Skip to main content

ನಬಿಯೇ ಕರೀಂ ﷺ ಭೋಜನವನ್ನು ಕಳುಹಿಸಿದರು.

ಮದೀನಾದತ್ತ ಪಯಣ.
ನಬಿಯೇ ಕರೀಂ ﷺ ಭೋಜನವನ್ನು ಕಳುಹಿಸಿದರು.

*اَلْحَمْدُ لِلّٰہِ رَبِّ الْعٰلَمِیْنَ وَ الصَّلٰوۃُ وَالسَّلَامُ عَلٰی سَیِّدِ الْمُرْسَلِیْن*َ ط

*اَمَّا بَعْدُ فَاَعُوْذُ بِاللّٰہِ مِنَ الشَّیْطٰنِ الرَّجِیْمِ ط  بِسْمِ اللہِ الرَّحْمٰنِ الرَّ حِیْم* ط


_ಸಯ್ಯಿದುನಾ ಇಮಾಂ ಅಬೂ ಬಕರ್ ಬಿನ್ ಮುಕ್ರೀ رحمة الله عليه ಹೇಳುತ್ತಾರೆ: ನಾನು ಹಾಗೂ ಸಯ್ಯಿದುನಾ ಇಮಾಂ ತ್ವಬ್ರಾನಿ رحمة الله عليه ಮತ್ತು ಸಯ್ಯಿದುನಾ ಅಬೂ ಶೈಖ್ رحمة الله عليه ನಾವು ಮೂವರೂ ಮದೀನಾ ಶರೀಫಿನಲ್ಲಿ ಇದ್ದೆವು ಎರಡು ದಿನಗಳಿಂದ  ತಿನ್ನಲು ಊಟವೇನೂ ಸಿಕ್ಕಿರಲಿಲ್ಲ ಹಸಿವಿನಿಂದ ತತ್ತರಿಸಿ ಹೋಗಿದ್ದೆವು.! ಇಶಾದ ಸಮಯವಾದಾಗ ನಾನು ರೌಳಾ ಶರೀಫಿಗೆ ತೆರಳಿ  *یا رسول اللّٰہ ﷺ الجوع* ಯಾ (ರಸೂಲಲ್ಲಾಹ್ ﷺ.! ಹಸಿವು.!)  ಎಂದು ಹೇಳಿದೆ ನಾನು ಇದರ ಹೊರತು ಬೇರೇನನ್ನೂ ಹೇಳಲಿಲ್ಲ ಮತ್ತು ಹೊರಟು ಬಂದೆ. ನಾನು ಮತ್ತು ಅಬೂ ಶೈಖ್ رحمة الله عليه ನಿದ್ರಿಸಿದೆವು ಮತ್ತು ತ್ವಬ್ರಾನಿ رحمة الله عليه ಯವರು ಕುಳಿತು ಯಾರೊ ಬರುವುದನ್ನು ಕಾಯುತ್ತಿದ್ದರು. ಅಷ್ಟರಲ್ಲಿ ಯಾರೋ ನಮ್ಮ ಬಾಗಿಲು ಬಡಿಯ ತೊಡಗಿದರು. ನಾವು ಬಾಗಿಲು ತೆರೆದು ನೋಡಿದೆವು  ಅಲವೀ ಮನೆತನದ ಸಯ್ಯಿದರೊಬ್ಬರು ತನ್ನ ಇಬ್ಬರು ಗುಲಾಮರೊಂದಿಗೆ ನಿಂತಿದ್ದರು ಇಬ್ಬರ ಕೈಯಲ್ಲಿ ಭಕ್ಷ್ಯಗಳು ತುಂಬಲಾದ ಒಂದೊಂದು ಬಟ್ಟಲುಗಳಿದ್ದವು. ಆ ಅಲವೀ ಮಹಾನರು ನಮ್ಮನ್ನುದ್ದೇಶಿಸಿ ಹೇಳಿದರು. ಬಹುಶಃ ನೀವು ನಬಿಯೇ ಕರೀಂ ﷺ ರವರಲ್ಲಿ ಹಸಿವಿನ ಬಗ್ಗೆ ಅಹವಾಲು ವ್ಯಕ್ತಪಡಿಸಿದ್ದೀರೆಂದು ಕಾಣುತ್ತದೆ.! ನಾನು ಕನಸಿನಲ್ಲಿ ನಬಿಯೇ ಕರೀಂ ﷺ ರನ್ನು ಕಂಡೆ ನಬಿಯೇ ಕರೀಂ ﷺ ರವರು ನಿಮ್ಮ ಬಗ್ಗೆ ಹೀಗೆ ಹೇಳುತ್ತಿದ್ದರು. *ಇವರಿಗೆ ಭೋಜನವನ್ನು ನೀಡಿರಿ!* ಹಾಗಾಗಿ ನಾನು ಭೋಜನವನ್ನು ತಂದೆನು ಎಂದು ಹೇಳಿದರು.!  ಬಳಿಕ ಅವರು ನಮ್ಮ ಒಟ್ಟಿಗೆ ಕುಳಿತು ಊಟ ಮಾಡಿದರು ಮತ್ತು ಉಳಿದದ್ದನ್ನು ನಮಗೇ ನೀಡಿ ಹೊರಟು ಹೋದರು._

(ಜಝ್ಬುಲ್ ಖುಲೂಬ್)

_ಮನುಷ್ಯರಾದ ನಮಗೆ ಕಷ್ಟ ಸುಖ ಎನ್ನುವುದು ಸಹಜ ಆದರೆ ಕೆಲವೊಮ್ಮೆ ಕಷ್ಟ ಮತ್ತೊಬ್ಬರಲ್ಲಿ ಹೇಳಿಕೊಳ್ಳಲಾಗದೆ ದುಃಖಿತರಾಗುವೆವು ಆದರೆ ನೆನಪಿಡಿ ಸಹೋದರರೆ ಕೆಲವೊಮ್ಮೆ ಇನ್ನೊಬ್ಬರಲ್ಲಿ ಕಷ್ಟವನ್ನು ಹೇಳಿಕೊಂಡು ಪ್ರಯೋಜನ ಆಗಲೂ ಬಹುದು ಆದರೆ ಯಾವಾಗಲೂ ಸಹಾಯ ಸಿಗದು ಅಲ್ವಾ.? ನಾವು ಹಬೀಬ್ ﷺ ರಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಮೇಲಿನ ಘಟನೆಯೂ ಸಾಕ್ಷಿ ಅಲ್ಲಾಹು ಹೇಳುತ್ತಾನೆ:_
*النَّبِيُّ أَوْلَىٰ بِالْمُؤْمِنِينَ مِنْ أَنفُسِهِم*
*ಮಹೋನ್ನತ ಪ್ರವಾದಿ ﷺ ಯವರು ಸತ್ಯವಿಶ್ವಾಸಿಗಳಿಗೆ ಅವರ ಸ್ವಂತ ಶರೀರಕ್ಕಿಂತಲೂ ನಿಕಟರು* ಆತ್ಮ ಮತ್ತು ಶರೀರದ ಸಂಬಂಧ  ಎಷ್ಟು ನಿಕಟ ಎಂದು ನಾವು ತಿಳಿದಿದ್ದೇವೆ ಆದರೆ ಇಲ್ಲಿ ನಬಿ ﷺ ರನ್ನು ಶರೀರಕ್ಕಿಂತಲೂ ಹತ್ತಿರ ಎಂದು ಅಲ್ಲಾಹು ಹೇಳಿದ್ದಾನೆ ಆದರೆ ನಾವು ಆ ನಿಕಟತೆಯನ್ನು ನಿಷಿದ್ಧ ಮತ್ತು ಅನಾಚಾರಗಳಿಂದ ನಷ್ಟ ಪಡಿಸಿ ಕೊಂಡಿದ್ದೇವೆ ಆದ್ಧರಿಂದ ಆ ರಸೂಲ್ ಕರೀಂ ﷺ ರನ್ನು ಪ್ರೀತಿಸುವವರು ನಾವಾಗೋನಾ ನಮಗೆ ಸಾಧ್ಯವಾದಷ್ಟು ಸ್ವಲಾತ್ ಸಲಾಂ ಹೇಳುತ್ತಾ ಆ ಪುಣ್ಯ ಹಬೀಬ್ ﷺ ರ ಚರ್ಯೆಯನ್ನು ಅನುಸರಿಸುವ ಮೂಲಕ ಆ ಮುತ್ತು ಹಬೀಬ್ ﷺ ರೊಂದಿಗೆ ನಿಕಟವಾದ ಸಂಬಂಧವನ್ನು ಸ್ಥಾಪಿಸೋಣ ಬಳಿಕ ನಮ್ಮ ಆವಶ್ಯಕತೆಯನ್ನು ನೇರವಾಗಿ ನಬಿಯೇ ಕರೀಂ ﷺ ರಲ್ಲಿಯೇ ಕೇಳಿ ಪಡೆಯುವಂತಹಾ ಶ್ರೇಣಿಗೆ ತಲುಪೋಣ ಕಷ್ಟ ಸುಖದಲ್ಲೂ ಹಬೀಬ್ ﷺ ರನ್ನು ಸದಾ ನೆನೆಯುವವರಾಗೋಣ
ಅಲ್ಲಾಹು ನಮಗಾ ಭಾಗ್ಯವನ್ನು ನೀಡಿ ಅನುಗ್ರಹಿಸಲಿ..
  *اٰمِیْن بِجَاہِ النَّبِیِّ الْاَمِیْن صَلَّی اللّٰہُ تَعَالٰی عَلَیْہِ واٰلہٖ وَسَلَّم*

*صَلُّوا عَلَی الْحَبِیْب!  صَلَّی اللہُ تَعَالٰی عَلٰی مُحَمَّد ﷺ*

✒ *ಮುಹಮ್ಮದ್ ಹುಸೈನ್ ರಝಾ.*


Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...