ಕಿಯಾಮುಲೈಲ್ ನಮಾಝ್: ಹೀಗೊಂದು ನಮಾಝ್ ಇದೆಯಾ..
🔭 *ತೋಕೆ ಉಸ್ತಾದರ ಸುನ್ನೀ ವಾಣೆಯಿಂದ*
*ಪವಿತ್ರ ರಮಳಾನ್ ತಿಂಗಳ ಕೊನೆಯ ಹತ್ತರಲ್ಲಿ ಕೆಲವು ಮಸೀದಿ ಗಳಲ್ಲಿ ಖಿಯಾಮುಲೈಲ್ ಎಂಬ ಹೆಸರಿನಲ್ಲಿ ಅರ್ಧ ರಾತ್ರಿಯ ಬಳಿಕ ಊರ ಜನರನ್ನು ಸೇರಿಸಿ 11 ರಕ ಅತ್ ನಮಾಝ್ ಮಾಡುತ್ತಿರುವುದು ಕಂಡು ಬರುತ್ತದೆ. ಇತ್ತೀಚೆಗಿನ ಕೆಲವು ವರ್ಷ ಗಳ ಹಿಂದೆ ಯಾಗಿದೆ ಇದು ಆರಂಭಗೊಂಡದ್ದು*..?
ನಿಜವಾಗಿ ರಾತ್ರಿ ಯಲ್ಲಿ ವಿತ್ರ್, ತಹಜ್ಜುದ್ ಹಾಗೂ ರಮಳಾನಿನಲ್ಲಿ ತರಾವೀಹ್ ಈ ಮೂರು ನಮಾಝನ್ನಾಗಿದೆ ಪವಿತ್ರ ಇಸ್ಲಾಂ ತಿಳಿಸಿ ಕೊಟ್ಟಿರುವುದು.ವಿತ್ರ್ ನಮಾಝ್ ಇದು ಪ್ರತಿ ರಾತ್ರಿ ಸುನ್ನತ್ ಇರುವ ನಮಾಝ್ ಆಗಿದೆ.ಇದರ ಗರಿಷ್ಠ ರಕ ಅತ್ 11 ಕನಿಷ್ಠ ರಕ ಅತ್ 1 ಆಗಿದೆ. ತಹಜ್ಜುದ್ ನಮಾಝ್ ಗೆ ನಿರ್ದಿಷ್ಟ ರಕ ಅತ್ ಗಳಿಲ್ಲ. ಅಂದರೆ ಎಷ್ಟು ಬೇಕಾದರೂ ನಮಾಝ್ ನಿರ್ವಹಿಸಬಹುದು.
ತರಾವೀಹ್ ನಮಾಝ್ ರಮಳಾನ್ ತಿಂಗಳಲ್ಲಿ ಮಾತ್ರವಿದ್ದು 20 ರಕ ಅತ್ ಗಳಾಗಿವೆ.ಈ ಮೂರು ನಮಾಝ್ ಗಳು ಕ್ರಮವಾಗಿ ವಿತ್ರ್, ತಹಜ್ಜುದ್ ಹಾಗೂ ತರಾವೀಹ್ ಎಂಬೀ ಹೆಸರು ಗಳಿಂದ ತಿಳಿಯಲ್ಪಟ್ಟಿದೆ. ಭಾಷಾರ್ಥದಲ್ಲಿ ಅಂದರೆ ರಾತ್ರಿ ಯಲ್ಲಿ ನಿರ್ವಹಿಸಲಾಗುವ ನಮಾಝ್ ಗಳು ಎಂಬರ್ಥದಲ್ಲಿ *ಇವುಗಳೆಲ್ಲವನ್ನು ಕಿಯಾಮುಲೈಲ್ , ಸ್ವಲಾತುಲೈಲ್ ಎಂದೂ ಹೇಳಬಹುದು.*
ಇದಲ್ಲದೆ ಕಿಯಾಮುಲೈಲ್ ಎಂಬ ಪ್ರತ್ಯೇಕ ನಮಾಝ್ ಇಸ್ಲಾಮಿನಲ್ಲಿ ಇಲ್ಲ.
ಈಗಾಗಲೇ ಕೆಲವಡೆ ಕಿಯಾಮುಲೈಲ್ ಹೆಸರಲ್ಲಿ 11 ರಕ ಅತ್ ನಿರ್ವಹಿಸಲಾಗುತ್ತಿದೆ ಅದರ ಕುರಿತು ಅವಲೋಕಿಸಬೇಕಾದ ಅಗತ್ಯ ಇದೆ.ಏಕೆಂದರೆ, ಕೆಲವೊಮ್ಮೆ ಇದು ವಿತ್ರ್ ನಮಾಝ್ ಆಗಿದ್ದರೂ ಸಹ ಇದಕ್ಕೆ ನೇತೃತ್ವ ನೀಡುವವರು ಇದು ವಿತ್ರ್ ನಮಾಝ್ ಎಂದು ಜನ ಸಮಾನ್ಯರಲ್ಲಿ ತಿಳಿಸುವುದಿಲ್ಲ. ಹೊರತು ಇದೊಂದು ಪ್ರತ್ಯೇಕ ನಮಾಝೆಂದೇ ಅವರೆಡೆಯಲ್ಲಿ ಬಿಂಬಿಸುತ್ತಾರೆ. ಮಕ್ಕಾ ಮದೀನಾದಲ್ಲಿ 11 ರಕ ಅತ್ ಕಿಯಾಮುಲೈಲ್ ನಮಾಝ್ ಮಾಡುತ್ತಾರೆ, ಆದ್ದರಿಂದ ನಾವು ಮಾಡೋಣ ಎಂದಾಗಿದೆ ಅವರ ವಾದ. ಈ ಕಾರಣ ದಿಂದ ಹೆಚ್ಚಿನ ಜನರು ಕಿಯಾಮುಲೈಲ್ ಎಂಬ ಪ್ರತ್ಯೇಕ ನಮಾಝ್ ಇದೆ ಎಂದು ನಂಬಿದ್ದಾರೆ.
ಇವರು ಪುರಾವೆ ಯಾಗಿ ನೀಡುವ ಹದೀಸ್:
عن عائشة أن رسول الله صلى الله عليه وسلم كان يصلي من الليل إحدى عشرة ركعة يوتر منها بواحدة
ಆಯಿಶಾ ರಳಿಯಲ್ಲಾಹು ಅನ್ಹಾ ರವರಿಂದ ವರದಿ: *ಅವರು ಹೇಳುತ್ತಾರೆ, 'ಪ್ರವಾದಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ರಾತ್ರಿ ಯಲ್ಲಿ 11 ರಕ ಅತ್ ನಮಾಝ್ ಮಾಡುತ್ತಿದ್ದರು. ಅದರಲ್ಲಿ ಒಂದು ರಕ ಅತ್ ವಿತ್ರ್ ನಿರ್ವಹಿಸುತ್ತಿದ್ದರು."* (ಮುಸ್ಲಿಮ್)
ನಿಜವಾಗಿ ಯೂ ಈ ಹದೀಸ್ ಮತ್ತು ಈ ರೀತಿಯ ಎಲ್ಲಾ ಹದೀಸ್ ಗಳು ವಿತ್ರ್ ನಮಾಝ್ ನ ಬಗ್ಗೆ ವರದಿಯಾದ ಹದೀಸ್ ಗಳಾಗಿದೆ. ಇದ್ಯಾವುದು ಕಿಯಾಮುಲೈಲ್ ಎಂಬ ಪ್ರತ್ಯೇಕ ನಮಾಝ್ ಗೆ ಪುರಾವೆ ಯಾಗಲಾರದು. ಜಗತ್ತಿನಲ್ಲಿ ಒಬ್ಬರೇ ಒಬ್ಬ ವಿದ್ವಾಂಸರು ವಿತ್ರ್, ತಹಜ್ಜುದ್, ತರಾವೀಹ್ ಇದಲ್ಲದೆ ಕಿಯಾಮುಲೈಲ್ ಎಂಬ ಪ್ರತ್ಯೇಕ ನಮಾಝ್ ಇದೆಯೆಂದು ತಿಳಿಸಿಲ್ಲ.
▪▪▪▪
*ಇದು ತೋಕೆ ಉಸ್ತಾದರ ಲೇಖನ ಅಲ್ಪ ಭಾಗ*
Comments