Skip to main content

ಇಸ್ರಾಅ್-ಮಿಅ್ ರಾಜ್ ನ ಸುತ್ತ ಒಂದು ಹೃಸ್ವ ನೋಟ

ಇಸ್ರಾಅ್-ಮಿಅ್ ರಾಜ್ ನ ಸುತ್ತ ಒಂದು ಹೃಸ್ವ ನೋಟ

🌷🌷🌷🌷🌷🌷🌷🌷🌷🌷🌷

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🌷🌷🌷🌷🌷🌷🌷🌷🌷🌷🌷

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮು ಹಾನಿ'ಅ್ ರಳಿಯಲ್ಲಾಹು ಅನ್ಹ ರವರ ಮನೆಯಲ್ಲಿ ತಂಗಿದ ರಾತ್ರಿ ಯಾಗಿತ್ತು ಇಸ್ರಾಅ್ , ಮಿಅ್ ರಾಜ್ ಸಂಭವಿಸಿದ್ದು‌. ಮನೆಯ ಮೇಲ್ಛಾವಣಿ ಬಿರುಕು ಬಿಟ್ಟಿತು. ಆ ಮೂಲಕ ಮಲಕುಗಳು ಇಳಿದು ಬಂದರು.ಬಂದ ಮಲಕುಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮಸ್ಜಿದುಲ್ ಹರಮ್ ಗೆ ಕರೆದೊಯ್ದರು. ಅಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಎದೆಯನ್ನು ಸೀಳಿ ಹೃದಯವನ್ನು  ಝಮ್ ಝಮ್ ನೀರಿನಿಂದ ಅಭಿಷೇಕ ಮಾಡಲಾಯಿತು.

ಮಸ್ಜಿದುಲ್ ಹರಮ್ ನ ಹೊರ ಭಾಗದಲ್ಲಿ ಸಜ್ಜುಗೊಳಿಸಿದ್ದ ಬುರಾಖ್ ಎಂಬ ವಾಹನದಲ್ಲಿ ಮಸ್ಜಿದುಲ್ ಹರಮ್ ನಿಂದ  ಮಸ್ಜಿದುಲ್ ಅಖ್ಸಾ ಗೆ ಬುರಾಖ್ ಮೂಲಕ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮತ್ತು ಜಿಬ್ರೀಲ್ ಬಂದು ಇಳಿದರು. ಬುರಾಖ್ ಎಂಬ ವಾಹನವನ್ನು ಅಲ್ಲೇ ಸಮೀಪದ ದ್ವಾರಕ್ಕೆ ಕಟ್ಟಿ ಹಾಕಲಾಯಿತು.

ಇಲ್ಲೊಂದು ವಿಸ್ಮಯಕಾರಿ ಸಂಭವ ವಿವರಿಸ ಬೇಕಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಇಸ್ರಾಅ್ ನಡೆಯುವ ಅಂದು ರಾತ್ರಿ ಮಸ್ಜಿದುಲ್ ಅಖ್ಸಾದ ಕೆಲಸಗಾರನು ರಾತ್ರಿ ಮಸೀದಿಯ ಎಲ್ಲಾ  ಬಾಗಿಲು ಮುಚ್ಚಿದರೂ ಒಂದು ಬಾಗಿಲು ಮಾತ್ರ ಎಷ್ಟು ಪ್ರಯತ್ನ ಪಟ್ಟರು ಮುಚ್ಚಲಾಗಲೇ ಇಲ್ಲ. ಅದೇ ರಾತ್ರಿ ಯಾಗಿತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಆ ಮಸೀದಿಗೆ ಆಗಮಿಸಿದ್ದು. ಇದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮಸ್ಜಿದುಲ್ ಅಖ್ಸಾಗೆ ಬಂದಿದ್ದಾರೆಂಬುದನ್ನು ಜನತೆಗೆ ತೋರಿಸಲು ಅಲ್ಲಾಹನು ಮಾಡಿದ ಹಿಕ್ಮತ್ ಎಂದರೆ ತಪ್ಪಲ್ಲ.

ಮಸ್ಜಿದುಲ್ ಅಖ್ಸಾದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಪೂರ್ವ ಪ್ರವಾದಿ ಗಳಿಗೆ ಇಮಾಮ್ ನಿಂತು ನಮಾಝ್ ಮಾಡುತ್ತಾರೆ. ಎಷ್ಟೂ ವರ್ಷಗಳ ಮೊದಲು ವಫಾತ್ ಆಗಿ ಹೋದ ಪ್ರವಾದಿ ಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಹಿಂದೆ ಮ'ಅ್ ಮೂಮ್ ಆಗಿ ನಮಾಝ್ ಮಾಡಿದ್ದು ಮಾತ್ರವಲ್ಲ; ಅವರೊಂದಿಗೆ ಮಾತುಕಥೆಯನ್ನೂ ನಡೆಸಿದ್ದರು.

ಖುರ್ ಆನ್ ಇಸ್ರಾಅ್ ನ ಕುರಿತು ಹೇಳುವುದು ಹೀಗೆ: "ಮಸ್ಜಿದ್ ಹರಮ್ ನಿಂದ ಮಸ್ಜಿದುಲ್ ಅಖ್ಸಾ ತನಕ ತನ್ನ ದಾಸ ನನ್ನು ರಾತ್ರಿಯ ಅವಧಿಯಲ್ಲಿ ಯಾತ್ರೆ ನಡೆಸಿದ ಅಲ್ಲಾಹನು ಎಷ್ಟು ಪರಿಶುದ್ಧನು" ಮಕ್ಕಾದಿಂದ ಸಾವಿರಾರು ಕಿಲೋಮೀಟರ್ ಇರುವ ಪೆಲಸ್ತೀನ್ ನ ಬೈತುಲ್ ಮುಖದ್ದಸ್ ಗೆ ರಾತ್ರಿ ಹೃಸ್ವ ಸಮಯದಲ್ಲಿ ಯಾತ್ರೆ ನಡೆಸುವ ಮೂಲಕ ಅಲ್ಲಾಹನು ಅವನ ಸಾಮರ್ಥ್ಯ ವನ್ನು ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವನ ಪ್ರವಾದಿ ಎಂಬುದನ್ನು ಮಕ್ಕಾ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದ.

ಮಕ್ಕಾ ದಿಂದ ಪ್ಯಾಲಸ್ತೀನ್ ನ ಮಸ್ಜಿದುಲ್ ಅಖ್ಸಾ ತನಕ ಇರುವ ಯಾತ್ರೆಯನ್ನು ಇಸ್ರಾಅ್ ಎನ್ನಲಾಗುತ್ತದೆ.ನಂತರ ಬೈಬಲ್ ಮುಖದ್ದಸ್ ನಿಂದ ನೇರ ಆಕಾಶರೋಹಣ ನಡೆಯುತ್ತದೆ. ಪ್ರತೀ ಆಕಾಶದಲ್ಲಿಯೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಭವ್ಯ ಸ್ವಾಗತ ನೀಡಲಾಗುತ್ತದೆ. ಗತ ಪ್ರವಾದಿ ಗಳಿಂದ ಸ್ವಿಕಾರವೂ ನಡೆಯುತ್ತದೆ.ಒಂದನೇ ಆಕಾಶದಲ್ಲಿ ಆದಿ ಪಿತ ಆದಮ್ ನಬಿ ಅಲೈಹಿವಸಸ್ಸಲಾಮರು ಸ್ವಾಗತಿಸಿದರೆ,ಏಳನೇ ಆಕಾಶದಲ್ಲಿ ಖಲೀಲುಲ್ಲಾಹಿ ಇಬ್ರಾಹಿಮ್ ನಬಿ ಅಲೈಹಿಸ್ಸಲಾಮ್ ರವರು ಸ್ವಾಗತಿಸುತ್ತಾರೆ. ನಂತರ ಅಲ್ಲಿಂದ ಸಿದ್ರತುಲ್ ಮುಂತಹಾಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೋಗುತ್ತಾರೆ.

ಯಾತ್ರೆ ಮಧ್ಯೆ ಸ್ವರ್ಗದಲ್ಲಿ ಸಿಗುವ ಸಕಲ ಸುಖಾಡಂಬರಗಳ  ದರ್ಶನ ಮಾಡಲಾಗುತ್ತದೆ‌. ಅದರ ಜೊತೆಗೆ ನರಕದಲ್ಲಿ ವಿವಿಧ ಪಾಪಿಗಳಿಗೆ ನೀಡುವ ಶಿಕ್ಷೆಯ ಪ್ರಮಾಣವನ್ನೂ ತೋರಿಸಲಾಗುತ್ತದೆ. ಇದೆಲ್ಲ ನೇರ ದರ್ಶಿಸಿದ ಬಳಿಕ ಅಲ್ಲಾಹನ ಸಾಮಿಪ್ಯ ಸಾಗುತ್ತಾರೆ.

ನಿಗಧಿ ಪಡಿಸಿದ ಸ್ಥಳದಲ್ಲಿ ಅಲ್ಲಾಹನೊಂದಿಗೆ  ಅಭಿಮುಖ ಸಂಭಾಷಣೆ ನಡೆಸುತ್ತಾರೆ. ಮರಳಿ ಬರುವಾಗ ಅಲ್ಲಾಹನು ಐವತ್ತು ವಕ್ತ್ ನಮಾಝ್ ಅನ್ನು ಕಾಣಿಕೆ ಯಾಗಿ ನೀಡುತ್ತಾನೆ.ಮೂಸ ಅಲೈಹಿಸ್ಸಲಾಮರ ಮಧ್ಯವರ್ತಿಯ ಕಾರಣ ಅದು ಐದು ವಕ್ತಾಗಿ ಬದಲಾಗುತ್ತದೆ.
ಬೈತುಲ್ ಮುಖದ್ದಸ್ ನಿಂದ ಆಕಾಶರೋಹಣ ಗೈದ ಈ ಘಟನೆ ಯನ್ನು ಮಿಅ್ ರಾಜ್ .

ಮರುದಿನ‌ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ರಾತ್ರಿ ನಡೆದ ಘಟನೆ ಯನ್ನು ಮಕ್ಕಾ ಜನತೆಯ ಮುಂದಿಡುತ್ತಾರೆ.ಮಕ್ಕಾದ ಶತ್ರುಗಳು ಅಪಹಾಸ್ಯ ಮಾಡುತ್ತಾ ವಿವಿಧ ಪ್ರಶ್ನೆ ಗಳನ್ನು ಕೇಳುತ್ತಾರೆ. ಎಲ್ಲದಕ್ಕೂ ಸೂಕ್ತ ಉತ್ತರ ನೀಡಿದಾಗ ಅವರ ಬಾಯಿ ಮುಚ್ಚಲ್ಪಡುತ್ತದೆ. ಈ ಘಟನೆ ನಡೆದದ್ದು ರಜಬ್ ತಿಂಗಳ ಇಪ್ಪತ್ತೇಳನೆ ರಾತ್ರಿಯಾಗಿತ್ತು. ಮುಸ್ಲಿಂ ಜಗತ್ತು ಇಸ್ರಾಅ್ ,ಮಿಅ್ ರಾಜ್ ಸಂಭವವನ್ನು  ನಮಾಝ್ ನ ವಾರ್ಷಿಕೋತ್ಸವಾಗಿ  ರಜಬ್ 27 ರಂದು ಉಪವಾಸ ಕೈ ಗೊಳ್ಳುವ ಮೂಲಕ ಆಚರಿಸುತ್ತಿದೆ.ರಜಬ್ ಇಪ್ಪತ್ತೇಳನೆ ದಿನ ಉಪವಾಸ ಆಚರಿಸಲು ಸುನ್ನತ್ ಇದೆ.ದಿನ ನಿತ್ಯ ನಮಾಝ್ ಖಳಾ ಮಾಡದೆ ಸಾಧ್ಯವಾದಷ್ಟು ಜಮಾ ಅತ್ ಆಗಿಯೇ ನಿರ್ವಹಿಸುತ್ತೇನೆಂಬ ಪ್ರತಿಜ್ಞೆ ಮೂಲಕ ಇಸ್ರಾಅ್, ಮಿಅ್ ರಾಜ್ ಆಚರಿಸೋಣ.

🌹🌷🌹🌷🌹🌷🌹🌷🌹🌷🌹

🌳🌳🌳🌳🌳🌳🌳🌳🌳🌳🌳

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...