Skip to main content

ಎಸ್ಸೆಸ್ಸೆಫ್ಫಿನಲ್ಲಿ ಅಂಗವಾಗೋಣ

*ನಾನು*: ಗೆಳೆಯ , super ಮೂವಿ ಬಂದಿದೆ..second show      ಗೆ ಹೋಗುವ.
*ಅವನು*: ಹೇ. ನಾನಿಲ್ಲ ಇವತ್ತು SSFನ ಮೀಟಿಂಗ್ ಇದೆ.
*ಗೆಳೆಯರು*: ಹುಂ.. ಇವ ದೊಡ್ಡ SSF ನವ.

*ನಾನು*: ಇಲೆಕ್ಷನ್ ಬಂತಲ್ಲ ರಾತ್ರಿ Notice ಅಂಟಿಸಲು ಹೋಗುವ..
*ಅವನು*: ಇಲ್ಲ ಗೆಳೆಯ ನನಗೆ ಇಶಾರ ದ ಪೋಸ್ಟರ್ ಅಂಟಿಸಲು ಇದೆ. Sorry.
*ಗೆಳೆಯರು*: ಹುಂ..  ಬಾರೋ ಗಮ್ಮತ್ತು ಪಾರ್ಟಿ ಸಿಗುತ್ತದೆ...

*ನಾನು*: ಗೆಳೆಯ ..ಇವತ್ತು ಕ್ಲಬ್ ದು ಓರ್ಕೆಸ್ಟ್ರಾ ಇದೆ.. ಸೂಪರ್ ಇದೆ.. ಬಾ ಹೋಗೋಣ.
*ಅವನು*: ನಾಡಿದ್ದು SSF  ಪ್ರತಿಭೋತ್ಸವ ಇದೆ, ಸುಮಾರು ಕೆಲ್ಸ ಬಾಕಿ ಇದೆ.
*ಗೆಳೆಯರು*: ಹೇ..ಇವನೊಬ್ಬ.. ಆ ಮಕ್ಕಳನ್ನು ಇನ್ನೂ ಬಿಡಲಿಲ್ಲ..

*ನಾನು*; ಆ ಜ್ವಲ್ಲರಿ ಉದ್ಘಾಟನೆಗೆ ಫಿಲ್ಮ್ ಸ್ಟಾರ್ ಬರ್ತಾರೆ.. ಹೋಗುವ..
*ಅವನು*: ಹೂ.. ಹು... ಇವತ್ತು ಮಹ್ಲರತುಲ್ ಬದ್ರಿಯ್ಯ ಇದೆ.. ನಾನಿಲ್ಲ.
*ಗೆಳೆಯರು*: ಹುಂ.. ಅಲ್.. ಫಾತಿಹ🤪

*ನಾನು*: ಹೇ..ನಾಳೆ ಗೋವಾ ಟ್ರಿಪ್ ಇದೆ.. ಹೋಗುವ.
*ಅವನು*: ಇಲ್ಲಪ್ಪ next week ಏರ್ವಾಡಿ ಝಿಯಾರತ್ ಟೂರ್ ಇದೆ..
*ಗೆಳೆಯರು*: ಹೇ..ನಿನಗೆ ಬೇರೆ ಕೆಲ್ಸ ಇಲ್ವ.

*ನಾನು*: ನೀನು ಯಾಕೆ ನಮ್ಮ ಗ್ರೂಪಿಂದ Left  ಆದೆ..
*ಗೆಳೆಯರು*: ಹುಂ.. ಅವನಿಗೆ ನಾವೆಲ್ಲ ಆಗಲ್ಲ, ಉಸ್ತಾದ್ ರು ಇರುವ.ಗ್ರೂಪೇ ಆಗಬೇಕು _
*ಅವನು*:  ಹಾಗೇನಿಲ್ಲ.. ಅದರಲ್ಲಿ ಬರುವ ಕೆಟ್ಟ ಪೋಸ್ಟ್ ಗಳಿಗೆ, ನಾಳೆ ಅಲ್ಲಾಹನಲ್ಲಿ ಉತ್ತರ ಹೇಳಬೇಕಾದೀತು.
*ಗೆಳೆಯರು*: ಹುಂ.. ಇವ ದೊಡ್ಡ ಸೂಫಿ..

ನಾವು ಈ ತರದ ಹಲವಾರು ವಿಷಯಗಳಿಗೆ ಆತನನ್ನು ಕರೆದರೆ ಆತ ಮಂದಹಾಸದೊಂದಿಗೆ ಎಲ್ಲವನ್ನೂ ತಿರಸ್ಕರಿಸುತ್ತಿದ್ದ. ಕ್ರಮೇಣ ನಾವು ಆತನನ್ನು ತಮಾಷೆ ಮಾಡಲು ಶುರುಮಾಡಿದರೆ ಆತ ಉಪಾಯವಾಗಿ ಮುಗುಳ್ನಗೆಯೊಂದಿಗೆ ನಮ್ಮಿಂದ ದೂರವಾಗುತ್ತಿದ್ದ. ಆದರೂ ಆತ ನಮ್ಮೆಡೆಯಲ್ಲಿ ಹಾಸ್ಯ  ಪಾತ್ರದಾರಿಯಾಗಿದ್ದ. ಸೂಪಿ, ಔಲಿಯ ಎಂದು ತಮಾಷೆ ಮಾಡುತ್ತಿದ್ದೆವು.
ಒಂದು ದಿನ ನಾನು ಅವನಲ್ಲಿ ಕೇಳಿದೆ: ನೀನು ಸುಮಾರು ಕಾಲ ಆಯಿತಲ್ಲ ಮಾರ್ರೆ.. SSFನ ಹಿಂದೆ ಓಡ್ತಾ ಇದ್ದೀಯಲ್ಲ.. ಅಲ್ಲ ಏನು ಪ್ರಯೋಜನ ಇದೆ,,?
ಆತ ಮುಗುಳ್ನಗುತ್ತಾ ಹೇಳಿದ: ಇನ್ಷಾ ಅಲ್ಲಾಹ್ , ಅಲ್ಲಾಹನ ತೌಫೀಕ್ ಇದ್ದರೆ ಒಂದು ದಿನ ನಿನಗೆ ಅದು ತಿಳಿಯುತ್ತದೆ.

ದಿನ ಕಳೆದಂತೆ ದೀನ್, ಮಸೀದಿಯಿಂದ ದೂರವಾಗುತ್ತಿದ್ದ ನಮಗೆ ಜೀವನದಲ್ಲಿ ಮಸೀದಿಯು ಶುಕ್ರವಾರ ಜುಮಅ ಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಆದರೆ ಈತ ಮಾತ್ರ ನಾವು ತಮಾಷೆ ಮಾಡಿದಂತೆ ಅಪ್ಪಟ ಸೂಪಿಯಾಗಿ ಬದಲಾಗಿದ್ದ..

ಅದೊಂದು ದಿನ ರಾತ್ರಿ ನಿದ್ದೆ ಗೆ ಜಾರುವ ಮೊದಲು ವಾಟ್ಸಾಪ್ ನಲ್ಲಿ ಆತನ ಪೋಸ್ಟ್ ಒಂದು ಕಣ್ಣಿಗೆ ಬಿತ್ತು" ಎಲ್ಲೋ ನಿಧನಹೊಂದಿದ ssf ಕಾರ್ಯಕರ್ತನ ದುಆ ವಸೀಯತ್ ಆಗಿತ್ತು... ಎಂದಿನಂತೆ ಆಗಲೂ ಯೋಚಿಸಿದೆ " ಇವರೆಲ್ಲ ಒಂದು ಜೀವನ.. ಗೂಡಿನಲ್ಲಿ ರುವ ಗಿಳಿಯಂತೆ" ಹಾಗೇ ನಿದ್ದೆಗೆ ಜಾರಿದೆ. ಮುಂಜಾನೆಯ ಸುಂದರವಾದ ಕನಸಿನಲ್ಲಿ ತೇಲಾಡುತ್ತಿದ್ದಂತೆ ಅಮ್ಮ ಏನೋ ಅನ್ನುತ್ತಾ ಎಚ್ಚರಿಸುತ್ತಿದ್ದರು.. ಏನೆಂದು ಕೇಳಿದಾಗ ತಿಳಿದ ವಾರ್ತೆಯು ನನ್ನನ್ನು ದಿಗ್ಬ್ರಮೆಗೊಳಿಸಿತ್ತು.
ಹೌದು ನಿನ್ನೆಯ ವರೆಗೂ ಸೂಪಿ ಎಂದು ಕರೆದು ತಮಾಷೆ ಮಾಡುತ್ತಿದ್ದ ನಮ್ಮ ಗೆಳೆಯ ಇಹಲೋಕ ತ್ಯಜಿಸಿದ್ದ..
ಇನ್ನಾಲಿಲ್ಲಾಹ್....
ಮಧ್ಯಾಹ್ನ ವಾಗಿತ್ತು ಧಫನ... ನಾನು ಮತ್ತು ಗೆಳೆಯರು ಕಣ್ಣೀರಿನೊಂದಿಗೆ ಆತನ ಮನೆಗೆ ತಲುಪಿದೆವು
ಕುಟುಂಬದೊಂದಿಗೆ ಆತನ ಯಾತ್ರೆ ಯಲ್ಲಿ ಕಣ್ಣೀರಿಡಲು ಸಾವಿರಾರು ಮಂದಿ ಸೇರಿದ್ದರು, ಹೇಳಿ ಕೇಳಿ ಸಣ್ಣ ಕುಟುಂಬ ದವನಾದ ಈತನ ಅಂತ್ಯದಲ್ಲಿ  ಕುರ್ಆನ್ ಪಾರಾಯಣ, ತಹ್ಲೀಲ್, ನಲ್ಲಿ ತಲ್ಲೀನರಾದ ಸಾವಿರಾರು ಜನರನ್ನು ನೋಡಿ ನಾವು ಆಶ್ಚರ್ಯಪಟ್ಟೆವು.ದೊಡ್ಡ ದೊಡ್ಡ ಆಲಿಂ ಗಳು, ಸಯ್ಯಿದ್, ಮುತಅಲ್ಲಿಂ ಗಳ ಪ್ರವಾಹವಾಗಿತ್ತು. ನಾವರಿಯದ ಪ್ರದೇಶ ವಾಸಿಗಳಿಂದ ಇಡೀ ಪರಿಸರವು ತುಂಬಿ ತುಳುಕುತ್ತಿತ್ತು.
ಯಾರಿವರು...?
ಇಷ್ಟಕ್ಕಾದರು ಈತ ಮಾಡಿದ್ದೇನು...?
ssf ನ ಪೋಸ್ಟರ್ ಅಂಟಿಸಿ ಅವರೊಂದಿಗೆ ನಡೆದದ್ದಾ...?
ಅದು ರಾಜಕೀಯ ಪಕ್ಷಗಳಿಗೆ ನಾವೂ ಮಾಡಿದ್ದೇವೆ..
ಆದರೆ  ಇದು ನಮಗೆ ಸಿಗುತ್ತದಾ...   ಹೀಗೆ ಯೋಚನೆಗಳ ಶರಮಾಲೆಯು ತಲೆಯಲ್ಲಿ ಮೂಡುತ್ತಿದ್ದಂತೆ , ಆತ Fbಯಲ್ಲಿ ಹಾಕಿದ ಹಳೆಯ ಪೋಸ್ಟ್ ಒಂದು ನೆನಪಿಗೆ ಬಂತು
"ನಾನು ಸಾಯುವಾಗ ರೀತ್, ಶ್ರಧ್ಧಾಂಜಲಿಯ ಅಗತ್ಯ ನನಗಿಲ್ಲ, ಆದರೆ ತಹ್ಲೀಲ್ ,ಯಾಸೀನ್ ಗಳ ಅಗತ್ಯವಿದೆ ಅದು ಈ ತ್ರಿವರ್ಣ ಧ್ವಜ ದ ನೆರಳಲ್ಲಿ ಸಿಗಲಿದೆ"
ಹೌದು ಅವತ್ತು ನಾನು ಈ ಪೋಸ್ಟ್ ಓದಿಆತನನ್ನು ತಮಾಷೆ ಮಾಡಿದ್ದೆ....
ಯಾ ಅಲ್ಲಾಹ್....
ಹಾಗೇ ಭಾರವಾದ ಮನಸ್ಸಿನೊಂದಿಗೆ ನೋಡುತ್ತಿದ್ದಂತೆ ಕೇಳಿಬಂತು , ಪವಿತ್ರ ಮದೀನಾ ದಲ್ಲಿ ಈತನಿಗೆ ಮಯ್ಯಿತ್ ನಮಾಝ್ ನಿರ್ವಹಿಸುತ್ತಾರಂತೆ.
ಆತ ನನಗೆ ಉತ್ತರ ನೀಡದ  ಪ್ರಶ್ನೆಯೊಂದು ಮನಸ್ಸಿಗೆ ಬಂತು "ನೀನು ಸುಮಾರು ಕಾಲ ಆಯಿತಲ್ಲ ಮಾರ್ರೆ.. SSFನ ಹಿಂದೆ ಓಡ್ತಾ ಇದ್ದೀಯಲ್ಲ.. ಅಲ್ಲ ಏನು ಪ್ರಯೋಜನ ಇದೆ,,?"
ಇದಕ್ಕೆ ಆತ "ಇನ್ಷಾ ಅಲ್ಲಾಹ್ , ಅಲ್ಲಾಹನ ತೌಫೀಕ್ ಇದ್ದರೆ ಒಂದು ದಿನ ನಿನಗೆ ಅದು ತಿಳಿಯುತ್ತದೆ" ಎಂದಿದ್ದ. ಹೌದು.. ಆ ದಿನವಾಗಿದೆ ಇಂದು... ಎಲ್ಲವೂ ನನಗೆ ಅರ್ಥವಾಗುತ್ತಿದೆ.
ನನಗೆ ಆತನಲ್ಲಿ ಕೇಳಲು ಇನ್ನು ಪ್ರಶ್ನೆಗಳಿಲ್ಲ.. ಆತ ತನ್ನ ಮರಣದಲ್ಲಿಯೇ ಎಲ್ಲವನ್ನೂ ಉತ್ತರಿಸಿದ್ದಾನೆ. ಯೋಚಿಸುತ್ತಿದ್ದಂತೆ
ಅವನು ನನ್ನನ್ನು ಪ್ರಶ್ನಿಸಿದಂತೆ ತೋಚಿತು.."ಓ ಗೆಳೆಯಾ...ನಿನ್ನ ಗೆಳೆಯರನ್ನು ನೋಡು. ಸ್ವಯಂ ನಮಾಜ್ ಮಾಡದ ಅವರು ನಿನಗಾಗಿ ಎಷ್ಟು ಯಾಸೀನ್ ಓದುವರು,?  ಹೆಚ್ಚೆಂದರೆ ನಿನ್ನ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿಯಾರು..ಇನ್ನೇನನ್ನು ನಿರೀಕ್ಷಿಸಲೀ.
ನೀನಿರುವ ಎಷ್ಟು ವಾಟ್ಸಾಪ್ ಗ್ರೂಪ್ಗಳು ನಿನಗಾಗಿ ಒಂದು ಫಾತಿಮಾ ಓದಿ ಹದಿಯ ಮಾಡಬಹುದು. ನೀನಿರುವ ನೀಚ ಗ್ರೂಪ್ ಗಳಿಂದ ನಿನ್ನ ಖಬರ್ ಗೆ ಬರುವುದಾದರೂ ಏನು...? ಪ್ರಶ್ನೆಗಳ ಶರವ್ಯೂಹವನ್ನು ಹರಿಸಿ ಆತ ನನ್ನನ್ನು ಉಸಿರುಗಟ್ಟಿಸುತ್ತಿದ್ದಾನೆ..

ಜೀವನದಲ್ಲಿ ಎಷ್ಟೇ ಆಕ್ಷೇಪ ಹಾಗೂ ಅಪಹಾಸ್ಯಗಳನ್ನು ಎದುರಿಸಿದರೂ  ನಮ್ಮ ಜೀವನವು ಧಾರ್ಮಿಕ ಸೂರಿನಡಿಯಲ್ಲಿರಬೇಕು. ಇದಕ್ಕಾಗಿ SSF ನವನಾಗಿರಲು ಅಭಿಮಾನವಿದೆ...ಬನ್ನಿ ಈ ಆತ್ಮೀಯ ಸಂಘಟನೆಯಲ್ಲಿ ಕೈ ಜೋಡಿಸಿ ಇಹ ಪರ ವಿಜಯ ನಮ್ಮದಾಗಿಸೋಣ..
🇸🇱🇸🇱🇸🇱🇸🇱🇸🇱🇸🇱🇸🇱🇸🇱
(ಅನುವಾದ)....✒ಶಫೀಕ್ ಕೊಯಂಗಿ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...