🔥💥🔥 *ಪುರಾವೆಗಳ ಆಧಾರದಲ್ಲಿ ಪವಿತ್ರ ಬರಾಅತ್ ರಾತ್ರಿ* 🔥💥🔥
ಪ್ರತೀ ಚಂದ್ರ ವರ್ಷಕ್ಕೆ ಹನ್ನೆರಡು ತಿಂಗಳುಗಳು ಇದೆ.ಅದರ ಎಂಟನೇ ತಿಂಗಳ ಹೆಸರಾಗಿದೆ ಶಹ್ಬಾನ್ ( *ತಫ್ಸೀರ್ ಇಬ್ನುಕಸೀರ್* *2/ 355*) ಈ ತಿಂಗಳ *15* ನೇ ರಾತ್ರಿಗೆ ಬರಾಅತ್ ರಾತ್ರಿ ಎಂದು ಹೇಳಲಾಗುತ್ತದೆ ( *ಹಾಮುಶುತ್ತುರುಮುಝಿ*) ಪ್ರಸ್ತುತ ರಾತ್ರಿಯ ಬಗ್ಗೆ ಬರಾಅತ್ ರಾತ್ರಿ ಎಂಬ ಪ್ರಯೋಗ ತಫ್ಸೀರುರ್ರಾಝಿ *27/239* ಯಲ್ಲಿದೆ. ಮುಲ್ಲಾ ಅಲಿಯ್ಯಿಲ್ ಖಾರೀ رضي الله عنه ಕೂಡಾ ತನ್ನ ಮಿರ್ಖಾತ್ *2/172* ರಲ್ಲಿಯೂ ಈ ಪ್ರಯೋಗವನ್ನು ನೀಡಿದ್ದಾರೆ *شعبان* 15 ರ ರಾತ್ರಿಗೆ ಬರಾಅತ್ ರಾತ್ರಿ ಎಂಬುದಲ್ಲದೇ ಲೈಲತುಸ್ಸಖ್ಬ್ (ಪ್ರಮಾಣ ತಯಾರಿಸುವ ರಾತ್ರಿ ) ಲೈಲತುಲ್ ಮುಬಾರಕ (ಪುಣ್ಯ ರಾತ್ರಿ ) ಲೈಲತುರ್ರಹ್ಮ (ಅನುಗ್ರಹೀತ ರಾತ್ರಿ ) ಎಂಬೀ ಹೆಸರುಗಳು ಇರುವುದಾಗಿ *ತಪ್ಸೀರ್ ಜಮಲ್* *4/ 100* ರಲ್ಲಿ ಪ್ರಸ್ತಾಪವಿದೆ ಬರಾಅತ್ ರಾತ್ರಿ ಎಂಬುದೂಂದು ಇಲ್ಲವೆಂದು ವಾದಿಸುತ್ತಾ ಆ ಪದವನ್ನು ದುರ್ವಕ್ಯಾನ ಮಾಡುವ ನೋತನವಾದಿಗಲಾದ ಸಲಪಿ ಎಂಬ ಹೂಸ ಪಂಗಡದವರ ವಾದಗಳು ಇದರಿಂದ ಕಸದ ಬುಟ್ಟಿಗೆ ಎಸಯಲ್ಪಟ್ಟಿದೆ ಎಂಬುದನ್ನು ನಾವು ಮರೆಯಬಾರದು ಆದೂದರಿಂದಲೇ ನವೀನವಾದಿಗಳೂಂದಿಗೆ ಸಂಪರ್ಕವಿರಿಸಲೂ ಅವರ ವಾದಗಳನ್ನು ಖಂಡಿಸಲಿಕ್ಕಾದರೂ ಅವರ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವುದು ಜ್ಞಾನದಲ್ಲಿ ಅವಗಾಹನೆ ಇಲ್ಲದವರಿಗೆ ಅನುವದನೀಯವಲ್ಲ ವೆಂದು ಬಹುಮಾನ್ಯರಾದ ಯೂಸುಪುನ್ನಬ್ಹಾನೀرضي الله عنه. *ತನ್ನ ಶವಾಹಿದುಲ್ ಹಖ್ಖ್* *39* ರಲ್ಲಿ ಪ್ರಸ್ತಾಪಿಸಿದ್ದಾರೆ. ಕಾರಣ ಅವರ ಸಂಪರ್ಕದಿಂದ ಮನುಷ್ಯನಿಗೆ ಹ್ರದಯದಲ್ಲಿ ಹಲವು ಸಂಶಯಗಳು ಉಂಟಾಗುವುದು ಕ್ರಮೇಣವಾಗಿ ವಿಶ್ವಾಸವು ನಷ್ಟ ಹೂಂದುವುದು.ಇದು ಸಾರ್ವತ್ರಿಕವಾದ ಒಂದು ಅನುಭವವಾಗಿದೆ ಬಹುಮಾನ್ಯರಾದ ಸುಫ್ ಯಾನುಸ್ಸೌರೀ رضي الله عنه ಹೇಳುತ್ತಾರೆ ನೂತನವಾದವು ವಿಸ್ವಾಸಕ್ಕೆ ಎರಗುವ ಒಂದು ವಿಷವೂ ಸತ್ಕರ್ಮವನ್ನು ಸ್ವೀಕರಿಸದಿರಲು ಕಾರಣವೂ ಆಗಿದೆ ಆದ್ದರಿಂದ ಸತ್ಯವಿಸ್ವಾಸಿಗಳು ಅದರ ಬಗ್ಗೆ ಭಯಪಡಬೇಕು ಪಾಪದ ಪಟ್ಟಿಯಲ್ಲಿ ಇಬ್ಲೀಸನಿಗೆ ಅತೀ ಇಷ್ಟವಾದ ಪಾಪವು ನೂತನವಾದವಾಗಿದೆ.ಕಾರಣ ಪಾಪಿಗಳು ಪಶ್ಚಾತ್ತಾಪ ಪಡುವರು ನೂತನವಾದಿಗಳು ಪಶ್ಚಾತ್ತಾಪ ಪಡಲಾರರು ( *ತಫ್ಸೀರುಲ್ ಖುರ್ತುಬೀ* *7*/ *141*) ಬರಾಅತ್ ಎಂಬ ಪದಕ್ಕೆ ವಿಮೋಚನೆ ಎಂಬ ಅರ್ಥವೂ ಇದೆ *شعبان* ತಿಂಗಳ ಅರ್ದದ ರಾತ್ರಿಯಲ್ಲಿ ಅಲ್ಲಾಹು ತನ್ನ ದಾಸರಿಗೆ ವಿಮೋಚನೆ ನೀಡುವುದರಿಂದಾಗಿದೆ ಈ ರಾತ್ರಿಗೆ ಬರಾಅತ್ ರಾತ್ರಿ ಎಂದಾಗಲು ಕಾರಣವೆಂದು ತಫ್ಸೀರುರ್ರಾಝಿ *27* *239* ) ಪ್ರಸ್ತಾಪಿಸಿದ್ದಾರೆ .ಬಹು ಆಯಿಶಾ رضي الله عنها ರಿಂದ ವರದಿ-ಅವರು ಹೇಳಿದರು ನಾನು ಅಲ್ಲಾಹನ ರಸೂಲರನ್ನು صلى الله عليه وسلم ಒಂದು ರಾತ್ರಿ ಕಾಣದಾದೆ ನಬಿ صلي الله عليه وسلم ರವರನ್ನು ಹುಡುಕುತ್ತಾ ನಾನು ಹೂರಗೆ ಹೋದೆ.ಆಗ ರಸೂಲ್ صلى الله عليه وسلم ರವರು ಮದೀನಾದ ಜನ್ನತುಲ್ ಬಖೀಅ ದಲ್ಲಿದ್ದರು ಅಲ್ಲಿಂದ ಅವರು ಹೀಗೆ ಹೇಳಿದರು ಅಲ್ಲಾಹು ಮತ್ತು ಅವನ ರಸೂಲ್ صلي الله عليه وسلم ನಿನ್ನನ್ನು ವಂಚಿಸುವರೆಂದು ನೀನು ಭಯಪಟ್ಟೆಯೋ? ನಾನು ಹೇಲೀದೆ ನೀವು ಇತರ ಪತ್ನಿಯರ ಬಳಿ ಹೋಗಿದ್ದೀರೆಂದು ನಾನು ಊಹಿಸಿದೆ ಆಗ ನಬಿ صلي الله عليه وسلم ಹೇಲಿದರು *شعبان* ತಿಂಗಳ ಅರ್ದದ ರಾತ್ರಿಯಲ್ಲಿ ಅಲ್ಲಾಹುವಿನ ಅನುಗ್ರಹ ಒಂದನೇ ಆಕಾಶಕ್ಕೆ ಇಳಿದು ಬರುವುದು.ನಂತರ ಕಹ್ಬ್ ಗೋತ್ರದವರ ಆಡಿನ ರೋಮಕ್ಕಿಂತ ಅದಿಕ ಲೆಕ್ಕದಲ್ಲಿ ಜನರ ಪಾಪಗಳನ್ನು ಅಲ್ಲಾಹು ಮನ್ನಿಸುವನು ( *ತುರ್ಮುದೀ*) ಆಡುಗಳು ಜಾಸ್ತಿ ಇರುವ ಗೋತ್ರವಾಗಿದೆ ಕಹ್ಬ್ ಗೋತ್ರ ಅದರಿಂದಾಗಿದೆ ಈ ಹದೀಸ್ನಲ್ಲಿ ಪ್ರತ್ಯೇಕವಾಗಿ ಅವರನ್ನು ಹೆಸರಿಸಿದ್ದು *ಮಿರ್ಖಾತ್* ( *2*/ *172*) *شعبان* ಅರ್ದದ ರಾತ್ರಿಯ ಬಗ್ಗೆ ಬಂದಂತಹ ಶ್ರೇಷ್ಠತೆಯ ಅದ್ಯಾಯ ಎಂಬ ಶೀಷಿರ್ಕೆಯಲ್ಲಾಗಿದೆ ಇಮಾಮ್ ತುರ್ಮುದಿ ಈ ಹದೀಸನ್ನು ಉಲ್ಲೇಖಿಸಿದ್ದು.ಇದನ್ನು ಇಬ್ನು ಮಾಜ ರಿಸೀನ್ ಕೂಡ ವರದಿ ಮಾಡಿದ್ದಾರೆ.
*ಮುಂದುವರಿಯುವುದು*
✍ *ಟಿ.ಕೆ ಇಬ್ರಾಹೀಂ.ಮದನಿ* *ಮರ್ದಾಳ* *ಕಡಬ*
Comments