ಮದೀನಾದತ್ತ ಪಯಣ.
ಜನ್ನತುಲ್ ಬಖೀಅ್ ನಲ್ಲಿ ಮಯ್ಯಿತ್ ಗಳ ವರ್ಗಾವಣೆ.
*اَلْحَمْدُ لِلّٰہِ رَبِّ الْعٰلَمِیْنَ وَ الصَّلٰوۃُ وَالسَّلَامُ عَلٰی سَیِّدِ الْمُرْسَلِیْنَ* ط
*اَمَّا بَعْدُ فَاَعُوْذُ بِاللّٰہِ مِنَ الشَّیْطٰنِ الرَّجِیْمِ ط بِسْمِ اللہِ الرَّحْمٰنِ الرَّ حِیْم* ط
_ಹಕೀಮುಲ್ ಉಮ್ಮತ್ ಮುಫ್ತಿ ಅಹ್ಮದ್ ಯಾರ್ ಖಾನ್ ನಈಮಿ رحمت اللہ علیہ ಹೇಳುತ್ತಾರೆ: ಹಜ್ಜ್ ಸಂಧರ್ಭದಲ್ಲಿ ನನ್ನ ಜೊತೆ ಬಂಜಾಬ್ ನ ಸೂಫಿ ಮುಹಮ್ಮದ್ ಹುಸೈನ್ ಹೆಸರಿನ ಒಬ್ಬರು ಹಿರಿಯರಿದ್ದರು ಅವರು ನನ್ನೊಂದಿಗೆ ಹೇಳಿದರು. ಒಮ್ಮೆ ನಾನು ಶಾಹ್ ಅಬ್ದುಲ್ ಹಖ್ ಮುಹಾಜಿರ್ ಇಲಹಾಬಾದಿ رحمت اللہ علیہ ಯವರ ಬಳಿ ಹಾಜರಾದೆ ಮತ್ತು ಅವರೊಂದಿಗೆ *ಹದೀಸಿನಲ್ಲಿ ಹೀಗಿದೆಯಲ್ವಾ. ನನ್ನ ಈ ಮದೀನಾ ಕುಲುಮೆಯಂತಾಗಿದೆ. ಕುಲುಮೆಯೂ ಕಬ್ಬಿಣದ ತುಕ್ಕನ್ನು ಹುರಿದು ಹೇಗೆ ಬೇರ್ಪಡಿಸುತ್ತದೆಯೋ ಹಾಗೆಯೇ ಮದೀನಾ ಅನರ್ಹರನ್ನು ತನ್ನಿಂದ ಬೇರ್ಪಡಿಸುತ್ತದೆ. ಎಂದು ? ಮುರ್ತದ್ ಮತ್ತು ಮುನಾಫಿಕ್ ಗಳೂ ಕೂಡ ಮದೀನಾದಲ್ಲಿ ಮರಣಿಸಿ ಇಲ್ಲಿಯೇ ದಫನ್ ಆಗುತ್ತಾರಲ್ವಾ! ಹಾಗಾದರೆ ಈ ಹದೀಸಿನ ಅರ್ಥವೇನು.? ಎಂದು ಕೇಳಿದೆ.* ಶಾಹ್ ಸಾಹಿಬರು ನನ್ನ ಕಿವಿಯನ್ನು ಹಿಡಿದು ಸಭೆಯಿಂದ ಹೊರ ಹಾಕಿಸಿದರು.! ಯಾವ ತಪ್ಪಿಗೆ ನನ್ನನ್ನು ಹೊರ ಹಾಕಲಾಯಿತೆಂದು ಚಿಂತಿತನಾದೆ ರಾತ್ರಿ ಕನಸಲ್ಲಿ ಕಂಡೆ ಏನೆಂದರೆ ಜನ್ನತುಲ್ ಬಖೀಅ್ ನಲ್ಲಿ ಅಗೆಯಲಾಗುತ್ತಿದೆ ಮತ್ತು ಒಂಟೆಗಳ ಮೂಲಕ ಹೊರಗಿನಿಂದ ಮಯ್ಯಿತ್ ಗಳನ್ನು ತರಲಾಗುತ್ತಿದೆ ಹಾಗೂ ಇಲ್ಲಿಂದ (ಜನ್ನತುಲ್ ಬಖೀಅ್ ನಿಂದ) ಮಯ್ಯಿತನ್ನು ಹೊರಗೆ ಕೊಂಡು ಹೋಗಳಾಗುತ್ತಿದೆ.! ನಾನು ಆ ಜನರ ಬಳಿ ಹೋಗಿ ಕೇಳಿದೆ ಇಲ್ಲಿ ಏನು ಮಾಡುತ್ತಿದ್ದೀರ.? ಅವರು ನನ್ನಲ್ಲಿ ಹೇಳಿದರು. ಇಲ್ಲಿ ದಫನವಾದ ಅನರ್ಹರನ್ನು ಇಲ್ಲಿಂದ ಹೊರಗೆ ಕೊಂಡು ಹೋಗುತ್ತಿದ್ದೇವೆ ಮತ್ತು ಬೆರೆಡೆಯಲ್ಲಿ ದಫನ ಮಾಡಲ್ಪಟ್ಟ ಆಶೀಖೀನ್ಗಳಾದ ಜನರ ಮಯ್ಯಿತನ್ನು ಇಲ್ಲಿಗೆ ತರುತ್ತಿದ್ದೇವೆ.! ಮಾರನೇ ದಿನ ನಾನು ಶಾಹ್ ಸಾಹಿಬರ ಬಳಿ ಹಾಜರಾದೆ. ಅವರು ನನ್ನನ್ನು ಕಾಣುತ್ತಲೇ *ನಿನ್ನೆ ಪ್ರಶ್ನೆ ಕೇಳಿದ ಕಾರಣ ತಾವು ಸಭೆಯಿಂದ ಹೊರ ಹಾಕಲ್ಪಟ್ಟಿರಿ. ಈಗ ಗೊತ್ತಾಯಿತಾ ಹದೀಸಿನ ಅರ್ಥವೇನೆಂದು.?* ಅಂದರು._
(ತಫ್ಸೀರೇ ನಈಮಿ-1 /766)
_*ಸೇರಿಸು ನಮ್ಮನ್ನೂ ಬಖೀಅ್ ಮಣ್ಣಿನಲ್ಲಿ ವಿಶ್ರಮಿಸುವ ಭಾಗ್ಯವಂತರಲ್ಲಿ*_
_*ಸೇರಿಸು ನಮ್ಮನ್ನೂ ಯಾ ಅಲ್ಲಾಹ್.! ನಿನ್ನ ಹಬೀಬ್ ﷺ ರ ಆಶೀಖೀನ್ ಗಳಲ್ಲಿ*_
*اٰمِیْن بِجَاہِ النَّبِیِّ الْاَمِیْن صَلَّی اللّٰہُ تَعَالٰی عَلَیْہِ واٰلہٖ وَسَلَّم*
✒ *ಮುಹಮ್ಮದ್ ಹುಸೈನ್ ರಝಾ.*

Comments