ವಾಯಕ್ಕಾಡ್, ಮಲಪ್ಪುರಂ ಜಿಲ್ಲೆ.
➖➖➖➖➖➖➖
ಜಾಗತಿಕ ಜಗತ್ತಿನಲ್ಲಿ ವೈಜ್ಞಾನಿಕ ಪ್ರಭೆಯ ಧಾರ್ಮಿಕ ಪ್ರಭೋಧನೆಯ ಬೆಳಕನ್ನು ಚೆಲ್ಲಿದ *"ರಈಸುಲ್ ಮುಹಖ್ಖಿಖೀನ್"* ಎಂಬ ಅಪರ ನಾಮದಿಂದ ಅರಿಯಲ್ಪಡುವ *ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್ (ನ:ಮ)*.
ಪರಕೀಯರ ವಿರುದ್ಧ ಯುದ್ಧ ಮಾಡಿದ ಕುಂಞಾಲಿ ಮರಕಾರ್ (ರ). ರವರ ಪರಂಪರೆಯಲ್ಲಿ ಚೆರೂರ್ ಮರಕಾರ್ ಪರಂಬತ್ತ್ ಕಣ್ಣಿಯತ್ತ್ ಉಣ್ಣಿಮೊಯಿದೀನ್ ರವರ ಮಗ, ಅವರಾನ್ ಕುಟ್ಟಿ ಮೊಲ್ಲಯವರ ಹಾಗೂ ಮುಲಕಡವನ್ ಪಡಮುಖತ್ತ್ ಅಬ್ದುರಹ್ಮಾನ್ ಕುಟ್ಟಿಯವರ ಮಗಳಾದ ಖದೀಜುಞೀಯವರ ಮಗನಾಗಿ 1900ರ ಜನವರಿ 17ಕ್ಕೆ ಮಂಜೇರಿಯ ಹತ್ತಿರದ *ಫುಲ್'ಪಟ್ಟ ತೊಟ್ಟಕಾಡ್ಡ್* ಎಂಬಲ್ಲಿ ಮಹಾನವರು ಜನಿಸಿದರು.
11 ಅಂಗ ಕುಟುಂಬದ ಸದಸ್ಯರಲ್ಲಿ 4 ಗಂಡು ಮಕ್ಕಳಲ್ಲಿ ಒಬ್ಬರಾಗಿದ್ದರು ಮಹಾನವರು.
ಮಾಲಿಕ್ ಬಿನ್ ದೀನಾರ್ (ರ.) ರವರ ಸಹೋದರ ಪುತ್ರರಾಗಿದ್ದಾರೆ ಕಣ್ಣಿಯತ್ತ್ ಉಸ್ತಾದವರ (ರ.) ರವರ ಪೂರ್ವ ಪಿತ್ರರೆಂದು ಚರಿತ್ರೆ.
ಮಲಪ್ಪುರಂ ಜಿಲ್ಲೆಯ ವೆಂಗರ ಎಂಬ ಸ್ಥಳದಲ್ಲಾಗಿತು ಕುಟುಂಬ ವಾಸವಾಗಿದದ್ದು. ಮಹಾನವರು ಬಾಲ್ಯದಲ್ಲೆ ತಂದೆಯವರನ್ನು ಕಳಕೊಂಡ ಯತೀಮ್(ಅನಾಥ) ಮಗು ಆಗಿದ್ದರು.
"ರಈಸುಲ್ ಖಾರಿಈನ್" ಎಂಬ ಹೆಸರಿನಿಂದ ಅರಿಯಲ್ಪಟ್ಟ ದೊಡ್ಡ ಸಹೋದರರಾದ ಅಬ್ದುರಹ್ಮಾನ್ ಮುಸ್ಲಿಯಾರ್ (ರ). ರವರ ಪರಿಚರಣೆಯಲ್ಲಿ ಕುಟುಂಬ ಜೀವಿಸುತ್ತಿತ್ತು. 1921ರಲ್ಲಿ
ತಂದೆಯ ವಿಯೋಗದ ನಂತರ ಕುಟುಂಬ *ವಾಯಕಾಡಿಗೆ* ಹೋದರು.
ತನ್ನ 17'ನೇ ವಯಸ್ಸಿನಿಂದ ವಾಯಕಾಡ್ ದಾರುಲ್ ಉಲೂಮಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಮಹಾನವರು ಕಲಿತರು.
ಆರಂಭ ಕಾಲದಲ್ಲಿ ಬಹಳ ಕಷ್ಟದಲ್ಲಿದ್ದಂತಹ ಉಸ್ತಾದರು ಅರ್ಧ ಲುಂಗಿ ಮತ್ತು ಟೊಪ್ಪಿ ಮಾತ್ರ ಧರಿಸಿಯಾಗಿತ್ತು ಕಲಿಯಲು ಹೋಗಿರುವುದು.
ಮದ್ರಸ ಶಿಕ್ಷಣದಲ್ಲಿ ಚಾಲಿಲಕತ್ತ್ ಕುಂಞಹ್ಮದ್ ಹಾಜಿ (ನ:ಮ), ಖುತುಬಿ ಮುಹಮ್ಮದ್ ಮುಸ್ಲಿಯಾರ್ (ನ:ಮ), ಚೆರುಶ್ಶೇರಿ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಬೈತ್ತಲ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಯೂಸುಫುಲ್ ಫಳ್'ಫರಿ (ನ:ಮ), ಅಝೀಝುಲ್ ವೆಲುರಿ (ನ:ಮ), ಎಂಬವರಾಗಿದ್ದರು ಮಹಾನವರ ಗುರುವರ್ಯರು..
ತಲಪ್ಪೇರುಮಣ್ಣ, ಊರಕಂ, ಕಿಯ್'ಮುರಿ, ನೆಲ್ಲಿಪರಂಬ್, ಮೊರಯುರ್, ಎಂಬಿ ಸ್ಥಳಗಳ ದರ್ಸುಗಳಲ್ಲಿ ಅಧ್ಯಾಪಕರಾಗಿ ಇದ್ದರು.
1917ರಿಂದ 1933ರ ವರೆಗೆ ವಾಯಕಾಡ್ ದಾರುಲ್ ಉಲೂಮಿನಲ್ಲಿ ಸ್ವತಃ ಕಲಿತರು. 1950ರಿಂದ 1969ರ ವರೆಗೆ ಇಲ್ಲಿಯೇ ದರ್ಸ್ ನಡೆಸಿದರು.
ಕೋಯಪ್ಪತ್ತೊಡಿ ಮನೆತನದವರು ವಾಯಕಾಡ್ ಕುನ್ನುಂಪುರತ್ತ್ ನಿರ್ಮಿಸಿದ ಮಸೀದಿಯಲ್ಲಿ ಮುಸ್ಲಿಯಾರಕತ್ತ್ ಝೈನುದ್ದೀನ್ ಮುಸ್ಲಿಯಾರ್ ನ:ಮ, ಚಾಲಿಯಂ ಕುಂಞಾಲಿಕುಟ್ಟಿ ಮುಸ್ಲಿಯಾರ್ (ನ:ಮ), ಪೊನ್ನಾನಿ ಬಾವ ಮುಸ್ಲಿಯಾರ್ (ನ:ಮ), ಕಿಯುಪರಬ್ ಇಬ್ರಾಹಿಂಕುಟ್ಟಿ ಮುಸ್ಲಿಯಾರ್ (ನ:ಮ), ಚೆರುವಾಡಿ ಮಮ್ಮದ್ ಮುಸ್ಲಿಯಾರ್ (ನ:ಮ), ವಾಯಕಾಡ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಮೊದಲಾದ ಪಂಡಿತರು ( 1909-1917 ) ದಾರುಲ್ ಉಲೂಮಿನಲ್ಲಿ ದರ್ಸ್ ನಡೆಸಿರುತ್ತಾರೆ.
ಈ ಮಹತ್ತರವಾದ ಸ್ಥಾಪನೆ ಮತ್ತು ಸುಮಾರು ಎಕ್ಕರೆಯಷ್ಟು ಇರುವ ಸೊತ್ತುಗಳನ್ನು 1971ರಲ್ಲಿ ಕೋಯಪ್ಪತ್ತೊಡಿ ಮಹ್ಮದ್ ಕುಟ್ಟಿ ಸಾಹಿಬರು ವಖಫ್ ಮಾಡಿರುದಾಗಿದೆ.
ಆದರೆ *ಇಂದು ಈ ಸ್ಥಳ ಹಾಗು ಸ್ಥಾಪನೆಗಳು ವಹ್ಹಾಬಿಗಳ ಪಾಲಾಗಿದೆ.!!*
ಪೂರ್ಣ ಸೂಕ್ಷಮತೆಯೊಂದಿಗೆ, ಅಂದರೆ ಒಂದು ಕರಾಹತ್ತ್ ಕೂಡ ಮಾಡದೆ ಆಬಿದ್ ಆದ ಜೀವಿಸಿದ ಮಹಾನರು ಇಸವಿ 1967ರಿಂದ ಸರಿಸುಮಾರು 26 ವರ್ಷದವರೆಗೆ ಸಮಸ್ತದ ಅಧ್ಯಕ್ಷರಾಗಿದ್ದರು.
ತಾಜುಲ್ ಉಲಮ ಸಯ್ಯಿದ್ ಉಳ್ಳಾಲ ತಂಙಲ್ (ನ:ಮ), ಸಂಶುಲ್ ಉಲಮಾ ಇ.ಕೆ. ಉಸ್ತಾದ್ (ನ:ಮ), ಕುಟ್ಟಿಕಾಟ್ಟೂರ್ ಇಂಬಿಚ್ಚಾಲಿ ಉಸ್ತಾದ್ (ನ:ಮ), ಕೈಪಟ್ಟ ಬಿರಾನ್ ಮುಸ್ಲಿಯಾರ್ (ನ:ಮ), ಅಂಡೋಣ ಪೋಕರ್ ಕುಟ್ಟಿ ಮುಸ್ಲಿಯಾರ್ (ನ:ಮ), ಅಂಡೋಣ ಅಬ್ದುಲ್ಲ ಮುಸ್ಲಿಯಾರ್ (ನ:ಮ), ಕೊಡಂಪುಝ ಬಾವ ಮುಸ್ಲಿಯಾರ್ (ನ:ಮ), ಚಿತ್ತಾರಿ ಹಂಝ ಮುಸ್ಲಿಯಾರ್ ಮುಂತಾದ ಹಲವರು ಮಹಾನವರ ಶಿಷ್ಯರುಗಳಾಗಿದ್ದಾರೆ.
*'ತಸ್'ಹಿಲುನ್ ಮತ್ವಾಲಿಬಿಸನಿಯ್ಯ', 'ರದ್ದುಲ್ ವಹ್ಹಾಬಿಯ್ಯ',* ಗಳಂತಹ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.
ತನ್ನ 93'ನೇ ಪ್ರಾಯದಲ್ಲಿ 1993 ರ ಸೆಪ್ಟ0ಬರ್ 19ಕ್ಕೆ ಈ ನಶ್ವರ ಭೂಲೋಕದಿಂದ ಪಾರತ್ರಿಕ ಲೋಕಕ್ಕೆ ಯಾತ್ರೆಯಾದರು.
ದಾರಿ;
ಮಲಪ್ಪುರಂ ಎಡವಣ್ಣಪ್ಪಾರದಿಂದ 4 ಕೀ ಮಿ ಪಶ್ಚಿಮಕ್ಕೆ ಸಂಚರಿಸಿದರೆ ವಾಯಕಾಡ್ ದೊಡ್ಡ ಜುಮುಅ ಮಸೀದಿಯ ಸಮೀಪದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.
*ಮಹಾನರವರ ಹಕ್ಕ್'ಜಾಹ್* *ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಲೋಕವನ್ನು* *ವಿಜಯಗೊಳಿಸಲಿ.*
*ಆಮೀನ್....*

Comments