Skip to main content

ತರಾವೀಹ್ ಎಂಬ ಪ್ರತ್ಯೇಕ ನಮಾಝ್ ಇಲ್ಲವಂತೆ

ಸಲಪಿಯ ಹೊಸ ಫತ್ವಾ
➖➖➖➖➖➖➖➖➖➖

ತರಾವೀಹ್ ಎಂಬ ಪ್ರತ್ಯೇಕ ನಮಾಝ್ ಇಲ್ಲವಂತೆ

🌷🌷🌷🌷🌷🌷🌷🌷🌷🌷

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🌷🌷🌷🌷🌷🌷🌷🌷🌷🌷

ಇತ್ತೀಚಿಗಿನ ತನಕ ಸಲಪಿ ಗಳಿಗೆ ಎಂಟು ರಕಾಅತ್ ತರಾವೀಹ್ ಎಂದು ಸಾಧಾರಣ ನಾವೆಲ್ಲಾ ಭಾವಿಸಿದ್ದೆವು. ಆದರೆ, ಸಲಪಿಯ ವಾದವೇ ಬೇರೆ. ತರಾವೀಹ್ ಎಂಬ ಪ್ರತ್ಯೇಕ ನಮಾಝ್ ಇಲ್ಲವೇ ಇಲ್ಲ!

ಸಲಪಿ ಬರೆದಿರುವುದನ್ನು ಒಮ್ಮೆ ಓದಿ ನೋಡಿ.👇👇👇👇
*ರಾತ್ರಿಯಲ್ಲಿ ನಿರ್ವಹಿಸುವ ನಮಾಝ್ ಆದ ಕಾರಣ ಇದನ್ನು ಖಿಯಾಮುಲೈಲ್ ಎಂದೂ ಸಲಾಮತು ಲೈಲ್ ಎಂದೂ ಸಾಧಾರಣ ವಾಗಿ ಕರೆಯಲಾಗುತ್ತದೆ. ರಾತ್ರಿ ಯಲ್ಲಿ ಮಲಗಿ ಎದ್ದು ನಮಾಝ್ ನಿರ್ವಹಿಸಿದರೆ ಈ ನಮಾಝನ್ನು ತಹಜ್ಜುದ್ ಎಂದೂ , ರಮ್ಝಾನ್ ತಿಂಗಳಾಗುವಾಗ ಇದನ್ನು ಖಿಯಾಮ್ ರಮ್ಝಾನ್ ಎಂದೂ ಸಂದರ್ಭೋಚಿತವಾಗಿ ಈ ನಮಾಝನ್ನು ಬೇರೆ ಬೇರೆಯಾಗಿ ಕರೆಯಲಾಗುತ್ತದೆ. ಎರಡು ರಕಾ ಅತ್ ಗಳ ನಮಾಝಿನ ನಂತರ ಸ್ಪಲ್ಪ ವಿಶ್ರಮಿಸಿ ನಮಾಝ್ ನಿರ್ವಹಿಸಿದ್ದಕ್ಕೆ  "ತರಾವೀಹ್ " ನಮಾಝ್ ಎಂದೂ ಈ ನಮಾಝನ್ನು ಕರೆಯುತ್ತಾರೆ.* (ಸಲಪಿ ಮುಖವಾಣಿ ಪವಿತ್ರ ಸಂದೇಶ)

ಸಲಪಿಯ ಹೊಸ ವಾದ ಪ್ರಕಾರ ವಿತ್ರ್  , ತಹಜ್ಜುದ್ ಮತ್ತು ತರಾವೀಹ್ ಒಂದೇ ಆಗಿದೆ. ಸಂದರ್ಭಕ್ಕನುಸಾರ ಅದರ ಹೆಸರು ಬದಲಾಗುತ್ತದೆ ಎಂದಾಗಿದೆ.

ಇತರ ದಿನಗಳಲ್ಲಿ ಮಾಡುವ ನಮಾಝ್ ನಿದ್ದೆಗಿಂತ ಮೊದಲು ನಿರ್ವಹಿಸಿದರೆ ಅದು ವಿತ್ರ್  ,ನಿದ್ದೆ ಮಾಡಿ ನಿರ್ವಹಿಸಿದರೆ ಅದು ತಹಜ್ಜುದ್,ರಮಳಾನ್ ನಲ್ಲಾದರೆ ಅದು ತರಾವೀಹ್ ಎಂದು *ಚಕ್ಕರಕಂಞಿ* ವಾದವನ್ನು ಸಲಪಿ ಮಂಡಿಸಲು ಕಾರಣ ವಿದೆ.

ಸಲಪಿ ತರಾವೀಹ್ ಎಂಟೆಂದು ವಾದಿಸಿ ,ಅದಕ್ಕೆ ಪುರಾವೆ ನೀಡಿದ್ದು ಆಯಿಶಾ ಬೀವಿ ರಳಿಯಲ್ಲಾಹು ಅನ್ಹರವರು ವರದಿ ಮಾಡಿದ ಹನ್ನೊಂದು ರಕಾ ಅತ್ ನಮಾಝ್ ನ ಹದೀಸನ್ನಾಗಿದೆ. ಈ ಹದೀಸ್ ನಲ್ಲಿ ರಮಳಾನ್ ಮತ್ತು ರಮಳಾನ್ ಅಲ್ಲದ ಸಮಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹನ್ನೊಂದು ರಕಾ ಅತ್ ಮಾತ್ರ ನಿರ್ವಹಿಸಿದ್ದಾರೆ ಎಂದಿದೆ. ಈ ಹದೀಸ್ ತರಾವೀಹ್ ಎಂಟು ಎಂಬುದಕ್ಕೆ ಪುರಾವೆ ಎಂದು ತೋರಿಸಲು ಹೋಗಿ ಪಚೀತಿ ಗೊಳಗಾದ ಸಲಪಿಗಳು ರಮಳಾನ್ ಅಲ್ಲದ ಸಮಯದಲ್ಲಿಯೂ ತರಾವೀಹ್ ಇದೆ ಎಂದು ಒಪ್ಪಿಕೊಳ್ಳಬೇಕಾದ ಗತಿಗೇಡಿಗೆ ಬಲಿಯಾದರು. ಆಗ ಸಲಪಿಯ ಮಂಡೆಗೆ ಹೋದ ಕುತಂತ್ರದ ಫಲವೇ ಈ *ಚಕ್ಕರಕಂಞಿ* ಐಡಿಯಾ.

ಆಇಶಾ ರಳಿಯಲ್ಲಾಹು ಅನ್ಹ ರವರ ಹದೀಸ್ ಹಿಡಿದು ನೇತಾಡಿ ಬಚಾವಾಗಲು ಸಲಪಿ ಕಂಡು ಹಿಡಿದ ತಂತ್ರವಾಗಿದೆ ವಿತ್ರ್ , ತಹಜ್ಜುದ್, ತರಾವೀಹ್ ಎಲ್ಲವೂ ಒಂದೇ. ಸಂದರ್ಭಕ್ಕನುಸಾರ ಹೆಸರು ಬದಲಾಗುತ್ತವೆ ಅಷ್ಟೇ.

ನೋಡಿ! ಸಲಪಿ ತಹಜ್ಜುದ್ ಮತ್ತು ತರಾವೀಹ್ ಎರಡು ನಮಾಝ್ ಅನ್ನು ಕದಿಯುವ ಮೂಲಕ ಮುಸ್ಲಿಂ ಸಮಾಜವನ್ನು ವಂಚನೆ ಮಾಡಲು ಹೊರಟಿದ್ದಾನೆ. ಇಂತಹ ಇಬಾದತ್ ಕಳ್ಳರ ವಂಚನೆಯಿಂದ ಮುಸ್ಲಿಂ ಸಮಾಜವು ದೂರ ಸರಿಯಬೇಕಾಗಿದೆ.

ತರಾವೀಹ್ ಇಪ್ಪತ್ತು ರಕಾಅತ್ ಅದು ಇಜ್ಮಾಅ್ ನಿಂದ ಸಾಬೀತು ಗೊಂಡದ್ದಾಗಿದೆ.‌

ಸಲಪಿಯ ಕೊಳೆತ ಆಶಯ ಮುಸ್ಲಿಂ ಸಮಾಜ ಬಲಿಯಾಗದೆ ಈಮಾನ್ ಕಾಪಾಡಿಕೊಳ್ಳಬೇಕಾಗಿದೆ.

🌹🌷🌹🌷🌹🌹🌷🌹🌷🌹🌷

🌳🌳🌳🌳🌳🌳🌳🌳🌳🌳🌳

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...