*ಬರಾ ಅತ್: ವಿಮೋಚನೆಯ ರಾತ್ರಿ*
🎋🎋🎋🎋🎋🎋🎋🎋🎋🎋
✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*
🎋🎋🎋🎋🎋🎋🎋🎋🎋🎋
ಶ'ಅ್ ಬಾನ್ ತಿಂಗಳಲ್ಲಿರುವ ಪವಿತ್ರ ರಾತ್ರಿಯಾಗಿದೆ ಬರಾ ಅತ್ ರಾತ್ರಿ. ಈ ರಾತ್ರಿಗೆ *ಲೈಲತುಲ್ ಮುಬಾರಕ್ ( ಅನುಗ್ರಹೀತ ರಾತ್ರಿ) , ಲೈಲತುಲ್ ಬರಾಅತ್ ( ವಿಮೋಚನೆಯ ರಾತ್ರಿ), ಲೈಲತುರ್ರಹ್ಮ( ಕಾರುಣ್ಯದ ರಾತ್ರಿ)* ಎಂಬ ಹೆಸರುಗಳಿವೆ. ಬರಾಅತ್ ರಾತ್ರಿ ಮಹತ್ವ ವನ್ನು ಸಾರುವ ಧಾರಾಳ ಹದೀಸ್ ಗಳು ನಮಗೆ ಕಾಣಬಹುದು.
ಸಲಪಿಗಳು ಶೈಖುಲ್ ಇಸ್ಲಾಂ ಎಂದು ಬಿರುದು ನೀಡಿ ಗೌರವಿಸಿರುವ ಇಬ್ನು ತೈಮೀಯ ಹೇಳುವುದು ನೋಡಿ.
👇👇👇👇
*ಶ'ಅಬಾನ್ ಹದಿನೈದರ ರಾತ್ರಿಗೆ ಮಹತ್ವವಿದೆ. ಸ್ವಹಾಬಿಗಳು ಅಂದು ಪ್ರತ್ಯೇಕ ನಮಾಝ್ ಮಾಡುತ್ತಿದರು.* ( ಪತಾವಲ್ ಖುಬ್ರಾ)
ಬರಾಅತ್ ವಿರೋಧಿಸುವ ಆಧುನಿಕ ಸಲಪಿಗಳು ಖಾಳಿ ಖುಳಾತ್ ಎಂದೇ ಬಣ್ಣಿಸುವ ಸಲಪಿ ನಾಯಕ ಅಲ್ಭಾನಿಯೂ ಬರಾಅತ್ ಗೆ ಮಹತ್ವ ಇದೆ ಎಂದು ಅಂಗೀಕರಿಸಿದ್ದಾರೆ. ಪುಣ್ಯ ದಿನಗಳ ಹಾಗೂ ಪುಣ್ಯ ಕಾರ್ಯಗಳ ಬಗ್ಗೆ ಸದಾ ಅಲರ್ಜಿ ವ್ಯಕ್ತ ಪಡಿಸುವ ಸಲಪಿ ಬರಾ ಅತ್ ಬಗ್ಗೆಯೂ ಅಸಹನೆ ವ್ಯಕ್ತ ಪಡಿಸಿದ್ದಾನೆ.ಆದರೆ ಪೂರ್ವ ಸಲಪಿ ನಾಯಕರು ಬರಾಅತ್ ರಾತ್ರಿಯನ್ನು ಅಂಗೀಕರಿಸಿದವರೂ,ಪುಣ್ಯವಿದೆ ಎಂದು ಹೇಳಿದವರಾಗಿದ್ದಾರೆ.
ಬರಾಅತ್ ರಾತ್ರಿ ನಮಾಝ್ ಮಾಡಲು ಹಾಗೂ ಹಗಲು ಉಪವಾಸ ಹಿಡಿಯಲು, ಪಾಪಮೋಚನೆ ಗಾಗಿ ಪ್ರಾರ್ಥನೆ ಮಾಡಲು ಆದೇಶ ಇರುವ ಧಾರಾಳ ಹದೀಸ್ ಕಾಣಬಹುದು. ಸ್ವಹಾಬಿ ಯಾದ ಇಬ್ನು ಉಮರ್ ರಳಿಯಲ್ಲಾಹು ಅನ್ಹು ರವರು ಮತ್ತು ಇಮಾಮ್ ಶಾಫಿಈ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ: " ಐದು ರಾತ್ರಿ ಗಳಲ್ಲಿ ದುಆ ಮಾಡಿದರೆ ಆ ದುಆಗೆ ಉತ್ತರವಿದೆ."
👇👇👇
1⃣ *ಶುಕ್ರವಾರ ರಾತ್ರಿ*
2⃣ *ರಜಬ್ ತಿಂಗಳ ಪ್ರಥಮ ರಾತ್ರಿ*
3⃣ *ಶ'ಅಬಾನ್ ಹದಿನೈದರ ರಾತ್ರಿ*
4⃣ *ಈದುಲ್ ಫಿತ್ರ್ ನ ರಾತ್ರಿ*
5⃣ *ಬಕ್ರೀದ್ ರಾತ್ರಿ*
ಈ ಐದು ರಾತ್ರಿ ಗಳಲ್ಲಿ ಒಂದಾಗಿದೆ ಬರಾ ಅತ್ ರಾತ್ರಿ.ಅಂದು ಪ್ರಾರ್ಥನೆಗೆ ಉತ್ತರವಿದೆ. ಹದೀಸ್ ಗಳಿಂದಲೂ ಇಮಾಮ್ ಗಳ ಗ್ರಂಥ ಗಳಿಂದಲೂ ಬರಾಅತ್ ಮಹತ್ವ ವನ್ನು ತಿಳಿದ ನಾವು ಅರೆ ಬುದ್ಧಿಯ ಸಲಪಿಯ ವಾದವನ್ನು ನೋಡಬೇಕಾಗಿಲ್ಲ. *ಜನಿಸಿದ ಮಗುವಿನ ಕಿವಿಗೆ ಬಾಂಗ್ , ಇಖಾಮತ್ ಕೊಟ್ಟರೆ ನರಕಕ್ಕೆಂದು ಹೇಳಿದ ಸಲಪಿ ಬರಾ ಅತ್ ರಾತ್ರಿ ಯನ್ನು ವಿರೋಧಿ ಸುವುದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ.*
ಬರಾಅತ್ ರಾತ್ರಿ ಜನರ ಬಜೆಟ್ ನಿರ್ಣಯಿಸುವ ರಾತ್ರಿ ಯಾದ ಕಾರಣ ಅಂದು ಮಗ್ರಿಬ್ ಬಳಿಕ *ಮೂರು ಯಾಸೀನ್ ಮತ್ತು ಸೂರತ್ ದುಖಾನ್* ಓದಿ ಪ್ರಾರ್ಥಿಸಿದರೆ ದುಆ ಗೆ ಉತ್ತರ ಲಭಿಸಲು ಹೆಚ್ಚು ಸಹಕಾರಿ ಯಾಗುತ್ತದೆ. ಮೂರು ಯಾಸೀನ್ ಓದುವಾಗ ಈ ಉದ್ದೇಶ ಮನದಲ್ಲಿ ಸಂಕಲ್ಪಿಸಬೇಕು.
👇👇👇
👉 *ಆಯುಷ್ಯ ಮತ್ತು ಆರೋಗ್ಯ*
👉 *ವಿಪತ್ತುಗಳಿಂದ ಮತ್ತು ರೋಗ ಗಳಿಂದ ರಕ್ಷಣೆ*
👉 *ಜೀವನದಲ್ಲಿ ಸಮೃದ್ಧಿ ,ಐಶ್ವರ್ಯ ಲಭಿಸಲು*
ಬರಾಅತ್ ರಾತ್ರಿಯಂದು ಗಲ್ಬ್ ಗೋತ್ರದ ಆಡಿನ ರೋಮಕ್ಕಿಂತಲೂ ಅಧಿಕ ಪಾಪವಿದ್ದರೂ ಅಲ್ಲಾಹನು ಕ್ಷಮಿಸುತ್ತಾನೆಂದು ಹದೀಸ್ ಗಳಲ್ಲಿ ಕಾಣಬಹುದು.
ಒಳಿತಿನ ದಿನಗಳು ಪಾಪ ಗಳ ಪರಿಹಾರ ಕ್ಕೂ ಒಳಿತುಗಳನ್ನು ಹೆಚ್ಚಿಸಲೂ ನಾವು ಉಪಯೋಗಿಸೋಣ.ಜೀವನದ ಬ್ಯುಸಿ ಎಂಬ ಕಾರಣವನ್ನು ಪುಣ್ಯ ದಿನಗಳಲ್ಲಾದರೂ ಬದಿಗಿಟ್ಟು ಪುಣ್ಯ ಸಂಪಾದಿಸೋಣ.
🌹🎋🌷🎋🌹🎋🌷🎋🌹🎋🌷
🌳🌳🌳🌳🌳🌳🌳🌳🌳🌳🌳
Comments