ಓದಲೇಬೇಕಾದ ಸತ್ಯ ಕಥೆ..☘
🌸ಪುದುಪ್ಪಾಡಿಯ ಶ್ರೀಜಿತ್ ಶೈಖುನಾ ಕಾಂತಪುರಂ ಉಸ್ತಾದ್ ಕುರಿತು ಹೇಳುವ ಮನದಾಳದ ಮಾತು...🌸
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಸೂಜಾಶರೀಫ್, ರಾಜಸ್ಥಾನ್
"ಪುದುಪ್ಪಾಡಿಯ ಶ್ರೀಜಿತ್" ಶೈಖುನಾ ಕಾಂತಪುರಂ ಉಸ್ತಾದ್ ರನ್ನು ಕಾಣಲು ಬರುವುದು ಇದು ಎರಡನೇ ಬಾರಿಯಾಗಿದೆ. ಒಂದು ವರ್ಷ ಮುಂಚೆ ಮೊದಲ ಬಾರಿ ಬಂದಾಗ ಅಂದು ಉಸ್ತಾದರು ತುಂಬಾ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಹೋಗುವುದರ ಕಾರಣ ತುಂಬಾ ಹೊತ್ತು ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಆದರೆ ಈ ಕಳೆದ ದಿನ ಬಂದಾಗ ಇವರು(ಶ್ರೀಜಿತ್) ಮಧ್ಯಾಹ್ನ ತನಕ ಮರ್ಕಝ್ ನಲ್ಲೇ ತನ್ನ ಸಮಯ ಕಳೆದರು. ತನ್ನ ಊರಿನ ಓರ್ವ ಗೆಳೆಯನಿಗೆ ವಿದೇಶದಲ್ಲಿ ಕೆಲಸ ಸಂಬಂಧಿಸಿದ ಒಂದು ಸಮಸ್ಯೆಗೆ ಪರಿಹಾರಕ್ಕಾಗಿ ಉಸ್ತಾದರ ಶಿಫಾರಸ್ಸು ಅರ್ಜಿಗಾಗಿ ಬಂದವರಾಗಿದ್ದ ಈತ. ಈತನ ಸಮಸ್ಯೆಯೆಲ್ಲಾ ಉಸ್ತಾದ್ ಆಲಿಸಿ ಅವನಿಗೆ ಆವಶ್ಯಕವಾದ ಸಹಾಯ ನಿರ್ದೇಶನಗಳು ನೀಡಿದರು. ಇದರೆಡೆ ಎರಡು ಕ್ಲಾಸುಗಳು ನಡೆಯಿತು, ಮೂರ್ನಾಲ್ಕು ಕಾರ್ಯಕ್ರಮಗಳಲ್ಲಿ ಉಸ್ತಾದ್ ಭಾಗವಹಿಸಿದರು, ಕಾಣಲೆಂದು ಬಂದ ನೂರಾರು ಜನರೊಂದಿಗೆ ಮಾತನಾಡಿದರು, ಊರಿನಲ್ಲಿ ಮದ್ರಸಾ, ಮಸೀದಿ, ಬಾವಿ, ಮದುವೆ ಇನ್ನಿತರ ಸಮಸ್ಯೆಗಳ ಸೂಕ್ತ ಕ್ರಮದ ಸ್ಪಂದನೆಗಾಗಿ ಹಾಗೂ ಸಹಾಯದ ಅವಶ್ಯಕತೆಗಾಗಿ ಬಂದವರು, ರೋಗ ಶಮನವಾಗಲು ಉಸ್ತಾದರಿಂದ ಪ್ರಾರ್ಥಿಸಲೆಂದು ಬಂದವರು, ಸಣ್ಣ ಮಕ್ಕಳಿಗೆ ಹೆಸರು ಇಡಲೆಂದು ಬಂದವರು, ಮರ್ಕಝ್ ನಾಲೆಡ್ಜ್ ಸಿಟಿಯ ಹೊಸ ಪ್ರಾಜೆಕ್ಟಿನ ಕುರಿತು ಮಾತನಾಡಲು ಬಂದವರು ಈ ರೀತಿ ಯಥೇಷ್ಠ ವ್ಯತಿರಿಕ್ತ, ವಿಭಿನ್ನ ವಿಷಯಗಳ ಕುರಿತು ಮಾತನಾಡಲು ಬಂದವರು ಈ ರೀತಿ ಸಾಗುತ್ತಲೇ ಇರುತ್ತೆ ಇದರ ಲೀಸ್ಟ್..
ಶ್ರೀಜಿತ್ ಹೇಳುತ್ತಾರೆ "ಎಂಥವರನ್ನೂ ಅತಿಶಯೋಕ್ತಿಗೊಳಿಸುತ್ತೆ ಉಸ್ತಾದರ ಸಾಮೀಪ್ಯ. 80 ವಯಸ್ಸು ದಾಟಿದರೂ ಅದೆಂತಹ ಆವೇಶ, ಅತಿಥಿಗಳ ಸ್ವೀಕರಿಸುವ ರೀತಿ, ಒಬ್ಬೊಬ್ಬರ ಸ್ವೀಕರಿಸುವುದು, ಅವರಾಡುವ ಮಾತು ಕೇಳುವುದು, ಅವರಿಗೆ ಆಶ್ವಾಸ ಉಂಟಾಗುವ ಉಪದೇಶ ನಿರ್ದೇಶನಗಳನ್ನು ನೀಡುವುದು, ಸಹಾಯಕ್ಕಾಗಿ ಬಂದವರಿಗೆ ಸಹಾಯ ನೀಡುವುದು, ವಿದೇಶದಲ್ಲಿ ಕೆಲಸ ಸಮಸ್ಯೆಗೆ ಸೂಕ್ತ ಪರಿಹಾರಕ್ಕಾಗಿ ಬಂದವರಿಗೆ ಅದಕ್ಕಿರುವ ಸಹಾಯ ಮಾಡುವುದು, ಈ ರೀತಿ ಎಲ್ಲಾ ವಿಷಯದಲ್ಲೂ ಉಸ್ತಾದರ ಸ್ಪಂದನೆ, ಮಾತುಗಳು ಎಂಥವರನ್ನೂ ಒಮ್ಮೆಗೆ ಸೋಜಿಗರನ್ನಾಗಿಸಬಹುದು.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮರ್ಕಝ್ ಕಾರ್ಯಕರ್ತರಾದ ಕೆಲವು ಸ್ನೇಹಿತರ ಮುಖಾಂತರವಾಗಿತ್ತು ಶ್ರೀಜಿತ್ ಉಸ್ತಾದರ ಕುರಿತು ತಿಳಿದದ್ದು. ಆ ಗೆಳೆಯರು ಒಬ್ಬೊಬ್ಬರು ಇತರರಿಗಿಂತ ವಿಶೇಷ ವ್ಯಕ್ತಿತ್ವ, ಸೌಹಾರ್ದ, ಪ್ರೀತಿ-ವಿಶ್ವಾಸ ಎಲ್ಲಾ ವಿಶೇಷ ಸಂಸ್ಕಾರಗಳು ಒಟ್ಟು ಸೇರಿದವರಾಗಿದ್ದರು. ಸ್ನೇಹ ತುಂಬಿದ ಸಾಹೋದರ್ಯತೆ, ಸೌಹಾರ್ದ ಇವರ ಈ ಪರಿ ವ್ಯಕ್ತಿತ್ವಕ್ಕೆ ಕಾರಣೀಕರ್ತರು ಯಾರಾಗಿರಬಹುದು..!
ಯಾರಾಗಿರಬಹುದು ಇವರ ಹಿಂದಿನ ಸ್ಪೂರ್ತಿದಾಯಕರು..!
ಎಂಬ ಪ್ರಶ್ನೆಗೆ ಉತ್ತರ ಹುಡುಕತೊಡಗಿದಾಗ ಶ್ರೀಜಿತ್ ಗೆ ತಿಳಿಯಲು ಸಾಧ್ಯವಾಯಿತು ಅದು ಬೇರೆ ಯಾರೂ ಅಲ್ಲ "ಶೈಖುನಾ ಕಾಂತಪುರಂ ಉಸ್ತಾದ್ ಹಾಗೂ ಉಸ್ತಾದರು ಕಟ್ಟಿ ಬೆಳೆಸಿದ ಮರ್ಕಝ್" ಎಂಬ ಸತ್ಯಾಂಶ.
ಸಣ್ಣ ಪ್ರಾಯದಲ್ಲೇ ಉಸ್ತಾದರ ಸ್ವಭಾವವಾಗಿದೆ ಸಿಕ್ಕ ಪರಿಚಿತರಲ್ಲೆಲ್ಲಾ ಕಾಣಲು ಸಾಧ್ಯವಾಗಿದ್ದು, ಪರಿಚಿತರ ಮುಖದಲ್ಲಿ ಕಾಣುವ ಮಂದಸ್ಮಿತ ನಗು ಸದಾ ನನ್ನ ಸ್ಮ್ರತಿ ಪಟಲದಲ್ಲಿ ತೇಲಿಬರುತ್ತೆ ಎನ್ನುತ್ತಾರೆ ಶ್ರೀಜಿತ್. ಇವರ ನಡವಳಿಕೆ ಕೂಡಾ ಅದ್ಭುತ.
ಕಳೆದ ಕೆಲ ದಿನಗಳ ಹಿಂದೆ ಬರಹಗಾರ, ಸಾಹಿತಿ ಟಿ.ಡಿ ರಾಮಕೃಷ್ಣನ್ ಮರ್ಕಝ್ ಸಂದರ್ಶಿಸಲು ಬಂದಿದ್ದಾಗ ಉಸ್ತಾದರೊಂದಿಗಿನ ಪ್ರಥಮ ಭೇಟಿಯ ಕುರಿತು ಹಂಚಿಕೊಂಡಿದ್ದರು. ಅದು 1987 ರ ಕಾಲ, ಅಂದು ರೈಲ್ವೆ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದರು ಈ ಟಿ.ಡಿ. ಉಸ್ತಾದ್ ಹಾಗೂ ಮೂರ್ನಾಲ್ಕು ಮಂದಿ ಕೋಝಿಕ್ಕೋಡ್ ನಿಂದ ಕಡಪ್ಪಾದತ್ತ ಪ್ರಯಾಣ ಬೆಳೆಸಿದ್ದರು. ಟಿಕೆಟ್ ಪರಿಶೋಧಿಸಿದಾಗ ಹೆಸರು ಕಂಡಾಗ ಮನದಟ್ಟಾಯಿತು. ಟಿಕೆಟ್ ಪರಿಶೋಧಿಸಿ ಹೋಗುವಾಗ ಶೈಖುನಾ ಉಸ್ತಾದ್ ಈ ಟಿ.ಡಿಯ ತನ್ನ ಸಮೀಪ ಕರೆದು ಹೇಳಿದರು. "ಮಧ್ಯಾಹ್ನದ ಭೋಜನ ನಮ್ಮ ಕೈಯಲ್ಲಿದೆ. ನಾವು ತಿನ್ನಲು ಆರಂಭಿಸುವಾಗ ತಾವು ವಾಪಾಸು ಹಿಂತಿರುಗಿ ಬರುವರಲ್ಲವೇ..!!" ಎಂಬ ಆ ಮಾತು ಅಂದು ಒಟ್ಟು ಸೇರಿ ತಿನ್ನಲು ಸಾಧ್ಯವಾಗದಿದ್ದರೂ ಆ ಒಂದು ಮಾತು ಸಾಕಾಗಿತ್ತು ಶೈಖುನಾರ ಕುರಿತು ಎಂದೆಂದಿಗೂ ಈ ಸಾಹಿತಿಗೆ ಮರೆಯದಿರಲು..
🤲🏻ಅಲ್ಲಾಹು ನಮ್ಮ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರಿಗೆ ಆಫಿಯತ್ ನೊಂದಿಗೆ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ, ಆಮೀನ್..🤲🏻
ಮೂಲ: ಮಲಯಾಳಂ

Comments