Skip to main content

ರಾತೀಬ್ ಮಜ್ಲಿಸ್


*ರಾತೀಬ್ ಮಜ್ಲಿಸ್ ಅಂದರೆ ಏನೋ ಎಂದು ತಿಳಿದು ಕೊಳ್ಳಬೇಡಿ. ಗುಂಪು ಗೂಡಿ ದ್ಸಿಕ್ರ್ ಹೇಳುವುದಕ್ಕೆ ರಾತೀಬ್ ಮಜ್ಲಿಸ್ ಎನ್ನುತ್ತೇವೆ.*

ಗುಂಪು ಗೂಡಿ ದ್ಸಿಕ್ರ್ ಹೇಳುವುದಕ್ಕೆ ಖುರ್‌ಆನಿನಲ್ಲೂ, ಹದೀಸ್‌ನಲ್ಲೂ ಧಾರಾಳ ಪುರಾವೆಗಳಿವೆ.

ಅಲ್ಲಾಹು ಹೇಳುತ್ತಾನೆ .
*ಕೆಲವು ಮಂದಿರ (ಮಸೀದಿ)ಗಳಲ್ಲಿ ಅದನ್ನು ಉನ್ನತಿಗೊಳಿಸಲಿಕ್ಕೂ ಹಾಗೂ ತನ್ನ ನಾಮ ಸ್ಮರಿಸಲ್ಪಡಲಿಕ್ಕೂ ಅಲ್ಲಾಹು ಅನುಮತಿ ನೀಡಿರುವನು (ಅಲ್ಲಿ) ಪ್ರಾತಃ ಕಾಲದಲ್ಲಿಯೂ ( ಸುಬಹಿ ) ಹಾಗೂ ಸಂಧ್ಯಾ ಕಾಲದಲ್ಲಿಯೂ ( ಸಂಜೆ ) ಕೆಲವು ಪುರುಷರು ತಸ್ಬೀಹ್ ಹೇಳುತ್ತಿರುವರು*

ಅಲ್ಲಾಹುವಿನ ಮಸೀದಿಗಳು ದ್ಸಿಕ್ರ್ ಹೇಳಲಿಕ್ಕಿರುವ ಸ್ಥಳಗಳಾಗಿವೆ. ಮಾತ್ರವಲ್ಲ ಈ ಸೂಕ್ತದಲ್ಲಿ ರಿಜಾಲ್ (ಪುರುಷರು) ಎಂದು ಬಹುವಚನದಲ್ಲಿ ಹೇಳಿರುವುದರಿಂದ ಸಂಘವಾಗಿಯೇ ದ್ಸಿಕ್ರ್ ಹೇಳ ಬಹುದೆಂದು ತಿಳಿಯಬಹುದು.

*ಬಹು| ಅಬೂ ಹುರೈರಾ(ರ) ರವರಿಂದ ವರದಿ :* *ಪ್ರವಾದಿ.ﷺ   ರವರು ಹೇಳುತ್ತಾರೆ.* *ನಿಶ್ಚಯವಾಗಿಯೂ ಅಲ್ಲಾಹನಿಗೆ ಭೂಮಿಯಲ್ಲಿ ಸಂಚರಿಸುವ ಮಲಕುಗಳಿದ್ದಾರೆ .ಅವರು ದ್ಸಿಕ್ರಿನ ಮಜ್ಲಿಸನ್ನು ಅರಸುತ್ತಾ ಸಂಚರಿಸುತ್ತಿರುತ್ತಾರೆ ಎಲ್ಲಿಯಾದರೂ ಒಂದು ಮಜ್ಲಿಸ್‌ನ್ನು ಕಂಡರೆ ಅವರೊಂದಿಗೆ ಆ ಮಲಾ‌ಇಕುಗಳೂ ಕುಳಿತುಕೊಳ್ಳುವರು. ಹಾಗೂ ಅವರ ರೆಕ್ಕೆಗಳಿಂದ ಬಾನೆತ್ತರದವರೆಗೆ ಪರಸ್ಪರ ಅಪ್ಪಿಕೊಳ್ಳುವರು. ಆ ಜನರು ಮಜ್ಲಿಸ್‌ನಿಂದ ವಿರಮಿಸಿದರೆ ಅವರು(ಮಲಕುಗಳು) ಆಕಾಶಕ್ಕೆ ಮರಳುವರು*.

*ಆಗ ಅಲ್ಲಾಹು ಅವರಲ್ಲಿ ಕೇಳುವನು. ನೀವು ಎಲ್ಲಿಂದ ಬಂದಿದ್ದೀರಿ? .ಅವರು ಹೇಳುವರು ನಿನಗಾಗಿ ತಕ್ಬೀರ್, ತಹ್‌ಲೀಲ್, ತಸ್ಬೀಹ್, ಹಂದ್ ಹಾಗೂ ನಿನ್ನಲ್ಲಿ ಯಾಚಿಸುವ ಒಂದು ವಿಭಾಗ ಜನರ ಬಳಿಯಿಂದ ನಾವು ಬಂದಿದ್ದೇವೆ?*

*ಆಗ ಅಲ್ಲಾಹು ಕೇಳುವನು ಅವರು ಏನನ್ನು ಯಾಚಿಸುತ್ತಿದ್ದರು? ಅವರು ಹೇಳುವರು ; ಅವರು ಸ್ವರ್ಗವನ್ನು ಯಾಚಿಸುತ್ತಿದ್ದರು.  ಆಗ ಅಲ್ಲಾಹು ಕೇಳುವನು. ಅವರು ಸ್ವರ್ಗವನ್ನು ಕಂಡಿದ್ದಾರೆಯೇ? ಅವರು ಹೇಳುವರು ಇಲ್ಲ. ಆಗ ಅಲ್ಲಾಹು ಪುನಃ ಕೇಳುವನು. ಸ್ವರ್ಗವನ್ನು ಕಂಡಿದ್ದರೆ ಅವರ ಅವಸ್ಥೆ ಏನಾಗುತ್ತಿತ್ತು ? ಅವರು ಹೇಳುವರು ಅದನ್ನು ಕಂಡಿದ್ದರೆ ಅದಕ್ಕಿಂತಲೂ ಶಕ್ತಿಯಾಗಿ ಸ್ವರ್ಗವನ್ನು ಆಗ್ರಹಿಸುತ್ತಿದ್ದರು*

*ಅಲ್ಲಾಹು ಪುನಃ ಕೇಳುವನು. ಅವರು ಯಾವುದರಿಂದ ರಕ್ಷಣೆಯನ್ನು ಬೇಡುತ್ತಿದ್ದರು? ಮಲಕ್‌ಗಳು ಹೇಳುವರು .ನರಕಾಗ್ನಿಯಿಂದ. ಆಗ ಅಲ್ಲಾಹು ಕೇಳುವನು ಅವರು ನರಕವನ್ನು ಕಂಡಿದ್ದಾರೆಯೇ?. ಮಲಕುಗಳು ಹೇಳುವರು ಇಲ್ಲ. ಅಲ್ಲಾಹು ಕೇಳುವನು ಅದನ್ನು ಕಂಡಿದ್ದರೆ ಅವರ ಅವಸ್ಥೆ ಏನಾಗುತ್ತಿತ್ತು? ಅವರು ಹೇಳುವರು ಅದನ್ನು ಕಂಡಿದ್ದರೆ ಅದಕ್ಕಿಂತಲೂ ಶಕ್ತಿಯಾಗಿ ನರಕದಿಂದ ರಕ್ಷಣೆ ಬೇಡುತ್ತಿದ್ದರು.*.

*ಆಗ ಅಲ್ಲಾಹು ಹೇಳುವನು ಓ. ಮಲಕುಗಳೇ ನೀವು ಸಾಕ್ಷಿ ನಿಲ್ಲಿರಿ. ನಾನು ಅವರ ದೋಷಗಳನ್ನೆಲ್ಲಾ ಕ್ಷಮಿಸಿರುವೆನು. ಆಗ ಒಂದು ಮಲಕ್ ಅಲ್ಲಾಹುವಿನಲ್ಲಿ ಕೇಳುತ್ತದೆ .ಅಲ್ಲಾಹುವೇ ಅವರ ಪೈಕಿ ಒಬ್ಬ ವ್ಯಕ್ತಿ ಬೇರೇನೋ ಉದ್ದೇಶದಿಂದ ಬಂದು ಅಲ್ಲಿ ಕೂತಿದ್ದ. ದ್ಸಿಕ್ರ್‌ನ ಉದ್ದೇಶವಿರಲಿಲ್ಲ.! ಆಗ ಅಲ್ಲಾಹು ಹೇಳುವನು ಅವರು ಸಮೂಹವಾಗಿದ್ದಾರೆ. ಅವರೊಂದಿಗೆ ಕುಳಿತುಕೊಂಡವರೂ ಪರಾಭವ ಗೊಳ್ಳಲಾರರು (ಬುಖಾರಿ 948/2, ಮುಸ್ಲಿಂ 344/2)*

ಅನಸ್(ರ) ರವರಿಂದ ವರದಿ : ಪ್ರವಾದಿ  ﷺ  ರವರು ಹೇಳುತ್ತಾರೆ ನೀವು ಸ್ವರ್ಗದ ತೋಟದ ಬಳಿ ಹಾದು ಹೋದರೆ ಅಲ್ಲಿ ನೀವು ಕುಳಿತುಕೊಳ್ಳಿರಿ. ಸ್ವಹಾಬಿಗಳು ಕೇಳಿದರು ಪ್ರವಾದಿಯವರೆ, ಸ್ವರ್ಗದ ತೋಟವು ಯಾವುದಾಗಿದೆ? ಆಗ ಪ್ರವಾದಿ ﷺ ರವರು ಹೇಳಿದರು ದ್ಸಿಕ್ರ್‌ರಿನ ಮಜ್ಲಿಸಾಗಿದೆ. .(ಮುಸ್‌ನದ್ ಅಹ್ಮದ್ 150/3, ಮುಸ್‌ನದ್ ಅಬೀ ಅಹ್‌ಲಾ 383/3)

*ಅಬೂ ಹುರೈರಾ(ರ) ರವರಿಂದ ವರದಿ : ಪ್ರವಾದಿ ﷺರವರು ಹೇಳುತ್ತಾರೆ. ಅಲ್ಲಾಹುವಿಗಾಗಿ ದ್ಸಿಕ್ರ್ ಹೇಳುವ ಸಂಘವನ್ನು ಅವನ ಮಲಕುಗಳು ಅಪ್ಪಿಕೊಳ್ಳುವರು ಮತ್ತು ಅಲ್ಲಾಹುವಿನ ರಹ್ಮತ್ ತುಂಬಿಕೊಳ್ಳುವುದು ಹಾಗೂ ಅವರಿಗೆ ಶಾಂತಿಯ ಅವತೀರ್ಣವಾಗುವುದು ಮಾತ್ರವಲ್ಲ. ಅಲ್ಲಾಹನು ಮಲಕುಗಳಲ್ಲಿ ಅವರ ಕೀರ್ತನೆಗಳನ್ನು ಹೇಳುವನು*
(ಮುಸ್ಲಿಂ ಹ.ನಂ.2700, ತಿರ್ಮುದ್ಸಿ ಹ.ನಂ. 3375, ಇಬ್‌ನು ಮಾಜಾ1245/2, ಮುಸ್‌ನದ್ ಅಬೀ‌ಅಹ್‌ಲಾ 427/5)

ಮು‌ಆವಿಯ(ರ) ವರದಿ: ಒಮ್ಮೆ ಪ್ರವಾದಿ  ﷺ ರವರು ಸಂಘವಾಗಿ ಸ್ವಹಾಬಿಗಳು ಕುಳಿತಿದ್ದನ್ನು ಕಂಡರು.  ಪ್ರವಾದಿ  ﷺ ರವರು ಅವರಲ್ಲಿ ಕೇಳಿದರು. ನೀವು ಇಲ್ಲಿ ಯಾಕಾಗಿ ಕುಳಿತಿದ್ದೀರಿ? ಅವರು ಹೇಳಿದರು. ಪ್ರವಾದಿಯವರೇ ﷺ ಹಿದಾಯತ್ ನೀಡಿ ಅನುಗ್ರಹಿಸಿದ ಅಲ್ಲಾಹನಿಗಾಗಿ ದ್ಸಿಕ್ರ್ ಹೇಳಲಿಕ್ಕೆ ಕುಳಿತಿದ್ದೇವೆ. ನಬಿಯವರು ಹೇಳಿದರು .ನನ್ನ ಬಳಿ ಜಿಬ್‌ರೀಲ್(ಅ)ರವರು ಬಂದು ಹೀಗೆ ಹೇಳಿದರು ನಿಶ್ಚಯವಾಗಿಯೂ ಅಲ್ಲಾಹನು ಅವನ ಮಲ‌ಇಕುಗಳಿಗೆ ನಿಮ್ಮನ್ನು ಕಾಣಿಸಿ ನಿಮ್ಮ ಕೀರ್ತನೆಗಳನ್ನು ಅವರಲ್ಲಿ ಹೇಳುತ್ತಿರುವನು.

*ಅಬೂಹುರೈರಾ(ರ) ರವರಿಂದ ವರದಿ. ಅಲ್ಲಾಹು ಹೇಳಿದ್ದಾಗಿ ಪ್ರವಾದಿ  ﷺ ರವರು ಹೇಳುತ್ತಾರೆ. ನನ್ನ ಗುಲಾಮ ಒಂಟಿಯಾಗಿ ಸ್ಮರಿಸಿದರೆ (ದ್ಸಿಕ್ರ್ ಹೇಳಿದರೆ) ನಾನು ಒಂಟಿಯನ್ನು ಅವನನ್ನು  ಸ್ಮರಿಸುವೆನು. ಗುಂಪಾಗಿ ಸ್ಮರಿಸಿದರೆ (ದ್ಸಿಕ್ರ್ ಹೇಳಿದರೆ) ಅದಕ್ಕಿಂತಲೂ ಉತ್ತಮವಾದ ಸಂಘದಲ್ಲಿ ನಾನು ಅವನನ್ನು ಸ್ಮರಿಸುವೆನು*
(ಬುಖಾರಿ 1102/2,ಮುಸ್ಲಿಂ 343/2, ಇಬ್‌ನುಮಾಜ 1252/2, ಮು‌ಅಜಮುಲ್ ಕಬೀರ್ 182/2, ಮುಸ್‌ನದ್ ಅಹ್ಮದ್ 251/2)

*ಈ ಹದೀಸ್‌ಗಳಿಂದ ದ್ಸಿಕ್ರ್‌ ಮಜ್ಲಿಸ್‌ನ ಮಹತ್ವನ್ನು ತಿಳಿದುಕೊಳ್ಳಬಹುದು. ಮಾತ್ರವಲ್ಲ ಅದು ಪ್ರವಾದಿ  ﷺ ರವರ ಕಾಲದಲ್ಲಿದ್ದ ಚರೈಯೂ ,ಅವರು ಬಹಳವಾಗಿ ಪ್ರೋತ್ಸಾಹಿಸಿದ ಕಾರ್ಯವಾಗಿದೆಯೆಂದು ಮನದಟ್ಟು ಮಾಡಿಕೊಳ್ಳಬಹುದು*.

*ಆದ್ದರಿಂದಲೇ ರಾತೀಬ್‌ಗಳು ಅತ್ಯುತ್ತಮವಾದ ಸತ್ಕರ್ಮವಾಗಿದೆಯೆಂದು ತಿಳಿಯಲಿಕ್ಕೆ ವಿಶೇಷ ಬುದ್ದಿ ಬೇಕಿಲ್ಲ*.
*ಅಲ್ಲಾಹನ ರಹ್‌ಮತ್‌ನ್ನು ಅಗ್ರಹಿಸದವರಿಗೆ ಮಾತ್ರ ರಾತೀಬ್‌ಗಳನ್ನು ನಿಷೇಧಿಸಲು ಸಾಧ್ಯ*..

*ಏನೇ ಆಗಲಿ ದ್ಸಿಕ್ರ್ ಹೇಳಲಿಕ್ಕೂ ಭಾಗ್ಯ ಬೇಕು ಅಲ್ವಾ..*
       
     *ಎಂ.ಎಂ. ಸಖಾಫಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...