Skip to main content

ಏರುವಾಡಿ ಸುಲ್ತಾನುಲ್ ಶುಹದಾ ಇಬ್ರಾಹಿಂ ಬಾದುಷ (ರ) ರಾಮನಾಥಪುರಂ ತಮಿಳುನಾಡು

ಏರುವಾಡಿ ಸುಲ್ತಾನುಲ್ ಶುಹದಾ ಇಬ್ರಾಹಿಂ ಬಾದುಷ (ರ) ರಾಮನಾಥಪುರಂ ತಮಿಳುನಾಡು





✍ ಗಫೂರ್ ಬಾಯಾರ್

https://www.facebook.com/Nawazsaqafialamjadiullal/
☪☪☪☪☪☪☪☪☪
_*ವರ್ಷಂಪ್ರತೀ ದುಲ್ ಖಅದ್: 10 ರಂದು ಪುಣ್ಯ ಭೂಮಿಯಾದ ತಮಿಳುನಾಡಿನ ಏರುವಾಡಿ ನಗರದಲ್ಲಿ ಧ್ವಜಾರೋಹಣ ನಡೆಯುವಾಗ, ಜನ ಜಂಗುಳಿಯಿಂದ ತುಂಬಿ ತುಳುಕುವಾಗ ಹೆಚ್ಚುಕಮ್ಮಿ ಯಾರಿಗೂ ತಿಳಿದಿರಲು ಸಾದ್ಯವಿಲ್ಲ ಆ ನವೋಸ್ಥಾನ ನಗರಿಯ ಗತಕಾಲದ ಇತಿಹಾಸ ಚರಿತ್ರೆಯ ಕುರಿತು....!!*_

🕌ಹಿಜರಿ ವರ್ಷ 530'ರ ರಮಳಾನ್ 3ರಂದು ಮದೀನದ ಪರಿಸರ ಪ್ರದೇಶವಾದ *"ಯಾರ್'ಬಾದ್"* ಎಂಬ ಸ್ಥಳದಲ್ಲಿ ಮುತ್ತು *"ನಬಿ (ﷺ)"ತಂಙಳ್ ರವರ ಕುಟುಂಬ ಪರಂಪರೆಯಲ್ಲಿ 18'ನೇ ಪೌತ್ರನಾಗಿ ಸಯ್ಯಿದ್ ಅಹ್ಮದ್(ರ) ರವರ ಹಾಗೂ ಸಯ್ಯಿದತ್ ಫಾತಿಮಾ (ರ) ದಂಪತಿಗಳ ಮಗನಾಗಿ ಬಹುಮಾನ್ಯರಾದ ಸಯ್ಯಿದ್ ಸುಲ್ತಾನು ಶಹೀದ್ ಇಬ್ರಾಹಿಂ ಬಾದುಷ ತಂಙಳ್ (ರ) ರವರು ಜನ್ಮ ಪಡೆದರು.*

ಭಕ್ತಿ, ದೀನಿ ಜ್ಞಾನ, ಸತ್ಯಸಂಧತೆ ಹಾಗೂ ನಿಷ್ಠೆಯಿಂದ ತುಂಬಿದ ಒಬ್ಬ ಉತ್ತಮ ಪುರುಷನನ್ನಾಗಿ ಪೋಷಕರು ಮಗನನ್ನು ಬೆಳೆಸಿದರು.

ಮದೀನದಲ್ಲಿ ಅಂದು ಇದ್ದ ಯುವಕರಲ್ಲಿಯೇ ಅತೀ ಹೆಚ್ಚು ಬಹುಮಾನಿಸಲ್ಪಡುವ ಯುವಕರಾಗಿದ್ದರು ಮಹಾನರು..

ಹಿಜರಿ 555ರಲ್ಲಿ ಸಯ್ಯಿದತ್ತ್ ಅಲಿ ಫಾತಿಮಾ (ರ) ರೊಂದಿಗೆ ವಿವಾಹವಾದರು.

ತೌಹೀದ್ ಮಾರ್ಗದಲ್ಲಿ ಜನ ಮನಸ್ಸುಗಳನ್ನು ಅಲ್ಲಾಹನ ಸಾಮೀಪ್ಯಕ್ಕೆ ತಲುಪಿಸಿ, ದೀನಿ ಪ್ರಬೋಧನೆಯೊಂದಿಗೆ ಮದೀನದಲ್ಲಿ ಜೀವಿಸುತ್ತಿರುವಾಗ, ಒಂದು ದಿನ ಪಿತಾಮಹಾನರಾದ, ವಿಶ್ವ ನೇತಾರರು ಆದ ಪುಣ್ಯ *ಹಬೀಬ್ (ﷺ) ರವರು ಕನಸಿನಲ್ಲಿ ದರ್ಶನವಾಗಿ ಹೇಳಿದರು: "ತಮ್ಮ ಪ್ರಬೋದನೆ ದೌತ್ಯ ಬಲು ದೂರದ ಹಿಂದಿ* ಎಂಬಲ್ಲಿಯಾಗಿದೆ. ಆದಷ್ಟು ಬೇಗ ಹೊರಡಬೇಕು. *ಬಹು ದೈವಾರಾಧನೆಯವರ ನಾಡದ ಇಂಡಿಯಕ್ಕೆ ಹೋಗಿ ತೌಹೀದಿನ ಬೆಳಕನ್ನು ಜನರಿಗೆ ತಲುಪಿಸಿರಿ.!!.*

ಆ ಸ್ವಪ್ನ ದರ್ಶನದ ನಂತರ
ಮಹಾನರಾದ ಇಬ್ರಾಹಿಂ ಬಾದುಷ ತಂಙಳ್ (ರ)ರವರು ಸುಮಾರು ಮೂರು ಸಾವಿರಗಳಷ್ಟು ಅನುಯಾಯಿಗಳನ್ನು ಹಾಗು ತನ್ನ ಕುಟುಂಬ ಸದಸ್ಯರನ್ನು ಒಳಗೊಂಡ ದೊಡ್ಡ ಸಂಘದೊಂದಿಗೆ ಇರಾನ್, ಇರಾಖ್, ಬಲೂಚಿಸ್ಥಾನ್ ದಾರಿಯಾಗಿ ಭಾರತಕ್ಕೆ ಆಗಮಿಸಿದರು.

*ಅಫ್ತಾಬ್ ಸಿಂಗ್* ಎಂಬ ದುಷ್ಟ ಏಕಾಧಿಪತಿ ಅಂದು ಸಿಂದ್ ಪ್ರದೇಶವನ್ನು ಆಳುತ್ತಿದ್ದನು.. (ಸಿಂದ್ ಪ್ರದೇಶ ಈಗ ಪಾಕಿಸ್ತಾನದಲ್ಲಿದೆ.)
ಬಾದುಷ (ರ) ರವರು ಚಿಕ್ಕ ಚಿಕ್ಕ ಗುಂಪುಗಳನ್ನು ರೂಪಿಸಿ ಬೇರೆ ಬೇರೆ ಸ್ಥಳಕ್ಕೆ ನಿಯೋಗಿಸಿ
ಅವರೊಂದಿಗೆ ದಅವತ್ತ್ ನಡೆಸುತ್ತಿದ್ದರು. ಸತ್ಯವನ್ನು ಮನಗಂಡು ಧಾರಾಳ ಜನರು ಇಸ್ಲಾಮಿಗೆ ಹರಿದು ಬರುತ್ತಿದ್ದರು. ಆದರೆ ಛತ್ರಾಧಿಪತಿಯಾದ *ಅಫ್ತಾಬ್ ಸಿಂಗ್* ಇದನ್ನು ಸಹಿಸದೆ ಯುದ್ಧಕ್ಕೆ ಆಹ್ವಾನಿಸಿ ಮಹಾನರಿಗೆ ಹಲವು ವಿಘ್ನಗಳನ್ನು ಸೃಷ್ಟಿಸಿ ಕಠಿಣವಾದ ತಿರುಗೇಟು ಕೊಡಲು ತೀರ್ಮಾನಿಸಿದನು.

 ಬಳಿಕ ರಾಜನಾದ *ಅಫ್ತಾಬ್ ಸಿಂಗ್* ಮತ್ತು ಸಂಗಡಿಗರು ದೊಡ್ಡದಾದ ಸಕಲ ಸಿದ್ದತೆಯೊಂದಿಗೆ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಆಹ್ವಾನ ಮಾಡಿದನು. ಆ ಯುದ್ಧದಲ್ಲಿ ರಾಜನು ಹತನಾದನು. ನಂತರ ತಮ್ಮನಾದ *ಮೆಫ್ತಾಬ್ ಸಿಂಗ್* ರಾಜನಾದನು.  ಅವನು ಕೂಡ ಮಹಾನರೊಂದಿಗೆ ಯುದ್ಧ ಮಾಡಿ ಪರಾಜಿತನಾಗಿ ಕೊಳ್ಳಲ್ಪಟ್ಟನು.

ಸಿಂದ್ ಪ್ರದೇಶವನ್ನು ತನ್ನ ಅಧೀನಗೊಳಪಡಿಸಿದ ಇಬ್ರಾಹಿಂ ಬಾದುಷ (ರ) ರವರು ನಂತರ ಗುಜರಾತಿಗೆ ಪ್ರವೇಶಿಸಿದರು. ಅಲ್ಲಿಯು ವಿವಿಧ ಸಂಘಗಳಾಗಿ ದೀನಿ ಪ್ರಬೋದನೆ ಆರಂಭಿಸಿದರು.
ಅಲ್ಲಿಯೂ ಧಾರಾಳ ಜನರು ಪರಿಶುದ್ಧ ಇಸ್ಲಾಮಿಗೆ ಸೇರ್ಪಡೆಗೊಂಡರು. ಅ ಕಾಲದಲ್ಲಿ ಗುಜರಾತ್ತಿನ ಆಡಳಿತಾಧಿಕಾರಿ *ಘೋಡಾ ಸಿಂಗ್* ಸಹ ಮಹಾನರನ್ನು ವಿರೋಧಿಸಿ ಯುದ್ಧ ಸಾರಿದನು. ಆ ಭೀಕರ ಯುದ್ಧದಲ್ಲಿ ರಾಜನಾದ *ಘೋಡಾ ಸಿಂಗ್* ವಧಿಸಲ್ಪಟ್ಟನು.

ನಂತರ ಅಧಿಕಾರ ವಹಿಸಿದ ರಾಜಕುಮಾರ *ಇಂಪ್ರ್ಯತ್ ಸಿಂಗ್* ಮಹಾನವರ ದೈತ್ಯವನ್ನು ತಿಳಿದು, ಇಸ್ಲಾಮನ್ನು ಕಲಿತು ಇಸ್ಲಾಮ್ ಸ್ವೀಕರಿಸಿ *ಆಲಿ ಜನಾಬ್* ಎಂಬ ಹೆಸರಿನಲ್ಲಿ ಗುಜರಾತ್ತಿನ ಅಮೀರಾಗಿ ನಿಯೋಗಿಸಲ್ಪಟ್ಟರು. ಅತ್ತ  ಸಿಂದ್'ನಲ್ಲಿ *ದುಲ್'ಫುಖಾರ್ ಅಲಿ* ಎಂಬುವರನ್ನು ಅಮೀರಾಗಿ ನೇಮಿಸಲಾಯಿತು..
ಬಳಿಕ ಬಾದುಷ ತಂಙಳ್ (ರ)ರವರು ಮದೀನಕ್ಕೆ ಮರಳಿ ಹೋದರು..

☪  ಮೊದಲಿನ ಹಾಗೆ ಮದೀನದಲ್ಲಿ ದೀನಿ ಪ್ರಬೋದನೆ ಮಾಡುತ್ತಾ ಜೀವಿಸುತ್ತಿದ್ದಾಗ ಗವರ್ನರ್ ಆಗಿದ್ದ ತಂದೆಯವರು ವಫಾತಾದರು. ತಂದೆಯವರ ಕಾಲಾನಂತರ ಆ ಸ್ಥಾನವನ್ನು ಮಹಾನರು ವಹಿಸಬೇಕಾಯಿತು.

ಆದರೆ ನೆಬಿ (ﷺ) ರವರ ದಿವ್ಯ ಸ್ವಪ್ನ ನಿರ್ದೇಶನ ಅನುಸರಿಸಿ ಪುನಃ ಭಾರತಕ್ಕೆ ಮರಳಿ ಆಗಮಿಸಿದರು. ಆ ಕಾಲದಲ್ಲಿ *ಪಾಂಡ್ಯ ರಾಜ ಮತ್ತು ವಿಕ್ರಮ ರಾಜ*ಭಾರತದ ಪೂರ್ವ ಭಾಗದ ಅತ್ಯಂತ ಕ್ರೂರಿಯಾದ ಆಡಳಿತಾಧಿಕಾರಿಗಳಾಗಿದ್ದರು. ಅವರು ಬಲಿಷ್ಠವಾದ ಸೇನಾಬಲದೊಂದಿಗೆ ಹೋರಾಡಲು ಬಂದಾಗ, ಮಹಾನರು ಪ್ರತಿರೋಧಕ್ಕೆ ಬೇಕಾದ  ಸೈನಿಕರನ್ನು, ಆಯುಧ ಬಲದ ಸಹಾಯವನ್ನು ತುರ್ಕಿ ದೇಶದ ರಾಜರಾದ *ಮೆಹ್ಮೂದ್ ಬಾದುಷರವರ ಹತ್ತಿರ ಕೇಳಿ ಕೊಂಡರು*

ಹಿಜರಿ ವರ್ಷ 581ರಲ್ಲಿ ಇಬ್ರಾಹಿಂ ಬಾದುಷ (ರ) ಮತ್ತು ಆಮೀರ್ ಅಬ್ಬಾಸಿ (ರ) ಯವರ ನೇತೃತ್ವದಲ್ಲಿ ಎರಡನೇಯ ಭಾರತ ಯಾತ್ರೆ ಕೈಗೊಂಡರು.. ಆ ಸಂಘದಲ್ಲಿ 3 ವೈದ್ಯರು, ಹಲವಾರು ದೀನೀ ಪ್ರಭೋದಕರು, ಮಹಾನರ ಪತ್ನಿ ಮತ್ತು ಮಕ್ಕಳಾದ  ಸಯ್ಯಿದ್ ಅಬೂ ತ್ವಾಹಿರ್ (ರ), ಝೈನುಲ್ ಆಬಿದೀನ್ (ರ), ಇದ್ದರು. ಹಾಗೂ ಕೆಲವು ಸಯ್ಯಿದ್ ಕುಟುಂಬಗಳು ತಂಡದಲ್ಲಿ ಒಳಗೊಂಡಿತ್ತು.

ಜಿದ್ದಾ ಬಂದರಿನಿಂದ ಹೊರಟ ಹಡಗು *ಕೇರಳದ ಕಣ್ಣೂರು ಜಿಲ್ಲೆಯ ಕಡಪ್ಪುರಂ ಎಂಬ ಸ್ಥಳಕ್ಕೆ ತಲುಪಿತು.* ಅಂದು ಕಣ್ಣೂರಿನ ರಾಜರು ಮಹಾನರಿಗೆ ದೀನಿ ಪ್ರಬೋದನೆ ಮಾಡಲು ಬೇಕಾದ ಎಲ್ಲಾ ಸಹಾಯಗಳನ್ನು ಮಾಡಿದರು. ಇದರಿಂದ ಕಣ್ಣೂರು ಮತ್ತು ಪರಿಸರ ಪ್ರದೇಶಗಳಲ್ಲಿ ತೌಹೀದ್ ಹರಡಿತು. ಕೊಚ್ಚಿ, ವಿಯಿಂಜಂ, ಆಲಪ್ಪುಝ, ಹೀಗೆ ಮೊದಲಾದ ಸ್ಥಳಗಳಲ್ಲಿ ಇಸ್ಲಾಮನ್ನು ಪಸರಿಸಿದ ಮೇಲೆ ತನ್ನ ದೌತ್ಯ ಸಂಘದೊಂದಿಗೆ ತಮಿಳ್ನಾಡಿನ ಕಾಯಲ್ ಪಟ್ಟಣಕ್ಕೆ ತಲುಪಿದರು.

ಪಾಂಡ್ಯ ಎಂಬ ರಾಜ್ಯವು ತಿರುನೆಲ್'ವೆಲ್ಲಿ, ಮಧುರೈ ಹಾಗು ರಾಮನಾಥಪುರಂ ಎಂಬ ಮೂರು ನಾಡುಗಳನ್ನು ಒಳಗೊಂಡಿತ್ತು.. ಪಾಂಡ್ಯ ರಾಜನ ಮರಣದ ನಂತರ ಮಕ್ಕಳಾದ *ಕುಲಶೇಖರ ಪಾಂಡ್ಯನ್ ತಿರುನೆಲ್'ವೆಲ್ಲಿಯನ್ನು, ತಿರು ಪಾಂಡ್ಯನ್ ಮಧುರೈಯನ್ನು ಹಾಗು ವಿಕ್ರಮ ಪಾಂಡ್ಯನ್ ರಾಮನಾಥಪುರಂವನ್ನು ಹೀಗೆ ಮೂರು ವಿಭಾಗವಾಗಿ ವಿಭಜಿಸಿ ಆಡಳಿತ ನಡೆಸಿದರು.*

ಮಹಾನರು ಮತ್ತು ಸದಸ್ಯರು ಕುಲಶೇಖರ ಪಾಂಡ್ಯನ ಸ್ಥಳವಾದ ತಿರುನೆಲ್'ವೆಲ್ಲಿಗೆ ತಲುಪ ಪವಿತ್ರಿ ಇಸ್ಲಾಮಿಗೆ ಜನರನ್ನು ಆಹ್ವಾನಿಸುತ್ತಿದ್ದರು. ರಾಜನು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯಗಳನ್ನು ಮಾಡಿದನು.

 ದೌತ್ಯ ಮುಗಿಸಿ ಅಲ್ಲಿಂದ ನೇರ ಮಧುರಕ್ಕೆ ಆಗಮಿಸಿದರು. ಆದರೆ ತಿರು ಪಾಂಡ್ಯನ್ ಮಹಾನರನ್ನು ವಿರೋಧಿಸಿ ಅವರ ವಿರುದ್ಧ ತನ್ನ ಸೈನ್ಯವನ್ನು ಕಳುಹಿಸಿ ಯುದ್ಧ ಮಾಡಿದನು. ಈ ಸಂದರ್ಭದಲ್ಲಿ *ಚೊಳನರು*ಮಧುರೈಯನ್ನು ಆಕ್ರಮಿಸಿದರು. ತಿರು ಪಾಂಡ್ಯನ್ ಸೋತು ಓಡಿ ಹೋದನು.

ಬಾದುಷ ತಂಙಳ್ (ರ) ಮತ್ತು ಅನುಯಾಯಿಗಳು ತಮ್ಮ ಸಂಘದೊಂದಿಗೆ ಮಧುರೈಗೆ ತಲುಪಿದರು. ಆ ಸಂದರ್ಭದಲ್ಲಿ ತಿರು ಪಾಂಡ್ಯನ್ ಮತ್ತು ವಿಕ್ರಮ ಪಾಂಡ್ಯನ್ ಇಬ್ಬರು ದೊಡ್ಡ ಯುದ್ಧ ಸನ್ನಾಹದೊಂದಿಗೆ ಮಹಾನರ ವಿರುದ್ಧ ಯುದ್ಧಕ್ಕೆ ತಯಾರಾಗಿ ವೈವಪರ ಎಂಬ ಸ್ಥಳದಲ್ಲಿ ಕಾದು ಕುಳಿತನು.

ಇದನ್ನು ಅರಿತ ಮಹಾನವರು ತನ್ನ ಅಧೀನದಲ್ಲಿರುವ ಸಾಧ್ಯವಾದಷ್ಟು ಸೈನಿಕರನ್ನು ಕರೆದುಕೊಂಡು ವೈವಪರ ಎಂಬಲ್ಲಿಗೆ ಹೊರಟರು. ಮಧುರೈಯ ನೇತೃತ್ವವನ್ನು *ಸಿಕಂದರ್ ಬಾದುಷ (ರ)* ರವರು ವಹಿಸಿದರು.

ವಿಕ್ರಮ ಪಾಂಡ್ಯನ ಮಗ ಇಂದಿರಾ ಪಾಂಡ್ಯನ್, ಸರ್ವ ಸೈನ್ಯಾಧಿಪತಿ ವೀರ ಪಾಂಡ್ಯನ್ ಹಾಗೂ ಸರ್ವ ಆಯುಧಧಾರಿಗಳಾದ ಅನೇಕ ಪಾಂಡ್ಯನ್ ಸೈನಿಕರು ಒಂದು ಭಾಗದಲ್ಲಿ ಸನ್ನದ್ದರಾಗಿ ನಿಂತಿದ್ದರೆ..  ಮತ್ತೊಂದು ತುದಿಯಲ್ಲಿ *ಆಮೀರ್ ಅಬ್ಬಾಸಿ (ರ)* ರವರ ನೇತೃತ್ವದಲ್ಲಿ ಶತ್ರು ಸೈನ್ಯದ ಅರ್ಧದಷ್ಟು ಜನಬಲವೂ ಇಲ್ಲದ ಮುಸ್ಲಿಂ ಸೈನಿಕರು ಯುದ್ಧಕ್ಕೆ ಅಣಿಯಾಗಿದ್ದರು.  ಮುಸ್ಲಿಂಗಳ ಈಮಾನಿನ ಶಕ್ತಿಯೊಂದಿಗೆ ಅಂದು ಆ ಯುದ್ಧವು ಮಗದೊಂದು ಬದ್ರ್ ಯುದ್ಧವಾಗಿ ಮಾರ್ಪಟ್ಟಿತು.!!

*ಸಯ್ಯಿದ್ ಖಾದರ್ (ರ)* ರವರು ಕುದುರೆಯ ಮೇಲೇರಿ ಅತೀ ಆವೇಶದಿಂದ ಈ
ಘೋರ ಯುದ್ಧದಲ್ಲಿ ಶತ್ರು ಸೈನಿಕರ ಶಿರಸ್ಸುಗಳನ್ನು ಇರಿದು ಕೊಲ್ಲುತಿರುವ ಸಂದರ್ಭದಲ್ಲಿ ಎದುರಿಸಲು ಸುಂದರ ಪಾಂಡ್ಯನ್ ಓಡಿ ಬಂದನು.
ಆದರೆ ಅವನು ಖಾದರ್ (ರ)ರವರ ಖಡ್ಗಕ್ಕೆ ಬಲಿಯಾದನು.
ದೂರದಿಂದ ಇದೆಲ್ಲವನ್ನು ವೀಕ್ಷಿಸುತ್ತಿದ್ದ ಸುಂದರ ಪಾಂಡ್ಯನ ತಮ್ಮ ಮೆಲ್ಲನೆ ಹಿಂದಿನಿಂದ ಬಂದು ಅಡಗಿ ನಿಂತು *ಸಯ್ಯಿದ್ ಖಾದರ್ (ರ)* ರವರನ್ನು ಹತ್ಯೆ ಮಾಡಿದನು. ಈ ರಂಗವನ್ನು ಪ್ರತ್ಯಕ್ಷವಾಗಿ ಕಂಡ ಶಂಸುದ್ದೀನ್(ರ) ರವರು ಓಡಿ ಬಂದು ಖಾದರ್(ರ)ರವರನ್ನು  ಶಹೀದ್ ಮಾಡಿದವನ ಕತ್ತನ್ನು ಕೊಯ್ದು ಕೊಂದರು..

ಎರಡು ಕಡೆಯ ಅತೀ ಶಕ್ತರಾದ ಇಬ್ಬರು ನೇತಾರರು ರಣಾಂಗಣದಲ್ಲಿ ಮೃತ್ಯುವಾದದ್ದನ್ನು ಕಂಡು ಶತ್ರುಗಳ ಅನುಯಾಯಿಗಳು ಹೆದರಿ ಸೋಲೊಪ್ಪಿಕೊಂಡು ಓಡಿ ಹೋದರು.

ಆದರೆ ವಿಕ್ರಮ ಪಾಂಡ್ಯನಿಗೆ ಈ ಸೋಲು ತೀವ್ರವಾದ ಉದ್ವೇಗಕ್ಕೆ ಕಾರಣವಾಯಿತು. ಇದರ ಪ್ರತೀಕಾರವನ್ನು ತೀರಿಸಲು ಅವರು ಮಹಾನರ ಮಗನಾದ *ಅಬೂ ತ್ವಾಹಿರ್ (ರ)* ರವನ್ನು ಗುರಿಯಾಗಿಸಿ ಮುಂದಿನ ಹೋರಾಟಕ್ಕೆ ಸರ್ವ ಸಿದ್ದತೆಯೊಂದಿಗೆ ಸಜ್ಜಾಗಿ ಹೊರಟರು..

☪ ವೈವಪರ ಎಂಬ ಸ್ಥಳದಲ್ಲಿ ಶತ್ರು ಸೈನ್ಯ ಮತ್ತು ಮುಸ್ಲಿಂ ಸೈನಿಕರ ಮದ್ಯೆ ಸಮರ ಆರಂಭವಾಯಿತು.

ಶತ್ರು ಶೈನಿಕರು ಅಡಗು ತಾಣಗಳ ಸಹಾಯದಿಂದ ಯುದ್ಧದ ತಂತ್ರವನ್ನು ಬದಲಿಸುತ್ತಿದ್ದರು. *ಹಝ್ರತ್ತ್ ಶಂಸುದ್ದೀನ್ (ರ)* ರವರು ಶತ್ರು ಸೇನೆಯ ಅತೀ ವೀರನನ್ನು ಬೀಳಿಸಿದರು. ಇದನ್ನು ನೋಡುತ್ತಿದ್ದ ಜಯಸೂರ್ಯ ಪಾಂಡ್ಯನು ಹಿಂಬದಿಯಿಂದ ಬಿಲ್ಲು ಬಿಟ್ಟ ಕಾರಣ *ಶಂಸುದ್ದೀನ್(ರ)*ರವರು ಶಹೀದ್ ಆದರು. ಆ ಮಹಾನರ ಜನಾಝವನ್ನು ಏರುವಾಡಿಗೆ ಕೊಂಡು ಹೋಗಿ ದಫನ್ ಮಾಡಲಾಯಿತು. *ಅಮೀರ್ ಅಬ್ಬಾಸ್(ರ)*ರವರನ್ನು ಅದೇ ರೀತಿ ವಂಚನಾ ಜಾಲದಿಂದ ಅಡಗಿ ಕುಳಿತು ಬಿಲ್ಲು ಬಿಟ್ಟು ಹತ್ಯೆ ಮಾಡಿದಾಗ  ರಣಾಂಗಣದಲ್ಲಿ ಶಹೀದಾದರು...

 ಯುದ್ಧ ಮುಂದುವರಿಯುತ್ತಾ 50 ಸಂವತ್ಸರಗಳು ಕಳೆಯಿತು.. ಧೀರ ವೀರ ಮುಸ್ಲಿಂ ಯೋಧರು ಒಂದೊಂದೇ ದಿನಗಳಲ್ಲಿ ಪರಲೋಕಕ್ಕೆ ಯಾತ್ರೆ ಆಗುತ್ತಿದ್ದರು.

 *ಅಬೂ ತ್ವಾಹಿರ್ (ರ)*  ರವರು ತನ್ನ ಈಮಾನಿನ ಶಕ್ತಿಯಿಂದ ಹಲವರನ್ನು ಬಗ್ಗುಬಡಿದು ಮುನ್ನುಗ್ಗುತ್ತಿದ್ದರು. ವಿಕ್ರಮ ಪಾಂಡ್ಯನ ರಥಕ್ಕೆ ಓಡಿ ಹತ್ತಿ ತನ್ನ ಖಡ್ಗವನ್ನು ಬೀಸಿದಾಗ ವಿಕ್ರಮ ಪಾಂಡ್ಯನ ಬಲಕೈ ಮುರಿದು ಬಿತ್ತಾದರೂ ಅವನು ಹತ್ತಿರವಿದ್ದ ಘೋರ ವನದೊಳಗೆ ಓಡಿ ಹೋಗಿ ಮರೆಯಾದನು.
ಹಿಂಬಾಲಿಸಿಕೊಂಡು *ಅಬೂ ತ್ವಾಹಿರ್ (ರ)* ಓಡಿದರೂ ಅವನನ್ನು ಕಾಣಲು ಸಾಧ್ಯವಾಗಲಿಲ್ಲ. ಈ ಸಂದರ್ಭವನ್ನು ಸದುಯೋಪಯೋಗಪಡಿಸಿದ ಶತ್ರು ಸೈನಿಕರು *ಅಬೂ ತ್ವಾಹಿರ್(ರ)*ರವರ ಮೇಲೆ ಮಾರಕವಾದ ಅಸ್ತ್ರ ಪ್ರಯೋಗಿಸಿದ್ದರಿಂದ *ಅಬೂ ತ್ವಾಹಿರ್(ರ)* ಎಂಬ ಆ ಧೀರ ಯುವಕ ತನ್ನ ಕೊನೆಯ ಶ್ವಾಸದವರೆಗೆ ದೀನಿಗಾಗಿ ಹೋರಾಡಿ ಅಲ್ಲಾಹನ ಸನ್ನಿದಿಗೆ ಪಯಣಿಸಿದರು.
ಇನ್ನಾ ಲಿಲ್ಲಾಹ್.!

ಬಾದುಷ(ರ) ಮತ್ತು ಅನುಯಾಯಿಗಳು ವಿಕ್ರಮ ಪಾಂಡ್ಯನ ಕೋಟೆಯನ್ನು ಸುತ್ತುವರಿದು ಶಕ್ತಿಯಿಂದ ಹೋರಾಟ ನಡೆಸಿದರು. ವಿಕ್ರಮ ಪಾಂಡ್ಯನು ನೆಲಸಮವಾದನು.

ಪೌತ್ರಮಾಣಿಕ್ಯ ಪಟ್ಟಣ(ಈಗಿನ ಏರುವಾಡಿ ಒಳಪಟ್ಟ ಸ್ಥಳ) ಇಸ್ಲಾಮಿಕ ಆಡಳಿತದ ಅಧೀನಕ್ಕೊಳಗಾಯಿತು.ಮಹಾನರು ತನ್ನ ಜನ್ಮಸ್ಥಳದ ಸವಿನೆನಪಿಗಾಗಿ *"ಏರ್'ಬದ್"* ಎಂದು ಪುನರ್ ನಾಮಕರಣ ಮಾಡಿದರು. ನಂತರದ ಕಾಲದಲ್ಲಿ ಅದು *ಏರ್'ವಾಡಿ* ಎಂಬ ಹೆಸರಿಂದ ಪ್ರಸಿದ್ದಿ ಪಡೆಯಿತು.

ಹೀಗೆ ಸಮಾಧಾನವು, ನೀತಿಯುಕ್ತವಾದ 12 ವರ್ಷ ಮುಸ್ಲಿಂಮರ ಆಡಳಿತ ಮುಂದುವರಿಯಿತು.

ಸ್ಥಾನ ಭ್ರಷ್ಟನಾದ ತಿರು ಪಾಂಡ್ಯನು ಮಧುರೈಯ ಭಾಗದಲ್ಲಿ ಅಡಗಿ ಕುಳಿತು ಸುಳ್ಳು ಕತೆಗಳನ್ನು ಸೃಷ್ಟಿಸಿ ಮಹಾನರ ವಿರುದ್ಧ ಪಿತೂರಿ ಮಾಡಲು ಆರಂಭಿಸಿದನು. ವಂಚನೆಯಿಂದ ಮಹಾನರನ್ನು ಬೀಳಿಸಲು ಹಲವರನ್ನು ಜೊತೆ ಸೇರಿಸಿ ಫಲ ಕಾಣದಾಗ, ಮಹಾನರನ್ನು ಅತಿಕ್ರಮಿಸಿ ಆಕ್ರಮಿಸಲು ಯತ್ನಿಸಿದನು. ಇದರಿಂದ ಮಹಾನರು ಸೋಲೊಪ್ಪದೆ  ಹೋರಾಡುತ್ತಿರುವಾಗ ತಿರು ಪಾಂಡ್ಯನು, ಆ ದಿವ್ಯ ಜ್ಯೋತಿಯನ್ನು ಇರಿದು ಬೀಳಿಸಿದನು. ಮಹಾನರು ಆ ರಣಭೂಮಿಯಲ್ಲಿ ಶಹೀದಾದರು.. ಇನ್ನಾ ಲಿಲ್ಲಾಹಿ ವಾ ಇನ್ನಾ ಹಿಲಾಹಿ ರಾಜಿಊನ್..

*ಹಲವಾರು ವರ್ಷಗಳ ಕಾಲ ಏರ್'ವಾಡಿ ಎಂಬ ಸ್ಥಳ ಯಾರಿಗೂ ಕಾಣದೆ ತಿಳಿಯದಂತೆ ಕಾಡು ಸುತ್ತುವರಿದಿತ್ತು.*

*18ನೇ ಶತಮಾನದಲ್ಲಿ "ನಲ್ಲ ಇಬ್ರಾಹಿಂ (ರ)" ಎಂಬ ಮಹಾನುಭಾವರು ಸ್ವಪ್ನ ದರ್ಶನದಲ್ಲಿ ಬಾದುಷ(ರ) ತಂಙಳರನ್ನು ಕಂಡರು. ಅವರು ತನ್ನ ಹಾಗೂ ತನ್ನವರ ಮಕ್ಬರಗಳು ನೆಲೆಗೊಳ್ಳುವ ಸ್ಥಳವನ್ನು ತಿಳಿಸಿಕೊಟ್ಟರು.*
*ನಲ್ಲ ಇಬ್ರಾಹಿಂ (ರ) ಎಂಬವರು ತನ್ನ ಕುಟುಂಬ ಸಮೇತ ಏರ್ವಾಡಿಗೆ ಆಗಮಿಸಿ ಅಲ್ಲಿ ಸ್ಥಿರ ವಾಸವಾದರು.*

 ಒಮ್ಮೆ ರಾಮನಾಥಪುರಂ ರಾಜ್ಯದ ರಾಜನಿಗೆ ಕುಷ್ಠ ರೋಗವೆಂಬ ಮಾರಕ ಖಾಯಿಲೆ ಪೀಡಿತನಾದಾಗ, ರೋಗ ವಾಸಿಯಾಗಲು ಎಷ್ಟು ಮದ್ದು ಮಾಡಿದರೂ ಫಲ ಕಾಣಲಿಲ್ಲ. ಕೊನೆಯ ಅಸ್ತ್ರವೆಂಬತೆ ಏರ್ವಾಡಿ ಮಖಾಮಿಗೆ ಹೋಗಿ ಅಲ್ಲಿಯ ಮಣ್ಣನ್ನು ನೀರಿನಲ್ಲಿ ಬೆರೆಸಿ ಕುಡಿದರು. ಪವಾಡವೆಂಬಂತೆ ಅವರ ರೋಗ ಗುಣಮುಖವಾಯಿತು. ಅವರ ಪತ್ನಿ ರಾಣಿಗೆ ಮಕ್ಕಳಿರಲಿಲ್ಲ. ಮಕ್ಕಳಿಲ್ಲದ ದುಃಖದಲ್ಲಿರುವಾಗ ಅವರು ಕೂಡ ಏರ್ವಾಡಿ ಮಕ್ಬರ ನೆಲೆಗೊಳ್ಳುವ ಸ್ಥಳದ ಮಣ್ಣನ್ನು ನೀರಿನಲ್ಲಿ ಬೆರೆತು ಕುಡಿದರು. ಫಲಪ್ರದವಾಗಿ ಅವರೂ ಗರ್ಭ ಧರಿಸಿದರು. ಶರವೇಗದಲ್ಲಿ ಈ ಎರಡು ವಾರ್ತೆಗಳು ಪರಿಸರದ ಊರಿನಲ್ಲಿ ಹರಡಿತು. ಜನರು ತಂಡೋಪತಂಡವಾಗಿ ಮಖಾಮಿಗೆ ಬರಲು ಆರಂಭಿಸಿದರು.

🕌 ಎಲ್ಲಾ ವಿಧದ ಸಮಸ್ಯೆಗಳಿಗೆ ಪರಿಹಾರದ *ನ್ಯಾಯಾಲಯ*ವಾಗಿದೆ ಏರುವಾಡಿ ಶುಹಾದಗಳು. ಇಂದು ಆ ಪವಿತ್ರ ಶುಹದಾಗಳ ಸನ್ನಿದಿಯಲ್ಲಿ ಮಾನಸಿಕ, ಶಾರೀರಿಕ ರೋಗಗಳು ಇರುವವರು, ಸಂತಾನಗಳಿಲ್ಲದವರು, ಜಾತಿ ಧರ್ಮ ವ್ಯತ್ಯಾಸವಿಲ್ಲದೆ ಆಗಮಿಸಿ ಅವರ ಉದ್ದೇಶಿತ ಪರಿಹಾರವನ್ನು ಸಾಧಿಸಿದ ನಂತರ ಮರಳುತ್ತಾರೆ.

ಅದಕ್ಕಿಂತಲೂ ಹೆಚ್ಚಾಗಿ ಲಕ್ಷಾಂತರ ಜನರ ಹೃದಯಗಳಲ್ಲಿ ಈಮಾನಿನ ಬೆಳ್ಳಿ ಬೆಳಕಾದ *ತೌಹೀದ್'*ನ ಬೀಜಗಳನ್ನು ಬಿತ್ತಿ ಇಸ್ಲಾಮಿನ ಸುಂದರವಾದ ಆಶಯವನ್ನು ಜನರಿಗೆ ತಲುಪಿಸಿದ ಭಾರತದ *ಮಕ್ಕಾ* ಎಂಬ ಹೆಸರಿನಲ್ಲಿಯೂ, *ಎರಡನೆಯ ಕರ್ಬಲ* ಎಂಬ ಹೆಸರಿನಲ್ಲೂ ಅರಿಯಲ್ಪಡುವ ಏರ್ವಾಡಿ ನಗರ ದಿನನಿತ್ಯ ಸತ್ಯವಿಶ್ವಾಸಿಗಳ ಹೃದಯವನ್ನು ತೃಪ್ತಿಪಡಿಸುವ ಆತ್ಮೀಯ ಪರಿಹಾರ ಕೇಂದ್ರವಾಗಿದೆ..

ಶುಹದಾಗಳಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನ ಇದೆ ಎಂಬುದನ್ನು ಮರೆಯಬಾರದು.

ಅಲ್ಲಾಹನು ಹೇಳುತ್ತಾನೆ;
*"ಅಲ್ಲಾಹನ ಮಾರ್ಗದಲ್ಲಿ  ವಧಿಸಲ್ಪಟವರು ಮರಣ ಹೊಂದಿದವರೆಂದು ಹೇಳಬೇಡಿ. ಹೊರತು ಅವರು ಜೀವಂತವಿರುವವರಾಗಿದ್ದಾರೆ. ಅವರಿಗೆ ರಕ್ಷಕನಾದ ಅಲ್ಲಾಹನಿಂದ ಅನ್ನಾಹಾರ ನೀಡಲಾಗುತ್ತದೆ.*
(ಆಲು ಇಂರಾನ್ 169)

ಪವಿತ್ರ ಖುರ್'ಆನಿನಲ್ಲಿ ಅಲ್ಲಾಹನು ಸಂಶಯಕ್ಕೆ ಆಸ್ಪದವಿಲ್ಲದೆಯೇ ವಿವರಿಸಿರುವಾಗ, ದೀನಿಗಾಗಿ ಹೋರಾಡಿದ ಸಾವಿರಾರು ಹುತಾತ್ಮರು ಅಂತ್ಯ ವಿಶ್ರಮಗೂಂಡ  ಏರ್ವಾಡಿಯ ಆ ಮಹಾತ್ಮರಿಗೆ ಅಲ್ಲಾಹನಿಂದ ವಿಶೇಷ ಗೌರವ ಲಭಿಸುವುದರಲ್ಲಿ ಸಂಶಯವಿಲ್ಲ..

ಅಲ್ಲಾಹನ ಪ್ರೀತಿಗಾಗಿ ಹೋರಾಡಿದ ಮಹಾತ್ಮರನ್ನು ಒಮ್ಮೆಯೂ ನಿಂದಿಸಬಾರದು. ಅವಹೇಳನ ಮಾಡಲೇಬಾರದು. ಈಮಾನ್'ಗೆ ಚ್ಯುತಿಯುಂಟುಮಾಡುವ ಪ್ರಸ್ತುತ ಕಾರ್ಯಕ್ಕೆ ಯಾರೂ ಕೂಡಾ ಮುಂದಾಗಬಾರದು. *"ವಂದಿಸದಿದ್ದರೂ ನಿಂದಿಸದಿರು"* ಎಂಬ ಮಾತು ಇಲ್ಲಿ ಸ್ಮರಣೀಯವಾಗಿದೆ.

*ಅಲ್ಲಾಹನು ನಮಗೂ, ನಮ್ಮನ್ನು ಪ್ರೀತಿಸುವವರಿಗೂ ಮಹಾನರಾದ ಸುಲ್ತಾನು'ಶ್ಶಹೀದ್ ಇಬ್ರಾಹಿಂ ಬಾದುಷ (ರ) ರವರ ಹಾಗೂ ಏರ್ವಾಡಿ ಶುಹದಾಗಳ ಬರಕತ್ ನಿಂದ ಸತ್ಯದ ಹಾದಿ ಕರುಣಿಸಲಿ. ಈಮಾನ್, ಯಖೀನ್ ನೀಡಿ ಅನುಗ್ರಹಿಸಲಿ.. ಆಮೀನ್.!!!!*

☪ _*ಏರುವಾಡಿ ಶುಹದಾಗಳು*_

*1.* ಸಯ್ಯಿದ್ ಸುಲ್ತಾನ್ ಇಬ್ರಾಹಿಂ ಬಾದುಷ( ರ.)
*2.* ಸಯ್ಯಿದತ್ತ್ ಫಾತಿಮ (ರ.)
*3.* ಸಯ್ಯಿದ್ ಅಬೂ ತ್ವಾಹಿರ್ (ರ. )
*4.*ಝೈನಬ (ರ)
*5.* ಸಯ್ಯಿದತ್ತ್ ಮರಿಯಂ ಬೀವಿ (ರ.)
*6.* ಫ್ಯಾತಿಮತ್ತ್ ಝುಹ್'ರ (ರ. )
*7.* ದುಲ್'ಖರ್'ನೈನಿ ಸಿಕಂದರ್ (ರ.)
*8.* ಜೈಲಾನಿ ಉಮ್ಮಾ (ರ.)
*9.*ಮೆಹಮೂದ್ ಉಮ್ಮಾ(ರ.)
*10.* ಅಬ್ದುಲ್ ರಝಾಖ್( ರ.)
 *11.* Dr. ಜಾಫರ್ ಮುಹಮ್ಮದ್( ರ.)
*12.* ಸಯ್ಯಿದ್ ಶಂಸುದ್ದೀನ್ (ರ.)
*13.* ಸಯ್ಯಿದ್ ಖಮರುದ್ದೀನ್( ರ.)
*14.* ಸಯ್ಯಿದ್ ನೂರುದ್ದೀನ್ (ರ.)
*15.* ಸಯ್ಯಿದ್ ಝೈನುಲ್ ಆಬಿದೀನ್ (ರ.)
*16.* ಸಯ್ಯಿದತ್ತ್ ರಾಫಿಅತ್ತ್ ಬೀವಿ (ರ. )

ಇದೇ ರೀತಿ *ಕಾಟ್ಟಿಲ್ ಪಳ್ಳಿ* ಎಂಬ ಸ್ಥಳದಲ್ಲಿ 17 ಶುಹದಾಗಳ ಮಕ್ಬರಗಳಿವೆ.

*ಸಾರ ಉಮ್ಮಾಳ್*  ಎಂಬಲ್ಲಿ ಎಂಟು ಮಂದಿ ಹುತಾತ್ಮರ ಮಕ್ಬರಗಳಿವೆ.

ಏರುವಾಡಿಯಿಂದ 15 ಕಿಮೀ ದೂರದ *ವಾಲಿನೊಕಂ* ಎಂಬ ಜಾಗದಲ್ಲಿ ಮೂರು ಶುಹದಾಗಳ ಮಕ್ಬರಗಳು ಇದೆ.

ಏರುವಾಡಿ ಪರಿಸರದಲ್ಲಿ ಕಾಣ ಸಿಗುವ ಪಳೆಯುಳಿಕೆಗಳು ಅಂದು ನಡೆದ ಯುದ್ಧಗಳ  ಗಾಂಭೀರ್ಯತೆಯನ್ನು ಹಾಗೂ ಸಮಯ ದೀರ್ಘಾವಧಿಯನ್ನೂ ಸಾರಿ ಹೇಳುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳನ್ನು ನೋಡುವಾಗ ಇಲ್ಲಿ ಸಾವಿರಾರು ಶುಹದಾಗಳ ಖಬರ್ ಇರುವಂತೆ  ಭಾಸವಾಗುತ್ತದೆ..

ರಾಜರು ದಾನವಾಗಿ ಕೊಟ್ಟ 6666 ಎಕ್ಕರೆ ಸ್ಥಳ ಎಂದು ಹೇಳಲ್ಪಡುವ ಪ್ರಸ್ತುತ ಸ್ಥಳದಲ್ಲಿ *ಶಹೀದ್'*ಗಳಾದ ಔಲಿಯಾಗಳ ಮತ್ತು ಸತ್ಯ ವಿಶ್ವಾಸಿಗಳ ಮಕ್ಬರಗಳಿದೆ. (ಇಂದು ಈ ಸ್ಥಳಗಳಿಂದ ಹಲವಾರು ಎಕ್ಕರೆಯನ್ನು ಜನರು ವಶಪಡಿಸಿರುತ್ತಾರೆ.)

*ಕೊನೆಯದಾಗಿ ಒಂದು ಮಾತು*
 👉 ಔಲಿಯಾಗಳನ್ನು, ಶುಹದಾಗಳನ್ನು ಉದ್ದೇಶ ಪೂರ್ವಕವಾಗಿ ನಿಂದನೆ ಮಾಡುವವರು ಇದ್ದಾರೆ. ಮಕ್ಬರದಲ್ಲಿ ಅನಾಚಾರದ ಹೆಸರಲ್ಲಿ, ಹಣ ಲೂಟಿ ಮಾಡುವ ಹೆಸರಲ್ಲಿ  ಔಲಿಯಾಗಳನ್ನು ನಿಂದಿಸಕೂಡದು. ಅದ್ಯಾವುದಕ್ಕೂ ಕಾರಣ ಅಲ್ಲಿ ದಫನವಾಗಿರುವ  ಮಹಾತ್ಮರುಗಳು ಅಲ್ಲ.
ಈ ಹೆಸರಲ್ಲಿ ಮಹಾತ್ಮರನ್ಮು ನಿಂಧಿಸುವುದು ಮತ್ತು ಅಪಹಾಸ್ಯ ಮಾಡುವುದು ಈಮಾನ್ ಇರುವ  ಮನುಷ್ಯನಿಗೆ ಸೂಕ್ತವಲ್ಲ.

 *ಅಲ್ಲಾಹನು ನಮ್ಮನ್ನು  ನೂತನವಾದಿಗಳ ಶರ್ರಿನಿಂದ  ಕಾಪಾಡಲಿ ಆಮೀನ್.*

ದುಲ್'ಖಅದ್ 10ರಂದು ಪಾಂಡ್ಯದೇಶದಲ್ಲಿ (ಏರುವಾಡಿ) ಬಾದುಷ (ರ) ರವರು ಧ್ವಜ ಹಾರಿಸಿದ್ದರು.
ಈಗಲೂ ಇದೇ ದಿವಸ ಉರೂಸಿನ ಧ್ವಜ ಹಾರಿಸಲಾಗುತ್ತದೆ. ಮಹಾತ್ಮರ ವಫಾತ್  ದಿನವಾದ ದುಲ್'ಖಅದ್ 23ಕ್ಕೆ ಬೆಳಿಗ್ಗೆ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ.

🔰ಮುಗಿಯಿತು.

✍ ಗಫೂರ್ ಬಾಯಾರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...