Skip to main content

ಖತೀಜ ಬೀಬಿ ಯವರ ಈ ಲೋಕದಿಂದ ವಿಯೋಗದ ಕೊನೇಯ ಕ್ಷಣ

ಖತೀಜ ಬೀಬಿ ಯವರ ಈ ಲೋಕದಿಂದ ವಿಯೋಗದ ಕೊನೇಯ ಕ್ಷಣ
             😭😭😭😭😭
                ~~~~~~~~
            ಪ್ರಭಾಷನದಿಂದ ಸಂಗ್ರಹ ಬರಹ
          ✒ಹಮೀದ್ ಕಾಶಿಪಟ್ಣ

                 ~~~~~~~~~
_ಜಿಬ್ರೀಲ್ ಅಲೈಯಿಮುಸ್ಸಲಾಮ್   ನೆಬಿ ಸ.ಅ ತಂಙಳ್ರವರ ಹತ್ತಿ ರ ಬಂದು ಕೇಳುತ್ತಾರೆ ಯಾರಸೂಲಲ್ಲಾ..._
_ಖತೀಜ ರ.ಅ ಎಲ್ಲಿ ?ನೆಬಿ ಸ.ಅ ತಂಙಳ್ ರವರು ಹೇಳುತ್ತಾರೆ ಜಿಬ್ರೀಲರೇ ಯಾಕೆ ನೀವು ಖತೀಜರವರನ್ನು ಕೇಳುತ್ತಿದ್ದೀರಾ..?_
_ಪ್ರವಾದಿಯವರೇ ಖತೀಜ ರ.ಅ ರವರಿಗೆ ಅಲ್ಲಾಹನು ಸಲಾಂ ಹೇಳಿ ಕಳಿಸಿದ್ದಾರೆ ನೆಬಿಯವರೇ ಅದು ಅವರಿಗೆ ತಿಳಿಸಿ ನೆಬಿಯೇ ._
_ಜಿಬ್ರೀಲ್ ಅಲೈಹಿಮುಸ್ಸಲಾಂ ರವರಲ್ಲಿ ಅಲ್ಲಾಹನು ಸಲಾಂ ಹೇಳಿ ಕಳಿಸಬೇಕಾದರೆ ಖತೀಜ ರ.ಅ ರವರ ಸ್ಥಾನ ಅವರ ಎಂಥಹಾ ಮಹಿಳೆ ಯಾಗಿರಬಹುದು._
_ಸಿನಿಮಾ ನಟಿಯರನ್ನು ಸೀರಿಯಲ್ ನಟಿಯರನ್ನು ಅನುಕರಣೆ ಮಾಡುವ ನಮ್ಮ ಇಂದಿನ ಸಹೋದರಿಯರು ಖತೀಜಾ ಬೀವಿಯವರ ಜೀವನ ವನ್ನು ಸರಿಯಾಗಿ  ಕೇಳಿ ತಿಳಿದು ಕೊಂಡರೆ ಖಂಡಿತವಾಗಿಯೂ ನಮ್ಮ ಮೋಡೆಲ್ ಖತೀಜ ಬೀವಿಯವರೇ ಆಗಬೇಕು ಎಂದು ಬಯಸದೇ ಇರಲಾರರು.._
_ಖತೀಜಾ ಬೀವಿಯವರಿಗೆ ಸ್ವರ್ಗದಲ್ಲಿ ಒಂದು ಅರಮನೆ ಅಲ್ಲಾಹನು ನಿಡಿರುತ್ತಾನೆ.ಈ ಅರಮನೆ ಯಾಕೆ ನೀಡಿದ್ದಾನೆ ಎಂದು ಗೊತ್ತೆ 25 ವರ್ಷ ನೆಬಿ ಸ.ಅ ತಂಙಳ್ರವರ ಹತ್ತಿರ ಜೀವನ ನಡೆಸಿದ ಮಹಿಳೆಯಾಗಿದ್ದಾರೆ._
_ಈ 25 ವರ್ಷಗಳ ಜೀವಿತ ಕಾಲದಲ್ಲಿ ಒಂದೇ ಒಂದು ಸಲ ಪತಿ ಯಾದ ನೆಬಿ ಸ.ಅ ತಂಙಳ್ ರವರಲ್ಲಿ ಶಬ್ಧ ವೆತ್ತಿ ಮಾತಾಡಿಲ್ಲ ಆ ಕಾರಣದಿಂದ ಅಲ್ಲಾಹನು ಖತೀಜ ಬೀವಿ ಯವರಿಗೆ  ಕೊಟ್ಟ ಉಡುಗೊರೆ ಸ್ವರ್ಗದಲ್ಲಿ ಒಂದು ಅರಮನೆ._
_ಖತೀಜ ಬೀವಿ  ರ.ಅ  ರವರಿಗೆ 65 ವರ್ಷ ಪ್ರಾಯವಾದಾಗ ಮರಣ ದಿವಸ ಹತ್ತಿರ ಬಂದಾಗ ಒಂದು ದಿವಸ ಅಲ್ಲಾಹನ ಹಬೀಬ್ ಸ.ಅ ತಂಙಳ್ರವರ ತೊಡೆಯಮೇಲೆ ತನ್ನ ತಲೆಯನ್ನು ಇಟ್ಟು ಮಲಗಿಕೊಂಡು  ಸಂತೋಷದಿಂದ ನೆಬಿ ಸ.ಅ ತಂಙಳ್ರವರ ಕೈ ಹಿಡಿದು ಮುಖವನ್ನು ನೋಡಿ_ _ಹಸನ್ಮುಖದಿಂದ ನೋಡುತ್ತಿರುವಾಗ ಪ್ರವಾದಿ ಸ.ಅ ತಂಙಳ್ ರವರು' ಕೇಳುತ್ತಾರೆ ಏನು ಖದೀಜ ? ಯಾ ರಸೂಲಲ್ಲಾ ನೋಡಲು ಎಂತಹ ಮನೋಹರವಾಗುತಿದೆ  ತಮ್ಮ ಮುಖವನ್ನು ನೊಡಲು ಎಂತಹಾ ಮನೋಹರ_ _ಪ್ರವಾದಿಯವರ ಕೈಯನ್ನು ಹಿಡಿದು ಖದೀಜ ಬೀವಿ ರವರು  ಕೇಳುತ್ತಾರೆ ಹಬೀಬರೇ ಪತಿ ಪತ್ನಿಯರಾಗಿ ಕಳೆದ  25 ವರ್ಷ ದಿಂದ ನಾವು ಜೀವಿಸುತ್ತಾ ಇದ್ದೇವೆ  ಈ 25 ವರ್ಷಗಳ ಜೀವನದಲ್ಲಿ ತಮಗೆ ಏನಾದರು ಮನಸ್ಸಿಗೆ ನೋವು ತರುವಂತಹ ಕೆಲಸ ನನ್ನಿಂದ ನಡೆದಿದೆಯೇ ನೆಬಿಯೇ    ಒಂದು ವೇಳೆ  ನನ್ನ ನಡತೆಯಲ್ಲಿ ಏನಾದರೂ ತಪ್ಪುಗಳು ಬಂದಿದ್ದರೆ ನನಗೆ ಮಾಫ್ ಕೊಡಿ ಹಬೀಬರೇ ಎಂದು  ಖದೀಜ ಬೀವಿಯವರು ಹೇಳಿದಾಗ ಪ್ರವಾದಿಯವರು ತಕ್ಷಣ ತನ್ನ ಕೈಯಿಂದ ಖದೀಜ ಬೀವಿಯವರ ಬಾಯಿಯನ್ನು ಮುಚ್ಚಿ ಪ್ರವಾದಿಯವರು ಸಣ್ಣ ಮಕ್ಕಳ ಹಾಗೆ  ಕಣ್ಣೀರು ಹಾಕುತ್ತಿರುವಾಗ ಖದೀಜ ಬೀವಿ ರ.ಅ ರವರು ಕೇಳುತ್ತಾರೆ ಪ್ರವಾದಿಯವರೇ ಯಾಕೆ ನೀವು ಕಣ್ಣೀರು ಹಾಕುತ್ತಿದ್ದೀರಾ  ಎಂದು ಕೇಳುವಾಗ ವೆಬಿ ಸ.ಅ ತಂಙಳ್ರವರು ತನ್ನ ಪತ್ನಿ ಯಾದ  ಖದೀಜ ಬೀವಿಯವರಲ್ಲಿ ಹೇಳುತ್ತಾರೆ ಖದೀಜ ನೀವು ನನ್ನ ಲ್ಲಿ ಕ್ಷಮೆ ಮಾಫ್ ಕೇಳುವುದಾ ಖದೀಜಾ ?_
_ಎಂದು ಹೇಳಿ ನೀನು ನನ್ನನ್ನು ಬಿಟ್ಟು ಹೋಗುವೆಯಾ ಖದೀಜ ನನ್ನನ್ನು ಒಂಟಿಯಾಗಿ ಮಾಡಿ ನೀನು ಹೋಗುವೆಯಾ ಖದೀಜ  ಎಂದು ಹೇಳಿ ಕಣ್ಣೀ  ರುಡುತ್ತಿರುವಾಗ ಖದೀಜ ಬೀವಿ ರ.ಅ ಪ್ರವಾದಿಯವರ ಕಣ್ಣಿ ರನ್ನು ಒರೆಸುತ್ತಾ ತನ್ನ ಪತಿಯನ್ನು ಆಲಿಂಗನ ಮಾಡುತ್ತಾ ಪ್ರವಾದಿಯವರ ಕಿವಿಗೆ ಬಾಯಿ ಇಟ್ಟು ಕೇಳುತ್ತಾರೆ ಹಬೀಬರೇ  ನನಗೆ 3 ಆಸೆ ಇದೆ ಆ ನನ್ನ 3 ಆಸೆಯನ್ನು ಈಡೇರಿಸುವಿರಾ ಹಬೀಬರೇ ?_
_ಪ್ರವಾದಿ ಸ.ಅ ತಂಙಳ್ರವರು ಕೇಳುತ್ತಾರೆ ಏನು ನಿನ್ನ ಆಸೆ ಖದೀಜ ಬೀವಿ ರ.ಅ ರವರು ಹೇಳುತ್ತಾರೆ ಪ್ರವಾದಿಯವರೇ ನಾನು ಈ ಲೋಕದಿಂದ_ ಕಣ್ಮರೆಯಾದಾಗ ನನ್ನ ಜನಾಝ ಸ್ನಾನವನ್ನು ತಾವು ನಿರ್ವಹಿಸಬೇಕು. 2ನೇ ಆಸೆ ನನ್ನ ಜನಾಝದ ಕಫನ ಬಟ್ಟೆಯನ್ನು ತಾವೇ ನಿರ್ವಹಿಸಬೇಕು._
_ನಾವಿಬ್ಬರು ಮಲಗುವಾಗ ಉಪಯೋಗಿಸುತ್ತಿದ್ದ ಬಟ್ಟೆಯನ್ನು ನನ್ನ ಕಫನ್ ಬಟ್ಟೆಯ ಒಟ್ಟಿಗೆ ಇಡಬೇಕು . ನಿಮ್ಮ ಶರೀರದಲ್ಲಿ  ಬೆರೆಯುತ್ತಿದ್ದ ಆ ಬಟ್ಟೆ ನಿಮ್ಮ   ಪರಿಮಳವನ್ನು  ಆಸ್ವದಿಸಲು ಆ ಬಟ್ಟೆಯನ್ನು ನನ್ನ ಕಫನ್ ಬಟ್ಟೆಯ ಒಟ್ಟಿ ಹೊದಿಯಬೇಕು._
_3 ನೇಯ ಆಸೆ ಪ್ರವಾದಿಯವರೇ   ಆರಡಿ ಮಣ್ಣಿಗೆ ನನ್ನ ಜನಾಝವನ್ನು  ತಮ್ಮ ಪವಿತ್ರವಾದ  ಕೈಯಿಂದಲೇ ನ  ನಡೆಸಿಕೊಡಬೇಕು ಎಂದು ಕೇಳಿಕೊಂಡಾಗ ಪ್ರವಾದಿಯವರು ಸಮ್ಮತಿಸಿದರು._
_ಖದೀಜ ಬೀವಿಯನರು ಈ ಲೋಕದಿಂದ ಯಾತ್ರೆ ಹೇಳಿದರು. ಎಲ್ಲಾ ಕಾರ್ಯವನ್ನು ಪ್ರವಾದಿಯವರು ನಡೆಸಿ ಕೊಟ್ಟರು._
         …………………
     *_ಅಲ್ಲಾಹುವೇ  ಖದೀಜ ಬೀಬಿ ಯವರ ಬರ್ಕತ್ ನಿಂದ ನಮ್ಮ ಇಹಪರ ಕಾರ್ಯಗಳನ್ನು ವಿಜಯಗೊಳಿಸು ನಮ್ಮ ಖಬರ್ ಜೀವನ ಪ್ರಕಾಶಮಯ ಗೊಳಿಸು ರಬ್ಬೇ...ಆಮೀನ್_*
          ~~~~~~~~

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...