Skip to main content

ತಾಯಿಯ ಶಾಪದ ಕಾರಣ ದಿನಾಲೂ ಖಬರಿನಿಂದ ಹೊರಬಂದು ಕಿರುಚುವ ವ್ಯಕ್ತಿ

ತಾಯಿಯ ಶಾಪದ ಕಾರಣ ದಿನಾಲೂ ಖಬರಿನಿಂದ ಹೊರಬಂದು ಕಿರುಚುವ ವ್ಯಕ್ತಿ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119

   ▪ *ಕೆಲವು* ಸಾದಾಚಾರಿಗಳು ಒಮ್ಮೆ ಒಂದು ಖಬರ್ಸ್ತಾನಿಯ ಹತ್ತಿರದ ಒಂದು ದಾರಿಯಾಗಿ ಸಂಚಾರ ಮಾಡುತ್ತಿರುವಾಗ ಒಂದು ಖಬರ್ ಒಡೆದು ಇಭ್ಭಾಗವಾಯಿತು. ಕೂಡಲೇ ಅದರಿಂದ ಕತ್ತೆಯ ತಲೆಯಿರುವ ಒಬ್ಬ ವ್ಯಕ್ತಿ ಹೊರಬಂದು ಕಬರಿನ ಮೇಲೆ ನಿಂತು ಕತ್ತೆ ಕಿರುಚುವಂತೆ ಬಹಳ ಎತ್ತರದ ದನಿಯಲ್ಲಿ ಮೂರು ಸಲ ಕಿರುಚಿದನು. ನಂತರ ಖಬರಿನ ಒಳಗೆ ಹೋದನು. ಒಳಗೆ ಹೋದ ಕೂಡಲೇ ಇಭ್ಭಾಗವಾಗಿದ್ದ ಖಬರ್ ಪರಸ್ಪರ ಜೋಡಿಕೊಂಡಿತು.
   ▪ *ಈ ಭಯಾನಕ* ದೃಶ್ಯ ಕಂಡ ಅವರು ಅಲ್ಲಿರುವ ಹತ್ತಿರದ ಒಂದು ಮನೆಯವರಲ್ಲಿ ಇದರ ಬಗ್ಗೆ ವಿಚಾರಿಸಿದಾಗ ಅವರು ಹೇಳಿದರು. "ಈತನು ಒಬ್ಬ ಕುಡುಕನಾಗಿದ್ದ. ಯಾವಾಗಲೂ ಶರಾಬು ಕುಡಿದು ಬಂದು ತನ್ನ ತಾಯಿಯನ್ನು ಹೊಡೆಯುವುದು, ಅವರನ್ನು ಕತ್ತೆ ಎಂದು ಕರೆಯುವುದು ಇವನ ನಿತ್ಯ ಕೆಲಸವಾಗಿತ್ತು. ಒಂದು ದಿನ ಮೂಗಿನ ತನಕ ಕುಡಿದು ಬಂದು ಅವನ ತಾಯಿಗೆ ಹೊಡೆದನು. ನೋವು ಸಹಿಸಲಾರದೆ ತಾಯಿ ಕೂಗಿದಾದ ಅವನು ಹೇಳಿದನು. *"ನೀನು ಕತ್ತೆಯಂತೆ ಕೂಗಬೇಡ"* ಅವನ ತಾಯಿ ಹೇಳಿದರು. *"ನಾನು ನಿನ್ನ ತಾಯಿಯೆಂಬ ನೆನಪಿರಲಿ. ನಾನು ಕತ್ತೆಯಲ್ಲ. ನಿನ್ನನ್ನು ಹೆತ್ತ ತಾಯಿ. ನಿನಗೆ ನನ್ನ ಭಯವಿಲ್ಲದಿದ್ದರೂ ಅಲ್ಲಾಹನನ್ನು ಭಯಪಡು. ಕತ್ತೆ ನಾನಲ್ಲ ಕತ್ತೆ ನೀನು."* ನಂತರ ಆತ ಮರಣಹೊಂದಿದನು. ದಫನ ಮಾಡಿದ ದಿನದಿಂದಲೇ ಆತ ಈ ರೀತಿ ಎಲ್ಲಾ ದಿನ ಖಬರಿನಿಂದ ಹೊರಬಂದು ಮೂರು ಬಾರಿ ಕತ್ತೆಯಂತೆ ಕಿರುಚಿ ಬಳಿಕ ಒಳಗೆ ಹೋಗುತ್ತಾನೆ."
   ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೊಮ್ಮಗ ಹಝ್ರತ್ ಹಸನ್ (ರ) ರವರು ತನ್ನ ತಾಯಿ ಬೀವಿ ಫಾತಿಮಾ (ರ) ರಲ್ಲಿ ಇದ್ದ ಶಿಸ್ತು ಮತ್ತು ಗೌರವದ ಕಾರಣ ಅವರೊಟ್ಟಿಗೆ ಊಟಕ್ಕೆ ಕೂಡ ಕುಳಿತುಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಒಮ್ಮೆ ಬೀವಿ ಫಾತಿಮಃ (ರ) ರು ತನ್ನ ಮಗನಲ್ಲಿ ಕೇಳಿದಾಗ *"ತಾಯಿ ನಾವು ಒಟ್ಟಿಗೆ ಕುಳಿತು ಊಟ ಮಾಡುತ್ತಿರುವಾಗ ಅನ್ನದ ಸುಫ್‌ರದಿಂದ ನೀವು ತೆಗೆಯಲು ಉದ್ದೇಶಿಸಿದ ವಸ್ತುವಿಗೆ ನಿಮ್ಮ ಕೈ ಹೋಗುವುದಕ್ಕಿಂತ ಮುಂಚೆ ನನ್ನ ಕೈ ಹೋಗಿ ನಾನು ತೆಗೆದರೆ ಅದು ತಾಯಿಗೆ ಇಷ್ಟವಾಗದೋ ಎಂಬ ಭಯದಿಂದ ನಾನು ನಿಮ್ಮೊಂದಿಗೆ ಕುಳಿತು ಕೊಳ್ಳುವುದಿಲ್ಲ."* ಎಂದು ಉತ್ತರಿಸಿದರು.

ಸಂಗ್ರಹ: ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...