Skip to main content

ಪ್ರೀತಿಸಿದವರನ್ನು ಪ್ರೀತಿಸಿ


ಮಹಾತ್ಮರಾದ ಫಾರಿಸುನ್ನಜ್ಜಾರ್(ರ) ರವರು ಹೇಳುತ್ತಾರೆ; "ಒಮ್ಮೆ ಮಹಾನುಭಾವರಾದ ಇಬ್ರಾಹೀಮು ಬಿನು ಅದ್ ಹಂ(ರ) ರವರು ಜಿಬ್ರೀಲ್(ಅ) ರವರನ್ನು ಭೂಮಿಗೆ ಇಳಿದು ಬಂದಂತೆ ಕನಸು ಕಂಡರು. ಆಗ ಮಹಾತ್ಮರ ಪ್ರಶ್ನೆ, "ಓ ಜಿಬ್ರೀಲ್, ಯಾಕೆ ಇಲ್ಲಿ ಬಂದಿದ್ದೀರಾ?". "ನಾನು ಮುಹಿಬ್ಬೀನ್(ಪ್ರೇಮಿ)ಗಳ ಹೆಸರನ್ನು ನೋಂದಾಯಿಸಲು ಬಂದಿದ್ದೇನೆ" ಅವರು ಉತ್ತರಿಸಿದರು. ಮಹಾತ್ಮರಿಗೆ ಕುತೂಹಲ!. "ಯಾರು ಆ ಪ್ರೇಮಿಗಳೆಂದು ಹೇಳಬಹುದೇ?". "ಮಾಲಿಕ್ ಬಿನು ದೀನಾರ್, ಸಾಬಿತುಲ್ ಬುನಾನೀ, ಅಯ್ಯೂಬು ಸ್ಸಿಜಸ್ತಾನೀ ಮುಂತಾದವರು ಎಂದಾಗಿತ್ತು ಜಿಬ್ರೀಲರ ಮರುತ್ತರ. "ನನ್ನ ಹೆಸರು ಆ ಪಟ್ಟಿಯಲ್ಲಿಲ್ಲವೇ?" ಇಬ್ರಾಹೀಮ(ರ) ರ ಪ್ರಶ್ನೆ. "ಇಲ್ಲ" ಜಿಬ್ರೀಲರು ಪ್ರತಿಕ್ರಿಯಿಸಿದರು. "ಹಾಗಾದರೆ ಆ ಪ್ರೇಮಿಗಳನ್ನು ಪ್ರೇಮಿಸುವವರ ಲಿಸ್ಟಲ್ಲಾದರೂ ನನ್ನನ್ನು ಸೇರಿಸಿ ಬಿಡಿ" ಎಂದರು ಇಬ್ರಾಹಿಂ ಬಿನು ಅದ್ ಹಂ(ರ). ತಕ್ಷಣ ಜಿಬ್ರೀಲರಿಗೆ ಇಲಾಹೀ ಸಂದೇಶ ಬಂತು. "ಇಬ್ರಾಹೀಮರ ಹೆಸರನ್ನು ಮೊದಲ ಪ್ರೇಮಿಗಳ ಲಿಸ್ಟ್ ನಲ್ಲಿ ಒಂದನೇಯದ್ದಾಗಿ ಬರೆಯಿರಿ!".(ಅಅ್ಲಾಮುಸ್ಸೂಫಿಯ್ಯ)
ಇಲ್ಲಿ ಮುಹಿಬ್ಬ್ ಎಂಬುದು ಅಲ್ಲಾಹನನ್ನೂ, ರಸೂಲರನ್ನೂ ಪ್ರೀತಿಸಿದವರು ಎಂಬರ್ಥಕ್ಕೆ. ನಿಜವಾದ ಪ್ರೀತಿ ಅದು ತಾನೇ?!. ಅದಲ್ಲದ್ದೆಲ್ಲವೂ ವ್ಯರ್ಥ. ಆ ದೈವಿಕ ಪ್ರೀತಿಯಿಟ್ಟ ಔಲಿಯಾಗಳನ್ನು ಪ್ರೀತಿಸಿದರೂ  ಉನ್ನತ ಸ್ಥಾನಕ್ಕೇರಬಹುದು. ಸದಾ ಆ ನೈಜ ಪ್ರೀತಿಯನ್ನು ಚಿಮ್ಮಿಸುವಂತದ್ದಾಗಲಿ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...