Skip to main content

ದಿಕ್ರ್ ಹಲ್ಕಾ, ದುವಾ ಸಂಗಮ, ಸ್ವಲಾತ್ತ್ ಮಜ್ಲಿಸ್'ಗಳ ವಿರೋಧಿಗಳು ತಿಳಿಯಲಿಕ್ಕಾಗಿ....

ದಿಕ್ರ್ ಹಲ್ಕಾ, ದುವಾ ಸಂಗಮ, ಸ್ವಲಾತ್ತ್ ಮಜ್ಲಿಸ್'ಗಳ ವಿರೋಧಿಗಳು ತಿಳಿಯಲಿಕ್ಕಾಗಿ....

 ✍ ~ಗಫೂರ್ ಬಾಯಾರ್~
---------------------
🕌ವಿಶ್ವಾಸಿಗಳ ಆತ್ಮ ಚೈತನ್ಯಕ್ಕಾಗಿ, ಆತ್ಮೀಯವಾಗಿ ಸಂಗಮಿಸುವುದು, ಪ್ರಸ್ತುತ ವಿಷಯಗಳು ಇಸ್ಲಾಮಿನಲ್ಲಿ ಖುರ್ಆನ್ ಮತ್ತು ಹದೀಸ್ ಆಧಾರದಿಂದ ಸ್ಥಿರವಾದ ಕಾರ್ಯವಾಗಿದೆ. ಇದರಲ್ಲಿ ವಿಶ್ವಾಸಿಗಳಲ್ಲಿ 2 ಅಭಿಪ್ರಾಯವಿಲ್ಲ.

ಪಿಶಾಚಿ ಹೇಳುತ್ತಾನೆ,  ಅಲ್ಲಾಹುನೇ.. ಶುದ್ಧಾತ್ಮರಾದ ನಿನ್ನ ದಾಸರುಗಳನ್ನು ಅಲ್ಲದೆ ಎಲ್ಲರನ್ನೂ ನಾನು ಖಂಡಿತವಾಗಿ ವಂಚಿಸುವೆನು. ಹೀಗೆ ಶಪಥ ಮಾಡಿದ ಇಬ್ಲೀಸಿನ (ಶೈತಾನ್) ಅನುಯಾಯಿಗಳಾಗಿದೆ ನೂತನವಾದಿಗಳಾದ ಎಲ್ಲಾ ಪಂಗಡಗಳು. (ಮುಜಾ/ ಜಮಾಗಳು)

ಕಾರಣ ಒಳಿತಿನ ಮಾರ್ಗಗಳನ್ನು ದುರ್ವ್ಯಾಖ್ಯಾನಗಳನ್ನು ಮಾಡಿ  ಅಪಹಾಸ್ಯ ಮಾಡುತ್ತಿರುವ ನವೀನವಾಗಿಗಳ ಸ್ಥಿತಿ ದಯನೀಯವಾಗಿದೆ.

"ಅಹ್ಲುಸುನ್ನತ್ತ್ ವಲ್ ಜಮಾಅತ್ತಿನ" ಪೂರ್ವಿಕರು ಪರಂಪರಾಗತವಾಗಿ ತೋರಿಸಿ ಕೊಟ್ಟ ಬಹುತೇಕ ದೀನಿ ಸತ್ಕರ್ಮಗಳನ್ನು ವಿಮರ್ಶಿಸುವುದು ಇವರ ವಾಡಿಕೆಯಾಗಿದೆ.

ಮುಂದುವರಿಯುತ್ತಾ, ಸಯ್ಯದರರು ಮತ್ತು ಉಲಾಮಾಗಳು ನಡೆಸುವ ದಿಕ್ರ್ ದುಹಾ ಮಜ್ಲೀಸುಗಳು.

ಉದಾರಣೆಗೆ .
 🎀ಬಹುವರ್ಯರಾದ  ಸಯ್ಯದ್ ಖಲೀಲ್  ತಂಗಳವರಂತಹ ಮಹಾನುಭಾವರುಗಳ ನೇತೃತ್ವದಲ್ಲಿ ನಡೆಯುವ, ಸ್ವಲಾತ್ತ್, ದಿಕ್ರ್, ದುವಾ, ಮಜ್ಲಿಸ್'ಗಳನ್ನು ವಿರೋಧಿಸಿ ಬರೆದು ಬಿಡುವ ಈ ಜಾಹಿಲುಗಳೊಂದಿಗೆ
ನಾನು ವಿನಯದಿಂದ ಕೇಳಲೇ❓

ದಿಕ್ರ್, ಪ್ರಾರ್ಥನೆ, ಮತ್ತು ಸ್ವಲಾತ್ತುಗಳೆಲ್ಲ ಒಂದು ಮಜ್ಲಿಸಿನಲ್ಲಿ ಜೊತೆ ಸೇರಿ ಹೇಳುವುದು ತಪ್ಪಾ❓

ಇದರಲ್ಲಿ ಏನಿದೆ ತಪ್ಪು❓

ಹರಾಮಾಗಿದೆಯೋ❓

ಕರಾಹತಾಗಿದೆಯೋ❓

 ಸುನ್ನಿ ಉಲಮಾಗಳ ಎಡೆಯಲ್ಲಿ ಭಿನ್ನ ಅಭಿಪ್ರಾಯವಿದೆಯೋ❓

ಅಥವಾ
ಇನ್ನು ವಿಶುದ್ಧ ರಮಳಾನಿನಲ್ಲಿ ನಡೆಯುದು ಮಾತ್ರ ತಪ್ಪಾ❓

ಹಾಗಾದರೆ, ರಮಳಾನಿನಲ್ಲಿ ದಿಕ್ರ್, ಸ್ವಲಾತ್ತ್, ದುವಾ, ಮಜ್ಲಿಸ್ ನಡೆಸಬಾರದೆಂದು ಖುರ್ಆನಿನಲ್ಲೋ, ಅಥವಾ ಹದೀಸಿನಲ್ಲೋ, ಇದೆಯೋ❓

ಇದ್ದರೆ ಆ ಆಯತ್ತ್ ಒಮ್ಮೆ ತೋರಿಸಿ ಕೊಡಬೇಕು..

ಹದೀಸಿನಲ್ಲಾದರೆ ಯಾವ ಹದೀಸ್ ನಲ್ಲಿ ಎಂದು ಹೇಳಬೇಕು❓

ಪುರಾವೆ ರಹಿತವಾದ ಮುಂಡುವಾದಗಳನ್ನು ಮಂಡಿಸಬಾರದು.

ತಾವುಗಳು ವಿರೋಧಿಸುವುದು
ಸ್ವಲಾತ್ತ್ ವ್ಯಾಪಾರವನ್ನಾಗಿದೆ. ಆತ್ಮೀಯ ಶೋಷಣೆ ಆಗಿದೆ.
ಎಂದಾದರೆ..

 ಸ್ವಲಾತ್ತ್ ನಗರಿ (ಮಜ್ಲಿಸ್) ಗಳಿಗೆ  ದೂರದ ದಿಕ್ಕುಗಳಿಂದ ಒಟ್ಟಾಗಿಯೂ, ಬೇರೆ ಬೇರೆಯಾಗಿಯೂ ಬಂದು ಜೊತೆಗೂಡಿ ದಿಕ್ರ್ ಗಳು, ಸ್ವಲಾತ್ತುಗಳು ಮತ್ತು ಅನೇಕ ಸತ್ಕರ್ಮಗಳಲ್ಲಿ  ನಿರತರಾಗಿ ಅಲ್ಲಾಹುವಿನ  ಸಾಮಿಪ್ಯವನ್ನು ಬಯಸುವ ಲಕ್ಷೋಪಲಕ್ಷ  ವಿಶ್ವಾಸಿಗಳಿಗೆ ಇಲ್ಲದ
ಬೇಜಾರು ಈ ನೂತನವಾದಿ ಪಾದರಿಗಳಿಗೆ ಯಾಕೆ!!❓

ಸ್ವಲಾತ್ತಿಗೆ ಬರುವ ವಿಶ್ವಾಸಿಗಳು
ಮನದಾಳದಿಂದ ಅಲ್ಲಿ ನಡೆಯುವ ವೈಜ್ಞಾನಿಕ, ಜೀವಕಾರುಣ್ಯ ಕಾರ್ಯಕ್ರಮಗಳಿಗೆ ಕೊಡುವ ಸಂಭಾವನೆಯನ್ನು ನೋಡಿ ನೀವು ಅಸೂಯೆ ಮಾಡಿ ಕಾರ್ಯವಿಲ್ಲ. ಅದು ಅಲ್ಲಾಹುವಿನ ಅಪಾರ ಅನುಗ್ರಹವಾಗಿದೆ.

 *ಸ್ವಲಾತ್ತ್ ನಗರಿಯಲ್ಲಿ ಕೋಟಿಗಟಲೆ ಹಣ ಬರುದಾದರೆ ಅದರ ಅರ್ಹತೆ, ಗುಣಗಳು ಅಲ್ಲಿರುವ ಈ ಸಮೂಹದ ನಿರ್ಗತಿಕರರಾದ ಒಂದು ದೊಡ್ಡ ಮಹಾ ಜನರಿಗೆ, (ಮಹ್'ದಿನ್ ನಂತಹ ಸ್ಥಾಪನೆಗಳಲ್ಲಿ ಕಲಿಯುವ ಮಕ್ಕಳಿಗೆ ಪ್ರಯೋಜನವಾಗಲಿದೆ.*

ವಿರೋಧಿಸುವ ವಿರೋಧಿಗಳು  ಆ ಸ್ಥಾಪನೆಯ ಹತ್ತಿರ ಕೂಡ ಹೋಗಿರಲಿಕ್ಕಿಲ್ಲ. ಎಂಬುದಾಗಿದೆ ಸತ್ಯ.

 ಮಹ್ದಿನ್  ನಂತಹ ಸ್ಥಾಪನೆಗಳು, ವೈಜ್ಞಾನಿಕ ಕೇಂದ್ರಗಳು,  ಈ ಸಮೂಹಕ್ಕೆ ಕೊಡುವ ಪ್ರಯೋಜನೆಗಳನ್ನು ಮನದಟ್ಟು ಮಾಡಲು ಒಮ್ಮೆ ಪ್ರಯತ್ನಿಸಿದರೆ ಈ ಎಲ್ಲಾ ಅಸೂಯೆ ರೋಗಗಳಿಗೆ ಶಾಶ್ವತವಾದ ಶಮನ ದೊರಕುದರಲ್ಲಿ ಸಂದೇಹವಿಲ್ಲ..

ಉದಾರಣೆಗೆ..
ಮಹ್'ದೀನ್ ನಂತಹ
130ರಷ್ಟು ಎಕ್ಕರೆಯಲ್ಲಿ  ವಿಶಾಲವಾಗಿ ನೆಲೆಗೊಳ್ಳುವ,
38 ರಷ್ಟು ಧಾರ್ಮಿಕ ವೈವಿಧ್ಯವಾದ ವೈಜ್ಞಾನಿಕ, ಜೀವ ಕಾರುಣ್ಯ, ಸ್ಥಾಪನೆಗಳು, 20,000 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು, 1800 ರಷ್ಟು ಸಿಬ್ಬಂದಿಳಿರುವ ಒಂದು ಉನ್ನತ ಸ್ಥಾಪನೆಗೆ ಎಷ್ಟು ಕೋಟಿ ಖರ್ಚು ಇದೆಯೆಂದು ಊಹಿಸಲಿರುವ  ಸಾಮಾನ್ಯ ಬುದ್ದಿ ಕೂಡ ಇಲ್ಲದೆ ಊಹಾಪೋಹಗಳನ್ನು ಮುಂದಿಟ್ಟು ಒಳಿತಿನ ಕಡೆಗೆ ಮುಖ ತಿರುಗಿಸುವುದು ಈ ಸಮೂಹದೊಂದಿಗೆ ಮಾಡುವ ಮಹಾ ದ್ರೋಹವಾಗಿದೆ.

ಇಂತಹ ಮಜ್ಲಿಸ್'ಗೆ ಬರುವ ವರಮಾನಗಳು ನೇತ್ರವರ್ಗದ ಜೀಬಿಗೆ ಎಂದು ಸಮೂಹವನ್ನು ತಪ್ಪುಧಾರಣೆಗೆ ಒಯ್ಯುವುದು ಈಮಾನ್  ಇಲ್ಲದ ಮೂರ್ಖರ ಲಕ್ಷಣವಾಗಿದೆ.

ಅಲ್ಲಾಹು ಅವನ ದಾಸರಲ್ಲಿ ಇಷ್ಟಪಟ್ಟವರಿಗೆ ಕೊಡುವ ಉನ್ನತ್ತಿಯಲ್ಲೂ, ಬೆಳವಣಿಗೆಯಲ್ಲೂ,  ಅಸೂಯೆಪಟ್ಟು ಕಾರ್ಯವಿಲ್ಲ.

☪ದಿಕ್ರ್, ಪ್ರಾರ್ಥನೆ, ಮಜ್ಲಿಸಿನ ಮಹತ್ವವನ್ನು ಕಲಿಸುವ ಒಂದು ಹದೀಸ್ 👇👇

٢٥ - (٢٦٨٩) حَدَّثَنَا مُحَمَّدُ بْنُ حَاتِمِ بْنِ مَيْمُونٍ، حَدَّثَنَا بَهْزٌ، حَدَّثَنَا وُهَيْبٌ، حَدَّثَنَا سُهَيْلٌ، عَنْ أَبِيهِ، عَنْ أَبِي هُرَيْرَةَ، عَنِ النَّبِيِّ صَلَّى اللهُ عَلَيْهِ وَسَلَّمَ، قَالَ: " إِنَّ لِلَّهِ تَبَارَكَ وَتَعَالَى مَلَائِكَةً سَيَّارَةً، فُضُلًا يَتَتَبَّعُونَ مَجَالِسَ الذِّكْرِ، فَإِذَا وَجَدُوا مَجْلِسًا فِيهِ ذِكْرٌ قَعَدُوا مَعَهُمْ، وَحَفَّ بَعْضُهُمْ بَعْضًا بِأَجْنِحَتِهِمْ، حَتَّى يَمْلَئُوا مَا بَيْنَهُمْ وَبَيْنَ السَّمَاءِ الدُّنْيَا، فَإِذَا تَفَرَّقُوا عَرَجُوا وَصَعِدُوا إِلَى السَّمَاءِ، قَالَ: فَيَسْأَلُهُمُ اللهُ عَزَّ وَجَلَّ، وَهُوَ أَعْلَمُ بِهِمْ: مِنْ أَيْنَ جِئْتُمْ؟ فَيَقُولُونَ: جِئْنَا مِنْ عِنْدِ عِبَادٍ لَكَ فِي الْأَرْضِ، يُسَبِّحُونَكَ وَيُكَبِّرُونَكَ وَيُهَلِّلُونَكَ وَيَحْمَدُونَكَ وَيَسْأَلُونَكَ، قَالَ: وَمَاذَا يَسْأَلُونِي؟ قَالُوا: يَسْأَلُونَكَ جَنَّتَكَ، قَالَ: وَهَلْ رَأَوْا جَنَّتِي؟ قَالُوا: لَا، أَيْ رَبِّ قَالَ: فَكَيْفَ لَوْ رَأَوْا جَنَّتِي؟ قَالُوا: وَيَسْتَجِيرُونَكَ، قَالَ: وَمِمَّ يَسْتَجِيرُونَنِي؟ قَالُوا: مِنْ نَارِكَ يَا رَبِّ، قَالَ: وَهَلْ رَأَوْا نَارِي؟ قَالُوا: لَا، قَالَ: فَكَيْفَ لَوْ رَأَوْا نَارِي؟ قَالُوا: وَيَسْتَغْفِرُونَكَ، قَالَ: فَيَقُولُ: قَدْ غَفَرْتُ لَهُمْ فَأَعْطَيْتُهُمْ مَا سَأَلُوا، وَأَجَرْتُهُمْ مِمَّا اسْتَجَارُوا، قَالَ: فَيَقُولُونَ: رَبِّ فِيهِمْ فُلَانٌ عَبْدٌ خَطَّاءٌ، إِنَّمَا مَرَّ فَجَلَسَ مَعَهُمْ، قَالَ: فَيَقُولُ: وَلَهُ غَفَرْتُ هُمُ الْقَوْمُ لَا يَشْقَى بِهِمْ  جَلِيسُهُمْ "

*ಝಿಕ್ರ್ ನ ಮಜ್ಲಿಸುಗಳನ್ನು ಅರಸುತ್ತಾ ಸಂಚರಿಸುವ ಮಲಕುಗಳು ಅಲ್ಲಾಹನಿಗಿದ್ದಾರೆ. ಎಲ್ಲರೂ ಒಟ್ಟು ಸೇರಿ ನಡೆಸುವ ಹಲ್ಕ ಝಿಕ್ರ್ ನ ಮಜ್ಲಿಸುಗಳಲ್ಲಿ ಅವರು ಅಸೀನರಾಗುವರು. ಮಜ್ಲಿಸ್ ಮುಗಿದ ನಂತರ ಅವರು ಆಕಾಶಕ್ಕೆ ಹಾರುವರು. ನಂತರ ಅಲ್ಲಾಹನನ್ನು ಬೇಟಿಯಾಗುವರು. ಅಲ್ಲಾಹನಿಗೆ ಪೂರ್ಣ ಅರಿವಿದ್ದೂ ಕೂಡಾ ಅಲ್ಲಾಹು ಮಲಕುಗಳಲ್ಲಿ ಕೇಳುವನು. "ನೀವು ಎಲ್ಲಿಂದ ಬರುತ್ತಿದ್ದೀರಿ"?*

ಮಲಕುಗಳು ಉತ್ತರಿಸುವರು.

*"ನಾವು ಭೂಮಿಯಿಂದ ಬರುತ್ತಿದ್ದೇವೆ ಅಲ್ಲಿ ನಿನ್ನ ಕೆಲವು ದಾಸರು ನಿನಗಾಗಿ ತಸ್ಬೀಹ್, ತಹ್ಮೀದ್, ತಕ್ಬೀರ್, ತಹ್ಲೀಲ್ ಹೇಳಿ ಝಿಕ್ರ್ ಹಲ್ಕಾ ನಡೆಸಿ ನಿನ್ನೊಂದಿಗೆ ಬೇಡುತ್ತಿದ್ದಾರೆ"*

ಅಲ್ಲಾಹು ಕೇಳುವನು.

*"ಅವರು ನನ್ನಲ್ಲಿ ಯಾವುದನ್ನು ಬೇಡುತ್ತಿದ್ದಾರೆ"?*

ಮಲಕುಗಳು:

" ಸ್ವರ್ಗವನ್ನು"

ಅಲ್ಲಾಹು:  "ಅವರು ಸ್ವರ್ಗವನ್ನು ನೋಡಿದ್ದಾರಾ"

ಮಲಕುಗಳು: "ಇಲ್ಲ"

ಅಲ್ಲಾಹು : ಹಾಗಾದರೆ ಅವರು ಸ್ವರ್ಗವನ್ನು ನೋಡಿದ್ದರೆ ಅವರ ಅವಸ್ಥೆ ಹೇಗಿರಬಹುದು!

ಮಲಕುಗಳು : ಅವರು ನಿನ್ನಲ್ಲಿ ಮೋಕ್ಷವನ್ನು ಬೇಡುತ್ತಿದ್ದಾರೆ"

ಅಲ್ಲಾಹು: "ಯಾವುದರಿಂದ ಮೋಕ್ಷ ಬೇಡುತ್ತಿದ್ದಾರೆ"?

ಮಲಕುಗಳು: "ನಿನ್ನ ನರಕದಿಂದ"

ಅಲ್ಲಾಹು: "ಅವರು ನರಕವನ್ನು ದರ್ಶಿಸಿದ್ದಾರಾ"?

ಮಲಕುಗಳು: "ಇಲ್ಲ"

ಅಲ್ಲಾಹು : "ಅವರು ನರಕವನ್ನು ನೋಡಿದ್ದರೆ ಅವರ ಸ್ಥಿತಿ ಹೇಗಿರಬಹುದು!?"

ಮಲಕುಗಳು: "ಅವರು ನಿನ್ನಲ್ಲಿ ಕ್ಷಮೆ ಬೇಡುತ್ತಿದ್ದಾರೆ"

ಅಲ್ಲಾಹು: *"ನಾನು ಅವರ ಪಾಪಗಳನ್ನು ಕ್ಷಮಿಸಿದ್ದೇನೆ. ಅವರು ಬೇಡಿದ ಎಲ್ಲವನ್ನು ನೀಡಿದ್ದೇನೆ. ಅವರಿಗೆ ನರಕದಿಂದ ಮೋಕ್ಷ ನೀಡಿದ್ದೇನೆ"*

ಮಲಕುಗಳು: "ಪ್ರಸ್ತುತ ಹಲ್ಕಾ ಝಿಕ್ರ್ ನಲ್ಲಿ ಬೇರೆ ಯಾವುದೋ ಅಗತ್ಯಕ್ಕೆ ಬಂದ ಮಹಾ ಪಾಪಿಯೊಬ್ಬ ಆಸೀನನಾಗಿದ್ದಾನೆ."

ಅಲ್ಲಾಹು: *ಎಲ್ಲರಿಗೂ ನಾನು ಕ್ಷಮಿಸಿದ್ದೇನೆ"*
*"ಹಲ್ಕಾ ಝಿಕ್ರ್ ಮಜ್ಲಿಸ್ ನಲ್ಲಿ ಭಾಗವಹಿಸಿದ ಯಾವೊಬ್ಬನೂ ಪರಾಜಿತನಾಗಲ್ಲ"*
(ಹದೀಸ್)

✍ _ಗಫೂರ್ ಬಾಯಾರ್_

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...