●▬▬▬๑۩﷽۩๑▬▬▬▬●
🕋🌹🕋 *ಹಝುಮ* 🕋🌹🕋
🌷🌷🌷🌷🌷🌷🌷🌷🌷🌷🌷
📚📚 *ರಮಳಾನ್ ಗೈಡ್*📚📚
🌷🌷🌷🌷🌷🌷🌷🌷🌷🌷🌷
🎋🎋🎋🎋🎋🎋🎋🎋🎋🎋🎋
☪ ರಮಳಾನ್ ಕುರಿತು ಖುರ್ ಆನ್ ನಲ್ಲಿ....
ರಮಳಾನ್ ಮಹತ್ವ ವನ್ನು ಖುರ್ ಆನ್ ವಿವರಿಸುವುದು ಹೀಗೆ.
يَأَيُّهَاالَّذِينَ ءَامَنُوا
🔘 *ಓ ಅಲ್ಲಾಹನೊದಿಂಗೆ ನಂಬಿಕೆ ಇರಿಸಿದ ಜನರೇ,*
كُتِبَ عَلَيْكُمُ الصِّيَامُ
🔘 *ನಿಮ್ಮ ಮೇಲೆ ರಮಳಾನ್ ಉಪವಾಸ ಕಡ್ಡಾಯ ಗೊಳಿಸಲಾಗಿದೆ.*
كَمَا كُتِبَ عَلَى الَّذِينَ مِنْ قَبْلِكُمْ
🔘 *ಪೂರ್ವಿಕರಾದ ಪ್ರವಾದಿಗಳ ಅನುಯಾಯಿಗಳ ಮೇಲೆ ವೃತ ಕಡ್ಡಾಯ ಗೊಳಿಸಿದಂತೆ.*
لَعَلَّكُمْ تَتَّقُونَ
🔘 *ನೀವು ಭಯ ಭಕ್ತಿ ಉಳ್ಳವರಾಗಲು ಬೇಕಾಗಿ.*
(سُورَة الْبَقَرَة ١٨٣)
ಪೂರ್ವಿಕರಾದ ಪ್ರವಾದಿಗಳ ಅನುಯಾಯಿಗಳ ಮೇಲೆ ಉಪವಾಸ ಕಡ್ಡಾಯ ಇತ್ತಾದರೂ ರಮಳಾನ್ ನ ಹಾಗೆ ಪೂರ್ತಿ ತಿಂಗಳೊಂದು ಉಪವಾಸ ಆಚರಿಸ ಬೇಕಾಗಿರಲಿಲ್ಲ. ಉಪವಾಸ ಕಡ್ಡಾಯ ಗೊಳಿಸಿದ್ದು ಭಯ ಭಕ್ತಿ ಉಂಟಾಗಲಿಕ್ಕೆ ಎಂಬುದು ನಾವು ಖುರ್ ಆನ್ ಮೂಲಕ ಅರಿತು ಕೊಂಡೆವು.
☪ *ರಮಳಾನ್ ಕುರಿತ ಹದೀಸ್ ನಲ್ಲಿ...*
قَالَ رَسُولُ اللَّهِ صَلَّى اللَّهُ عَلَيْهِ وَسَلَّمْ
🌳 *ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ:*
إِذَا جَاءَ رَمَضَانُ
🌳 *ರಮಳಾನ್ ತಿಂಗಳು ಆಗಮಿಸಿದರೆ*
فُتِحَتْ أَبْوَابُ الْجَنَّةِ
🌳 *ಸ್ವರ್ಗದ ಬಾಗಿಲು ತೆರೆಯಲ್ಲಡುತ್ತದೆ.*
وَغُلِّقَتْ أَبْوَابُ النَّارِ
🌳 *ನರಕದ ಬಾಗಿಲನ್ನು ಮುಚ್ಚಲ್ಪಡುತ್ತದೆ.*
وَصُفِّدَتِ الشَّيَاطِينُ
🌳 *ಶೈತಾನ್ ಗಳನ್ನು ಸಂಕೋಲೆ ಯಿಂದ ಬಂಧಿಸಲಾಗುತ್ತವೆ.*
ಅಲ್ಲಾಹನು ತನ್ನ ದಾಸನಿಗೆ ಒಳಿತು ಮಾಡಲು ಅತ್ಯುತ್ತಮ ಅವಕಾಶ ನೀಡಿದ್ದಾನೆ. ಅದುವೇ ರಮಳಾನ್ ತಿಂಗಳು. ಮನುಷ್ಯನ ಮನಸ್ಸನ್ನು ಒಳಿತಿನಿಂದ ತಡೆಯುವ ಶೈತಾನನ್ನು ಸಂಕೋಲೆ ಯಿಂದ ಬಂಧಿಸಲಾಗುತ್ತದೆ.ಈ ಅವಕಾಶ ವನ್ನು ಸದುಪಯೋಗ ಪಡಿಸಿ ಮನುಷ್ಯನು ಹೃದಯ ಶುದ್ಧೀಕರಣ ಮಾಡಬೇಕಾಗಿದೆ.
☪ *ರಮಳಾನ್ ಉಪವಾಸದ ಶ್ರೇಷ್ಠತೆ*
قَالَ رَسُولُ اللَّهِ صَلَّى اللَّهُ عَلَيْهِ وَسَلَّمْ
🌳 *ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ*
مَنْ
🌳 *ಒಬ್ಬನು*
صَامَ
🌳 *ಉಪವಾಸ ಹಿಡಿದರೆ*
رَمَضَانَ
🌳 *ರಮಳಾನ್ ತಿಂಗಳಲ್ಲಿ*
إِيمَانًا
🌳 *ನಂಬಿಕೆ ಇರಿಸಿದವನಾಗಿ*
وَاحْتِسَابًا
🌳 *ಪ್ರತಿಫಲ ಆಗ್ರಹಿಸಿದವನಾಗಿ*
غُفِرَ لَهُ
🌳 *ಅವನಿಗೆ ಕ್ಷಮೆ ನೀಡಲಾಗುತ್ತದೆ.*
مَا تَقَدَّم مِنْ ذَنْبِهِ
🌳 *ಅವನು ಮಾಡಿದ ಗತ ಪಾಪಗಳಿಗೆ*
(بُخَارِ )
📚 *ಹದೀಸ್ : ಬುಖಾರಿ*
ರಮಳಾನಿನ ಉಪವಾಸ ನಾವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ವಾಗಿದೆ. ಉಪವಾಸ ಉಪೇಕ್ಷಿಸುವ ಮೂಲಕ ಪಾಪಗಳನ್ನು ಮತ್ತಷ್ಟು ಮಾಡಬೇಡಿರಿ.
☪ *ಉಪವಾಸದ ನಿಯ್ಯತ್*
ಪ್ರತಿಯೊಂದು ಕರ್ಮಕ್ಕೂ ನಿಯ್ಯತ್ ಮಾಡಬೇಕು. ನಿಯ್ಯತ್ ಮಾಡಿದರೆ ಮಾತ್ರ ಸತ್ಕರ್ಮಗಳು ಸಿಂದುವಾಗುತ್ತವೆ. ನಿಯ್ಯತ್ ಇಲ್ಲದ ಯಾವ ಸತ್ಕರ್ಮವೂ ಸ್ವಹೀಹ್ ಆಗುವುದಿಲ್ಲ.
ಉಪವಾಸಕ್ಕೂ ನಿಯ್ಯತ್ ಅಗತ್ಯವಿದೆ. ರಮಳಾನ್ ಉಪವಾಸದ ನಿಯ್ಯತ್ ಮಗ್ರಿಬ್ ಬಳಿಕ ಸುಬಹಿ ಬಾಂಗ್ ನ ಒಳಗಾಗಿ ಮಾಡಬೇಕು. ಒಂದು ವೇಳೆ ನಿಯ್ಯತ್ ಮರೆತರೆ ಆತ/ಕೆ ಉಪವಾಸ ಆಚರಿಸಲೇ ಬೇಕು. ಅದು ಕಡ್ಡಾಯ ವಾಗಿದೆ.ಆದರೆ, ನಿಯ್ಯತ್ ಮರೆತ ಉಪವಾಸ ವನ್ನು ಖಳಾ ಪೂರೈಸ ಬೇಕಾಗಿದೆ.ನಿಯ್ಯತ್ ಮಾಡಿಲ್ಲ ಎಂದು ಉಪವಾಸ ಬಿಡುವಂತಿಲ್ಲ.
ನಿಯ್ಯತ್ ಮಾಡಬೇಕಾದದ್ದು ಮನಸ್ಸಿನಲ್ಲಿ. ಮನದಲ್ಲಿ ನಿಯ್ಯತ್ ಸಂಕಲ್ಪಿಸಬೇಕು.ಬಾಯಲ್ಲಿ ಹೇಳುವುದು ಸುನ್ನತ್, ಮನದಲ್ಲಿ ಸಂಕಲ್ಪಿಸುವುದು ಕಡ್ಡಾಯ ವಾಗಿದೆ. ನಿಯ್ಯತ್ ಬಾಯಲ್ಲಿ ಮಾತ್ರ ಹೇಳಿದರೆ ಉಪವಾಸ ಸಿಂದುವಲ್ಲ.
ಇಂದು ಸಾಧಾರಣ ತರಾವೀಹ್ ಬಳಿಕ ಇಮಾಮರು ವ್ರತದ ನಿಯ್ಯತ್ ಹೇಳಿಕೊಡುತ್ತಾರೆ. ನಾವು ಅದನ್ನು ಬಾಯಲ್ಲಿ ಹಾಗೆಯೇ ಹೇಳುತ್ತೇವೆ. ಇದು ಸಲ್ಲದು. ತರಾವೀಹ್ ಬಳಿಕ ಇಮಾಮರು ನಿಯ್ಯತ್ ಹೇಳಿ ಕೊಡುವುದು ಒಂದು ನೆನಪಿಸುವಿಕೆ ಮಾತ್ರ. ನಾವು ಮನದಲ್ಲಿಯೇ ಸಂಕಲ್ಪ ಮಾಡಬೇಕಾಗಿದೆ.
ಉಪವಾಸದ ನಿಯ್ಯತ್ ಮಾತ್ರವಲ್ಲ; ಎಲ್ಲಾ ಇಬಾದತ್ ಗಳ ನಿಯ್ಯತ್ ಇದೇ ರೀತಿ ಮನದಲ್ಲಿ ಸಂಕಲ್ಪಿಸಬೇಕು.ನಾವು ಯಾವುದೆಲ್ಲಾ ಒಳಿತಿನ ಕಾರ್ಯ ಮಾಡುತ್ತೇವೆಯೋ ಅದಕ್ಕೆಲ್ಲ ನಿಯ್ಯತ್ ಅಗತ್ಯ ವಿದೆ. ಅದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಹದೀಸ್ ನಿಂದ ಸಾಬೀತು ಗೊಂಡದ್ದಾಗಿದೆ.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ:
إِِنَّمَا الْأَعْمَالُ بِالنِّيَات
*ನಿಶ್ಚಯವಾಗಿಯೂ ಎಲ್ಲಾ ಸತ್ಕರ್ಮಗಳು ನಿಯ್ಯತ್ ಮೂಲಕವಾಗಿದೆ.*
ನಿಯ್ಯತ್ ಮಾಡದೆ ಮಾಡಿದ ಯಾವ ಒಳಿತುಗಳು ಸ್ವಿಕಾರ್ಯವಲ್ಲ.
☪ *ಉಪವಾಸದ ನಿಯ್ಯತ್ ನ ರೂಪ*
نَوَيْتُ صَوْمَ غَدٍ عَنْ اَدَاءِ فَرْضِ رَمَضَانِ هَاذِهِ السَّنَةِ لِلَّهِ تَعَالَى
( ನವೈತು , ಸ್ವೌಮ ಗದಿನ್, ಅನ್ ಅದಾಯಿ,ಪರ್ಳಿ ರಮಳಾನಿ, ಹಾದ್ಸಿಹಿಸ್ಸನತಿ,ಲಿಲ್ಲಾಹಿ ತ'ಆಲ)
( *ಈ ವರ್ಷತ್ತೆ ಅದಾ ಆಯೆ,ಪರ್ಳಾಯೆ ರಮಳಾನ್ ತಿಂಙಳ್ ಡೆ ನಾಳತ್ತೆ ನೋಂಬುಡ ಅಲ್ಲಾಹುಗು ಬೇನಾಯಿಟ್ ನಾ ಪಿಡಿಕ್ ಡಾಂಟ್ ಕರುದಿಯಾ* )
نَوَيْتُ
🌳 *ನಾನು ಸಂಕಲ್ಪಿಸಿದೆ*
صَوْمَ غَدٍ
🌳 *ನಾಳಿನ ಉಪವಾಸ ವನ್ನು*
عَنْ اَدَاءِ
🌳 *ಸಮಯಕ್ಕೆ ಸರಿಯಾಗಿ*
فَرْضِ رَمَضَانِ
🌳 *ರಮಳಾನ್ ನಲ್ಲಿ ಕಡ್ಡಾಯವಾದ*
هَاذِهِ السَّنَةِ
🌳 *ಈ ವರ್ಷದ*
لِلَّهِ تَعَالَى
🌳 *ಅಲ್ಲಾಹನಿಗೆ ಬೇಕಾಗಿ*
ನಿಯ್ಯತ್ ಅರಬಿ ಭಾಷೆಯಲ್ಲಿಯೇ ಆಗಬೇಕೆಂದಿಲ್ಲ. ನಿಮಗೆ ತಿಳಿದ ಯಾವ ಭಾಷೆಯಲ್ಲಾದರೂ ನಿಯ್ಯತ್ ಸ್ವಹೀಹ್ ಆಗುತ್ತದೆ.
☪ *ಸಹರಿಯ ಮಹತ್ವ*
ಸಹರಿ ಎಂದರೆ ಅತ್ತಾಳ ವಾಗಿದೆ. ಅತ್ತಾಳ ಉಣ್ಣುವುದು ಶ್ರೇಷ್ಠ ವಾದ ಒಂದು ಕಾರ್ಯವಾಗಿದೆ. ಕೆಲವರು ಉದಾಸೀನತೆ ತೋರಿ ಸಹರಿಯುಣ್ಣದೆ ಹಾಗೆಯೇ ಉಪವಾಸ ಆಚರಿಸುತ್ತಾರೆ. ಅತ್ತಾಳ ಮಾಡದಿದ್ದರೆ ಸಹರಿಯ ಪ್ರತಿಫಲ ಆತನಿಗೆ ನಷ್ಟವಾಗುತ್ತದೆ. ಸಹರಿಯ ಕುರಿತು ಹದೀಸ್ ವಚನ ಗಮನಿಸಿ.
👇👇👇👇👇
تَسَحَّرُوا
🌳 *ನೀವು ಸಹರಿ ಉಣ್ಣಿರಿ*
فَإِنَّ فِي السُّحُورِ
🌳 *ನಿಶ್ಚಿತವಾಗಿಯೂ ಸಹರಿಯಲ್ಲಿದೆ*
بَرَكَةً
🌳 *ಬರ್ಕತ್, ಸಮೃದ್ಧಿ ಇದೆ.*
(متفق عليه)
🌷🌷🌷🌷🌷🌷🌷🌷🌷
فَصْلُ مَا بَيْنَ صِيَامِنَا
🌳 *ನಮ್ಮ ಉಪವಾಸದ ನಡುವಿನ ವ್ಯತ್ಯಾಸ*
وَصِيَامِ اَهْلِ الْكِتَابِ
🌳 *ಯಹೂದಿಗಳ ಉಪವಾಸದ ನಡುವಿನ ವ್ಯತ್ಯಾಸ*
اَكْلَةُ السَّحَرِ
🌳 *ಸಹರಿ ಉಣ್ಣುವುದು.*
ವರದಿ; ಹದೀಸ್ ಮುಸ್ಲಿಂ
*ಅತ್ತಾಳ ಸಮಯ ಪ್ರಾರ್ಥನೆಗೆ ಉತ್ತರವಿದೆ. ಅತ್ತಾಳ ಉಂಡು ಮಲಗುವ ಬದಲು ಆ ಸಮಯ ಪ್ರಾರ್ಥನೆಗೆ ಉಪಯೋಗಿಸಿರಿ.*
☪ *ಅತ್ತಾಳದ ಸಮಯ ಯಾವಾಗ ?*
ಅತ್ತಾಳದ ಸಮಯ ಯಾವಾಗ ಎಂಬುದು ಯಾರಿಗೂ ಗೊಂದಲ ವಿಲ್ಲ. ಅರ್ಧರಾತ್ರಿ ಮುಗಿದರೆ ನಂತರ ಅತ್ತಾಳ ಸಮಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅತ್ತಾಳ ಉಣ್ಣಲು ಶ್ರೇಷ್ಠ ವಾದ ಸಮಯ ಯಾವುದೆಂಬುದರ ಬಗ್ಗೆ ಹಲವರಲ್ಲಿ ಗೊಂದಲ ವಿದೆ.
ರಾತ್ರಿ ಕೊನೆಯ ಭಾಗದಲ್ಲಿ ಸಹರಿ ಉಣ್ಣುವುದು ಉತ್ತಮವಾಗಿದೆ. ಬಾಂಗ್ ನ ಸಮಯಕ್ಕಿಂತ ಸರಿ ಸುಮಾರು ಐವತ್ತು ಆಯತ್ ಓದುವ ಮೊದಲೇ ಸಹರಿ ಉಣ್ಣುವುದು ನಿಲ್ಲಿಸಬೇಕು. ಅಂದರೆ ಸಹರಿಯ ಬಳಿಕ ಮತ್ತು ಬಾಂಗ್ ನ ನಡುವೆ ಐವತ್ತು ಆಯತ್ ಓದುವ ಅಂತರ ಇರಬೇಕು.
ಅತ್ತಾಳ ಉಪೇಕ್ಷಿಸುವುದರಿಂದ ಅತ್ತಾಳದ ಪುಣ್ಯ ವು ನಷ್ಟವಾಗುತ್ತದೆ. ಒಂದು ತುಂಡು ಖರ್ಜೂರ ವಾದರೂ ಸೇವಿಸಿ ಅತ್ತಾಳದ ಪುಣ್ಯ ಪಡೆಯಬೇಕು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಖರ್ಜೂರ ತಿಂದು ವ್ರತಾಚರಿಸುತ್ತಿದ್ದರು.
*ಅತ್ತಾಳ ಉಣ್ಣುವಾಗ ಬಾಂಗ್ ಕೇಳಿದರೆ ಕೂಡಲೇ ಬಾಯಲ್ಲಿ ಇದ್ದುದ್ದನ್ನು ಉಗುಳಬೇಕು.*
ಹೊಟ್ಟೆ ತುಂಬಾ ತಿನ್ನುವುದು ಸರಿಯಲ್ಲ. ಆದರೆ ಹಗಲಿನಲ್ಲಿ ದುಡಿಯುವವರು ಹತ್ತಾಳ ಸಮಯ ಹಣ್ಣುಗಳನ್ನು ತಿಂದರೆ ಆಯಾಸ ಅನುಭವಕ್ಕೆ ಬರಲಾರದು.
☪ *ಇಪ್ತಾರ್ ಶ್ರೇಷ್ಠತೆ*
مَنْ
🌳 *ಯಾರಾದರೊಬ್ಬನು*
فَطَّرَ
🌳 *ಇಪ್ತಾರ್ ಕೂಟ ಏರ್ಪಡಿಸಿದರೆ*
صَائِمًا
🌳 *ಉಪವಾಸಿಗನಿಗೆ*
كَانَ لَهُ مِثْلُ أَجْرِهِ
🌳 *ಇಫ್ತಾರ್ ಮಾಡಿಸಿದವನಿಗೆ ಉಪವಾಸ ಹಿಡಿದ ಪುಣ್ಯ ವಿದೆ.*
غَيْرَ أًنَّهُ لَا يُنْقَصُ مِنْ أَجْرِ الصَّائِمِ شَيْءٌ
🌳 *ಉಪವಾಸಿಗನ ಪ್ರತಿಫಲ ದಿಂದ ಒಂದಿಂಚನ್ನೂ ಕಡಿತಗೊಳಿಸಲಾಗುವುದಿಲ್ಲ.*
( رواه الترمذى )
ಉಪವಾಸಿಗನ ಪುಣ್ಯದಿಂದ ಯಾವುದೇ ಕಡಿತ ಗೊಳಿಸದೆ ಇಫ್ತಾರ್ ನಡೆಸಿದವನಿಗೆ ಉಪವಾಸ ಹಿಡಿದವನ ಪುಣ್ಯ ವನ್ನು ನೀಡಲಾಗುತ್ತದೆ. ಒಂದು ದಿನದಲ್ಲಿ ಎರಡು ಉಪವಾಸದ ಪುಣ್ಯ ಬೇಕಾದವರು ಇಫ್ತಾರ್ ಕೂಟ ಏರ್ಪಡಿಸಲಿ.
☪ *ರಮಳಾನ್ ನ ಪ್ರಾರ್ಥನೆ*
ರಂಮಳಾನ್ ನಲ್ಲಿ ಈ ನಾಲ್ಕು ಪ್ರಾರ್ಥನೆ ಹೆಚ್ಚಾಗಿ ಹೇಳಬೇಕು.
👇👇👇👇👇
اَشْهَدُ اَنْ لآاِلَهَ اِلَّا اللَّهُ اَسْتَغْفِرُ اللّهَ اَللَّهُمَّ اِنِّي اَسْأَلُكَ الْجَنَّةَ وَاَعُوذُبِكَ مِنَ النَّارِ
اَشْهَدُ اَنْ لآاِلَهَ اِلَّا اللَّهُ
1⃣ *ಅಲ್ಲಾಹನಲ್ಲದೆ ಆರಾಧನೆಗೆ ಅರ್ಹನಾದ ಬೇರೆ ಇಲಾಹ್ ಇಲ್ಲವೆಂದು ನಾನು ಸಾಕ್ಷಿ ನುಡಿಯುವೆನು.*
اَسْتَغْفِرُ اللّهَ
2⃣ *ಅಲ್ಲಾಹನೊಂದಿಗೆ ನಾನು ಕ್ಷಮೆಯನ್ನು ಯಾಚಿಸುವೆನು.*
اَللَّهُمَّ اِنِّي اَسْأَلُكَ الْجَنَّةَ
3⃣ *ಅಲ್ಲಾಹನೇ, ಖಂಡಿತವಾಗಿಯೂ ನಾನು ನಿನ್ನೊಂದಿಗೆ ಸ್ವರ್ಗ ಬೇಡುವೆನು.*
وَاَعُوذُبِكَ مِنَ النَّارِ
4⃣ *ನಾನು ನಿನ್ನೊಂದಿಗೆ ನರಕದಿಂದ ಅಭಯ ಯಾಚಿಸುವೆನು.*
🌷🌷🌷🌷🌷🌷🌷🌷
ರಮಳಾನ್ ನ ಪ್ರಥಮ ಹತ್ತರಲ್ಲಿ ಹೆಚ್ಚಿಸ ಬೇಕಾದ ದುಆ
اَللَّهُمَّ ارْحَمْنِي يَاأَرْحَمَ الرَّاحِمِينَ
اَللَّهُمَّ
🌳 *ಅಲ್ಲಾಹನೇ,*
ارْحَمْنِي
🌳 *ನನಗೆ ಕರುಣೆ ತೋರು*
يَاأَرْحَمَ الرَّاحِمِينَ
🌳 *ಪರಮ ಕರುಣಾಮಯಿಯಾದವನೇ*
☪ *ತರಾವೀಹ್ ನಮಾಝ್ ನ ರೂಪ*
👉 ನಿಯ್ಯತ್ : *ತರಾವೀಹ್ ಸುನ್ನತ್ ನಮಾಝ್ ಎರಡು ರಕಾಅತ್ ಕಿಬ್ಲಾಗೆ ತಿರುಗಿ ಅಲ್ಲಾಹನಿಗಾಗಿ ನಾನು ನಮಾಝ್ ನಿರ್ವಹಿಸುವೆನು.*
👉 ತಕ್ಬೀರತುಲ್ ಇಹ್ರಾಮ್;
*ಅಲ್ಲಾಹು ಅಕ್ಬರ್* ಎಂದೇಳಿ ಕೈ ಕಟ್ಟುವುದು.
👉 *ವಜ್ಜಹ್'ತು ಓದಬೇಕು.*
👉 *ಅವೂದ್ಸು ಓದಬೇಕು.*
👉 *ಫಾತಿಹಾ ಓದಬೇಕು*
👉 *ನಿಮಗೆ ತಿಳಿದ ಸೂರತ್ ಓದಬೇಕು. (ಖತಮುಲ್ ಖುರ್ ಆನ್ ಮಾಡುವುದಾದರೆ ಉತ್ತಮ.*
👉 *ರುಕೂಅ್,ಇಅ್'ತಿದಾಲ್, ಸುಜೂದ್,ಅತ್ತಹಿಯ್ಯಾತ್,ಸಲಾಮ್*
ಇಲ್ಲಿಗೆ ಎರಡು ರಕಾಅತ್ ಪೂರ್ಣ ಗೊಂಡಿತು.
👉 ಹೀಗೆ ಪ್ರತೀ ಎರಡು ರಕಾ ಅತ್ ನಿರ್ವಹಿಸಬೇಕು. ಹತ್ತು ಸಲಾಮ್ ನೊಂದಿಗೆ ಇಪ್ಪತ್ತು ರಕಾಅತ್ ನಿರ್ವಹಿಸಬೇಕು.
ತರಾವೀಹ್ ಬಳಿಕ ಈ ದುಆ ಮಾಡಿ
اَلْحَمْدُ لِلَّهِ رَبِّ الْعَالَمِينَ
اَللَّهُمَّ صَلِّ عَلَى سَيِّدِنَا مُحَمَّدٍ وَعَلَى آلِ سَيِّدِنَا مُحَمَّدْ
اَللَّهُمَّ اِنَّ لَكَ فِي كُلِّ لَيْلَةٍ مِنَ لَّيَالِي شَهْرِ رَمَضَانَ عُتَقَاءَ وَطُلَقَاءَ وَخُلَصَاءَ وَاُمَنَاءَ مِنَ النَّارْ
اِجْعَلْنَا مِنْ عُتَقَائِكَ وَطُلَقَائِكَ وَخُلَصَائِكَ وَاُمَنَائِكَ مِنَ النَّارِْ
اِجْعَلْنَا يَا اِلَهَنَا يَااَللَّهُ يَااَللَّهُ يَااَللَّهُ مِنَ السُّعَدَاءِ الْمَقْبُولِينْ
وَلاَ تَجْعَلْنَا مِنَ الْأَشْقِيَاءِ الْمَطْرُودِينْ
رَبَّنَا تَقَبَّلْ مِنَّا صَلاَتَنَا وَصِيَامَنَا وَقِيَامَنَا وَرُكُوعَنَا وَسُجُودَنَا وَتَخَشُّعَنَا وَتَضَرُّعَنَا وَتَمِّمْ تَقْصِيرَنَا
وَاسْتَجِبْ دُعَاءَنَا اِنَّكَ اَنْتَ السَّمِيعُ الْعَلِيمُ
وَتُبْ عَلَيْنَا اِنَّكَ اَنْتَ التَّوَّابُ الرَّحِيمَ
بِرَحْمَتِكَ يَااَرْحَمَ الرَّاحِمِينَ
☪ ಉಪವಾಸದ ಕರಾಅತ್ ಗಳು
👉 *ಉಪವಾಸ ಹಿಡಿದು ಸುಗಂಧ ಹಚ್ಚುವುದು.*
👉 *ಅತ್ತಾಳ ಉಪೇಕ್ಷಿಸುವುದು.*
👉 *ಮಧ್ಯಾಹ್ನ ಬಳಿಕ ಹಲ್ಲುಜ್ಜುವುದು.*
👉 *ತಲೆಗೆ ಎಣ್ಣೆ ಹಾಕುವುದು*
( ಅಗತ್ಯಕ್ಕಾದರೆ ಕರಾ ಅತ್ ಇಲ್ಲ)
👉 *ಕಣ್ಣಿಗೆ ಸುರುಮ ಹಾಕುವುದು.*
👉 *ಪತಿ,ಪತ್ನಿಯರು ಚುಂಬನ ನಡೆಸುವುದು.*
👉 *ಸಮಯವಾಗಿಯೂ ವೃತ ತೆರೆಯದಿರುವುದು.*
👉 *ರಕ್ತದಾನ ನಡೆಸುವುದು.*
👉 *ಪದಾರ್ಥಗಳ ರುಚಿ ನೋಡುವುದು.*
🌷🌷🌷🌷🌷🌷🌷🌷🌷🌷🌷
📖 *ಕಲಿಯಿರಿ,ಕಲಿಸಿರಿ,ಜ್ಞಾನಿಗಳಾಗಿರಿ*📖
🌹🌷🌹🌷🌹🌹🌷🌹🌷🌹🌷
🌳🌳🌳🌳🌳🌳🌳🌳🌳🌳🌳
Comments