Skip to main content

ಹದ್ದಾದ್ ರಾತೀಬ್ ಮತ್ತು ಸಲಫಿಯ ಜಹಾಲತ್

ಹದ್ದಾದ್ ರಾತೀಬ್ ಮತ್ತು ಸಲಫಿಯ ಜಹಾಲತ್

🌷🌷🌷🌷🌷🌷🌷🌷🌷🌷

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🌷🌷🌷🌷🌷🌷🌷🌷🌷🌷

ಸಲಪಿ ಹೇಳುವುದು ನೋಡಿ.
👇👇👇👇
*ಹದ್ದಾದ್ ರಾತೀಬ್ ಓದಬಾರದು. ಅದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ.*

ಇದು ಸಲಫಿಯ  ಅಜ್ಞಾನದ ಪರಮಾವಧಿ ಯಲ್ಲದೆ ಇನ್ನೇನು ?

ನಾವು ಇಂದು‌ ಕಾಣುವ ರೀತಿಯಲ್ಲಿರುವ ಪರಿಶುದ್ಧ ಖುರ್ ಆನ್ ಶರೀಫ್, ಹದೀಸ್ ಗ್ರಂಥ ವಾದ ಬುಖಾರಿ ಶರೀಫ್ ಸಹಿತ ಇರುವ ಹದೀಸ್ ಗ್ರಂಥ ಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ.‌ ಹಾಗಾದರೆ ಅದು‌ ಓದಬಹುದೇ ಎಂದು‌ ಕೇಳಿದರೆ ಸಲಪಿ ಬ್ಬೆ ಬ್ಬೆ ಬ್ಬೆ ಎನ್ನುತ್ತಾನೆ.

*ಇಂದು ಕಾಣುವ ಖುರ್ ಆನ್ ಗ್ರಂಥ ಮತ್ತು ಹದೀಸ್ ಗ್ರಂಥಗಳು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ ನಿಜ. ಆದರೆ, ಅದರಲ್ಲಿ ರುವ ವಿಷಯಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತು. ಅದನ್ನು ಜನರಿಗೆ ಓದಲು ಮತ್ತು ಕಲಿಯಲು ಸುಲಭ ಗೊಳಿಸಲು ಗ್ರಂಥ ರೂಪಕ್ಕೆ ಇಳಿಸಲಾಯಿತು.*

ಅದೇ ರೀತಿ ಹದ್ದಾದ್ ರಾತೀಬ್ ಕೂಡ. ಹದ್ದಾದ್ ರಾತೀಬ್ ಎಂಬ ಗ್ರಂಥ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ. ಆದರೆ ಅದರಲ್ಲಿರುವ ವಿಷಯಗಳೆಲ್ಲವೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇದ್ದವು.

ಹದ್ದಾದ್ ರಾತೀಬ್ ನಲ್ಲಿ ಏನಿದೆ ನೋಡೋಣ.
👉 *ಖುರ್ಆನ್*
👉 *ಹದೀಸ್ ನಲ್ಲಿ ವರದಿಯಾದ ದ್ಸಿಕ್ರ್*
👉 *ದುಆ*

ಖುರ್ ಆನ್ ಮತ್ತು ದ್ಸಿಕ್ರ್ ಪ್ರವಾದಿ ಸ್ವಲ್ಲಲ್ಲಾಹು ಕಾಲದಲ್ಲೇ ಇತ್ತು. ಅದನ್ನು ಕ್ರೋಢೀಕರಿಸಿ ಓದಲು ಸುಲಭ ವಾಗುವಂತೆ ಇಮಾಮ್ ಹದ್ದಾದ್ ರಳಿಯಲ್ಲಾಹು ಅನ್ಹು ರವರು ಗ್ರಂಥ ರೂಪವಾಗಿ ರಚಿಸಿ ಅದಕ್ಕೆ ಹದ್ದಾದ್ ಎಂದು ಹೆಸರಿಟ್ಟರು.

*ಖುರ್ ಅನ್ ಗ್ರಂಥ ರಚಿಸಿ ಉಸ್ಮಾನ್ ರಳಿಯಲ್ಲಾಹು ಅನ್ಹು ರವರು ರಸ್ಮುಲ್ ಉಸ್ಮಾನಿ ಎಂದು ಹೆಸರಿಟ್ಟಾಗೆ, ಹದೀಸ್ ಗ್ರಂಥ ರಚಿಸಿ ಇಮಾಮ್ ಬುಖಾರಿ ಯವರು ಹದೀಸ್ ಬುಖಾರಿ ಎಂದು ಹೆಸರಿಟ್ಟ ಹಾಗೆ ಹದ್ದಾದ್ ರಳಿಯಲ್ಲಾಹು ಅನ್ಹು ರವರು ಹದ್ದಾದ್ ರಾತೀಬ್ ರಚಿಸಿ ಅದಕ್ಕೆ ಹದ್ದಾದ್ ಎಂದು ಹೆಸರಿಟ್ಟರು.*

ಇದನ್ನು ಅರ್ಥಮಾಡಲು ಸಾಧಾರಣ ಬುದ್ಧಿ ಸಾಕು.‌ಒಳಿತಿಗೆ ಸದಾ ವಿರುದ್ಧ ಮಾತನಾಡುವ ಸಲಪಿ ಇಲ್ಲಿಯೂ ಅದೇ ಬುದ್ಧಿ ಯನ್ನು ತೋರಿಸಿದ್ದಾನೆ." ಹದ್ದಾದ್ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ." ಹದ್ದಾದ್ ವಿರೋಧಿ ಸುವ ತರಾತುರಿಯಲ್ಲಿ  ಸಲಪಿ ತನ್ನ ಅಜ್ಞಾನವನ್ನು  ಇಲ್ಲಿ ಅನಾವರಣ ಮಾಡಿದ್ದಾನಷ್ಟೇ.

➖➖➖➖➖➖➖➖➖➖
🌹🌳🌹🌳🌹🌳🌹🌳🌹🌳🌹
➖➖➖➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...