Skip to main content

ಸಾಂಕ್ರಾಮಿಕ ರೋಗಕ್ಕೆ ಮಂಕೂಸ್ ಮೌಲಿದ್ ಪರಿಹಾರವೇ

ಸಾಂಕ್ರಾಮಿಕ ರೋಗಕ್ಕೆ ಮಂಕೂಸ್ ಮೌಲಿದ್ ಪರಿಹಾರವೇ
--------------------------------------------------
📝 ಮುನೀರ್ ಸಖಾಫಿ ಸಾಲೆತ್ತೂರು.

ರೋಗವನ್ನು ಅಲ್ಲಾಹನು ನೀಡುತ್ತಾನೆ.
ಅಲ್ಲಾಹನು ರೋಗ ನೀಡುವುದರೊಂದಿಗೆ ಅದಕ್ಕಿರುವ ಔಷಧಿಯನ್ನೂ  ಇಟ್ಟಿದ್ದಾನೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಒಂದು ಹದೀಸ್ ನೋಡಿ,
تداووا فان الله عزوجل لم ينزل داء الا وضع له دواء (الادب المفرد للبخاري 463  ಹ.ನಂಬ್ರ)

ನೀವು ಚಿಕಿತ್ಸೆ ಮಾಡಿರಿ,ಅಲ್ಲಾಹನು ಯಾವ ರೋಗವನ್ನು ನೀಡಿದ್ದಾನೋ ಅದಕ್ಕಿರುವ ಔಷಧಿಯನ್ನೂ ನೀಡಿದ್ದಾನೆ.
(ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ 1/109 )ಸಹಿತ ನೂರಾರು ಮುಹದ್ದಿಸ್ ಗಳು ಈ ಹದೀಸ್ ವರದಿ ಮಾಡಿದ್ದಾರೆ.

ರೋಗಕ್ಕೆ ಎರಡು ರೀತಿಯಲ್ಲಿ ಚಿಕಿತ್ಸೆ ನಡೆಸಬಹುದಾಗಿದೆ.
1.ಭೌತಿಕವಾದ ಚಿಕಿತ್ಸೆ
2.ಅಭೌತಿಕವಾದ ಚಿಕಿತ್ಸೆ.

ನುರಿತ ವೈಧ್ಯರನ್ನು ಸಮೀಪಿಸಿ ತನ್ನ ರೋಗಕ್ಕಿರುವ ಚಿಕಿತ್ಸೆಯನ್ನು ಮಾಡುವುದು  ಒಂದನೇಯದ್ದಾದರೆ
ಖುರ್'ಆನ್ ಮತ್ತು ಹದೀಸ್ ಗಳ ಮೂಲಕ ವರದಿಯಾದ ದ್ಸಿಕ್ರ್ ಗಳನ್ನು ಪಠಿಸುವ ಮೂಲಕ ಮಾಡುವ ಚಿಕಿತ್ಸೆಯಾಗಿದೆ ಎರಡನೇಯದ್ದು.

ಈ ಎರಡು ರೂಪಗಳನ್ನು ಇಸ್ಲಾಮ್  ಅಂಗೀಕರಿಸಿದೆ.
ಕೆಲವೊಮ್ಮೆ ವೈಧ್ಯರು ಹೇಳುವುದುಂಟು.ನಮ್ಮ  ಕೊನೇ ಪ್ರಯತ್ನವೂ ಮುಗಿದಿದೆ.ಇನ್ನೇನಾದರು ನಿಮ್ಮ
ಪ್ರಾರ್ಥನೆಯ ಮೂಲಕ ವಾಸಿಯಾಗಬೇಕಿದೆ.

ರೋಗದ ವೇಳೆ ಔಷಧಿ ಸೇವಿಸುವಂತೆ ಪ್ರಾರ್ಥನೆಯೂ ಅತೀ ಮುಖ್ಯವಾಗಿದೆ.
ರೋಗವು ಅಲ್ಲಾಹನ ಇಛ್ಛೆ ಪ್ರಕಾರ ಇಛ್ಛಿಸಿದವರಿಗೆ ಬಂದೆರಗುತ್ತದೆ.
ಅಲ್ಲಾಹನು ಇಛ್ಛಿಸದೆ ಯಾವ ರೋಗ ಕೂಡಾ ಯಾರಿಗೂ ಬಾರದು.
ಆದರೆ ರೋಗಗಳು ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.
ಅದಕ್ಕೆ ಬೇಕಾಗಿ ಆರೋಗ್ಯ ಇಲಾಖೆ ಯಾವ್ಯಾವ ಮುಂಜಾಗ್ರತೆ ಕ್ರಮ ನಿರ್ದೇಶಿಸುತ್ತದೆಯೋ ಅದನ್ನು ಪಾಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ.
ಅದೇ ರೀತಿ ಪ್ರಾರ್ಥನೆಯ ಮೂಲಕ ರೋಗ ಬರದಂತೆ ಅಲ್ಲಾಹನೊಂದಿಗೆ ಬೇಡುವುದು ಕೂಡಾ.

ಇದೀಗ ಪ್ರಪಂಚವೇ ಕೊರೋನ ವೈರಸ್ ನಿಂದ ನಡುಗಿದೆ.
ವೈರಸ್ ಹರಡದಂತೆ ಬಾರೀ ಪ್ರಯತ್ನಗಳು ನಮ್ಮ ಕಡೆಯಿಂದ ವಹಿಸಬೇಕಾಗಿದೆ.
ವೈರಸ್ ಗಳಿಂದ ಮುಕ್ತವಾಗಲು ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕಾಗಿದೆ.
ಪ್ರಾರ್ಥಿಸುವಾಗ ಸತ್ಕರ್ಮಗಳನ್ನು ಮುಂದಿರಿಸಿ ತವಸ್ಸುಲ್ ಮಾಡಿ ಅಲ್ಲಾಹನೊಂದಿಗೆ ಪ್ರಾರ್ಥಿಸಿದರೆ ಅಲ್ಲಾಹನು ಬೇಗನೆ ಉತ್ತರ ನೀಡುವನು.

ಅದನ್ನೇ ನಮ್ಮ ಉಲಮಾ ನಾಯಕರು ಹೇಳಿದ್ದಾರೆ.ಕೊರೋನ ವೈರಸ್ ನ ನಿರ್ಮೂಲನೆಗೆ ಮಂಕೂಸ್ ಮೌಲಿದ್ ಪಠಿಸಿರಿ ಎಂದು ಹೇಳಿದರೆ 'ಮೌಲಿದ್' ಎಂಬ ಸತ್ಕರ್ಮ ನಿರ್ವಹಿಸಿ 'ತವಸ್ಸುಲ್ ಮಾಡಿ ಪ್ರಾರ್ಥಿಸಿರಿ' ಎಂದಾಗಿದೆ ಅದರ ಅರ್ಥ.

*ಸತ್ಕರ್ಮಗಳ ತವಸ್ಸುಲ್ ಅನುವದನೀಯವೇ?*

ಇಮಾಮ್ ಬುಖಾರಿ ವರದಿ ಮಾಡಿದ 2152 ನೇ ಹದೀಸ್ ನಲ್ಲಿ 3 ಜನರು ಗುಹೆಯ ಒಳಗೆ ಬಂದಿಯಾದಾಗ ಆ ಮೂವರು ಮಾಡಿದ 3 ಸತ್ಕರ್ಮಗಳನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿದಾಗ ಅವರ ಸಂಕಷ್ಟ ನೀಗಿದ ಘಟನೆಯನ್ನು ವಿವರಿಸಲಾಗಿದೆ.
(ಬುಖಾರಿ ನೋಡಿ.ಹದೀಸ್ ದೀರ್ಘವಾದುದರಿಂದ ಇಲ್ಲಿ ನೀಡಿಲ್ಲ.)

ಇನ್ನೊಂದು ಘಟನೆ ನೋಡಿ,

ಇಮಾಮ್ ಬುಖಾರಿ ವರದಿ
عن قتادة عن أنس بن مالك رضي الله عنه قال صعد النبي صلى الله عليه وسلم إلى أحد ومعه أبو بكر وعمر وعثمان فرجف بهم فضربه برجله قال اثبت أحد فما عليك إلا نبي أو صديق أو شهيدان
(بخاري3472)
ಅನಸ್ (ರ)ಹೇಳುತ್ತಾರೆ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಮ್ಮೆ ಉಹ್ದ್ ಪರ್ವತ ಹತ್ತಿದರು.ಜತೆಗೆ ಅಬೂಬಕರ್,ಉಮರ್,ಉಸ್ಮಾನ್(ರ)ಇದ್ದರು.
ಆವಾಗ ಉಹ್ದ್ ಪರ್ವತ ಕಂಪನವುಂಟಾಯಿತು.ಆಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ಉಹ್ದ್!ನೀನು ಅಲುಗಾಡದಿರು.ಖಂಡಿತವಾಗಿಯೂ ನಿನ್ನ ಮೇಲೆ ಪ್ರವಾದಿಯೊಬ್ಬರು ಮತ್ತು ಸಿದ್ದೀಖ್ ಹಾಗೂ ಇಬ್ಬರು ಶಹೀದ್ ಗಳಿದ್ದಾರೆ.
(ಬುಖಾರಿ 3472)

ಈ ಹದೀಸ್ ಗಮನಿಸಿ

ಅಲುಗಾಡಿದ ಉಹ್ದ್ ಪರ್ವತವನ್ನು ಅಲುಗಾಡದಂತೆ ಹಿಡಿದಿಟ್ಟದ್ದು ಪ್ರವಾದೀ ವರ್ಯರ "ನಿನ್ನ ಮೇಲೆ ಪ್ರವಾದೀ ವರ್ಯರು ಮತ್ತು ಸಿದ್ದೀಕ್ ,ಶಹೀದ್"  ಎಂಬ ಗೌರವ ನಾಮಗಳಾಗಿತ್ತು.ಅದು ಆ ಮಹಾತ್ಮರ ಪ್ರಶಂಸೆಯ ಮಾತು ಕೂಡಾ ಆಗಿತ್ತು.

ನಿನ್ನ ಮೇಲೆ ಮುಹಮ್ಮದ್ ನೆಬಿ,ಅಬೂಬಕರ್ ,ಉಮರ್,ಉಸ್ಮಾನ್ ಇದ್ದಾರೆ ಎಂದು ಹೇಳಿಲ್ಲ.
ಆದುದರಿಂದಲೇ ಮಹಾತ್ಮರ ಪ್ರಶಂಸೆಗಳು ಮತ್ತು ಗುಣಗಾನಗಳು ವಿಪತ್ತಿನಿಂದ ರಕ್ಷೆ ಹೊಂದಲು ಬಹಳ ಸಹಾಯಕಾರಿಯಾಗಿದೆ.
ಮಹಾತ್ಮರ ಗುಣಗಾನದಿಂದ ಉಹ್ದ್ ಪರ್ವತದ ಅಲುಗಾಟ ನಿಂತಿತು ಎಂದು ಇಮಾಮ್ ಬುಖಾರಿಯ ಪ್ರಸ್ತುತ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.

ಇಮಾಮ್ ಮುಹಮ್ಮದ್ ಅಬ್ದುಲ್ ಹಾದೀ ಅಸ್ಸಿಂದಿ ಯ ಹಾಶಿಯತುಲ್ ಬುಖಾರಿ 2/118 ಉದಾರಣೆ ಮಾತ್ರ.

 ರೋಗಕ್ಕೆ ಚಿಕಿತ್ಸೆ ಮಾಡಬಾರದೆಂದು ಇಲ್ಲಿ ಯಾರೂ ಹೇಳಿಲ್ಲ.
ರೋಗಕ್ಕೆ ಚಿಕಿತ್ಸೆ ಮಾಡಬೇಕು.ರೋಗ ಬರದಂತೆ ನೋಡಿಕೊಳ್ಳಬೇಕು.
ರೋಗ ಬರದಂತೆ ಖುರ್'ಆನ್ ಪಾರಾಯಣ ಮಾಡಿ, ಮಹಾತ್ಮರ ಮೌಲಿದ್ ಗಳು,ಮದ್'ಹ್'ಗಳು ಓದಿ ಪ್ರಾರ್ಥಿಸಬೇಕು.ಇದಾಗಿದೆ ನಮ್ಮ ನಾಯಕರು ಅನುಯಾಯಿಗಳಲ್ಲಿ ವಿನಂತಿಸಿಕೊಡದ್ದು ಎಂದು ಮಾತ್ರ ತಿಳಿದಲ್ಲಿ ಯಾವ ಸಂಶಯವೂ ಕೂಡ ಜನಿಸದು.

*ಮಂಕೂಸ್ ಮೌಲಿದ್*

 ಶೈಕ್ ಝೈನುದ್ದೀನ್ ಮಕ್ದೂಮ್ (ರ) ರಚಿಸಿದ್ದಾಗಿದೆ ಮಂಕೂಸ್ ಮೌಲಿದ್.
 ಸಾಂಕ್ರಮಿಕ ರೋಗ ವ್ಯಾಪಕವಾದಾಗ ಜನರು  ಅವರೊಂದಿಗೆ ಅದಕ್ಕೆ ಪರಿಹಾರ ಕೇಳಿಕೊಂಡಾಗ ಮನೆ ಮನೆಗಳಲ್ಲಿ ಮೌಲಿದ್ ಓದುವಂತೆ ಅವರು ಆಞ್ಞಾಪಿಸಿದರು.ಅದಕ್ಕಾಗಿ ಬೃಹತ್ ಮೌಲಿದ್ ಕಿತಾಬ್ ಗಳಿಂದ ಸಂಕ್ಷಿಪ್ತವಾದ ಮೌಲಿದ್ ಕಿತಾಬನ್ನು ರಚಿಸಿ ಕೊಟ್ಟರು.ಅದಕ್ಕೆ ಅವರು ಮಂಕೂಸ್ ಮೌಲಿದ್ ಎಂದು ಹೆಸರಿಟ್ಟರು.
ಅದನ್ನು ಪಾರಾಯಣ ಮಾಡಿದ ಜನರು ಸಾಂಕ್ರಾಮಿಕ ರೋಗದಿಂದ ಮುಕ್ತರಾದರು.

ಇದೀಗ ಕೊರೋನ ಎಂಬ ಸಾಂಕ್ರಾಮಿಕ ರೋಗ ಬಂದು ಬಿಟ್ಟಿದೆ.
ಅದನ್ನು ನಿರ್ಮೂಲನೆಗೊಳಿಸಲು ಮಂಕೂಸ್ ಮೌಲಿದ್ ಓದಿ ಪ್ರಾರ್ಥಿಸೋಣ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...