Skip to main content

ವ್ರತ ಹರಕೆಗೈದರೆ

ವ್ರತ ಹರಕೆಗೈದರೆ

🌴🌴🌴🌴🌴🌴🌴🌴🌴🌴

*_ನಿಷಿದ್ಧವಾದ ದಿನಗಳಲ್ಲಿ ಉಪವಾಸ ಹಿಡಿಯುವೆನೆಂದು ಹರಕೆಗೈದು ಅದನ್ನು ಖಳಾ ನಿರ್ವಹಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕು??_*

_ಕಡ್ಡಾಯವಾದ ಉಪವಾಸವನ್ನು ನಿಶ್ಚಿತ ಸಮಯದಲ್ಲಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಆ ಉಪವಾಸವು ಖಳಾ ಆಗುತ್ತದೆ..ಹಾಗು ಅದನ್ನು ಖಳಾ ನಿರ್ವಹಿಸುವುದು ಕಡ್ಡಾಯ... ರಮಳಾನಿನ ಉಪವಾಸ, ಹರಕೆಯ ಉಪವಾಸ, ಹಜ್ಜ್ ನಂತಹ ಕರ್ಮಗಳ ನಿಯಮಗಳನ್ನು ಉಲ್ಲಂಘಿಸಿದಾಗ ಅದಕ್ಕೆ ಕಫ್ಫಾರತಾಗಿ ನಿರ್ವಹಿಸುವ ಉಪವಾಸ ಕಡ್ಡಾಯ ಉಪವಾಸಗಳಾಗಿವೆ..._

_ಇವುಗಳಿಗೆ ನಿಶ್ಚಯಿಸಲ್ಪಟ್ಟ ಅವಧಿಯಲ್ಲಿ ನಿರ್ವಹಿಸಲು ಅಸಾಧ್ಯವಾದರೆ ಅದನ್ನು ಖಳಾ ನಿರ್ವಹಿಸಬೇಕು...ಸೋಮವಾರದ ವ್ರತ, ಗುರುವಾರದ ವ್ರತ ಮುಂತಾದ ಸುನ್ನತ್ ವ್ರತಗಳು ಖಳಾ ಆದರೆ ಅದನ್ನು ಖಳಾ ನಿರ್ವಹಿಸುವುದು ಕಡ್ಡಾಯವಲ್ಲ...ಆದರೂ ಸುನ್ನತ್ತಿದೆ..._

*_ವ್ರತ ಖಳಾ ಸಂದಾಯ ಮಾಡುವುದರ ಸಾರ್ವತ್ರಿಕ ನಿಯಮವಿದು...ಆದರೆ ವ್ರತ ಹಿಡಿಯಲು ನಿಷಿದ್ಧವಾದ ದಿನಗಳಿವೆ...ಎರಡು ಪೆರ್ನಾಲ್, ಅಯ್ಯಾಮುತ್ತಶ್ರೀಕ್ (ದುಲ್ ಹಜ್ ತಿಂಗಳ 11,12,13 ದಿನಗಳು) ಹೈಳ್, ನಿಫಾಸ್ ವೇಳೆ ಮುಂತಾದ ಸಮಯದಲ್ಲಿ ಉಪವಾಸ ನಿಷಿದ್ಧವಾಗಿದೆ...ವ್ರತ ಹಿಡಿದರೆ ಸಿಂದುವಾಗುವುದೂ ಇಲ್ಲ... ಆದ್ದರಿಂದ ಇಂತಹ ನಿಷಿದ್ಧ ದಿನಗಳಂದು ವ್ರತ ಹಿಡಿಯುವೆನೆಂದು ಹರಕೆಗೈದರೆ ಅದು ಸಿಂದುವಾಗಲಾರದು... ಕಾರಣ ಸುನ್ನತ್ ಅಥವಾ ಫರಳ್ ಕಿಫಾಯದಂತಹ ಸಂಗತಿಗಳಲ್ಲಿ ಮಾತ್ರ ಹರಕೆ ಸಿಂದುವಾಗುತ್ತದೆ_*

_ಆ ಹರಕೆಯೇ ಸಿಂಧುವಲ್ಲದ್ದರಿಂದ ಅದನ್ನು ಖಳಾ ನಿರ್ವಹಿಸಬೇಕೆಂದಿಲ್ಲ... ಆದರೆ ಈ ನಿಷಿದ್ಧ ದಿನಗಳಲ್ಲದ ಇತರ ದಿನಗಳಲ್ಲಿ ವ್ರತವನ್ನು ಹರಕೆ ಮಾಡಿ ನಿಶ್ಚಿತ ದಿನದಲ್ಲಿ ಸಂದಾಯ ಮಾಡಲು ಸಾಧ್ಯವಾಗದಿದ್ದರೆ ಬೇರೊಂದು ದಿನ ಅದನ್ನು ಖಳಾ ನಿರ್ವಹಿಸಬೇಕು..._

_ಮೇಲೆ ತಿಳಿಸಿದ ಕಾರಣಗಳಲ್ಲದ ಇತರ ಕಾರಣಗಳಿಂದ ವ್ರತ ನಷ್ಟವಾದರೆ.. (ಉದಾ:ಮುಂದಿನ ಸೋಮವಾರದಂದು ವ್ರತ ಹಿಡಿಯಲು ಒಬ್ಬ ಹರಕೆಗೈದ.. ಆ ದಿನ ಆತನಿಗೆ ರೋಗ ಬಂದ ಕಾರಣ ಹರಕೆಯ ವ್ರತವನ್ನು ಹಿಡಿಯಲು ಸಾಧ್ಯವಾಗಲಿಲ್ಲ) ಅದನ್ನು ಖಳಾ ನಿರ್ವಹಿಸಬೇಕೇ??_*ಎಂಬ ವಿಷಯದಲ್ಲಿ ವಿಧ್ವಾಂಸರೆಡೆಯಲ್ಲಿ ಅಭಿಪ್ರಾಯಗಳಿವೆ..._

*_ಇಮಾಂ ರಂಲೀ (ರ.ಅ) ಹೇಳುತ್ತಾರೆ... "ರೋಗ ಕಾರಣ ಹರಕೆಯ ಉಪವಾಸ ನಷ್ಟವಾದರೆ ಅದನ್ನು ಸಂದಾಯ ಮಾಡಬೇಕಿಲ್ಲ"... ಆದರೆ ಇಬ್ನು ಹಜರ್ (ರ.ಅ) ರವರ ಅಭಿಪ್ರಾಯ ಖಳಾ ಸಂದಾಯ ಮಾಡಬೇಕು ಎಂದಾಗಿದೆ..._*

_ಒಟ್ಟಿನಲ್ಲಿ ಉಪವಾಸ ಸಿಂಧುವಾಗದ ದಿನಗಳಲ್ಲಿ ವ್ರತವನ್ನು ಹಿಡಿಯುವುದಾಗಿ ಹರಕೆ ಮಾಡಿದರೆ ಆ ಹರಕೆಯು ಸಿಂಧುವಲ್ಲ... ಖಳಾ ಕಡ್ಡಾಯವೂ ಇಲ್ಲ..._

*_ಕೃಪೆ: ಮಾಸ ಪತ್ರಿಕೆ_*

*_🌹ಸಂ: ಶಮೀಮಾ ಕನ್ನಂಗಾರ್ 🌹_*

*_ಹೇಳಿರಿ ನಬಿ (ﷺ)ರವರ ಮೇಲೆ ಒಂದು ಸ್ವಲಾತ್.._*

*_📿📿 صَـلــُّوا عَـلَـى النَّبِيِّ ﷺ وَآلـِهِ_* *_اَللَّهُمَّ صَلِّ عَلَى سَيِّدِنَا مُحَمَّدٍ وَعَلَى آلِهِ وَصَحْبِهِ وَسَلِّمْ_*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...