Skip to main content

ಒಬ್ಬನ ಕಹಿ ಇನ್ನೊಬ್ಬನಿಗೆ ಸಿಹಿ

ಒಬ್ಬನ ಕಹಿ ಇನ್ನೊಬ್ಬನಿಗೆ ಸಿಹಿ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
00971553499119

   ▪ *ಒಂದು* ಊರಿನಲ್ಲಿ ಗ್ರಾಮವಾಸಿಯಾದ ಒಬ್ಬ ಅ‌ಅ್‌ರಾಬಿಯು ಒಂದು ದಿನ ತನ್ನ ಪತ್ನಿಯಲ್ಲಿ ಹೇಳಿದ. *"ಹೇ.. ಇವತ್ತು ನನ್ನ ಕೆಲವು ಮಿತ್ರರು ನಮ್ಮ ಮನೆಗೆ ಅತಿಥಿಯಾಗಿ ಬರುತ್ತಾರೆ. ಅದ್ದರಿಂದ ಮನೆ ಮತ್ತು ಮನೆ ಪರಿಸರವೆಲ್ಲಾ ಬಹಳ ಸ್ವಚ್ಚವಾಗಿರಬೇಕು. ಇಶಾ ನಮಾಝಿಗೆ ಮನೆಗೆ ತಲುಪುತ್ತೇವೆಂದು ಹೇಳಿದ್ದಾರೆ. ನೀನು ಈಗಲೇ ರೆಡಿಯಾಗಬೇಕು. ಒಳ್ಳೆಯ ಆಹಾರ ತಯಾರು ಮಾಡಬೇಕು. ನಾನೀಗ ನಮ್ಮ ತೋಟದಿಂದ ಏನಾದರೂ ಹಣ್ಣು ಹಂಪಲು ತೆಗೆದುಕೊಂಡು ಬರುತ್ತೇನೆ. ಎಲ್ಲಾ ತಯಾರು ಮಾಡಿಡು."*
   ▪ *ನಂತರ* ಅ‌ಅ್‌ರಾಬಿಯು ತನ್ನ ತೋಟದತ್ತ ಹೋಗಿ ಅಲ್ಲಿಂದ ಹಲವಾರು ನಮೂನೆಯ ಹಣ್ಣು ಹಂಪಲುಗಳನ್ನು ಕಿತ್ತು ಮನೆಗೆ ತಲುಪುವಾಗ ಸೂರ್ಯಾಸ್ತಮಾನವಾಗಿತ್ತು. ಮನೆಯಲ್ಲಿಯಾದರೆ ಸತ್ಕಾರಕ್ಕೆ ಬೇಕಾದ ಯಾವುದೇ ಸಿದ್ದತೆಯೂ ನಡೆದಿರಲಿಲ್ಲ. ಅಲ್ಲಲ್ಲಿ ಕಸಕಡ್ಡಿಗಳು ಮತ್ತು ಕೊಳಕಿನಿಂದ ಕೂಡಿದ್ದ ಮನೆಯಲ್ಲಿ ಅವನ ಹೆಂಡತಿ ಹೇಳಿದ ಮಾತಿಗೆ ಯಾವುದೇ ಬೆಲೆ ಕೊಡದೆ ಒಂದು ಕಡೆ ಆರಾಮವಾಗಿ ಮಲಗಿದ್ದಳು. ಎಲ್ಲಾ ಸಿದ್ಧತೆಗಳನ್ನು‌ ಮಾಡಬೇಕೆಂದು ಹೇಳಿಯೂ ಏನೂ ಮಾಡದೆ ಮಲಗಿ ಕಂಡಾಗ ಪಿತ್ತ ನೆತ್ತಿಗೇರಿದ ಆತ ಅವಳಿಗೆ ಒಂದು ಕಬ್ಬಿಣದ ಸಲಾಕೆ ತೆಗೆದು ಬಲವಂತವಾಗಿ ಹೊಡೆದನು. ಹೊಡೆದ ಹೊಡೆತಕ್ಕೆ ಅವಳು ಮೂರ್ಛೆತಪ್ಪಿ ಬಿದ್ದಳು.
   ▪ *ಹಲವಾರು* ಅ‌ಅ್‌ರಾಬಿಗಳ ಗುಡಿಸಲುಗಳು ಒಂದೇ ಕಡೆ ಸಾಮಾನ್ಯ ಒಂದೇ ರೂಪದಲ್ಲಾದ ಕಾರಣ ಈತನು ಪ್ರವೇಶಿಸಿದ ಮನೆ ನಿಜವಾಗಿ ಅದು ಅವನ ಮನೆಯಾಗಿರಲಿಲ್ಲ.‌ ಅದು ನೆರೆಯ ಬೇರೊಬ್ಬ ಅ‌ಅ್‌ರಾಬಿಯ ಮನೆಯಾಗಿತ್ತು. ಮಹಿಳೆಗೆ ಹೊಡೆದು ಮನೆಯಿಂದ ಹೊರ ಬಂದಾಗ ತನ್ನ ಸ್ವಂತ ಮನೆಯಲ್ಲಿ ತನ್ನ ಪತ್ನಿಯು ಅತಿಥಿಗಳಿಗೆ ಬೇಕಾದ ಸಿದ್ದತೆಗಳನ್ನು ಮಾಡುವುದರಲ್ಲಿ ತಲ್ಲಿನಳಾಗಿದ್ದಳು.
   ▪ *ಈತ* ನಂತರ ಹತ್ತಿರದ ತನ್ನ ಸ್ವಂತ ಮನೆಗೆ ತಲುಪಿದ. ಕೆಲವೇ ನಿಮಿಷದಲ್ಲಿ ಅತಿಥಿಗಳು ಬಂದರು. ಅವರಿಗೆ ಬೇಕಾದ ಸತ್ಕಾರವೂ ನಡೆಯಿತು. ಸತ್ಕಾರ ಮುಗಿದು ಅವರು ಮನೆಯಿಂದ ಬೀಳ್ಕೊಟ್ಟರು. ಆದರೆ ಈತನ ಹೃದಯ ಬಡಿತ ಮಾತ್ರ ಜೋರಾಗುತ್ತಲೇ ಇತ್ತು. *"ಬೇರೊಬ್ಬನ ಪತ್ನಿಗೆ ಹೊಡೆದು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಅವಳ ಪತಿ ಕೆಲಸ ಮುಗಿದು ಈಗ ಮನೆಗೆ ಬಂದರೆ ನನ್ನ ಅವಸ್ಥೆ ಏನಾಗಬಹುದು.?"* ಇತ್ಯಾದಿ ಪ್ರಶ್ನೆಗಳನ್ನು ಆತ ಆತನ ಮನಸಿನಲ್ಲಿಯೇ ಕೇಳುತ್ತಿದ್ದನು.
   ▪ *ಎರಡು* ದಿನಗಳು ಕಳೆಯಿತು. ಪೆಟ್ಟು ತಿಂದವಳು ಮಾಮೂಲಿನಂತೆ ಮನೆಯಲ್ಲೂ ಅಂಗಳದಲ್ಲೂ ಕೆಲಸ ಮಾಡುತ್ತಿದ್ದಾಳೆ.  ಮೂರನೇ ದಿನ ಈತ ಏನೇ ಆಗಲಿ ಇನ್ನು ಕಾಯುವುದು ಸರಿಯಲ್ಲವೆಂದು ಹೇಳಿ ನೇರವಾಗಿ ಹತ್ತಿರದ ಬಂಗಾರದ ಅಂಗಡಿಗೆ ಹೋಗಿ ಒಂದು ಬಂಗಾರದ ಮಾಲೆಯನ್ನು ಖರೀದಿಸಿ ನೆರೆಯ ಮನೆಗೆ ಹೋದ.
   ▪ *ಮನೆ* ತಲುಪಿದ ಆತ ತಾನು ಹೊಡೆದ ಹೆಂಗಸಿನ ಪತಿಯಲ್ಲಿ ಹೇಳಿದ. *"ನಾನು ನಿಮಗೆ ಇಸ್ಲಾಮಿನ ಮರ್ಯಾದೆಯಂತೆ ಒಂದು ಬಂಗಾರದ ಮಾಲೆಯನ್ನು ಉಡುಗೊರೆಯಾಗಿ ತಂದಿದ್ದೇನೆ. ನಿಮ್ಮ ಹೆಂಡತಿಗೆ ನಾನು ಮೂರು ದಿನಗಳ ಮೊದಲು ಮನೆ ತಪ್ಪಿದ ಗಲಿಬಿಲಿಯಲ್ಲಿ ಪೆಟ್ಟು ಹೊಡೆದ ಕಾರದ ಮೂರ್ಛೆತಪ್ಪಿ ಬಿದ್ದರೂ ನೀವು ನಾನು ನಿಮ್ಮ ನೆರೆಹೊರೆಯವ ಎಂಬ ಕಾರಣದಿಂದ ನನ್ನಲ್ಲಿ ಕೇಳಲು ಬರಲಿಲ್ಲ. ಆದ್ದರಿಂದ ನೀವು ಈ ಹದಿಯವನ್ನು ಸ್ವೀಕರಿಸಿ ನಿಮ್ಮ ಪತ್ನಿಗೆ ಮನಸ್ಸು ಸಮಾಧಾನವಾಗಲು ಕೊಡಬೇಕು"*
   ▪ *ಮನೆ* ಮಾಲಿಕ ಅ‌ಅ್‌ರಾಬಿ ಹೇಳಿದ. *"ನಾನು ಅವಳನ್ನು ಮದುವೆಯಾಗಿ ಸುಮಾರು ಮೂವತ್ತು ವರ್ಷಗಳಾಯಿತು. ಈ ದೀರ್ಘ ಸಮಯದಲ್ಲಿ ಈ ತನಕ ನಾನು ಕೆಲಸ ಮುಗಿದು ಮನೆ ತಲುಪಿದ ನಂತರವಲ್ಲದೆ ಅವಳು ಅಡುಗೆ ಕೋಣೆಗೆ ಹೋದವಳಲ್ಲ. ಆದರೆ ಈ ಮೂರು ನಾಲ್ಕು ದಿನಗಳಲ್ಲಿ ಮನೆ ತಲುಪುವಾಗಲೇ ಎಲ್ಲಾ ತಯಾರಾಗಿರುತ್ತದೆ. ಮಾತ್ರವಲ್ಲ ಈಗ ಏನು ಹೇಳಿದರೂ ಮರುತ್ತರ ಕೊಡದೆ ಎಲ್ಲವನ್ನೂ ಚೆನ್ನಾಗಿ ಮಾಡುತ್ತಾಳೆ. ಏನೇ ಇರಲಿ. ನೀವು ಮಾಡಿದ ಈ ಕೆಲಸಕ್ಕೆ ನಾನೇ ನಿಮಗೆ ಹದಿಯ ಕೊಡಬೇಕು. ಆದ್ದರಿಂದ ಈ ಬಂಗಾರ ನಿಮ್ಮ ಕೈಯಲ್ಲಿಯೇ ಇರಲಿ. ನೀವು ಅವಳಿಗೆ ಪೆಟ್ಟು ಹೊಡೆದ ವಿಷಯ ನೀವೆಂದು ತಿಳಿಯದೆ ಹಾಗೆಯೇ ಇರಲಿ. ಅವಳ ಹಳೆಯ ಸ್ವಭಾವ ಮುಂದುವರಿದರೆ ಇನ್ನೊಮ್ಮೆ ಬಂದು ಹಾಗೆಯೇ ನಾಲ್ಕು ಬಾರಿಸಿ ಹೋಗಿ"*

ಸಂಗ್ರಹ : *ತ್ವರಾಯಿಫುಲ್ ಅರಬ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...