ದುಆಗೆ ಮುನ್ನ ಸುನ್ನತ್ ನಮಾಝ್...
💥 *ಫರ್ಳ್ ನಮಾಝ್ ನಿಂದ ಸಲಾಮ್ ಹೇಳಿದ ತಕ್ಷಣ ಎದ್ದು ನಿಂತು ದ್ಸಿಕ್ರ್ ದುಆಗಳಿಗೆ ಮುನ್ನ ಅದೇ ಸ್ಥಳದಲ್ಲಿ ರವಾತಿಬ್ ಸುನ್ನತ್ ನಮಾಝ್ ಗಳನ್ನು ನಿರ್ವಹಿಸಬಹುದೇ..? ಈ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡುವಿರಾ...?*
➡ ಫರ್ಳ್ ನಮಾಝ್ ಮುಗಿದ ತಕ್ಷಣ ಬಳಿಕವಿರುವ ದ್ಸಿಕ್ರ್ ಹಾಗೂ ದುಆಗಳಲ್ಲಿ ನಿರತನಾಗುವುದು ಸುನ್ನತ್ತಾಗಿದೆ. ಶಾಫಿಈ ಮದ್ಸ್ ಹಬಿನಂತೆ ರವಾತಿಬ್ ಸುನ್ನತ್ ನಮಾಝ್ ಗಳನ್ನು ನಮಾಝ್ ನ ಬಳಿಕವಿರುವ ದ್ಸಿಕ್ರ್ ದುಆ ಮುಗಿದ ಬಳಿಕ ನಿರ್ವಹಿಸುವುದಾಗಿದೆ ಸುನ್ನತ್ತಿನ ಪೂರ್ಣ ರೂಪ. ರವಾತಿಬ್ ನಮಾಝ್ ಗಿಂತ ಮೊದಲೇ ದ್ಸಿಕ್ರ್ ದುಆ ನಿರ್ವಹಿಸುವುದು ಶ್ರೇಷ್ಟ ಕ್ರಮವೆಂದು ಕರ್ಮಶಾಸ್ತ್ರ ಗ್ರಂಥಗಳು ವಿವರಿಸುತ್ತವೆ. (ತುಹ್ಫಾ, ಶರ್ ವಾನಿ 2/106)
ಇನ್ನು ಫರ್ಳ್ ನಮಾಝ್ ನಿಂದ ಸಲಾಮ್ ಹೇಳಿದ ತಕ್ಷಣ ದ್ಸಿಕ್ರ್ ದುಆಗಳಲ್ಲಿ ನಿರತನಾಗದೇ ರವಾತಿಬ್ ನಮಾಝ್ ನಿರ್ವಹಿಸಿದರೆ ಆ ಬಳಿಕ ದ್ಸಿಕ್ರ್ ದುಆ ನಿರ್ವಹಣೆಯ ಸುನ್ನತ್ ನಷ್ಟವಾಗುವುದಿಲ್ಲ. ಆದರೆ ಅದರ ಪೂರ್ಣತೆ ನಷ್ಟ ಹೊಂದುತ್ತದೆ. (ತುಹ್ಫಾ 2/106)
ಫರ್ಳ್ ನಮಾಝ್ ನಿರ್ವಹಿಸಿದ ಬಳಿಕ ಸುನ್ನತ್ ನಮಾಝ್ ನಿರ್ವಹಿಸುವ ಸಲುವಾಗಿ ಮೊದಲ ನಮಾಝ್ ನ ಸ್ಥಳ ಬದಲಿಸುವುದು ಸುನ್ನತ್ತಿದೆ. ಸ್ಥಳ ಬದಲಿಸದೇ ಅಲ್ಲೇ ನಮಾಝ್ ನಿರ್ವಹಿಸುವುದಾದರೆ ಏನಾದರೂ ಮಾತುಗಳ ಮೂಲಕವಾದರೂ ನಮಾಝ್ ಗಳ ನಡುವೆ ಬೇರ್ಪಡಿಸುವಿಕೆ ಸುನ್ನತ್ತಿದೆ. (ತುಹ್ಫಾ 2/106)
ಹನಫೀ ಮದ್ಸಬ್ ನಂತೇ ಫರ್ಳ್ ನಮಾಝ್ ನ ಬಳಿಕವಿರುವ ರವಾತಿಬ್ ಸುನ್ನತ್ ನಮಾಝ್ ಗಳನ್ನು ಫರ್ಳ್ ನಮಾಝ್ ನ ತಲಾಮ್ ಹೇಳಿದ ತಕ್ಷಣ ನಿರ್ವಹಿಸಿ ನಂತರ ದ್ಸಿಕ್ರ್ ದುಆಗಳಲ್ಲಿ ನಿರತನಾಗುವುದಾಗಿದೆ ಸುನ್ನತ್. (ಫತ್ ಹುಲ್ ಖದೀರ್ - ನವಾಫಿಲ್ ಅಧ್ಯಾಯ, ದುರ್ರುಲ್ ಹಕ್ಕಾಮ್ ಬಾಬು ಸ್ವಿಫತಿ ಸ್ವಲಾತ್)
➖➖➖➖➖➖➖➖➖➖➖
Comments