ಲ. ಯಾಕೆಂದರೆ, ಯಾವ ಚಂದ್ರನೂ ಮಾನವನಷ್ಷು ಚಂದವಲ್ಲ ಎಂಬುದಕ್ಕೆ ಪವಿತ್ರ ಖುರ್‌ಆನಿನ *"ಅತ್ತೀನ್"* ಅಧ್ಯಾಯದ *"ಮಾನವರನ್ನು ನಾವು ಬಹಳ ಚಂದವಾದ ಅತ್ಯುತ್ತಮ ರೂಪದಲ್ಲಿ ಸೃಷ್ಟಿಸಿದ್ದೇವೆ"*  ಎಂಬ ಸೂಕ್ತವನ್ನು ಓದಿ ಕೇಳಿಸಿದರು.
   ▪ *ಮನುಷ್ಯನ* ಬದುಕಿನ ಸಂಚಾರ ತಂದೆಯ ಬೆನ್ನಿನಿಂದ ಆರಂಭಿಸಿ ಕತ್ತಲಾದ ತಾಯಿಯ ಗರ್ಭಕೋಶಕ್ಕೂ ನಂತರ ಅಲ್ಲಿಂದ ‌ಬೆಳಕಿರುವ ಭುಮಿಗೂ ಪುನಃ ಅಲ್ಲಿಂದ ಬೆಳಕಿಲ್ಲದ  ಕತ್ತಲೆ ಸುತ್ತುವರಿದ ಖಬರಿಗೂ‌ ಬಳಿಕ ಅಲ್ಲಿಂದ ಕೊನೆಯಿಲ್ಲದ  ಸುಖ ಸೌಕರ್ಯಗಳಿದ್ದು ಬೆಳಕಿರುವ ಸ್ವರ್ಗ ಅಥವಾ ಬೆಂಕಿಯಿಂದ ಉರಿದು ಉರಿದು ಕತ್ತಲಾದ ನರಕದಲ್ಲೂ ಕೊನೆಗೊಳ್ಳುತ್ತದೆ. ನಂತರ ಬೇರೊಂದು ಬದುಕು ಇಲ್ಲ.
   ▪ *ಮನುಷ್ಯನಿಗೆ* ಬರುವಷ್ಟು ಖಾಯಿಲೆಗಳು ಅಲ್ಲಾಹನ ಜೀವಿಗಳಲ್ಲಿ ಬೇರೆ ಯಾರಿಗೂ ಬರುವುದಿಲ್ಲ. ಎಂಬುದು ನಿಜ ಸಂಗತಿ. ಆದರೆ ಅದರ ಚಿಕಿತ್ಸೆಗೆ ಬೇರೆ ವೈದ್ಯರನ್ನು ಸಂಪರ್ಕಿಸದೆ ತಾನಾಗಿಯೇ ಚಿಕಿತ್ಸೆ ಮಾಡುವ ಹಲವಾರು ಔಷಧಿಗಳನ್ನು ಆ ಮನುಷ್ಯ ಶರೀರದಲ್ಲೇ ಅಲ್ಲಾಹನು ಸೃಷ್ಟಿಸಿದ್ದಾನೆ ಎಂಬುದು ಹೆಚ್ಚಿನವರಿಗೆ ತಿಳಿಯದು. ಗತಕಾಲದ ನಮ್ಮ ಪಂಡಿತರು ಅವರ ಗ್ರಂಥಗಳಲ್ಲಿ ಉಲ್ಲೇಖಿಸಿದ ಕೆಲವು ಅದ್ಭುತವಾದ ಚಿಕಿತ್ಸೆಗಳನ್ನು *"ವಿಸ್ಮಯ ತುಂಬಿದ ಜೀವ ಜಗತ್ತಿನ"* ಓದುಗರ ಮುಂದಿಡುತ್ತೇನೆ. ಮೊದಲಾಗಿ ಮಾನವನಿಗೆ ಮಾತ್ರವಿರುವ ಇತರ ಜೀವಿಗಳಿಗಲ್ಲದ ಕೆಲವು ವ್ಯತ್ಯಾಸಗಳನ್ನು ಗಮನಕ್ಕೆ ತರುತ್ತೇನೆ.
   ▪ *ಮಾತನಾಡುವುದು.* ಆವೊಂದು ಗುಣ ಇತರ ಯಾವುದೇ ಪ್ರಾಣಿ ಪಕ್ಷಿಗಳಿಗೆ ಇಲ್ಲ. ಮಾತನಾಡಲು ಬಾರದ ಮೂಕನು ಇತರ ಕೆಲವು ಸೂಚನೆಗಳಿಂದ ಅದನ್ನು ವ್ಯಕ್ತ ಪಡಿಸುತ್ತಾನೆ.
   ▪ *ಏನಾದರೊಂದು* ಅದ್ಭುತ ಸಂಗತಿಯನ್ನು ಕಂಡರೆ ನಗುತ್ತಾ ಅಥವಾ ಅಳುತ್ತಾ ತನಗಾದ ಅದ್ಭುತವನ್ನು ಪ್ರಕಟ ಮಾಡುವುದು. ಇದು ಸಾಮಾನ್ಯವಾಗಿ ಬೇರೆ ಜೀವಿಗಳಿಗೆ ಇಲ್ಲ.
   ▪ *ತಲೆಯಲ್ಲಿ* ಯಥೇಚ್ಛವಾಗಿ ಕೂದಲು ಬರುವುದು. ಇತರ ಜೀವಿಗಳಿಗೆ ತಲೆಯಲ್ಲಿ ಕೂದಲಿರುವುದಾದರೂ ಅದು ಅದರ ಶರೀದಲ್ಲಿರುವ ಸಾಮಾನ್ಯ ಕೂದಲಾಗಿದೆ. ಬದಲಾಗಿ ಅವುಗಳಿಗೆ ಹೆಚ್ಚುವರಿಯಾಗಿ ತಲೆಯಲ್ಲಿ ಮನುಷ್ಯರಿಗಿರುವಂತೆ ಕೂದಲಿಲ್ಲ. 
   ▪ *ಪ್ರಾಯವಾಗಿ* ಮುದುಕನಾಗುವಾಗ ಅಥವಾ ಬೇರೆ ಯಾವುದಾದರೂ ಕಾರಣಗಳಿಂದ ಕೂದಲು ಬಿಳಿಯಾಗುವುದು. ಇದು ಕೂಡ ಇತರ ಜೀವಿಗಳಿಗಿಲ್ಲ.
   ▪ *ಮನುಷ್ಯ* ಶರಿರದ ಯಾವುದಾದರೊಂದು ಭಾಗಕ್ಕೆ ನೋವು ತಗಲಿದರೆ ಅವನ ಅಂಗೈ ಅಲ್ಲಿಗೆ ಕೂಡಲೇ ಹೋಗುತ್ತದೆ. ಮಾತ್ರವಲ್ಲ ಅಂಗೈಯಿಟ್ಟು ತಿಕ್ಕಿದರೆ ನೋವು ಕಡಿಮೆಯಾಗುತ್ತದೆ. ಇದು ಅಲ್ಲಾಹನು ಮನುಷ್ಯನಿಗೆ ಮಾತ್ರ ಕೊಟ್ಟ ಒಂದು ವಿಷೇಶತೆಯಾಗಿದೆ. ಈ ವಿಷೇಶತೆ ಬೇರೆ ಜೀವಿಗಳಿಗೆ ಇಲ್ಲ.
   ▪ *ಮನುಷ್ಯನ* ಬೀಜ ಒಡೆದರೆ (Castration) ಸಣಕಲಾಗುತ್ತಾನೆ. ಇತರ ಜೀವಿಗಳು ಬಲಿಷ್ಠವಾಗುತ್ತವೆ. ಹಸಿವು ಜಾಸ್ತಿಯಾಗುತ್ತದೆ. ಇತರ ಜೀವಿಗಳಿಗೆ ಕಡಿಮೆಯಾಗುತ್ತದೆ. ಸ್ವಪ್ನಸ್ಖಲನ   ಹೆಚ್ಚಾಗುತ್ತದೆ. ಕೂದಲುಗಳು ಕಡಿಮೆಯಾಗುತ್ತದೆ. ಕೊಪ ಬರುವುದು ಜಾಸ್ತಿಯಾಗುತ್ತದೆ. ಕಣ್ಣಿಗೆ ದೃಷ್ಟಿ ಶಕ್ತಿ ಹೆಚ್ಚುತ್ತದೆ.
   ▪ *ಅಪಸ್ಮಾರ* ಖಾಯಿಲೆ ಹಿಡಿದವನನ್ನು ಋತುಸ್ರಾವ ಇರುವ ಮಹಿಳೆ ಹಿಡಿದರೆ ಅಥವಾ ಮುಟ್ಟಿದರೆ ಅವನ ಅಪಸ್ಮಾರ ನಿಯಂತ್ರಣವಾಗುತ್ತದೆ. ಹಾವು ಸುಲಿದು ಹಾಕಿದ ಅದರ ಚರ್ಮವನ್ನು ಋತು ಇರುವ ಮಹಿಳೆ ಮೆಟ್ಟಿದರೆ ಆ ಹಾವು ಎಲ್ಲಿದ್ದರೂ ಸಾಯುತ್ತದೆ. ಅಂತೆಯೇ ಅವಳ ಹತ್ತಿರ ತೋಳಗಳು ಬರಲಾರದು. ಬಂದರೂ ಅದಕ್ಕೆ ಹೊಟ್ಟೆಯಲ್ಲಿ ನೋವು ಶುರುವಾಗಿ ಅಲ್ಲಿಂದ ಒಡಿ ಹೋಗುತ್ತದೆ. ಹಡಗಿನ ಹಿಂಬದಿಗೆ ಋತುವಿನ ವೇಳೆ ಮಹಿಳೆ ಧರಿಸಿದ ವಸ್ತ್ರವನ್ನು ತೂಗು ಹಾಕಿದರೆ ಗಾಳಿಯ ತೊಂದರೆ ಇರಲಾರದು.
   ▪ *ಕುಷ್ಟರೋಗಿಯು* ಪಾದರಕ್ಷೆಯಿಲ್ಲದೆ ಮೆಟ್ಟಿದ ಜಾಗದಲ್ಲಿ ಹುಲ್ಲುಗಳು ಮತ್ತು ಸಸ್ಯಗಳು ಚಿಗುರದು.
   ▪ *ಮೂರರ* ಚಳಿಜ್ವರ (Quarter fever) ಇರುವವನಿಗೆ ಹೆರಿಗೆಯಾಗಿ ನಿಫಾಸ್ ರಕ್ತ ಇರುವ ಮಹಿಳೆ ಧರಿಸಿದ ಒಳ ವಸ್ತ್ರ ತೊಳೆಯುವುದಕ್ಕೆ ಮೊದಲು ಧರಿಸಿ ಕೊಟ್ಟರೆ ಅವನ ಜ್ವರ ಬೆಟ್ಟ ಹತ್ತುತ್ತದೆ. ಅಂತೆಯೇ ಸತ್ತ ಹಳೆಯ ಶವದ ಎಲುಬನ್ನು ಅವನ ಕತ್ತಿಗೆ ಕಟ್ಟಿದರೂ ಜ್ವರ ವಾಸಿಯಾಗುತ್ತದೆ. ಸಂಧಿವಾತವಿರುವವನ ಕಾಲಿಗೆ ಆ ಎಲುಬನ್ನು ಕಟ್ಟಿದರೆ ಸಂಧಿವಾತ ಕಡಿಮೆಯಾಗುತ್ತದೆ. ಅಮಲಾಗಿ ಎಚ್ಚರವಿಲ್ಲದೆ ಬಿದ್ದವನಿಗೆ ಸತ್ತವನ ಎಲುಬನ್ನು ಹುಡಿಮಾಡಿ ಮೂಗಿನಿಂದ ಒಳಗೆ ಹಾಕಿದರೆ ಎಚ್ಚರವಾಗುತ್ತಾನೆ. ಅಪಸ್ಮಾರ ರೋಗಿಗೆ ಮನುಷ್ಯನ ಎಲುಬನ್ನು ಸುಟ್ಟು ಅದರ ಬೂದಿಯನ್ನು  ನೀರಿನಲ್ಲಿ ಮಿಶ್ರಣ ಮಾಡಿ ಕುಡಿಸಿದರೆ ಎಚ್ಚರವಾಗುತ್ತಾನೆ.

*✍🏻ಮುಂದುವರಿಯುವುದು*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...