Skip to main content

ವಹ್ಹಾಬಿ ಭೀಕರ ಚರಿತ್ರೆ

ವಹ್ಹಾಬಿ ಭೀಕರ ಚರಿತ್ರೆ

ಮುಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ 1155-1206
➖➖➖➖➖➖➖

ಹಿಜರಿ ವರ್ಷ 1115 (1703) ರಲ್ಲಿ ಸೌದಿ ಅರೇಬಿಯಾದ ನಜ್'ದ್ ನ ಪಟ್ಟಣವಾದ ಉಯೈನ ಎಂಬ ಸ್ಥಳದಲ್ಲಿ ಪ್ರಶಸ್ತ ಪಂಡಿತರು, ಖಾಝಿಯು ಆಗಿದ್ದ ಶೈಖ್ ಅಬ್ದುಲ್ ವಹಾಬಿನ ಮಗನಾಗಿ ಮುಹಮ್ಮದ್ ಜನಿಸಿದನು.
ದುಲ್ ಖುವೈಸಿರವರ ಪರಂಪರೆಯಲ್ಲಿ ಒಳಪಡುವ ವ್ಯಕ್ತಿಯಾಗಿದ್ದಾನೆ
 *#ಇಬ್ನು #ಅಬ್ದುಲ್ #ವಹ್ಹಾಬ್.*

ದುಲ್ ಖುವೈಸಿರತ್ತಿನ ಪರಂಪರೆಯಲ್ಲಿ ಇಸ್ಲಾಮಿನ ಒಳಗಿದ್ದು ನನ್ನ ಆಶಯದ ವಿರುದ್ದ ಕಾರ್ಯಾಚರಿಸುವವರು ಬರುವರೆಂದು ರಸೂಲ್  ﷺ ಅವರು ಮೊದಲೇ ಪ್ರವಚಿಸಿರುತ್ತಾರೆ.
ಒಂದು ಹದೀಸ್ ಹೀಗಿದೆ; ನಬಿ ﷺ ರವರು ಒಂದು ಯುದ್ಧ ಮುಗಿದು ಮರಳಿ ಬಂದ ನಂತರ ಮದೀನಾ ಮಸ್ಜಿದ್'ನಲ್ಲಿ *ಗಣಿಮತ್ತ್* ಸ್ವತ್ತುಗಳನ್ನು ಸ್ವಹಾಬಿಗಳಿಗೆ ವಿತರಿಸುತ್ತಿರುವ ಸಂಧರ್ಭದಲ್ಲಿ ದುಲ್ ಖುವೈಸಿರತ್ತ್ ನಬಿ ﷺ ರವರ ಮುಖಕ್ಕೆ ನೋಡಿ  ಮುಹಮ್ಮದ್, ﷺ ನೀನು ನೀತಿ ಪಾಲಿಸಬೇಕು..!!!
ಇದು ಕೇಳಿದ ಸ್ವಹಾಬಿಗಳು ಅವರನ್ನು ವಧಿಸಲು ಮುಂದಾದಾಗ ನೆಬಿ ﷺ ಅನುಮತಿ ಕೊಡದೆ ಈ ರೀತಿ ಹೇಳಿದರು. ಇಂಥವರಿಗೆ ಕೆಲವು ಅನುಯಾಯಿಗಳು ಬರಲಿಕ್ಕಿದೆ ಅವರು ಖುರ್'ಆನ್ ಪಾರಾಯಣ ಮಾಡುವವರು, ನಮಾಝ್ ನಿರ್ವಹಿಸುವವರು, ಉಪವಾಸ ಅನುಷ್ಠಿಸುವವರೂ ಆಗಿರುವರು. ಆದರೆ ಬಾಣದಿಂದ ಬಿಲ್ಲು ಹೋಗುವ ಹಾಗೆ ಅವರು ಇಸ್ಲಾಮಿನಿಂದ ಹೊರ ಹೋಗುವರು. (ಬುಖಾರಿ)

ದುಲ್ ಖುವೈಸಿರತ್ತಿನ 16ನೇ ಪೌತ್ರನಾಗಿ ಮುಹಮ್ಮದ್ ಇಬ್ನು ಅಬ್ದುಲ್ ಜನ್ಮ ತಾಳುವುದು! ಅವರ
ಪರಂಪರೆಯನ್ನು ಹೀಗೆ ಓದಬಹುದು..
*#ದುಲ್ ಖುವೈಸಿರತ್ತ್, ಖುಹೈಬ್, ಆಲಿ, ಮುಹಮ್ಮದ್, ಶಾಕಿರ್, ರಈಸ್, ಬೈಳಾಹ್, ಉಮರ್, ಮುಷ್'ರಿಫ್, ಬುರೈದ್, ರಾಶಿದ್, ಅಹ್ಮದ್, ಮುಹಮ್ಮದ್, ಅಲಿ, ಸುಲೈಮಾನ್, ಅಬ್ದುಲ್ ವಹಾಬ್, ಮುಹಮ್ಮದ್*
ಇವರಲ್ಲಿ ಹಲವರು ಪ್ರಮುಖ ಪಂಡಿತರಾಗಿದ್ದರೆಂದು ಚರಿತ್ರೆಯಲ್ಲಿ ಕಾಣಬಹುದು.

*ಇಬ್ನು ಅಬ್ದುಲ್ ವಹ್ಹಾಬಿನ ಬಾಲ್ಯಕಾಲ*;

ಸಣ್ಣ ಪ್ರಾಯದಲ್ಲಿಯೇ ದಾರಿ ತಪ್ಪಿದ ಹಾದಿಯಲ್ಲಾಗಿತ್ತು ಅವನ ಯಾತ್ರೆ. ಮುಹಮ್ಮದಿನ ಬಾಲ್ಯಕಾಲದ ನಡವಳಿಕೆಯನ್ನು ಕಂಡು ಅವನ ತಂದೆಯಾದ ಶೈಖ್ ಅಬ್ದುಲ್ ವಹಾಬ್, ಸಹೋದರನಾದ ಸುಲೈಮಾನ್ ಹಾಗೂ ಹಲವರು ಅವನನ್ನು ಶಪಿಸುತ್ತಿದ್ದರು. ಕೆಟ್ಟ ನಡವಳಿಕೆಯ ಕುರಿತು ಅವನಿಗೂ, ಸಮೂಹಕ್ಕೂ ಎಚ್ಚರಿಕೆ ನೀಡುತ್ತಿದ್ದರು. ತಂದೆಯಿಂದ ಸಿಕ್ಕಿದ ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಮದೀನಾ ಮಸ್ಜಿದಿನ ದರ್ಸಿನಲ್ಲಿ ಮುಹಮ್ಮದ್ ಅಲ್ಪಕಾಲ ಕಲಿತಿದ್ದನು. 32 ನೇ ವಯಸ್ಸಿನವರೆಗೆ ಇಬ್ನು ಅಬ್ದುಲ್ ವಹಾಬ್,ನ ವಿದ್ಯಾರ್ಥಿ ಜೀವನವಾಗಿತ್ತು.
ಮದೀನಾ ಮಸ್ಜಿದ್'ನಲ್ಲಿ ದರ್ಸ್ ವಿದ್ಯಾರ್ಥಿಯಾಗಿದ್ದ ಸಮಯದಲ್ಲಾಗಿತ್ತು ನೂತನವಾದಗಳ ಧಾರ್ಮಿಕ ಪರಿಷ್ಕರಣಾ ಚಿಂತನೆಗಳು ಅವನಲ್ಲಿ ಮೊಳಕೆಯೊಡೆಯುವುದು.  *ಇಬ್ನು ತೈಮಿಯ್ಯ* ರ ಆಶಯಗಳಲ್ಲಿ ಆಕರ್ಷಿತನಾದ ಮುಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್, ಆಳವಾದ ಪಾಠದೊಂದಿಗೆ
 *ಇಬ್ನು ಖಯ್ಯುಮ್*ನ ಪುಸ್ತಕದ ಮೂಲಕ ತನ್ನ ಸಂಘಟನೆಗೆ ಅಡಿಪಾಯ ಹಾಕಿದನು.
ತಂದೆಯ ಪಾಂಡಿತ್ಯವನ್ನು, ಜನ ಬೆಂಬಲವನ್ನು ಸದುಪಯೋಗಪಡಿಸಿ ತನ್ನ ಪ್ರಸ್ಥಾನದ ಪ್ರಚಾರಕ್ಕೆ ಅಡಿಪಾಯ ಹಾಕಿದ  ಮುಹಮ್ಮದ್ ಇಬ್ನು ಅಬ್ದುಲ್ ವಹಾಬ್'ನಿಗೆ ಆತನ ಗುರಿ ಪೂರ್ತೀಕರಿಸಲು ಸಾಧ್ಯವಾಗಲಿಲ್ಲ.  ಆದರೂ ಅದರಿಂದ ಹಿಂದೆ ಸರಿಯದೆ ಇಸ್ಲಾಮಿನ ಪವಿತ್ರ ಆಶಯವನ್ನು ಒಡೆಯಲು ಆತ ರಹದಾರಿಯನ್ನು  ಹುಡುಕಿಕೊಂಡನು..
ಈ ಕಾರಣದಲ್ಲಿ ದೊಡ್ಡ ಒಂದು ಅನುಗ್ರಹವಾಗಿದೆ ಮುಸ್ಲಿಂ ಉಮ್ಮತ್ತಿಗೆ ಲಭಿಸಿರುವುದು.

*(ಕಾರಣ ಆತ ಇಸ್ಲಾಮಿನ ಹೆಸರಿನೊಂದಿಗೆ* *ಕಾರ್ಯಾಚರಿಸಿಕೊಂಡು ಬಂದಿದ್ದಲ್ಲಿ ಇಂದು ಎಲ್ಲರೂ ಅವನ ಹಾದಿ ಸ್ವೀಕರಿಸುತ್ತಿದ್ದರು, ಆದರೆ ಅದು ಅವನಿಂದ ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ರಹದಾರಿಯೊಂದಿಗೆ ಕಾರ್ಯಾಚರಣೆಗಿಳಿದು ಆಶಯದಲ್ಲಿ ಒಡಕುಂಟುಮಾಡಲು ಶ್ರಮಿಸಿರುವುದು)*

ಸಂಘಟನೆಯನ್ನು ಸ್ವತಃ ಹೆಸರಿನಲ್ಲಿ ಗುರುತಿಸುವುದಾದರೆ *ಮುಹಮ್ಮದಿಯ್ಯನ್ ಸಂಘಟನೆ* ಎಂದಾಗುತ್ತಿತು.
ಆದರೆ ಈ ಹೆಸರು ಮುಂದಿನ ದಿನಗಳಲ್ಲಿ ದೊಡ್ಡ ತಪ್ಪುದಾರಣೆ ಬೆಳೆಯಲು ಕಾರಣವಾಗುತ್ತಿತ್ತು.

ಹಿಜರಿ 1143ರಲ್ಲಿ ಯಾಗಿದೆ *ವಹಾಬಿಯನ್* ಆಶಯಗಳಿಗೆ ಪ್ರಸ್ಥಾನಿಕ ರೂಪ ಪ್ರಾಪವಾಗುವುದು. 1150 ರಲ್ಲಿ ಈ ಸಂಘಟನೆಯು ಕಾರ್ಯರೂಪಕ್ಕೆ ಬಂತು.

*ಸೌದಿ ಅರೇಬಿಯಾವನ್ನು ವಶಪಡಿಸುವುದು*;

ಆಶಯ ಪ್ರಚಾರಾರ್ಥ ನಜ್'ದಿನ ದರ್'ಇಯ್ಯಯಿ ಎಂಬ ಸ್ಥಳಕ್ಕೆ ತಲುಪಿದ ಮುಹಮ್ಮದ್ ಇಬ್ನು ಅಬ್ದುಲ್ ವಹಾಬ್ ಅಲ್ಲಿಯ ಆಡಳಿತಾಧಿಕಾರಿಯಾದ *#ಆಲು ಸಊದ್* ರನ್ನು ಭೇಟಿಯಾದನು.

ಅತ್ತ ಆಲು ಸಉದ್ ತನ್ನ ಮೇಲಿನ ವೈಯಕ್ತಿಕ ವಿರೋಧಗಳ ಕಾರಣದಿಂದ ಆಡಳಿತ ನಡೆಸಲು ಸಾಧ್ಯವಾಗದೆ ಸಂದಿಗ್ಧ ಪರಿಸ್ಥಿತಿಯನ್ನು  ಅನುಭವಿಸುವ ಸಂಧರ್ಭದಲ್ಲಾಗಿತ್ತು ಇಬ್ನು ವಹಾಬಿನ ರಂಗಪ್ರವೇಶ!. ಆ
ಸಂದಿಗ್ಧ ಪರಿಸ್ಥಿತಿಗೆ ನಾಂದಿ ಹಾಡಲು ತನ್ನ ಅನುಯಾಯಿಗಳನ್ನು ಕೊಟ್ಟು ಸಹಾಯ ಮಾಡುತ್ತೇನೆಂಬ ವಾಗ್ದಾನದೊಂದಿಗೆ ಒಪ್ಪಂದ ಮಾಡಿಕೊಂಡು ಇಬ್ನು ಅಬ್ದುಲ್ ವಹಾಬ್, ಇಬ್ನು ಸಊದುನೊಂದಿಗೆ ಸಹಿ ಹಾಕಿ (1229 ) ಜೊತೆ ಸೇರಿದನು. ತನ್ನ ಇಸ್ಲಾಮಿಕ ನವೀನವಾದದ  ಪ್ರವರ್ತನೆಗಳಿಗೂ, *ಶಿರ್ಕ್* ನಿರ್ಮೂಲನಕ್ಕೂ ವಿರೋಧ ವ್ಯಕ್ತಪಡಿಸಲಿಕ್ಕಿಲ್ಲವೆಂದು ಇಬ್ನು ಸಊದ್ ನೊಂದಿಗೆ ಅಂಗೀಕಾರ ಪಡೆದು ಒಪ್ಪಂದದಲ್ಲಿ ಸಹಿ ಮಾಡಿದನು.

ಕಳ್ಳ ಪ್ರವಾದಿಯಾದ *ಮುಸೈಲಿಮತ್ತುಲ್ ಕದ್ದಾಬ್'*ನ ಊರಾದ ದರ್'ಇಯ್ಯಯಿಲ್ ದಲ್ಲಾಗಿದೆ  (ವಹಾಬಿನ ಜನ್ಮಸ್ಥಳ ) ವಹಾಬ್ ಹಾಗೂ ಇಬ್ನು ಸಊದ್' ಒಪ್ಪಂದದೊಂದಿಗೆ ಒಟ್ಟುಗೂಡುವುದು. ತೌಹೀದ್'ನ ಪ್ರಚಾರದಲ್ಲಿ ತನ್ನನ್ನು ಸಹಾಯ ಮಾಡಿದರೆ ಸಾಮ್ರಾಜ್ಯದ ಅಭಿವೃದ್ಧಿ ಕಾರ್ಯಯಲ್ಲಿ ಇಬ್ನು ಸಊದ್'ನನ್ನು ಸಹಾಯ ಮಾಡುತ್ತೆನೆಂದು ವಹಾಬ್ ಮಾತು ಕೊಟ್ಟ ಒಪ್ಪಂದವಾಗಿತ್ತು ಇದು.
ದೇಶದ ಧರ್ಮಕಾರ್ಯವನ್ನು ವಹಾಬನಿಗೂ, ಆಡಳಿತ ನೇತೃತ್ವವನ್ನು ಇಬ್ನು ಸಊದಿನಿಗೂ ನೀಡಿ ವಿಭಜಿಸಲು ಒಪ್ಪಂದವಿರುತ್ತದೆ.

ಮುಸೈಲಿಮತ್ತುಲ್ ಕದ್ದಾಬಿನ ಕುಟುಂಬದ *ಬನೂ ಹನಿಫ* ಗೋತ್ರದವನೂ, ಆ ಕಾಲದ ಪಶ್ಚಿಮ ಅರೇಬಿಯಾದ ರಾಷ್ಟ್ರಗಳ ರಾಜನು ಕೂಡಾ ಆಗಿದ್ದರು ಮುಹಮ್ಮದ್ ಸಊದ್.

ಇಬ್ನು ಅಬ್ದುಲ್ ವಹಾಬಿನ ಮಗಳನ್ನು ರಾಜನಾದ ಮುಹಮ್ಮದ್ ಇಬ್ನು ಸಊದ್ ( 1765 ) ವಿವಾಹ ಆಗುದರೊಂದಿಗೆ ಆ ಸಂಬಂಧ ಇನ್ನು ಗಾಢವಾಗುತ್ತದೆ. ಅರೇಬಿಯಾದ ಚರಿತ್ರೆಗಾರರಲ್ಲಿ ಪ್ರಮುಖರಾದ *#ಫಿಲಿಪ್ಪ್ ಕೆ. ಹಿಮಿ* ಎಂಬವರು ಇದನ್ನು ಧರ್ಮ ಹಾಗೂ ಖಡ್ಗದ ವಿವಾಹ ಎಂದು ವಿಶ್ಲೇಷಿಸಿದ್ದಾರೆ.‌.
( ಹಿಸ್ಟರಿ ಒಫ್ ಅರಬ್ 2001. ಪುಟ-740 )

*_ವಹ್ಹಾಬಿ ಆಕ್ರಮಣ ಮತ್ತು ಭೀಕರತೆ_*

ಪ್ರಥಮ ಘಟ್ಟದಲ್ಲಿ ದರ್'ಇಯ್ಯದ ಜಾಹಿಲಿಗಳಾದ ತನ್ನ ಕುಟುಂಬ ಸದಸ್ಯರನ್ನು ಒಟ್ಟು ಸೇರಿಸಿ ಒಂದು ಸಮರ ಒಕ್ಕೂಟವನ್ನು ರಚಿಸಿ, *ತೌಹೀದ್'ನ ಪುನಃಸ್ಥಾಪನೆಯೆಂಬ ಹೆಸರಿನಲ್ಲಿ ಸುನ್ನೀ ಮುಸ್ಲಿಮರ ವಿರುದ್ಧ ಯುದ್ಧ ಮಾಡುದರ ಮೂಲಕ ಅವರನ್ನು ಬರ್ಬರವಾಗಿ ಕೊಂದು,  ಅವರ ಮನೆಗಳನ್ನು, ಹಾಗೂ ಅವರಲ್ಲಿದ್ದ ಸೊತ್ತುಗಳನ್ನು ಅಪಹರಿಸಿದನು.*
ಘನೀಮತ್ತ್ ಸೊತ್ತುಗಳು ಆಕ್ರಮಣಾಂತ್ಯಾದಲ್ಲಿ ಸುಲಭವಾಗಿ ಲಭಿಸಿದರಿಂದ ಇಬ್ನು ಅಬ್ದುಲ್ ವಹ್ಹಾಬಿನ ಕುಟುಂಬಿಕರು ಸಂಪನ್ನರಾದರು. ಆ ಕಾರಣದಿಂದಾಗಿ  ಹಲವಾರು ಜನ‌ರು ವಹ್ಹಾಬಿಸಂಗೆ ಸೇರಿಕೊಂಡರು.
ಪರಿಸರ ಪ್ರದೇಶಗಳನ್ನು ವಶಪಡಿಸಿದ ನಂತರ ಅಲ್ಲಿ ಲಭಿಸಿದ ಸೊತ್ತುಗಳನೆಲ್ಲ ಖರ್ಚು ಮಾಡಿರುವುದು *ಇಬ್ನು ಅಬ್ದುಲ್ ವಹ್ಹಾಬಿನ* ನಿರ್ದೇಶ  ಪ್ರಕಾರವಾಗಿತ್ತು. ಅವರು ಯುದ್ಧ ಮಾಡಿ ವಶಪಡಿಸಿರುವ ಪ್ರದೇಶಗಳ *ಮುಸ್ಲಿಂ ಸುನ್ನೀ ಪಂಡಿತರನ್ನು ಹತ್ಯೆ ಮಾಡುತ್ತಾ, ಮಹಾತ್ಮರುಗಳ ಮಕ್ಬರಗಳನ್ನು ನೆಲಸಮಗೊಳಿಸಿದರು.*
*ಕುತ್'ಬ್ ಖಾನೆಗಳನ್ನು ದ್ವಂಸಗೊಳಿಸಿದರು.*
*ಇಸ್ಲಾಮಿಕ ಚಿಹ್ನೆಗಳನ್ನು ನಾಮಾವಶೇಷಗೊಳಿಸಿದರು.* ಮುಸ್ಲಿಂಗಳನ್ನು  ನಿಷ್ಠುರವಾಗಿ ವಧಿಸುವ ತನ್ನ ಅನುಯಾಯಿಗಳಿಗೆ ಇಷ್ಟ ಪ್ರಕಾರ ಸಂಪತ್ತನ್ನು ಕೊಟ್ಟು ಅವರಿಗೆ ಸ್ವರ್ಗವನ್ನು ವಾಗ್ದಾನ ಮಾಡಿದನು.
 ( *#ತಾರಿಖುಲ್ ಮಂಲಕತುಲ್ ಅರಬಿಯ್ಯ ಅಸ್ಸಉದಿಯ್ಯ* )

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...