ವಾಲಿಕೊಂಡೇ ನಡೆಯುವ ಏಡಿ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553599119
▪ ಎಂಟು ಕಾಲುಗಳು, ಭುಜದಲ್ಲಿ ಎರಡು ಕಣ್ಣುಗಳು, ಹಲವಾರು ಹಲ್ಲುಗಳು, ಶರೀರವನ್ನು ಆವರಿಸಿದ ಒಂದು ಬಲಿಷ್ಠ ಕವಚ ಮತ್ತು ಎದೆಯಲ್ಲಿ ಬಾಯಿಯಿರುವ ತಲೆಯಿಲ್ಲದ ಒಂದು ಉಭಯವಾಸಿ ಜೀವಿಯಾಗಿದೆ ಏಡಿ. ಚೆನ್ನಾಗಿ ನಡೆಯಲು ಮತ್ತು ವೇಗವಾಗಿ ಓಡಲು ಸಾಮರ್ಥ್ಯವಿರುವ ಈ ಜಲಜೀವಿ ನೆಲದಲ್ಲೂ ಬದುಕುತ್ತದೆ.
▪ *ಒಂದು* ವರ್ಷದಲ್ಲಿ ಆರು ಅಥವಾ ಏಳು ಬಾರಿ ತನ್ನ ಚರ್ಮವನ್ನು ಸುಲಿಯುವ ಈ ಜೀವಿಯ ವಾಸಗೂಡಿಗೆ ಎರಡು ಪ್ರವೇಶ ಬಾಗಿಲು ಇರುತ್ತವೆ. (Double entrance) ಅದರಲ್ಲಿ ಒಂದರಿಂದ ಹೊರಬಂದರೆ ಯಾವುದೇ ಅಡಚಣೆಯಿಲ್ಲದೆ ನೇರವಾಗಿ ನದಿಗೆ ಅಥವಾ ತೋಡಿಗೆ ಇಳಿಯಬಹುದು. ಹಾಗೆಯೇ ಮತ್ತೊಂದು ಬಾಗಿಲಿನಿಂದ ಹೊರಬಂದರೆ ನೀರಿಲ್ಲದ ಬರಡು ಒಣ ಜಾಗಕ್ಕೂ ತಲುಪುತ್ತದೆ.
▪ *ಏಡಿಯು* ಚರ್ಮ ಸುಲಿದ ಸಂದರ್ಭದಲ್ಲಿ ಹೊಸ ಚರ್ಮ ಬರುವ ತನಕ ನೀರಿನ ದಿಕ್ಕಿಗಿರುವ ತನ್ನ ಗೂಡಿನ ಬಾಗಿಲನ್ನು ತಾತ್ಕಾಲಿಕ ಮುಚ್ಚುತ್ತದೆ. ಹಳೆ ಚರ್ಮ ಸುಲಿದಾಗ ಶರೀದಲ್ಲಿರುವ ಹೊಸ ಚರ್ಮ ಬಹಳ ಮೃದುವಾಗಿಯೂ ತೆಳ್ಳಗಾಗಿಯೂ ಇರುತ್ತದೆ. ಆ ಸಂದರ್ಭದಲ್ಲಿ ನೀರಿನ ದಿಕ್ಕಿಗಿರುವ ಬಾಗಿಲು ತೆರೆದಿದ್ದರೆ, ನೀರಿನ ಭಾಗದಿಂದ ಬರುವ ತೇವಾಂಶದಿಂದಾಗಿ ಹೊಸ ಚರ್ಮ ಬೆಳೆದು ಗಟ್ಟಿಯಾಗಲು ತೊಂದರೆಯಾಗುತ್ತದೆ. ಮಾತ್ರವಲ್ಲ ಶರೀರದ ಚರ್ಮ ಗಟ್ಟಿಯಿಲ್ಲದೆ ಬಲಹೀನನಾಗಿರುವ ಸಂದರ್ಭದಲ್ಲಿ ನೀರಿನಿಂದ ಆಕ್ರಮಣ ಮಾಡಲು ಬರುವ ದೊಡ್ಡ ಮೀನುಗಳನ್ನು ಕೂಡ ಎದುರಿಸಲು ಸಾಧ್ಯವಾಗುವುದಿಲ್ಲ. ಆ ಕಾರಣಗಳಿಂದಾಗಿ ಈ ಬುದ್ದಿವಂತ ಏಡಿಯು ತಾತ್ಕಾಲಿಕವಾಗಿ ನೀರಿನ ಭಾಗದ ದ್ವಾರವನ್ನು ಮುಚ್ಚುವುದು. ಇನ್ನು ಚರ್ಮ ಗಟ್ಟಿಯಾದ ಕೂಡಲೇ ನೀರಿಗಿರುವ ಬಾಗಿಲನ್ನು ತೆರೆದು ತನ್ನ ಆಹಾರ ಹುಡುಕುತ್ತಾ ನೀರಿಗೆ ಇಳಿಯುತ್ತದೆ.
▪ *ನೀರಿನಲ್ಲೂ* ದಡದಲ್ಲೂ ಬದುಕಲು ಸಾಧ್ಯವಿರುವ ನಮ್ಮೂರ ನದಿ ಮತ್ತು ತೋಡಿನ ಬದಿಯಲ್ಲಿ ಕಾಣಸಿಗುವ ಈ ಉಭಯವಾಸಿ ಜೀವಿಯನ್ನು ತಿನ್ಜುವುದು ಶಾಫಿಯೀ ಮದ್‌ಹಬ್ ಪ್ರಕಾರ ಹರಾಮಾಗಿದೆ. ಯಾವ ಮೀನಾದರೂ ಅದು ಹಲಾಲ್ ಆಗಬೇಕಾದರೆ ಅದನ್ನು ನೀರಿನಿಂದ ಹೊರತೆಗೆದರೆ ದಡದಲ್ಲಿ ಬದುಕಲಾಗದೆ ಸಾಯಬೇಕು ಎಂಬ ನಿಯಮ ಅಥವಾ ಶರತ್ತು ಇಸ್ಲಾಮಿನಲ್ಲಿದೆ. ಆದರೆ ನಾವಿಂದು ಕಡಲಿನಿಂದ ಹಿಡಿದು ತರುವ ಏಡಿಯು ಉಭಯವಾಸಿ ಅಲ್ಲವೆಂದೂ, ಅದನ್ನು ಸಮುದ್ರದಿಂದ ಹೊರತಂದ ಕೂಡಲೇ ಅದು ಸಾಯುತ್ತದೆ ಎಂದೂ ಹೇಳಲಾಗುತ್ತದೆ. ಇನ್ನು ಕಡಲಿನ ಏಡಿ ಕಿನಾರೆಗೆ ಬಂದರೂ ತಾತ್ಕಾಲಿಕ ಒಂದು ಸಂದರ್ಶನ (ವಿಸಿಟ್) ಮಾಡಿ ಹೋಗುತ್ತದೆಯೇ ವಿನಾ ಕಿನಾರೆಯಲ್ಲಿ ದೀರ್ಘ ಸಮಯ ನಿಲ್ಲುವುದೋ ಅಥವಾ ವಾಸ ಮಾಡುವುದೋ ಇಲ್ಲ. ಆ ಕಾರಣದಿಂದ ಅದು ಹಲಾಲ್ ಎಂದು ನಮ್ಮ ಉಲಮಾಗಳು ಫತ್ವಾ ಕೊಟ್ಟಿದ್ದಾರೆ. ಆದರೂ ಸೂಕ್ಷ್ಮತೆಗೆ ಬೇಕಾಗಿ ತಿನ್ನದಿರುವುದೇ ಉತ್ತಮ ಎಂಬುದು ದೀರ್ಘದೃಷ್ಟಿ ಇರುವ ಹೆಚ್ಚಿನ ಉಲಮಾಗಳ ಅಭಿಪ್ರಾಯ.
▪ *ಎಂಟು* ಕಾಲುಗಳಲ್ಲಿ ಬಹಳ ಚೂಪಾದ ಉಗುರಿರುವ *ನೀರಿನ ಚೇಳು* ಎಂಬ ಉಪನಾಮವಿರುವ ಈ ಏಡಿ ಯಾವಾಗಲೂ ನಡೆಯುವುದು ಒಂದು ಭಾಗಕ್ಕೆ ವಾಲಿಯಾಗಿರುತ್ತದೆ. ಜನ್ಮಜಾತವಾಗಿ ಅಥವಾ ಜನ್ಮಸಿಧ್ದವಾಗಿ ಕಾಲಿನ ಕೀಲಿ ಜೋಡನೆಯ ವ್ಯತ್ಯಾಸವಾಗಿದೆ ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಆದರೆ ಅದರ ನಿಜವಾದ ಕಾರಣ ಮತ್ತೆ ರಹಸ್ಯ ಸೃಷ್ಟಿಕರ್ತನಾದ ಅಲ್ಲಾಹುವಿನಿಗೇ ಗೊತ್ತು.
▪ *ಒಂದು* ಕಡೆ ಏಡಿಯೊಂದು ಹೊಟ್ಟೆ ಮೇಲೂ ಬೆನ್ನು ಕೆಳಗಾಗಿಯೂ ಸತ್ತು ಬಿದ್ದಿರುವುದಾದರೆ ಆ ಊರಿಗೆ ಆಕಾಶದಿಂದ ಬರುವ ಅನಾಹುತಗಳು ಬರಲಾರದು ಎಂಬ ನಂಬಿಕೆ ಪುರಾತನ ಕಾಲದಿಂದಲೇ ಇದೆ.
▪ *ಇದರ* ಬೇರೊಂದು ಅದ್ಭುತವೆಂದರೆ ಚೆನ್ನಾಗಿ ಫಲಕೊಡದ ಮರ ಅಥವಾ ಗಿಡಕ್ಕೆ ಇದನ್ನು ತೂಗು ಹಾಕಿದರೆ ಆ ಮರದಲ್ಲಿ ಫಲಕೊಡುವುದು ಜಾಸ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಂತೆಯೇ ಫಲ ಕೊಡುವ ಮರಕ್ಕೆ ಇದರ ಕಾಲುಗಳನ್ನು ತುಂಡು ಮಾಡಿ ಕಟ್ಟಿದರೆ ಫಲಗಳು ಉದುರಿ ಬೀಳುತ್ತದೆ ಎಂದೂ ಹೇಳಲಾಗುತ್ತದೆ.
▪ *ವ್ಯಕ್ತಿಯೊಬ್ಬನು* ಏಡಿಯನ್ನು ತನ್ನ ಶರೀರದ ಯಾವುದಾದರೊಂದು ಭಾಗಕ್ಕೆ ಕಟ್ಟಿಹಾಕಿದರೆ ಆದಿನ ಚಂದ್ರ ಬೆಳಕಿರುವ ರಾತ್ರಿಯಾದರೆ ಅವನಿಗೆ ಬೆಳಗಿನ ತನಕ ನಿದ್ದೆ ಬಾರದು. ಚಂದ್ರ ಬೆಳಕಿಲ್ಲದ ಕಪ್ಪು ರಾತ್ರಿಯಾದರೆ ನಿದ್ರೆ ಬರಬಹುದು.
▪ *ಏಡಿಯನ್ನು* ಅರಬಿ ಭಾಷೆಯಲ್ಲಿ *ಸರತಾನ್* ಎಂದು ಕರೆಯುತ್ತಾರೆ. ಮಾರಕ ಖಾಯಿಲೆಯಾದ *ಕ್ಯಾನ್ಸರ್* ಖಾಯಿಲೆಯನ್ನು ಕೂಡ ಅರಬಿ ಭಾಷೆಯಲ್ಲಿ *ಸರತಾನ್* ಎಂದೇ ಹೇಳುವುದು. ಅಂದರೆ ಆ ಖಾಯಿಲೆಯನ್ನು ಹರಡುವ ಅದರಲ್ಲಿರುವ ವೈರಸ್‌ನ ಆಕಾರವು ಏಡಿಯ ಆಕಾರದಲ್ಲಿ ಆಗಿರುತ್ತದೆ. ಆ ಕಾರಣದಿಂದ ಆ ರೋಗಕ್ಕೆ ಅರಬಿಯಲ್ಲಿ ಆ ಹೆಸರು ಬಂತು. ಅದರಂತೆಯೇ ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಈ ರೋಗಕ್ಕೆ ಅದೇ ಅರ್ಥವನ್ನು ಸೂಚಿಸುವ *ಏಡಿಹುಣ್ಣು ರೋಗ* ಎಂದು ಕರೆಯುತ್ತಾರೆ.
▪ *ಮೂಲವ್ಯಾಧಿ* ಖಾಯಿಲೆ ಇರುವವರು ಏಡಿಯನ್ನು ಸುಟ್ಟು ಅದನ್ನು ಆ ಭಾಗಕ್ಕೆ ಕೆಲವು ದಿನಗಳ ಕಾಲ ಇಟ್ಟು ಕಟ್ಟಿದರೆ ಖಾಯಿಲೆ ಸಂಪೂರ್ಣ ಗುಣವಾಗುತ್ತದೆ. ಮಾತ್ರವಲ್ಲ ಇದು ಪರೀಕ್ಷಿಸಲ್ಪಟ್ಟ ಒಂದು ಚಿಕಿತ್ಸೆಯಾದ್ದರಿಂದ ನೂರಕ್ಕೆ ನೂರು ಯಶಸ್ವಿಯಾಗಿರುತ್ತದೆ.
▪ *ಹಾವು,* ಚೇಳು ಅಥವಾ ಇನ್ಯಾವುದೇ ವಿಷಜಂತು ಕಚ್ಚಿದಲ್ಲಿಗೆ ಏಡಿಯನ್ನು ಜಜ್ಜಿ ಕಟ್ಟಿದರೆ ಬಹಳ ಫಲ ಕಾಣುತ್ತದೆ. ಅಂತೆಯೇ ಆಣಿಯಂತಹಾ ಲೋಹದ ವಸ್ತು ಶರೀರಕ್ಕೆ ಹೊಕ್ಕಿ ಗಾಯವಾಗಿದ್ದಲ್ಲಿ ಅಲ್ಲಿಗೆ ಏಡಿಯನ್ನು ಇಟ್ಟು ಕಟ್ಟಿದರೆ ನೋವು ಕಡಿಮೆಯಾಗುವುದಲ್ಲದೇ ಒಳಹೊಕ್ಕ ವಸ್ತು ಹೊರ ಬರುತ್ತದೆ. ಇದನ್ನು ಸುಟ್ಟ ಬೂದಿಯಿಂದ ಹಲ್ಲು ಉಜ್ಜಿದರೆ ಹಲ್ಲು ಪಳಪಳವಾಗುತ್ತದೆ.
▪ *ನಿರಂತರ* ಉಂಟಾಗುವ ಬೆನ್ನುನೋವಿಗೆ ಏಡಿಯ ಮಾಂಸವನ್ನು ಆಗಾಗ್ಗೆ ಕೆಲವು ದಿನಗಳ ಕಾಲ ತಿನ್ನುವುದಾದರೆ ಅದು ಸಂಪೂರ್ಣ ಮಾಯವಾಗುತ್ತದೆ.
▪ *ಏಡಿಯ* ಮಾಂಸ ಕ್ಷಯ ರೋಗಿಗಳಿಗೆ ಒಂದು ಉತ್ತಮ ಔಷಧವಾಗಿದೆ. ಈ ಖಾಯಿಲೆ ಇರುವವನು ಏಡಿಯ ಮಾಂಸ ಆಗಾಗ್ಗೆ ತಿನ್ನುವುದಾದರೆ ಅವನ ರೋಗ ಬೆಟ್ಟ ಹತ್ತುತ್ತದೆ. ಏಡಿಯನ್ನು ಬೇಯಿಸಿದ ನೀರನ್ನು ಕುಡಿದರೆ ಮೂತ್ರಕಲ್ಲು ಹಾರಿ ಹೋಗುತ್ತದೆ. ತಾನರಿಯದೆಯೇ ನಿರಂತರ ಮೂತ್ರ ಸೋರಿಕೆ ಖಾಯಿಲೆ ಇರುವವನು ಈ ನೀರನ್ನು ಆಗಾಗ್ಗೆ ಕುಡಿದರೆ ಒಳ್ಳೆಯ ಬದಲಾವಣೆಯಾಗುತ್ತದೆ.
▪ *ಕ್ಷಯ* ರೋಗದ ಪ್ರಾರಂಭದಲ್ಲಿ ಏಡಿಯನ್ನು ಬಾರ್ಲಿ ಗಿಡದೊಂದಿಗೆ ಬೇಯಿಸಿ ತಿಂದರೆ ರೋಗವು ಬೆಳೆಯದೆ ಅಲ್ಲಿಗೆ ಸ್ಥಗಿತಗೊಳ್ಳುತ್ತದೆ. ನಂತರ ಸಂಪೂರ್ಣವಾಗಿ ಗುಣವಾಗುತ್ತದೆ.
▪ *ಸ್ತನಗಳಿಗೆ* ಏಡಿಹುಣ್ಣು ರೋಗ (Cancer) ಬಂದ ಮಹಿಳೆಯರು ಏಡಿಯನ್ನು ಸುಟ್ಟು ನೀರಲ್ಲಿ ಮಿಶ್ರಣ ಮಾಡಿ ಸ್ತನಗಳಿಗೆ ಸವರಿದರೆ ಗುಣವಾಗುತ್ತದೆ.
▪ *ತಾಮ್ರದ*_ಪಾತ್ರೆಯಲ್ಲಿ ನದಿಯ ಏಡಿಯನ್ನು ಹಾಕಿ ಜೀವಂತವಾಗಿ ಸುಟ್ಟು ಅದರ ಬೂದಿಯನ್ನು ಕಿರಿಯಾತು ಗಿಡದ (Gentian tree) ಎಲೆಯೊಂದಿಗೆ ಮಿಶ್ರಣ ಮಾಡಿ ಜಜ್ಜಿ ಹುಚ್ಚುನಾಯಿ ಕಡಿದಲ್ಲಿಗೆ ಮೂರು ದಿನ ಸವರಿದರೆ ಗುಣವಾಗುತ್ತದೆ. ಈ ಹೇಳಿದ ಮಿಶ್ರಣವನ್ನು ಜೇನುತುಪ್ಪ ಮಿಶ್ರಣ ಮಾಡಿ ಚಳಿಯ ಕಾರಣದಿಂದ ಕೈಕಾಲು ಸೀಳಿದಲ್ಲಿಗೆ ಸವರಿದರೆ ಗುಣವಾಗುತ್ತದೆ. ಹಾಗೆಯೇ ಅದನ್ನು ಕತ್ತೆ ಹಾಲಿನಲ್ಲಿ ಬೆರೆಸಿ ಚೇಳು ಮತ್ತು ಜೇಡ ಕಡಿದಲ್ಲಿಗೆ ಸವರಿದರೆ ಒಳ್ಳೆಯ ಫಲ ಕಾಣುತ್ತದೆ.
▪ *ಏಡಿಯನ್ನು* ಸುಟ್ಟು ಚೇಳಿನ ಹತ್ತಿರ ಇಟ್ಟರೆ ಚೇಳು ಸಾಯುತ್ತದೆ.
▪ *ಆಗಾಗ್ಗೆ* ಬಿಟ್ಟುಬಿಟ್ಟು ಮೂರರ ಚಳಿಜ್ವರ ಬರುವವನ ಕತ್ತಿಗೆ ಏಡಿಯ ಕಣ್ಣನ್ನು ತೂಗು ಹಾಕಿದರೆ ಮತ್ತು ಅದನ್ನು ಸುಟ್ಟು ಏಳು ಬಾರಿ ಬಿಟ್ಟು ಬಿಟ್ಟು ಹೊಗೆ ಹಿಡಿದರೆ ಜ್ವರ ಬೆಟ್ಟ ಹತ್ತುತ್ತದೆ. ಇದನ್ನು ಸುಟ್ಟು ಅದರ ಬೂದಿಯನ್ನು ಸಾಮಾನ್ಯವಾಗಿ ಚರ್ಮದಲ್ಲಿ ಕಾಣಲ್ಪಡುವ ಕಲೆ , ಮಚ್ಚೆಗಳಿಗೆ ಸವರಿದರೆ ಅದು ಕ್ರಮೇಣ ಮಾಯವಾಗುತ್ತದೆ.
▪ *ಏಡಿಯನ್ನು* ಒಣಗಿಸಿ ಚೆನ್ನಾಗಿ ಪುಡಿಮಾಡಿ ಆ ಹುಡಿಯನ್ನು ನೀರಿಗೆ ಹಾಕಿ ಅದನ್ನು ಸಾಣಿಸಿದ ನಂತರ ಆ ನೀರನ್ನು ಗಂಟಲಿನ ಕೊನೆಯ ತನಕ ಮುಟ್ಟುವಂತೆ ಬಾಯಿ ಮುಕ್ಕಳಿಸಿದರೆ, ಗಂಟಲು ಸಂಬಂಧವಾದ ಖಾಯಿಲೆಗಳಾದ ಗಂಟಲು ಊತ (Tonsillitis) ಮತ್ತು ಗಂಟಲು ಬೇನೆ (Diphtheria) ಗುಣವಾಗುತ್ತದೆ. ಗುಡ್ಡ ಸೋಂಪುಗಿಡ (Celery) ಮತ್ತು ಏಡಿಯನ್ನು ಮಿಶ್ರಣ ಮಾಡಿ ಬೇಯಿಸಿದ ನೀರನ್ನು ಕುಡಿದರೆ ಮೂತ್ರ ತಟಸ್ಥ ನಿವಾರಣೆಯಾಗುತ್ತದೆ.
▪ *ನಿದ್ರಿಸುವವನ* ಕತ್ತಿಗೆ ಏಡಿಯ ಕಣ್ಷನ್ನು ಕಟ್ಟಿದರೆ ಅವನಿಗೆ ಬೆಳಗಿನ ತನಕ ಒಳ್ಳೆಯ ಕನಸುಗಳು ಕಾಣುತ್ತದೆ.
▪ *ಏಡಿಯ* ಮಾಂಸ ತಿನ್ನುವ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ದಿಕ್ಕಿನಿಂದಲೂ ಅವನ ಅಭಿವೃದ್ಧಿಯ ಮತ್ತು ಏಳಿಗೆಯ ಬಾಗಿಲು ತೆರೆಯುತ್ತದೆ. ಅವನರಿಯದೆಯೇ ಸಂಪತ್ತು ಮತ್ತು ಐಶ್ವರ್ಯ ಅವನನ್ನು ಹುಡುಕಿ ಬರುತ್ತದೆ ಎಂಬುದರ ನಿಶಾನೆಯಾಗಿದೆ.
ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಖಝ್‌ವೀನಿಯ *ಅಜಾಯಿಬುಲ್ ಮಖ್‌ಲೂಖಾತ್,* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್* ಮತ್ತು ಇಮಾಮ್ ಶಿಹಾಬುದ್ದೀನ್ ಅಲ್ ಉಮರಿಯ *ಮಸಾಲಿಕುಲ್ ಅಬ್‌ಸ್ವಾರ್* ಎಂಬ ಗ್ರಂಥಗಳು.

Comments