Skip to main content

ಪ್ರವಾದಿ ﷺ ರವರು ದಿರ್ಹಂ ನೀಡಿದರು.

ಮದೀನಾದತ್ತ ಪಯಣ..
ಪ್ರವಾದಿ ﷺ ರವರು ದಿರ್ಹಂ ನೀಡಿದರು.

*اَلْحَمْدُ لِلّٰہِ رَبِّ الْعٰلَمِیْنَ وَ الصَّلٰوۃُ وَالسَّلَامُ عَلٰی سَیِّدِ الْمُرْسَلِیْن*َ ط

*اَمَّا بَعْدُ فَاَعُوْذُ بِاللّٰہِ مِنَ الشَّیْطٰنِ الرَّجِیْمِ ط  بِسْمِ اللہِ الرَّحْمٰنِ الرَّ حِیْم* ط

_ಸಯ್ಯಿದುನಾ ಅಹ್ಮದ್ ಬಿನ್ ಮುಹಮ್ಮದ್ ಸೂಫಿ رحمت اللہ علیہ ಹೇಳುತ್ತಾರೆ: ನಾನು ಮೂರು ತಿಂಗಳುಗಳ ಕಾಲ ಕಾಡಿನಲ್ಲಿ ಸುತ್ತಾಡುತ್ತಿದ್ದೆ ಎಲ್ಲಿಯವರಿಗೆಂದರೆ ನನ್ನ ಶರೀರದ ಸಂಪೂರ್ಣ ಚರ್ಮವೂ ಕರಗಿ ಹೆಪ್ಪುಗಟ್ಟಿತು ಕೊನೆಗೆ ನಾನು ಮದೀನಾ ಮುನವ್ವರಾ ತಲುಪಿದೆ ಮತ್ತು ನಬಿಯೇ ಕರೀಂ ರಊಫುರ್ರಹೀಮ್ ﷺ ಹಾಗೂ ಸಯ್ಯಿದುನಾ ಸಿದ್ದೀಖುಲ್ ಅಕ್ಬರ್ رضی اللّٰہ عنہ ಮತ್ತು ಸಯ್ಯಿದುನಾ ಉಮರುಲ್ ಫಾರೂಖ್ رضی اللّٰہ عنہ ರವರ ಸನ್ನಿಧಿಯಲ್ಲಿ ಸಲಾಂ ಹೇಳಿ  ಒಂದು ಕಡೆ ನಿದ್ರಿಸಿದೆ. ಕನಸಿನಲ್ಲಿ ನಬಿಯೇ ಕರೀಂ ﷺ ರನ್ನು ಕಂಡೆ ನಬಿಯೇ ರಹ್ಮತ್ ﷺ ಹೇಳುತ್ತಿದ್ದಾರೆ. ಅಹ್ಮದ್.! ನೀನು ಬಂದೆಯಾ ನೋಡು ನಿನ್ನ ಅವಸ್ಥೆ ಏನಾಗಿದೆ ಎಂದು ಆಗ ನಾನು ಹೇಳಿದೆ._
 *أنا جائع و أنا ضیفک یا رسول اللّٰہ۔۔*
 _( ಓ ಅಲ್ಲಾಹನ ಪ್ರವಾದಿವರ್ಯರೆ.! ﷺ ನಾನು ಹಸಿದಿದ್ದೇನೆ ಮತ್ತು ನಾನು ತಮ್ಮ ﷺ ಅತಿಥಿಯಾಗಿರುವೆನು. ) ಆಗ ನಬೀಯುರ್ರಹ್ಮ ﷺ ಹೇಳಿದರು  ಕೈ ತೆರೆ.! ನಾನು ನನ್ನ ಕೈ ತೆರೆದೆ ಆಗ ನನ್ನ ಕೈಯಲ್ಲಿ ಕೆಲವು ದಿರ್ಹಂಗಳು ಇದ್ದವು ಬಳಿಕ ನಾನು ಪೇಟೆಯತ್ತ ಹೋಗಿ ಅದರಿಂದ ರೊಟ್ಟಿ ಮತ್ತು ಫಾಲೂದಾ ಕೊಂಡುಕೊಂಡು ತಿಂದು ಹಸಿವು ನೀಗಿಸಿದೆ._

*(ಜಝ್ಬುಲ್ ಖುಲೂಬ್ )*

ತಾವು ﷺ ನಿರ್ಗತಿಕರ ಪರಿಪಾಲಕ ತಾವು ﷺ ದುಃಖತಪ್ತರ ಆಶಕೇಂದ್ರ ತಾವು ﷺ ನೀಡುವಿರಿಯಾಚಿಸಿದವರಿಗೆ ಹಣವನ್ನೂ ರೊಟ್ಟಿ ಬಟ್ಟೆ  ಕುಡಿಯಲು ಪಾನವನ್ನೂ

 ತಮ್ಮಲ್ಲಿ ﷺ *ಇಲ್ಲ* ಎಂಬ ಪದವನ್ನು  ಶತ್ರುಗಳೂ ಕೇಳಲಿಲ್ಲ ಯಾ ರಸೂಲಲ್ಲಾಹ್.! ﷺ

ಈ ಪಾಪಿಯೂ ತಮ್ಮಲ್ಲಿ ﷺ ಯಾಚಿಸುವನು ತಮ್ಮಯ ﷺ ಪವಿತ್ರ ಪ್ರೇಮವನು ತಮ್ಮ ﷺ ಮೇಲೆ ಯಥೇಚ್ಛ ಸ್ವಲಾತ್ ಹೇಳುವ ಭಾಗ್ಯವನು

ಸ್ವಪ್ನದಲ್ಲಿ  ತಮ್ಮಯ ﷺ ದರ್ಶನವನ್ನು ಜೀವನದ ಪ್ರತೀ ಹೆಜ್ಜೆಯಲ್ಲೂ ತಮ್ಮಯ ﷺ ಸಹಾಯವನ್ನು
ಮತ್ತೂಮ್ಮೆ ತಮ್ಮಯ ﷺ ಸನ್ನಿಧಿಯಲಿ ಹಾಜರಾತಿಯನು

 ಬಿಡಲು ತಮ್ಮಯ ﷺ ಪಾದಗಳಲ್ಲಿ ಕೊನೆಯ ಉಸಿರನ್ನು ಬಖೀಅ್ ಎಂಬ ಶಾಂತಿಯ ತಾಣದಲ್ಲಿ ಚಿರನಿದ್ರೆಯನು ಕರುಣಿಸಿ ಯಾ ರಸೂಲಲ್ಲಾಹ್.! ﷺ ಹರಸಿರಿ ಯಾ ಹಬೀಬಲ್ಲಾಹ್.!ﷺ

✒ *ಮುಹಮ್ಮದ್ ಹುಸೈನ್ ರಝಾ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...