Skip to main content

ನೂತನವಾದಿಗೆ ಮಂಡೆ ಬಿಸಿಯಾದ ಲೈಲತುಲ್ ಖದ್ರ್ ನ ದ್ಸಿಕ್ರ್ ಮಜ್ಲಿಸ್

ನೂತನವಾದಿಗೆ ಮಂಡೆ ಬಿಸಿಯಾದ ಲೈಲತುಲ್ ಖದ್ರ್ ನ ದ್ಸಿಕ್ರ್ ಮಜ್ಲಿಸ್

ನಿಸಾರ್ ಸಖಾಫಿ ಉಳ್ಳಾಲ
▪▪▪▪
ಸಾಮೂಹಿಕ ವಾಗಿ ದ್ಸಿಕ್ರ್ ಹೇಳುವುದನ್ನು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರೋತ್ಸಾಹಿಸಿದ್ದಾರೆ.

*ಇಮಾಮ್ ತಿರ್ಮುದ್ಸಿ ರಳಿಯಲ್ಲಾಹು ಅನ್ಹು ರವರು ಉಲ್ಲೇಖ ಹೀಗಿದೆ*

"‏ إِذَا مَرَرْتُمْ بِرِيَاضِ الْجَنَّةِ فَارْتَعُوا ‏"‏ ‏.‏ قَالَوا: وَمَا رِيَاضُ الْجَنَّةِ قَالَ ‏"‏ حِلَقُ الذِّكْرِ ‏"‏ ‏.‏

ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: *"ನೀವು ಸ್ವರ್ಗ ಹುದೋಟದ ಸಮೀಪದಿಂದ ಹಾದು ಹೋಗುವ ವೇಳೆ ಅದು ಉಪಯೋಗಿಸಿ." ಅವರು ಕೇಳಿದರು: "ಏನಾಗಿದೆ ಸ್ವರ್ಗದ ಹೂದೋಟ?" ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರಿಸಿದರು: "ದ್ಸಿಕ್ರ್ ಹಲ್ಖಗಳಾಗಿದೆ".* (ತಿರ್ಮುದ್ಸಿ :3432)

*ಇಮಾಮ್ ಮುಸ್ಲಿಮ್ ಉಲ್ಲೇಖ ಮಾಡಿದ ಹದೀಸ್ ಹೀಗಿದೆ*

لَا يَقْعُدُ قَوْمٌ يَذْكُرُونَ اللَّهَ عَزَّ وَجَلَّ إِلَّا حَفَّتْهُمُ الْمَلَائِكَةُ وَغَشِيَتْهُمُ الرَّحْمَةُ وَنَزَلَتْ عَلَيْهِمُ السَّكِينَةُ وَذَكَرَهُمُ اللَّهُ فِيمَنْ عِنْدَهُ

*"ಅಲ್ಲಾಹನಿಗೆ ದ್ಸಿಕ್ರ್ ಹೇಳುವ ಯಾವುದೇ ಜನ ವಿಭಾಗವನ್ನೂ ಮಲಕುಗಳು ಸುತ್ತು ವರಿಯದೆ ಇರಲಾರರು. ಅನುಗ್ರಹ ಅವರನ್ನು ಹೊಂದಿಸುತ್ತದೆ.ಅದು ಶಾಂತಿಯೂ ಸಮಾಧಾನ ವೂ ಅವರಲ್ಲಿ ಉಂಟಾಗಿಸುವುದು (ನೀಡಲಾಗುವುದು) ಅಲ್ಲಾಹು ಅವನ ಇಷ್ಟದಾಸರ ಮುಂದೆ ಅವರನ್ನು ಸ್ಮರಿಸುವನು."* (ಮುಸ್ಲಿಮ್)

*ಇಮಾಮ್ ಅಬೂ ದಾವೂದ್ ರಳಿಯಲ್ಲಾಹು ಅನ್ಹು  ಉಲ್ಲೇಖ ಮಾಡುವುದು ಹೀಗಿದೆ:*

 عَنْ أَنَسِ بْنِ مَالِكٍ ، قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " لَأَنْ أَقْعُدَ مَعَ قَوْمٍ يَذْكُرُونَ اللَّهَ تَعَالَى مِنْ صَلَاةِ الْغَدَاةِ حَتَّى تَطْلُعَ الشَّمْسُ أَحَبُّ إِلَيَّ مِنْ أَنْ أَعْتِقَ أَرْبَعَةً مِنْ وَلَدِ إِسْمَاعِيل ، وَلَأَنْ أَقْعُدَ مَعَ قَوْمٍ يَذْكُرُونَ اللَّهَ مِنْ صَلَاةِ الْعَصْرِ إِلَى أَنْ تَغْرُبَ الشَّمْسُ أَحَبُّ إِلَيَّ مَنْ أَنْ أَعْتِقَ أَرْبَعَةً " .

ಅನಸ್ ರಳಿಯಲ್ಲಾಹು ಅನ್ಹು ರವರಿಂದ ನಿವೇದನೆ: *"ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: "ಪ್ರಭಾತ ನಮಾಜ್ ನಿಂದ ಸುರ್ಯೋದಯದ ವರೆಗೆ ಅಲ್ಲಾಹನಿಗೆ ದ್ಸಿಕ್ರ್ ಹೇಳುವವರೊಂದಿಗೆ ಕುಳಿತು ಕೊಳ್ಳುವುದು ಇಸ್ಮಾಯಿಲ್ ನೆಬಿ ಅಲೈಹಿ ಸಲಾಮ್ ರ ಸಂತಾನದಿಂದ ನಾಲ್ಕು ಜನರನ್ನು ವಿಮೋಚನೆ ಮಾಡುವುದಕ್ಕಿಂತಲೂ ನನಗೆ ಇಷ್ಟವಾಗಿದೆ. ಅಸ್ವರ್ ನಮಾಝ್ ನಿಂದ ಸೂರ್ಯನು ಅಸ್ತಮಿಸುವವರೆಗೆ ಅಲ್ಲಾಹನಿಗೆ ದ್ಸಿಕ್ರ್ ಹೇಳುವವರೊಂದಿಗೆ ಕುಳಿತು ಕೊಳ್ಳುವುದು ನಾಲ್ಕು ಜನರನ್ನು ವಿಮೋಚನೆ ಮಾಡುವುದಕ್ಕಿಂತಲೂ ನನಗೆ ಇಷ್ಟವಾಗಿದೆ."* (ಅಬೂ ದಾವೂದ್)
▪▪▪▪
*ದ್ಸಿಕ್ರ್ ಮಜ್ಲಿಸ್ ನಲ್ಲಿ ಪಾಲ್ಗೊಂಡವರಿಗೆ ದೊರಕುವ ಪ್ರತಿಫಲ ಹೀಗಿದೆ:*

*ಇಮಾಮ್ ತಿರ್ಮುದ್ಸಿ ರಳಿಯಲ್ಲಾಹು ಅನ್ಹು ರವರು ಉಲ್ಲೇಖ ಮಾಡುವುದು ಹೀಗೆ:*

عَنْ أَبِي سَعِيدٍ الْخُدْرِيِّ ، قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " إِنَّ لِلَّهِ مَلَائِكَةً سَيَّاحِينَ فِي الْأَرْضِ فُضُلًا عَنْ كُتَّابِ النَّاسِ ، فَإِذَا وَجَدُوا أَقْوَامًا يَذْكُرُونَ اللَّهَ تَنَادَوْا : هَلُمُّوا إِلَى بُغْيَتِكُمْ ، فَيَجِيئُونَ فَيَحُفُّونَ بِهِمْ إِلَى السَّمَاءِ الدُّنْيَا ، 

ಅಬೂ ಸ ಈದುಲ್ ಖುದ್ರಿ ರಳಿಯಲ್ಲಾಹು ಅನ್ಹು ರವರಿಂದ ನಿವೇದನೆ: *ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: ಜನರ ಒಳ್ಳೆಯ ಮತ್ತು ಕೆಟ್ಟ ಬರೆಯುವವರಲ್ಲದ, ಟೂರಿಸ್ಟ್ ಗಳಾದ ಕೆಲವು ಮಲಕುಗಳು ಅಲ್ಲಾಹನಿಗೆ ಇರುವರು. ಅಲ್ಲಾಹನಿಗೆ ದ್ಸಿಕ್ರ್ ಹೇಳುವ ಜನರು ಅವರ ಶ್ರದ್ಧೆ ಯಲ್ಲಿ ಪಟ್ಟರೆ ನಿಮ್ಮ ಲಕ್ಷ್ಯಕ್ಕೆ ಬನ್ನಿ ಎಂದು ಅವರು ಪರಸ್ಪರ ಕರೆದು ಹೇಳುವರು. ಹಾಗೇ ಬಂದು ಒಂದನೇ ಆಕಾಶದ ವರೆಗೆ ದ್ಸಿಕ್ರ್ ಹೇಳುವವರನ್ನು ಹೊಗಳುವರು.*

فَيَقُولُ اللَّهُ : عَلَى أَيِّ شَيْءٍ تَرَكْتُمْ عِبَادِي يَصْنَعُونَ ؟ فَيَقُولُونَ : تَرَكْنَاهُمْ يَحْمَدُونَكَ , وَيُمَجِّدُونَكَ , وَيَذْكُرُونَكَ ،

*ಅವರು ಮರಳಿ ಹೋಗುವಾಗ ಅಲ್ಲಾಹು ಅವರಲ್ಲಿ ಕೇಳುವನು. *" ನನ್ನ ದಾಸರು ಯಾವ ಅವಸ್ಥೆ ಯಲ್ಲಾಗಿದೆ ನೀವು ಕಂಡು ಬಂದದ್ದು? " ಅವಾಗ ಮಲಕುಗಳು ಹೇಳುವರು. ನಿನನ್ನು ಸ್ಮರಿಸುವವರಾಗಿಯೂ ನಿನನ್ನು ಸ್ಥುತಿಸುವವರಾಗಿಯೂ ಆಗಿದೆ.*

قَالَ : فَيَقُولُ : فَهَلْ رَأَوْنِي ؟ فَيَقُولُونَ : لَا ، قَالَ : فَيَقُولُ : فَكَيْفَ لَوْ رَأَوْنِي ؟ قَالَ : فَيَقُولُونَ : لَوْ رَأَوْكَ لَكَانُوا أَشَدَّ تَحْمِيدًا , وَأَشَدَّ تَمْجِيدًا , وَأَشَدَّ لَكَ ذِكْرًا 

" ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: *ಅವಾಗ ಅಲ್ಲಾಹು ಅವರೊಂದಿಗೆ ಕೇಳುವನು. "ಅವರು ನನನ್ನು ಕಂಡಿರುವರೇ?"  ಇಲ್ಲ. ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: ಅವಾಗ ಅಲ್ಲಾಹನು ಕೇಳುವನು. ಅವರು ನನನ್ನು ಕಂಡರೆ ಹೇಗೆ ಆಗಿರಬಹುದು ಅವರ ಅವಸ್ಥೆ.? ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: ಅವಾಗ ಮಲಕುಗಳು ಹೇಳುವರು: ಅವರು ನಿನ್ನನ್ನು ಕಂಡರೆ ಇದಕ್ಕಿಂತಲೂ ಜಾಸ್ತಿ ಸ್ಥುತ್ತಿಸುವರು ಗೌರವಿಸುವರು ಹಾಗೂ ಎತ್ತಿ ಹೇಳುವರು.*

قَالَ : فَيَقُولُ : وَأَيُّ شَيْءٍ يَطْلُبُونَ ؟ قَالَ : فَيَقُولُونَ : يَطْلُبُونَ الْجَنَّةَ ، قَالَ : فَيَقُولُ : وَهَلْ رَأَوْهَا ؟ قَالَ : فَيَقُولُونَ : لَا ، قَالَ : فَيَقُولُ : فَكَيْفَ لَوْ رَأَوْهَا ؟ قَالَ : فَيَقُولُونَ : لَوْ رَأَوْهَا كَانُوا لَهَا أَشَدَّ طَلَبًا ، وَأَشَدَّ عَلَيْهَا حِرْصًا ،

ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: *ಅವಾಗ ಅಲ್ಲಾಹನು ಕೇಳುವನು. ಅವರು ಏನನ್ನಾಗಿದೆ ಅವಶ್ಯಪಡುವುದು.? ಮಲಕುಗಳು ಹೇಳುವರು: ಸ್ವರ್ಗ. ಅವಾಗ ಅಲ್ಲಾಹನು ಕೇಳುವನು. ಅವರು ಸ್ವರ್ಗ ಕಂಡಿರುವರೇ.? ಮಲಕುಗಳು ಹೇಳುವರು: ಇಲ್ಲ. ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: ಅವಾಗ ಅಲ್ಲಾಹನು ಕೇಳುವನು. ಅವರು ಕಂಡಿರುತ್ತಿದ್ದರೆ ಏನಾಗಿರಬಹುದು ಅವರ ಅವಸ್ಥೆ.? ಮಲಕುಗಳು ಹೇಳುವರು: ಅವರು ಸ್ವರ್ಗ ಕಂಡಿರುತ್ತಿದ್ದರೆ ಇದಕ್ಕಿಂತಲೂ ಜಾಸ್ತಿ ಬೇಡುತ್ತಿದ್ದರು ಹಾಗೂ ಅದು ಲಭಿಸಲು ಅತಿಯಾದ ಅಗ್ರಹ ವ್ಯಕ್ತಪಡಿಸುವರು.*

قَالَ : فَيَقُولُ : فَمِنْ أَيِّ شَيْءٍ يَتَعَوَّذُونَ ؟ قَالُوا : يَتَعَوَّذُونَ مِنَ النَّارِ ، قَالَ : فَيَقُولُ : هَلْ رَأَوْهَا ؟ فَيَقُولُونَ : لَا ، فَيَقُولُ : فَكَيْفَ لَوْ رَأَوْهَا ؟ فَيَقُولُونَ : لَوْ رَأَوْهَا كَانُوا مِنْهَا أَشَدَّ هَرَبًا , وَأَشَدَّ مِنْهَا خَوْفًا , وَأَشَدَّ مِنْهَا تَعَوُّذًا

ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: *ಅವಾಗ ಅಲ್ಲಾಹನು ಕೇಳುವನು. ಯಾವುದನ್ನು ಅವರು ಕಾವಲು ಬೇಡುತ್ತಿರುವುದು.? ಮಲಕುಗಳು ಹೇಳುವರು: ನರಕದಿಂದ. ಅವಾಗ ಅಲ್ಲಾಹನು ಕೇಳುವನು: ಅವರು ನರಕ ಕಂಡಿರುವರೇ.? ಮಲಕುಗಳು ಹೇಳುವರು: ಇಲ್ಲ. ಅವಾಗ ಅಲ್ಲಾಹನು ಕೇಳುವನು ಅವರು ನರಕ ಕಂಡಿರುತ್ತಿದ್ದರೆ ಅವರ ಅವಸ್ಥೆ ಹೇಗಿರುತ್ತಿತ್ತು.? ಅವಾಗ ಮಲಕುಗಳು ಹೇಳುವರು: ಅವರು ನರಕ ಕಂಡಿರುತ್ತಿದ್ದರೆ ಇದಕ್ಕಿಂತಲೂ ಜಾಸ್ತಿ ನರಕವನ್ನು ಭಯ ಪಡುತ್ತಲೂ ಕಾವಲು ಬೇಡುತಲೂ  ಹಾಗೂ ಅದರಿಂದ ದೂರ ಸರಿಯುತಲೂ ಇದ್ದರು.*

قَالَ : فَيَقُولُ : فَإِنِّي أُشْهِدُكُمْ أَنِّي قَدْ غَفَرْتُ لَهُمْ 

ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ: *ಅವಾಗ ಅಲ್ಲಾಹನು ಕೇಳುವನು: ಖಂಡಿತವಾಗಿಯೂ ನಾನು ಅವರಿಗೆ ಕ್ಷಮಿಸಿರುವೆನು ಅದಕ್ಕೆ ನಿಮ್ಮನ್ನು ನಾನು ಸಾಕ್ಷಿಯಾಗಿ ನಿಲ್ಲಿಸುವೆನು.*

فَيَقُولُونَ : إِنَّ فِيهِمْ فُلَانًا الْخَطَّاءَ لَمْ يُرِدْهُمْ إِنَّمَا جَاءَهُمْ لِحَاجَةٍ ، فَيَقُولُ : هُمُ الْقَوْمُ لَا يَشْقَى لَهُمْ جَلِيسٌ

"ಅವಾಗ ಮಲಕುಗಳು ಹೇಳುವರು: *"ದ್ಸಿಕ್ರ್ ಹೇಳುವ ಉದ್ದೇಶವನ್ನು ಇಡದೇ ಬಂದ ಕೆಲವರಿದ್ದಾರೆ." ಅವಾಗ ಅಲ್ಲಾಹನು ಹೇಳುವನು: "ಅವರೊಂದಿಗೆ ಪಾಲ್ಗೊಂಡ ವರು ಪರಾಜಿತರಾಗುವುದಿಲ್ಲ."* (ತಿರ್ಮುದ್ಸಿ)

ಈ ಹದೀಸನ್ನು ವಿಶದಿಕರಿಸಿ
*ತುಹ್ಫಾ ತುಲ್ ಅಹ್ವದೀ"* ಬರೆಯುತ್ತಾರೆ:

" ಐನಿ ರಹ್ಮತುಲ್ಲಾಹಿ ಅಲೈಹಿ ರವರು *ಉಮ್ದತುಲ್ ಖಾರಿ* ಯಲ್ಲಿ ಹೇಳುತ್ತಾರೆ: *ಪ್ರಸ್ತುತ ಹದೀಸಿನ ಪರಿಧಿಯಲ್ಲಿ ಸ್ವಲಾತ್, ಖುರ್ ಆನ್ ಪಾರಯಣ, ಹದೀಸ್ ಪರಾಯಣ, ದಸ್೯ಗಳು, ವಾದ ಪ್ರತಿವಾದಗಳು, ಕ್ಲಾಸ್ ಗಳು ಇತ್ಯಾದಿ ಒಳ್ಳೆಯ ಕಾರ್ಯಗಳು ಒಳಗೊಳ್ಳುತ್ತದೆ."* (8/498)

ಇದೇ ಗ್ರಂಥ ದಲ್ಲಿ ಹೀಗೆ ಕಾಣಬಹುದು:

*ದ್ಸಿಕ್ರ್ ಮಜ್ಲಿಸ್ ನ ಕುರಿತೂ , ದ್ಸಿಕ್ರ್ ಹೇಳುವವರ ಕುರಿತೂ ಅದಕ್ಕೆ ಬೇಕಾಗಿ ಸಮ್ಮೇಳಿಸುವವರ ಶ್ರೇಷ್ಠ ತೆಯನ್ನು ಕಲಿಸುವುದಾಗಿದೆ ಈ ವಚನ. ದ್ಸಿಕ್ರ್ ಹೇಳುವವನ ಸಾಲಿನಲ್ಲಿ ಸೇರಿದವರು ದ್ಸಿಕ್ರ್ ಹೇಳುವುದಿಲ್ಲ ಎಂದಾದರೂ ಹೇಳುವವರನ್ನು ಗೌರವಿಸಿ ಅವರಿಗೆ ನೀಡುವ ಎಲ್ಲಾ ಪ್ರತಿಫಲ ಅವರಿಗೂ ಅಲ್ಲಾಹನು ನೀಡುವನು ಎಂಬುದಾಗಿ ಈ ಹದೀಸ್ ಕಲಿಸುತ್ತದೆ.* (8/897)

ಬುದ್ಧಿಯಿರುವವರಿಗೆ ಇಷ್ಟು ಸಾಕು ಎಂದು ಭಾವಿಸುತ್ತೇನೆ..
▪▪▪▪▪

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...