Skip to main content

ಸುಲ್ತಾನುಲ್ ಉಲಮಾ

*ಮಾಷಾಅಲ್ಲಾಹ್...*
*#ಹನ್ನೆರಡನೆ_ವಯಸ್ಸಿನಲ್ಲಿ_ಯತೀಂ_ಆದ_ಬಾಲಕ_ಇಂದು_ವಿಶ್ವವಿಖ್ಯಾತ_ವಿಧ್ವಾಂಸರು*

ತಾನಿನ್ನು ಬಹುಕಾಲ ಬದುಕಲಾರೆನೆಂದು ಮನವರಿಕೆಯಾದ ಅಹ್ಮದ್ ಹಾಜಿಯವರು ತನ್ನ ಧರ್ಮಪತ್ನಿಯ ಬಳಿ ಪ್ರಿಯೇ...

ನನ್ನ ಕಾಲಾನಂತರ ನಮ್ಮ ಮಕ್ಕಳನ್ನು ಹೇಗೆ ಬೆಳೆಸುವೆ? ತುಸು ಆತಂಕದಿಂದಲೇ ಕೇಳಿದರು.
     
ಪತಿಯ ಸೇವೆಯೇ ತನ್ನ ಸೌಭಾಗ್ಯವೆಂದು ಬಗೆದು ತನ್ನ ಪ್ರಿಯ ಪತಿಯನ್ನು ತನ್ನ ನಾಡಿಮಿಡಿತದ ಒಡನಾಡಿಯಂತೆ ಅನುಸರಿಸುತ್ತಿದ್ದ ಆ ಮಹದಿ ಹೇಳಿದರು

 ಪ್ರಿಯರೇ..
ತಾವು ಚಿಂತಿಸದಿರಿ ದಯಾಳುವಾದ ಅಲ್ಲಾಹನ ದಯಾನುಗ್ರಹವೊಂದಿದ್ದರೆ ನಮ್ಮ ಮಕ್ಕಳಿಗೆ ದೀನ್ ಮತ್ತು ದುನ್ಯಾವೆರಡರ ವಿದ್ಯಾಭ್ಯಾಸವನ್ನೂ ಕೊಟ್ಟು ಅಲ್ಲಾಹನನ್ನು ಭಯಪಟ್ಟು ಜೀವಿಸುವುದರೊಂದಿಗೆ ಅವನ ರಸೂಲ್ ﷺ ರನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಮಕ್ಕಳನ್ನಾಗಿಸಿ ಬೆಳೆಸುತ್ತೇನೆ ಇನ್ಷಾಅಲ್ಲಾಹ್ ಎಂದರು.

      ತಮ್ಮ ಮುದ್ದಿನ ಮನದನ್ನೆಯ ಮಾತಿನಿಂದ ಸಂತೃಪ್ತರಾದ ಅಹ್ಮದ್ ಹಾಜಿಯವರು "ಯಾ ಅಲ್ಲಾಹ್... ನನಗೆ ನೀನು ಧಾರೆಯೆರೆದ ಅತಿದೊಡ್ಡ ನಿಅಮತಾದ ನನ್ನ ಮಕ್ಕಳನ್ನು ಹೆತ್ತವರ ಕಣ್ಮಣಿಗಳಾಗಿ ಗುರು ಹಿರಿಯರಿಗೆ ವಿಧೇಯರಾಗಿ, ನಾಡಿಗೆ ಉತ್ತಮ ಪ್ರಜೆಯಾಗಿಸಿ ಮಾತಾಪಿತರಿಗೆ ಇಹಪರಗಳಲ್ಲಿ ಉಪಕರಿಸುವ ಮಕ್ಕಳನ್ನಾಗಿಸು ನಾಥಾ" ಎಂದು ಕಂಬನಿಗರೆದು ಪ್ರಾರ್ಥಿಸುತ್ತಾ ತನ್ನ ಮಕ್ಕಳನ್ನು ಬರಸೆಳೆದು ಅಪ್ಪಿ ಮುದ್ದಿಸಿದರಲ್ಲದೆ ಕೆಲ ಸಮಯದಲ್ಲೇ "ಲಾಹಿಲಾಹ ಇಲ್ಲಲ್ಲಾಹ್" ಎಂಬ ಶಹಾದತ್ ಕಲಿಮ ಉಚ್ಚರಿಸುತ್ತಾ ಇನ್ನೆಂದೂ ಹಿಂದಿರುಗಿಬಾರದ ಲೇೂಕಕ್ಕೆ ಪ್ರಯಾಣ ಬೆಳೆಸಿದರು ಇನ್ನಲಿಲ್ಲಾಹ್...

     ಹಾಗೆ ತನ್ನ ತಂದೆಯ ಅಗಲುವಿಕೆಯ ಕ್ಷಣವನ್ನು ಕಣ್ಣಾರೆ ಕಂಡು ಬೆಳೆದ ಅಬೂಬಕರ್ ಎಂಬ ಆ ಬಾಲಕನಿಗೆ ಆಗಲೆ ಜೀವನ ಮತ್ತು ಮರಣವೆಂದರೇನೆಂಬುದರ ಅರಿವಾಗಿತ್ತು.

       ನಂತರ ಸದ್ಗುಣ ಸಂಪನ್ನೆಯಾದ ತಾಯಿ ಕುಂಙಿಮ್ಮ ಹಜ್ಜುಮ್ಮರ ಆಶ್ರಯದಲ್ಲಿ ಬೆಳೆಯುತ್ತಾ ಕೇರಳದ ಕಾಂತಪುರಂ ಎಂಬ ಗ್ರಾಮದಲ್ಲಿ ಮತಅಲ್ಲಿಮಾಗಿ ದೀನೀ ಶಿಕ್ಷಣ ಕಲಿಯ ತೊಡಗಿದ ಆ ಬಾಲಕ ಮುಂದೆ  ಮುದರ್ರಿಸ್ ಆದರು. ತಾಯಿ ತಂದೆಯರ ಆಶೀರ್ವಾದ ಮತ್ತು ಪ್ರಾರ್ಥನೆಯ ಫಲದಿಂದಲೂ ಮತ್ತು ಅಲ್ಲಾಹನು ನೀಡಿದ ಪ್ರತಿಭೆಯಿಂದಲೂ, ಮುಂದೆ ಉತ್ತಮ ಸಂಘಟಕರಾಗಿಯೂ, ಪ್ರಸ್ಥಾನದ ನಾಯಕರಾಗಿಯೂ, ಬೆಳೆದು ಮುಂದೆ ಸುನ್ನತ್ ಜಮಾಅತಿನ ಅಗ್ರಗಣ್ಯ ನಾಯಕರಾದರಲ್ಲದೆ  ಭಾರತೀಯ ಮುಸ್ಲಿಮರ ಹೆಮ್ಮೆಯ ಪ್ರತೀಕವಾದರು. ಮಾತ್ರವಲ್ಲ ಅಲ್ಲಾಹನು ತನ್ನ ಔದಾರ್ಯದಿಂದ ಧಾರೆಯೆರೆದ ದೀನೀ ಇಲ್ಮನ್ನು ಸಮರ್ಪಕವಾಗಿ ಸದುಪಯೇೂಗಪಡಿಸಿಕೊಂಡು ವಿಶ್ವವಿಖ್ಯಾತ ವಿಧ್ವಾಂಸರಲ್ಲಿ ಒಬ್ಬರಾಗಿ ಮಾರ್ಪಟ್ಟರು.

       ಕುರ್ಆನ್ ಮತ್ತು ಹದೀಸನ್ನು  ದುರ್ವ್ಯಾಖ್ಯಾನಿಸುತ್ತಾ ಮಿಥ್ಯಾರೇೂಪಗಳ ಮೂಲಕ ಸುನ್ನತ್ ಜಮಾಅತಿನ ಮೇಲೆ ದಾಳಿ ನಡೆಸಲೆತ್ನಿಸುವ ವಹ್ಹಾಬಿಗಳ ಮುಂದೆ ಸುನ್ನತ್ ಜಮಾಅತಿನ ಆಶಯಾದರ್ಶಗಳ ಮೂಲಕ ಸೂಕ್ತ ತಿರುಗೇಟು ನೀಡುವುದರೊಂದಿಗೆ ನಾನು ಸುನ್ನಿ ಎಂದು ಅಭಿಮಾನ ಮತ್ತು ಹೆಮ್ಮೆಯಿಂದ ಎದೆ ತಟ್ಟಿ ಹೇಳಲು ನಮಗೆ ಸಾಧ್ಯವಾಗುತ್ತಿದೆ ಎನ್ನುವುದಾದರೆ ಅದಕ್ಕೆ *ಶೈಖುನಾ ಎ. ಪಿ. ಅಬೂಬಕರ್ ಉಸ್ತಾದರ* ಅವಿಶ್ರಾಂತ ಶ್ರಮ ಮತ್ತು ದಿಟ್ಟ ನೇತೃತ್ವವೇ ಕಾರಣ.

       ಉಸ್ತಾದರ ಈ ಏಳಿಗೆಯನ್ನು ಸಹಿಸದ ಎದುರಾಳಿಗಳಿಂದ ಸದಾ ಮಿಥ್ಯಾರೇೂಪಕ್ಕಳಗಾಗುತ್ತಿದ್ದರೂ ಅಂಜದೆ ಅಳುಕದೆ ಸುನ್ನತ್ ಜಮಾಅತಿನ ಏಳಿಗೆಗಾಗಿ ಮರ್ಕಝ್ ಎಂಬ ಹೆಸರಾಂತ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಖಾಫಿಗಳೆಂಬ ದೀನೀ ವಿಧ್ವಾಂಸರನ್ನು ರೂಪಿಸಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ನಾಡಿನಾದ್ಯಂತ ಪಸರಿಸಿದ ಸುನ್ನತ್ ಜಮಾಅತಿನ ನೇತಾರರೂ ನಮ್ಮೆಲ್ಲರ ಪ್ರೀತಿ ಪಾತ್ರರೂ ಆದ ಎ. ಪಿ. ಉಸ್ತಾದರಿಗೆ ಸರ್ವಶಕ್ತನಾದ ಅಲ್ಲಾಹನು ಆಫಿಯತ್'ನಿಂದೊಡಗೂಡಿದ ದೀರ್ಘಾಯಸ್ಸು ಕರುಣಿಸಿ ಅನುಗ್ರಹಿಸುವುದರೊಂದಿಗೆ ಇನ್ನೂ ನೂರ್ಕಾಲ ಸುನ್ನತ್ ಜಮಾಅತಿನ ಏಳಿಗೆಗಾಗಿ ದುಡಿಯುವ ಸೌಭಾಗ್ಯವೊದಗಿಸಿ ಅನುಗ್ರಹಿಸಲಿ ಆಮೀನ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...