Skip to main content

ಇಸ್ರಾಅ್ ಮಿಅ್ ರಾಜ್

ಇಸ್ರಾಅ್ ಮಿಅ್ ರಾಜ್ ಆಕಾಶಾರೋಹಣ
ಹಸನ್ ಸಅದಿ ಗಾಂಧಿಕಟ್ಟೆ_*
*(ಹಸ)

_ಅಲ್ಲಾಹನು ಅವನ ಇಷ್ಟದಾಸರಾದ ಪ್ರವಾದಿಯರಿಗೆ ನೀಡಿದ ಒಂದು ವಿಶೇಷ ಶಕ್ತಿಯಾಗಿದೆ "ಮುಅಜಿಝತ್". ಅದರಲ್ಲೂ ಮುಹಮ್ಮದ್ ನಬಿ ﷺ ರ ಮುಅಜಿಝತ್ ಅಪಾರ. ಅದರಲ್ಲಿ ಅತ್ಯಂತ ಶ್ರೇಷ್ಠ ಮುಅಜಿಝತ್ "ವಿಶುದ್ಧ ಕುರ್ಆನ್". ಅದೇ ರೀತಿ ,ಇಸ್ರಾಅ್-ಮಿಅ್ ರಾಜ್, ಚಂದ್ರನನ್ನು  ಇಬ್ಭಾಗ ಮಾಡಿದ್ದು, ಬೆರಳುಗಳ ಮಧ್ಯೆ ನೀರನ್ನು ಬರಿಸಿದ್ದು, ಪ್ರಮುಖ ಮುಅಜಿಝತ್ ಗಳಲ್ಲೊಂದು. ಆದ್ಯಪಿತ ಆದಂ ನಬಿಯರಿಂದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ರ ತನಕ ಯಾವ ಪ್ರವಾದಿಗೂ ಲಭಿಸದ ವಿಶೇಷ, ಅತ್ಯದ್ಭುತ ಘಟನೆಯಾಗಿದೆ *ಇಸ್ರಾಅ್-ಮಿಅ್ ರಾಜ್.*_

_ನುಬುವತ್ತಿನ ಹನ್ನೊಂದನೇ ವರ್ಷ ಅಬೂ ತ್ವಾಲಿಬ್ ಮತ್ತು ಖದೀಜಾ ಬೀವಿ ವಫಾತಾದರು. ಪ್ರಸ್ತುತ ಘಟನೆಯು ನಬಿ ﷺ ರನ್ನು ಮಾನಸಿಕವಾಗಿ ಅತ್ಯಂತ ದುಃಖಿತನನ್ನಾಗಿ ಮಾಡಿತು. ಅದರಿಂದ ಮುಕ್ತಿಯಾಗಿತ್ತು ಇಸ್ರಾಅ ಮಿಅರಾಜ್ ಯಾತ್ರೆ. ರಾತ್ರಿಯ ಅಲ್ಪ ಸಮಯದಲ್ಲಿ ನಬಿ ﷺ ರನ್ನು ಮಸ್ಜಿದುಲ್ ಹರಾಮಿನಿಂದ ಮಸ್ಜಿದುಲ್ ಅಖ್ಸಾಕ್ಕೆ ಜಿಬ್ರೀಲ್(ಅ.ಸ)ಮುಖಾಂತರ ಅಲ್ಲಾಹನು ಕೊಂಡುಹೋದ, ಇದಾಗಿದೆ ಇಸ್ರಾಅ. ಅಲ್ಲಿಂದಾಚೆಗೆ ಏಳು ಆಕಾಶ ದಾಟಿ, ಅಲ್ಲಾಹನನ್ನು ದರ್ಶಿಸಿ ಮರಳಿ ಬಂದರು. ಈ ಘಟನೆಯಾಗಿದೆ ಮಿಅರಾಜ್ ಎಂದು ಕರೆಯುವುದು.ನುಬುವತ್ತಿನ ಹನ್ನೊಂದನೇ ವರ್ಷ ರಜಬ್ 27 ಸೋಮವಾರ ರಾತ್ರಿಯಾಗಿದೆ ಪ್ರಸ್ತುತ ಘಟನೆ ನಡೆದದ್ದು. ಅಬೂತ್ವಾಲಿಬರ ಮಗಳು ಉಮ್ಮು ಹಾನಿಹ್ (ರ.ಅ) ವಿನ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಜಿಬ್ರೀಲ್ ಬಂದು ಮೊದಲು ಮಸ್ಜಿದುಲ್ ಹರಮಿಗೆ ಕರೆದುಕೊಂಡು ಹೋಗಿ ಅಲ್ಲಿ ನಬಿ ﷺ ಎದೆಯನ್ನು ಸೀಳಿ ಹೃದಯವನ್ನು ಹೊರ ತೆಗೆದು ಝಂಝಂ ನೀರಿನಿಂದ ತೊಳೆದು ಪುನಃ ಯಥಾ ಸ್ಥಿತಿಯಲ್ಲಿ ಇಟ್ಟರು ತದನಂತರವಾಗಿತ್ತು ಯಾತ್ರೆ._

🔵 _*ಬುರಾಕ್*_

_ಇಸ್ರಾಅ ಮಿಅರಾಜಿನ ರಾತ್ರಿ ಜಿಬ್ರೀಲರೊಂದಿಗೆ ಅಲ್ಲಾಹನು ಹೇಳಿದನು: ಇಂದು ರಾತ್ರಿ ನೀವು  ತಸ್ಬೀಹ್ ಹೇಳಬೇಕಾಗಿಲ್ಲ. ಅಝ್ರಾಯೀಲರೊಂದಿಗೆ ಹೇಳಿದನು: ಈ ರಾತ್ರಿ ನೀವು ಯಾರ ಆತ್ಮವನ್ನು  (ರೂಹ್) ಹಿಡಿಯಬಾರದು. ಆವಾಗ ಜಿಬ್ರೀಲ್ ಕೇಳಿದರು : ಯಾಕೆ?  ಅಂತ್ಯ ದಿನ ಸಂಭವಿಸಿತೇ? ಆವಾಗ ಅಲ್ಲಾಹನು ಹೇಳಿದ : ಅಂತ್ಯ ದಿನವಾಗಲಿಲ್ಲ. ತಾವು ಸ್ವರ್ಗಕ್ಕೆ ತೆರಳಿ ಬುರಾಕನ್ನು ಕರೆದುಕೊಂಡು ಮುಹಮ್ಮದ್ ನಬಿ ﷺರ ಬಳಿ ತೆರಳಬೇಕು.ಜಿಬ್ರೀಲ್ ಸ್ವರ್ಗಕ್ಕೆ ಹೋದರು. ಹಣೆಯಲ್ಲಿ ಮುಹಮ್ಮದ್ ಎಂಬ ಹೆಸರಿರುವ 40000 ಬುರಾಕ್ ಗಳು ಸ್ವರ್ಗದಲ್ಲಿ ಉಲ್ಲಾಸದಿಂದ ಆಟವಾಡಿ ಕೊಂಡಿದ್ದವು. ಅದರಲ್ಲಿ ಒಂದು ಬುರಾಕ್ ಮಾತ್ರ ತಲೆ ತಗ್ಗಿಸಿ , ಅಳುತ್ತಾ ಕುಳಿತಿರುವುದನ್ನು ಕಂಡು ಕಾರಣವೇನೆಂದು ತಿಳಿಯಲು ಅದರ ಬಳಿ ಜಿಬ್ರೀಲ್ ಹೋದರು. ಆವಾಗ  ಆ ಬುರಾಕ್ ಹೇಳಿತು: 40000 ವರ್ಷವಾಯಿತು ನಾನು ಮುಹಮ್ಮದ್ ಎಂಬ ಹೆಸರನ್ನು ಕೇಳುವುದು. ಆ ಕಾರಣದಿಂದ ಆ ಹೆಸರಿನ ವ್ಯಕ್ತಿಯೊಂದಿಗೆ ಅತಿಯಾದ ಸ್ನೇಹ ನನ್ನಲ್ಲಿ ಮನೆಮಾಡಿ ಅನ್ನ,ನೀರು ಏನು ಬೇಡ ಅನ್ನುವಷ್ಟರ ಮಟ್ಟಿಗೆ ಸ್ನೇಹ ಉಕ್ಕಿ  ಬಂದಿದೆ. ಆವಾಗ ಜಿಬ್ರೀಲ್ ಹೇಳಿದರು: ನಿನ್ನ ಸ್ನೇಹಿತನೊಂದಿಗೆ ನಿನ್ನನ್ನು ನಾನು ಸೇರಿಸುವೆ. ನಂತರ ಬುರಾಕನ್ನು ಸಿದ್ಧಪಡಿಸಿ ನಬಿ ﷺ ಬಳಿ ಬಂದರು._

🔵 _*ಇಸ್ರಾಅ್-ಮಿಅ್ ರಾಜ್*_

_ನಬಿ ﷺ ಹೇಳುತ್ತಾರೆ: ನನ್ನ ಹತ್ತಿರ ಜಿಬ್ರೀಲ್ ಬುರಾಕನ್ನು ತಂದರು. ಕತ್ತೆಗಿಂತ ದೊಡ್ಡದು ಕುದುರೆಗಿಂತ ಸಣ್ಣದು, ಉದ್ದನೆಯ ಬಿಳಿಯ ವರ್ಣದ ಒಂದು ಪ್ರಾಣಿಯಾಗಿದೆ ಬುರಾಕ್.ಕಣ್ಣ ದೃಷ್ಟಿ ತಲುಪುವಲ್ಲಿಗೆ ಕಾಲಿಟ್ಟಾಗಿದೆ ಅದರ ಸಂಚಾರ. ನಾನು ಬುರಾಕಿನ ಮೇಲೆ ಹತ್ತಿದೆ, ಬೈತುಲ್ ಮುಖದ್ದಸ್ ತಲುಪಿ, ಅಲ್ಲಿ  ಅಂಬಿಯಾಗಳು ಬಂಧಿಸುವ ಹಲ್ಕದಲ್ಲಿ ನನ್ನ ಬುರಾಕನ್ನು ಬಂಧಿಸಿದೆ.ನಂತರ ಬೈತುಲ್ ಮುಖದ್ದಸ್ ಮಸೀದಿಗೆ ಹೋಗಿ ಎರಡು ರಕಅತ್ ನಮಾಝ್ ನಿರ್ವಹಿಸಿದೆ. ಹೊರಗೆ ಬಂದಾಗ ಹಾಲು ಹಾಗೂ ಶರಾಬಿನ ಎರಡು ಪಾತ್ರೆಯನ್ನು ಇರಿಸಲಾಗಿತ್ತು. ನಾನು ಹಾಲಿನ ಪಾತ್ರೆಯನ್ನು ಆಯ್ಕೆಗೊಳಿಸಿದೆ. ಆವಾಗ ಜಿಬ್ರೀಲ್ ಹೇಳಿದರು: ನೀವು ಫಿತ್ರತನ್ನು (ಸನ್ಮಾರ್ಗ) ಆಯ್ಕೆಗೊಳಿಸಿದ್ದೀರಿ.ನಂತರ ಜಿಬ್ರೀಲ್ ನನ್ನನ್ನು ಕರೆದುಕೊಂಡು ಒಂದನೇ ಆಕಾಶಕ್ಕೆ ಹತ್ತಿದರು. ಬಾಗಿಲನ್ನು ತೆರೆಯಲು ಹೇಳಿದರು._
_ಪ್ರಶ್ನೆ:  ನೀವು ಯಾರು?_
_ಉತ್ತರ: ನಾನು ಜಿಬ್ರೀಲ್._
_ಪ್ರಶ್ನೆ: ನಿಮ್ಮ ಜೊತೆಗೆ ಇರುವವರು ಯಾರು?_
_ಉತ್ತರ: ಮುಹಮ್ಮದ್ ಮುಸ್ತಫಾ ﷺ_
_ಪ್ರಶ್ನೆ: ಅವರನ್ನು ಕರೆದುಕೊಂಡು ಬರಲು ನಿಮ್ಮಲ್ಲಿ ಹೇಳಿದ್ದಾರ?_
_ಉತ್ತರ: ಹೌದು.  ನನ್ನಲ್ಲಿ ಹೇಳಿದ್ದಾರೆ._
_ಆವಾಗ ಒಂದನೇ ಆಕಾಶದ ಬಾಗಿಲನ್ನು ತೆರೆಯಲ್ಪಟ್ಟಿತು.ನಾನು ಅಲ್ಲಿ  ಆದಂ ನಬಿ (ಅ.ಸ) ರನ್ನು ಕಂಡೆನು.ಆದಂ ನಬಿ ನನಗೆ ಸ್ವಾಗತಿಸಿದರು_. _ನನಗೆ ಬೇಕಾಗಿ ಪ್ರಾರ್ಥಿಸಿದರು.ಅದೇ ರೀತಿ ನಾನು  ಎರಡನೇ ಮೂರನೇ ನಾಲ್ಕನೇ ಐದನೇ ಆರನೇ ಏಳನೇ ಆಕಾಶದಲ್ಲಿ  ಸಂಚರಿಸಿದೆ._  _ಅಲ್ಲಿಯೂ ಕೂಡ ಇದೇ ರೀತಿ ಪ್ರಶ್ನೋತ್ತರಗಳಿದ್ದವು.ಕ್ರಮವಾಗಿ ನಾನು ಆ ಆಕಾಶದಲ್ಲಿ ಈಸಾನಬಿ ಮತ್ತು ಯಹ್ಯಾನಬಿ, ಯೂಸುಫ್  ನಬಿ,ಇದ್ರೀಸ್ ನಬಿ,ಹಾರೂನ್ ನಬಿ , ಮೂಸಾನಬಿ, ಇಬ್ರಾಹಿಮ್ ನಬಿಯವರನ್ನು ಸಂದರ್ಶಿಸಿದೆ._ _ಅವರು  ನನಗೆ ಬೇಕಾಗಿ ಪ್ರಾರ್ಥಿಸಿದರು.
ನಂತರ ಜಿಬ್ರೀಲ್ ನನ್ನನ್ನು ಸಿದ್ರತುಲ್ ಮುಂತಹಾಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಾನು  ಅದ್ಭುತ ಮರಗಳನ್ನು ಕಂಡೆನು.ನಂತರ ಅಲ್ಲಾಹನು ನನಗೆ  ಕೆಲವು ವಹ್ಯ್ ಗಳನ್ನು ನೀಡಿದ.ಪ್ರತಿದಿನ 50 ರಕಅತ್ ನಮಾಝನ್ನು ಕಡ್ಡಾಯಗೊಳಿಸಿದ. ಮರಳಿ ಬರುವಾಗ ಮೂಸಾ ನಬಿ ಕೇಳಿದರು: ತಮ್ಮ ಸಮುದಾಯಕ್ಕೆ ಅಲ್ಲಾಹನು ಏನನ್ನು ಕಡ್ಡಾಯಗೊಳಿಸಿದ. ನಾನು ಹೇಳಿದೆ  ಪ್ರತಿದಿನ 50 ವಖ್ತ್ ನಮಾಝ್ ಕಡ್ಡಾಯ ಮಾಡಿದ್ದಾನೆ. ಮೂಸಾ ನಬಿ ಹೇಳಿದರು: ನೀವು ನಿಮ್ಮ  ಪ್ರಭುವಿನೆಡೆಗೆ ಧಾವಿಸಿ  ಇದನ್ನು  ಕಡಿತಗೊಳಿಸಲು ಹೇಳಿ . ನಿಮ್ಮ ಸಮುದಾಯಕ್ಕೆ ಇದನ್ನು ನಿರ್ವಹಿಸಲು ಸಾಧ್ಯವಿಲ್ಲ. ಕಾರಣ, ಬನೂ ಇಸ್ರಾಈಲರಿಂದ ನಾನು  ಅನುಭವಿಸಿದ ವಿಷಯವಾಗಿದೆ ಇದು. ನಾನು  ಅಲ್ಲಾಹುವಿನೆಡೆಗೆ ಹೋದೆ ಹಾಗೆ ಅಲ್ಲಾಹನು 5 ವಖ್ತ್ ಕಡಿತಗೊಳಿಸಿದ. ನಾನು  ನನ್ನ ಪ್ರಭು ಮತ್ತು  ಮೂಸಾ ನಬಿಯ ಮಧ್ಯೆ  9 ಸಲ ಸಂಚಾರ ಮಾಡಿ ಮರಳಿದೆ. ಪ್ರತಿಯೊಂದು ಸಲ 5 ವಖ್ತ್ ನ ರೂಪದಲ್ಲಿ ಕಡಿತಗೊಳಿಸಿದ. ಅಲ್ಲಾಹನು ನನ್ನಲ್ಲಿ ಹೇಳಿದ : ಸ್ತುತಿಸಲ್ಪಟ್ಟ ನಬಿಯೇ... ಖಂಡಿತವಾಗಿಯೂ ಪ್ರತಿ ದಿವಸಕ್ಕೆ ಇರುವ 5 ವಖ್ತ್ ನಮಾಝ್ನಲ್ಲಿ ಪ್ರತಿಯೊಂದು ವಖ್ತ್ ನಮಾಝಿಗೆ 10 ವಖ್ತ್ ನಮಾಝಿನ ಪ್ರತಿಫಲವಿದೆ. ಆದರಿಂದ 5 ವಖ್ತ್ ನಮಾಝಿಗೆ 50 ವಖ್ತ್ ನಮಾಝಿನ ಪ್ರತಿಫಲ ಲಭಿಸಲಿದೆ. 5 ವಖ್ತಾಗಿ ಕಡಿತಗೊಳಿಸಿದ ನಂತರ ನಾನು ಮಾಸಾ ನಬಿಯ ಬಳಿಗೆ ಬಂದೆ.ಆವಾಗ ಮಾಸಾ ನಬಿ ಹೇಳಿದರು. ಇದನ್ನು ಕೂಡಾ ಕಡಿತಗೊಳಿಸಲು ಹೇಳಿ ಎಂದಾಗ , ನಾನು  ಹೇಳಿದೆ: ನಾನು  ನನ್ನ  ಪ್ರಭುವಿನ ಕಡೆಗೆ ಅನೇಕ ಬಾರಿ ಹೋಗಿ ಬಂದೆ ಇನ್ನೂ ಹೋಗಲು  ನನಗೆ  ನಾಚಿಕೆಯಾಗುತ್ತದೆ._

🔵 _*ಹಿಕ್-ಮತ್ ಗಳು...*_

_ಮಕ್ಕಾದಿಂದ ನೇರ ಆಕಾಶಕ್ಕೆ ಸಂಚಾರ ಮಾಡದೇ ಬೈತುಲ್ ಮುಖದ್ದಸ್ ಗೆ ಹೋಗಿ ಅಲ್ಲಿಂದ  ಮಿಅರಾಜ್ ನಡೆಸಿದರ ಹಿಂದೆ  ಮೂರು ಹಿಕ್-ಮತ್ ಗಳಿವೆ._
_1. ಮಕ್ಕಾದಿಂದ ನೇರ ಆಕಾಶಕ್ಕೆ ಹೊರಟಿದ್ದರೆ ನಿಷೇಧಿಸುವವರ ಮುಂದೆ ಸತ್ಯವನ್ನು ತಿಳಿ ಹೇಳಲು ಸಾಧ್ಯವಾಗದೆ ಬರಬಹದು. ಅದೇ ಸಮಯ ಬೈತುಲ್ ಮುಖದ್ದಸಿಗೆ ಮೊದಲು ಯಾತ್ರೆ  ಮಾಡಿದರಿಂದ ಅಲ್ಲಿನ ವಿಶೇಷತೆಗಳು ದಾರಿ ಮಧ್ಯೆ  ಕಂಡ ವ್ಯಾಪಾರ ಸಂಘದ ವಿವರಗಳು ಸತ್ಯ ನಿಷೇಧಿಗಳಿಗೆ ವಿವರಿಸಿಕೊಟ್ಟರು. ಇದರಿಂದ ಅವರಿಗೆ ಮನದಟ್ಟಾಗುವ ರೀತಿಯಲ್ಲಿ ಸಾಕ್ಷ್ಯಾಧಾರ ನೀಡಲು ನಬಿಯವರಿಗೆ ಸಾಧ್ಯವಾಯಿತು._ 
_2.ಅನೇಕ ಅಂಬಿಯಾಗಳು ಹಿಜ್ರಾ ಹೋದ ಊರಿಗೆ (ಫೆಲಸ್ತೀನ್) ಯಾತ್ರೆ ಹೋದ ಮಹತ್ವ ಲಭಿಸಲು._
_3.ಮಸ್-ಅದುಲ್ ಮಲಾಯಿಕತ್ (ಮಲಕ್ಗಳು ಹೋಗಿ  ಬರುವ ಸ್ಥಳ) ಎಂಬ  ಹೆಸರಿರುವ ಆಕಾಶ ದ್ವಾರ ಬೈತುಲ್ ಮುಖದ್ದಸಿನ ನೇರ ಇರುವುದು. ಅದರ ಮುಖಾಂತರ ನೇರ ಆಕಾಶಕ್ಕೆ ಪ್ರವೇಶಿಸಲು ಬೇಕಾಗಿ._

🔵 _*ರಜಬ್ ತಿಂಗಳ ಉಪವಾಸ.*_

_ಒಂದು ದಿನ ಪ್ರಕಾಶದಿಂದ ಕಂಗೊಳಿಸುವ ಒಂದು ಪರ್ವತದ ಮೇಲೆ ಈಸಾ ನಬಿ (ಅ.ಸ) ಸಂಚರಿಸುವಾಗ ಅಲ್ಲಾಹನೊಂದಿಗೆ ಕೇಳಿದರು:ಈ ಪರ್ವತ ನನ್ನೊಂದಿಗೆ ಮಾತನಾಡುವ ಹಾಗೆ ಮಾಡು. ತಕ್ಷಣ ಪರ್ವತ ಕೇಳಿತು: ಯಾ ರೂಹಲ್ಲಾಹ್ ತಾವು  ಯಾಕಾಗಿ ನನ್ನೊಂದಿಗೆ  ಮಾತನಾಡಬೇಕು..?_
_ಆವಾಗ ನೀನು ಇಷ್ಟೊಂದು ಪ್ರಕಾಶಿಸಲು ಕಾರಣವೇನೆಂದು ಈಸಾ ನಬಿ ಕೇಳಿದರು. ಪರ್ವತ ಹೇಳಿತು: ನನ್ನೊಳಗೆ ಒಬ್ಬ ವ್ಯಕ್ತಿ ಜೀವಿಸುತ್ತಿದ್ದಾನೆ. ಆವಾಗ ಈಸಾ ನಬಿ ಆ ವ್ಯಕ್ತಿಯನ್ನು  ಹೊರಗೆ ಬರುವಂತೆ ಹೇಳುತ್ತಾರೆ._  _ಆ ಪರ್ವತದ ಒಳಗಿನಿಂದ ಒಬ್ಬ ಸುಂದರ ಯುವಕ ಹೊರಗೆ ಬಂದು ಹೇಳುತ್ತಾನೆ: ನಾನು  ಮೂಸಾನಬಿಯಮರ ಸಮುದಾಯದ ವ್ಯಕ್ತಿ.  ನಾನು  ಮುಹಮ್ಮದ್ ನಬಿಯಮರ ಸಮುದಾಯದೊಂದಿಗೆ ಸೇರಲು ಅಲ್ಲಾಹನಲ್ಲಿ ಕೇಳಿಕೊಂಡಾಗ ನನಗೆ ದೀರ್ಘಾಯುಷ್ಯ ನೀಡಿ ಈ ಪರ್ವತದಲ್ಲಿ ಇರಿಸಿದ್ದಾನೆ. 600 ವರ್ಷವಾಯಿತು ನಾನು ಇದರೊಳಗೆ ಅಲ್ಲಾಹನಿಗೆ ಆರಾಧಿಸುತ್ತಿರುವುದು. ಇದನ್ನ ಕೇಳಿದ ಈಸಾ ನಬಿ ಅಲ್ಲಾಹನೇ ಈ ವ್ಯಕ್ತಿಗಿಂತ ಮಹತ್ವವಿರುವ ವ್ಯಕ್ತಿ  ನಿನ್ನ ಬಳಿ ಯಾರಾದರೂ ಇದ್ದಾರ..? ಆವಾಗ ಅಲ್ಲಾಹನು ಹೇಳುತ್ತಾನೆ: ಮುಹಮ್ಮದೀಯ ಸಮುದಾಯದಲ್ಲಿ ಯಾರಾದರೂ ರಜಬ್ ನ ಒಂದು ದಿವಸ ಉಪವಾಸ ನಿರ್ವಹಿಸಿದರೆ ಅವನಿಗೆ  ಈ ನನ್ನ ಬಳಿ ಈ ವ್ಯಕ್ತಿಗಿಂತ ತುಂಬಾ ಮಹತ್ವವಿದೆ._
_ಸ್ವರ್ಗದಲ್ಲಿ ಹಾಲಿಗಿಂತ ಬಿಳುಪಾದ ಜೇನಿಗಿಂತ ಸಿಹಿಯಾದ  ರಜಬ್ ಎಂಬ ನದಿ ಇದೆ. ರಜಬ್ ತಿಂಗಳಲ್ಲಿ ಉಪವಾಸ ನಿರ್ವಹಿಸಿದವನಿಗೆ ಆ ನದಿಯ ನೀರನ್ನು  ಕುಡಿಸಲಾಗುವುದು._ 

_*ಅಲ್ಲಾಹನೇ ರಜಬ್ ಶಅಬಾನಿನನಲ್ಲಿ ಬರಕತ್ ನೀಡು. ಪರಿಶುದ್ಧ  ರಮಳಾನ್ ದಯಪಾಲಿಸು.. ಆಮೀನ್*_

_*MAXIMUM SHARE*_

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...