Skip to main content

ಎರಡು ಕಫನ್ ಬಟ್ಟೆಯಿಂದ ಕಫನ್ ಮಾಡಲ್ಪಟ್ಟ ಭಾಗ್ಯವಂತೆ ಮಹಿಳೆ

ಎರಡು ಕಫನ್ ಬಟ್ಟೆಯಿಂದ ಕಫನ್ ಮಾಡಲ್ಪಟ್ಟ ಭಾಗ್ಯವಂತೆ ಮಹಿಳೆ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


   ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಾಳ ಸಂಗಾತಿ ಬೀವಿ ಖದೀಜಾಃ (ರ) ರು ಮರಣ ಶಯ್ಯೆಯಲ್ಲಿರುವಾಗ ತನ್ನ ಸಮೀಪವಿದ್ದ ಪತಿ ಪ್ರವಾದಿಯವರಲ್ಲಿ ಮುಸ್ಲಿಮ್ ಉಮ್ಮತಿಗೆ ಕೆಲವು ಮರೆಯಲಾಗದ ವಸಿಯ್ಯತ್‌ಗಳನ್ನು ಮಾಡಿದ್ದರು.

   *ಬೀವಿ ಖದೀಜಾಃ (ರ)*: ನಮ್ಮ ಸುಮಾರು ಇಪ್ಪತ್ತೈದು ‌ವರ್ಷಗಳ ದಾಂಪತ್ಯ ಬದುಕಿನಲ್ಲಿ ನನಗೆ ನಿಮ್ಮನ್ನು ಬೇಕಾದ ಹಾಗೆ ಸಂತೋಷ ಪಡಿಸಲು ಸಾದ್ಯವಾಗಲಿಲ್ಲ. ನನ್ನ ಕರ್ಮದಲ್ಲೋ ಮಾತಿನಲ್ಲೋ‌ ಏನಾದರೂ ತಮ್ಮ ಮನಸ್ಸಿಗೆ ಬೇಸರವಾಗುವುದು ಉಂಟಾಗಿದ್ದರೆ, ನೀವು ನನಗೆ ಮಾಫಿ ಮಾಡಬೇಕು.

 *ಪ್ರವಾದಿ ಮುಹಮ್ಮದ್ (ಸ ಅ)*: ಇಲ್ಲ.. ಇಲ್ಲ.. ಹಾಗೆ ಹೇಳುವ ಅಗತ್ಯವಿಲ್ಲ. ನಿನ್ನಿಂದ ನನಗೆ ಬೇಸರವಾಗುವ ಯಾವ ಘಟನೆಯೂ ನಡೆದಿಲ್ಲ. ಶ್ರೀಮಂತ ಮತ್ತು ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿ ಬದುಕಿದ ಕುಲೀನೆಯಾದ ನಿನಗೆ ಬಡತನವನ್ನು ಇಷ್ಟಪಟ್ಟ ನನ್ನ ಮನೆಯಲ್ಲಿ ಎಷ್ಟೋ ತೊಂದರೆಗಳಾಗಿರಬಹುದು. ನೀನು ಅದನ್ನೆಲ್ಲಾ ಲೆಕ್ಕಿಸದೆ ಪವಿತ್ರ ಇಸ್ಲಾಮಿಗೆ ಬೇಕಾಗಿ ಎಷ್ಟೋ ಹಣ ಖರ್ಚಿ ಮಾಡಿದಿ. ನಿನ್ನ ಹಣವಾಗಿತ್ತು ನನಗೆ ಈ ಮಹಾಕಾರ್ಯದಲ್ಲಿ ಮುಂದೆ ಸಾಗಲು ಉತ್ತೇಜನ ಮಾಡಿ ಹುರುಪು ಕೊಟ್ಟದ್ದು. ಆದ್ದರಿಂದ ಅಂತಹ ಕ್ಷಮಾಪಣೆಯ ಮಾತು ನೀನು ಹೇಳುವ ಅಗತ್ಯವಿಲ್ಲ.

 *ಬೀವಿ ಖದೀಜಃ (ರ)*: ನಾನಿನ್ನು ಇಹಲೋಕ ತ್ಯಜಿಸಿದರೆ ನಮ್ಮ ಈ ಮಗಳು ಫಾತಿಮಾಃಳು (ರ) (ಹತ್ತಿರವಿದ್ದ ಬಾಲಕಿ ಬೀವಿ ಫಾತಿಮರಿಗೆ ಸನ್ನೆ ಮಾಡುತ್ತಾ) ಯತೀಮಾಗುತ್ತಾಳೆ. ನಮ್ಮ ಖುರೈಷೀ ತರವಾಡಿನಿಂದಲೋ ಅಥವಾ ಹೊರಗಿನ ಕುಟುಂಬದ ಮಹಿಳೆಯರಿಂದಲೋ ಇವಳಿಗೆ ಯಾವತ್ತೂ ತೊಂದರೆಯಾಗಬಾರದು. ಅವಳ ಮನಸ್ಸಿಗೆ ಬೇಸರವಾಗುವ ಮಾತು ಯಾರಿಂದಲೂ ಉಂಟಾಗಬಾರದು. ಅವಳಿಗೆ ಯಾರಿಂದಲೂ ಒಂದೇ ಒಂದು ಪೆಟ್ಟು ಬೀಳದಂತೆ ನೀವು ನಿಗಾ ವಹಿಸಬೇಕು.

 *ಪ್ರವಾದಿ ಮುಹಮ್ಮದ್ (ಸ)*: ಪರವಾಗಿಲ್ಲ ನಾನು ಜವಾಬ್ದಾರಿ.

 *ಬೀವಿ ಖದೀಜಾಃ(ರ)*: ನಾನೀಗ ಪರಲೋಕಕ್ಕೆ ಹೋಗುವಾಗ ಏಕಾಂಗಿಯಾಗಿ ವಾಸಿಸಬೇಕಾದ ನನ್ನ ಮೊದಲ ಮನೆಯಾದ ಖಬರಿನ ಬಗ್ಗೆ ನೆನೆಸುವಾಗ ನನಗೆ ಭಯವಾಗುತ್ತದೆ. ಅದ್ದರಿಂದ ನಿಮಗೆ ತೃಪ್ತಿ ಎಂದಾದರೆ ನಿಮಗೆ ಅಲ್ಲಾಹನಿಂದ *"ವಹ್‌ಯ್"* ಬರುತ್ತಿರುವ ವೇಳೆ ನೀವು ಧರಿಸುತ್ತಿದ್ದ ನಿಮ್ಮ ಶಾಲು ನನಗೆ ಕೊಡಬೇಕು. ನಾನು ವಫಾತಾದರೆ ನೀವು ನನ್ನನ್ನು ಅದರಲ್ಲಿ ಹೊದಿಕೆ ಮಾಡಿ ಕಫನ್ ಮಾಡಬೇಕು.

 *ಸುಬ್‌ಹಾನಲ್ಲಾಹ್* ಬೀವಿ ಖದೀಜಾಃ (ರ) ರಿಂದ ಇದನ್ನು ಕೇಳಿದಾಗ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಬಹಳ ಸಂತೋಷದಿಂದ ತನ್ನ ಶಾಲನ್ನು ಅವರಿಗೆ ಕೊಟ್ಟರು.

 *ದಿನಗಳ* ನಂತರ ಬೀವಿ ಖದೀಜಾಃ (ರ) ರು ವಫಾತ್ ಆದರು. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರನ್ನು ಸ್ನಾನ ಮಾಡಿಸಿ ಸುಗಂಧ ಹಾಕಿ ಆ ಬಟ್ಟೆಯಲ್ಲಿ ಕಫನ ಮಾಡಲ ರೆಡಿಯಾಗುತ್ತಿರುವಾಗ ಆಕಾಶ ಲೋಕದಿಂದ ಮಲಕ್ ಜಿಬ್‌ರೀಲ್ (ಅ) ರು ಒಂದು ಕಫನ್ ಬಟ್ಟೆ ತೆಗೆದುಕೊಂಡು ಬರುತ್ತಾ ಹೇಳಿದರು. *"ಪ್ರವಾದಿಯವರೇ, ನಿಮಗೆ ಅಲ್ಲಾಹನು ಸಲಾಮ್ ಹೇಳಿರುತ್ತಾನೆ. ಮಾತ್ರವಲ್ಲ, ನಿಮ್ಮ ಪತ್ನಿ ಬೀವಿ ಖದೀಜರು ತನ್ನ ಬದುಕನ್ನು ಇಸ್ಲಾಮಿಗಾಗಿ ಮುಡಿಪಾಗಿಟ್ಟ ಕಾರಣ ಅವರನ್ನು ಕಫನ ಮಾಡಲು ಅಲ್ಲಾಹನು ಸ್ವರ್ಗದಿಂದ ಒಂದು ಒಂದು ಕಫನ್ ಬಟ್ಟೆ ಕೊಟ್ಟಿದ್ದಾನೆ. ಇದು ಅಲ್ಲಾಹನ ಕಡೆಯಿಂದ ಅವರಿಗೆ‌ ಒಂದು ಉಡುಗೊರೆಯಾಗಿರುತ್ತದೆ. ಆದ್ದರಿಂದ ನೀವು ಅವರನ್ನು ಈ ಬಟ್ಟೆಯಿಂದ ಕಫನ ಮಾಡಲು ಅಲ್ಲಾಹನು ಹೇಳಿರುತ್ತಾನೆ."*

 *ನಂತರ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಶಾಲಿನಿಂದ ಕಫನ ಮಾಡಿದ ಬಳಿಕ ಅದರ ಮೇಲೆ ಈ ಸ್ವರ್ಗದ ಪವಿತ್ರ ಬಟ್ಟೆಯಿಂದಲೂ ಕಫನ ಮಾಡಿದರು. ಒಂದು ಬಟ್ಟೆ ಅಲ್ಲಾಹನಿಂದಲೂ ಮತ್ತೊಂದು ಅವನ ಪ್ರವಾದಿಯಿಂದಲೂ ಉಡುಗೊರೆಯಾಗಿ ದೊರೆತ ಎರಡು ಬಟ್ಟೆಗಳು..! ವಿಶ್ವಾಸಿಯರ ಮಹಾ ಮಾತೆ ಅದೆಷ್ಟು ಸೌಭಾಗ್ಯವತಿ‌ ಎಂಬುದಕ್ಕೆ ಈ ಘಟನೆ ಒಂದೇ ಸಾಕು..

ಸಂಗ್ರಹ: ಚರಿತ್ರೆ ಗ್ರಂಥಗಳಿಂದ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...