Skip to main content

ತವರು ಮನೆಗೆ ಬರುವ ಮಗಳ ಸ್ವೀಕಾರ ಆಗಿರಲಿ ಆಹ್ಲಾದಕರ


ತವರು ಮನೆಗೆ ಬರುವ ಮಗಳ ಸ್ವೀಕಾರ ಆಗಿರಲಿ ಆಹ್ಲಾದಕರ
  ✍:- ಕೆ.ಎಂ ಇರ್ಶಾದ್ ಪಕ್ಷಿಕೆರೆ, ಅಲ್ ಅಹ್ಸಾ
*===================*
         ಪ್ರೀತಿ ವಾತ್ಸಲ್ಯದಿಂದ ಬೆಳೆಸಿದ ಹೆಣ್ಣು ಮಗಳು ವಯಸ್ಸಿಗೆ ಬಂದಾಗ  ಮದುವೆ ಮಾಡಿ ಕೊಡುತ್ತೇವೆ, ಅಲ್ಲಿಗೆ ಮಗಳ ಮದುವೆಯ ಭಾದ್ಯತೆ ಮುಗಿಯುತ್ತದೆಯೆ ಹೊರತು ಮಗಳೆಂಬ ಭಾದ್ಯತೆ, ಮಮತೆ ಮುಗಿಯೂದಿಲ್ಲ, ಮದುವೆ ಆಗುವುದಕ್ಕಿಂತ ಮೊದಲು ಮದುವೆಯಾದ ನಂತರವೂ ಮಗಳನ್ನು ಭಾರವಾಗಿ ಕಾಣಬಾರದು,
ಕೆಲವರಂತೂ ಮಗಳಿಗೆ ಮದುವೆಯಾದ  ನಂತರದಲ್ಲಿ ಆ ಮಗಳು ತಮ್ಮ ಮನೆಯ ಸದಸ್ಯೆ ಎಂಬುವುದನ್ನೆ ಮರೆತು ಬಿಡುತ್ತಾರೆ, ಒಮ್ಮೆಯೂ ಆ ರೀತಿ ಮಾಡಬಾರದು, ಮದುವೆಯಾಗಿ ಹೋದರೂ ಆ ಹೆಣ್ಣು ಮಗಳು ನಮ್ಮ ಮನೆಯ ಮಗಳೇ ಆಗಿರುತ್ತಾಳೆ.....
ಮದುವೆಯಾದ ಹೆಣ್ಣು ಮಗಳು ಎರಡು, ಮೂರುಸಲ ತವರು ಮನೆಗೆ ಬರುವಾಗ ಕೆಲವು ತಂದೆಯಂದಿರಿಗೆ ಕೋಪ ಬರುತ್ತೆ, ಮಗಳಿಗೆ ಗಂಡನ ಮನೆಯಲ್ಲಿ ಇರ್ಲಿಕ್ಕೆ ಆಗುವುದಿಲ್ಲವೆ, ಮಗಳು ಬಂದರೆ ಖರ್ಚು ಜಾಸ್ತಿಯಾಗುತ್ತೆ ಎಂದು ಮನಸ್ಸಿನಲ್ಲಿ ಭಾವಿಸುವ ಅದೆಷ್ಟೋ ತಂದೆಯಂದಿರು ನಮ್ಮ ನಡುವೆ ಇರುವಾಗ,(ಇಲ್ಲಿ ತವರು ಮನೆಗೆ ಹೋಗುವ  ಮಗಳೂ ಚಿಂತಿಸಬೇಕಾದ ಕೆಲವು ಅಂಶಗಳಿವೆ, ಅದು 1.ತವರು ಮನೆಗೆ ಹೋಗುವಾಗ ತಂದೆ ತಾಯಿಗೆ ನೀಡಲು ಏನಾದರೊಂದು ಕೈಯಲ್ಲಿ ಇರಲಿ, ಕನಿಷ್ಠ ಪಕ್ಷ ಹಣ್ಣು ಹಂಪಲಾದರೂ ಕೊಂಡೊಗಿರಿ, 2. ತವರು ಮನೆಗೆ ಹೋದ ನಂತರ ಜಾಸ್ತಿ ದಿನ ಅಲ್ಲಿ ವಾಸಿಸುವುದರ ಕುರಿತು ಯೋಚಿಸಿರಿ, ತಾನು ಬಂದು 3,4 ದಿನ ಆದ ನಂತರ ತವರು ಮನೆಯವರು ಒತ್ತಾಯ ಮಾಡುವುದಾದರೆ ಕುಳಿತುಕೊಳ್ಳಿರಿ, ಮತ್ತು 3.ತವರು ಮನೆಯ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಬೇಕು,ಕೆಲವು ಹೆಣ್ಣು ಮಕ್ಕಳು ತನ್ನ ಗಂಡನ ಮನೆಯಲ್ಲಿ ಬೇಕಾದಷ್ಟು ಇದ್ದರೂ ಮತ್ತೆ ಸಹ ತವರು ಮನೆಗೆ ಬಂದು ಕಷ್ಟ ಕೊಡುವ ಸಹೋದರಿಯರೂ ಇದ್ದಾರೆ)
1400 ವರ್ಷಗಳ ಮುಂಚೆ ಜಗತ್ತಿನಲ್ಲಿ ಸರಿ ಸಾಟಿಯಿಲ್ಲದೆ ತಂದೆ ಮಗಳು ಪುಣ್ಯ  ಮದೀನಾದಲ್ಲಿ ಜೀವಿಸುತ್ತಿದ್ದರು...
ಜಗತ್ತಿನಲ್ಲಿ ಯಾರಿಗೂ ಸೋಲಿಸಲು ಸಾದ್ಯವಾಗದಷ್ಟು ಆ ತಂದೆ ಮತ್ತು ಮಗಳ ಪ್ರೀತಿ ಬಹಳ ಅನ್ಯೋನ್ಯವಾಗಿತ್ತು,  ಅದನ್ನು ವಿವರಿಸಲು ಪದಗಳಿಂದ ಸಾದ್ಯವಿಲ್ಲ, ವರ್ಣನೆಗೆ ನಿಲುಕದ್ದು ಅಂತಹ ಪ್ರೀತಿಯಾಗಿತ್ತದು,ಆ ತಂದೆ ನನ್ನ ಮುತ್ತು ನೆಬಿ, ಆ ಮಗಳು ನನ್ನ ಮುತ್ತು ನೆಬಿಯರ ಮಗಳು ಫಾತಿಮಾ ರ.ಅ.
ಮುತ್ತು ನೆಬಿ ಫಾತಿಮಾ ಬೀವಿರವರೊಂದಿಗಿನ  ಅಪ್ರತಿಮ ಪ್ರೀತಿಯ ಕಾರಣವಾಗಿ ಮುತ್ತು ನೆಬಿ ﷺ ಫಾತಿಮಾ ಬೀವಿಯವರನ್ನು ಸದಾ ಸಮಯ ನನ್ನ ಕರುಳ ಕುಡಿ ಎಂದೇ ಸಂಭೋಧಿಸುತ್ತಿದ್ದರು,, ಮುತ್ತು ನೆಬಿ ﷺ ರು ಜಗತ್ತಿನಲ್ಲಿ ಯಾವ ತಂದೆಯೂ ಮಗಳಿಗೆ ನೀಡದ ಒಂದು ಗಿಫ್ಟನ್ನು ನೀಡಿದರು ಅದು ಸ್ವರ್ಗದಲ್ಲಿ ಯುವತಿಯರ ರಾಣಿ ಫಾತಿಮಾ ಬೀವಿ ಎಂಬ ಪಟ್ಟ... ಮಾಷಾ ಅಲ್ಲಾಹ್,, ಆ ಮಗಳೆಷ್ಟು ಭಾಗ್ಯವಂತೆ ಅಲ್ವಾ,,
ಆ ಫಾತಿಮಾ ಬೀವಿ ತವರು ಮನೆಗೆ ಬರುವಾಗ ಮುತ್ತು ನೆಬಿ ಸ್ವೀಕರಿಸಿದ ರೀತಿ ಮಗಳಾದ ಸ್ವತಃ ಫಾತಿಮಾ ಬಿವಿ ಹೇಳಿರುವ ಮಾತು ತಿಳಿದಾಗ ಆ ಮಾತುಗಳನ್ನು ಅಕ್ಷರ ರೂಪಕ್ಕಿಲಿಸಬೇಕೆಂದು ಮನ ಹಂಬಲಿಸಿತು,,, ಬರೆದಿದ್ದೇನೆ ಓದಿ ನೋಡಿ,
ಮದುವೆಯಾದ ಹೆಣ್ಣು ಮಗಳು ತವರು ಮನೆಗೆ ಬರುವಾಗ ಕೋಪದಲ್ಲಿ ಮುಖ ಸಿಂಡರಿಸುವ ತಂದೆಯಂದಿರಿದ್ದರೆ,
ಮುತ್ತು ಪ್ರವಾದಿ ﷺ ರ ಮಗಳು ಫಾತಿಮಾ ಬೀವಿ ರ.ಅ  ಹೇಳುವ ಮಾತನ್ನೊಮ್ಮೆ ನೋಡಿರಿ,
ಫಾತಿಮಾ ಬೀವಿ ರ.ಅ ಹೇಳುತ್ತಾರೆ:
ನಾನು ಗಂಡನ ಮನೆಯಿಂದ ತವರು ಮನೆಯಾದ ಮುತ್ತು ಪ್ರವಾದಿ ﷺ ರ ಮನೆಗೆ ಹೋಗುವಾಗ ಮುತ್ತು ಪ್ರವಾದಿ ﷺ ತಂಙಳರು ನನ್ನನ್ನು ಸ್ವೀಕರಿಸಲು ಆನಂದ ತುಂದಿಲರಾಗಿ ಮನೆಯ ಬಾಗಿಲಿನತ್ತಿರ ಬಂದು ನನ್ನ ಹಣೆಗೆ ಸಿಹಿ ಚುಂಬನ ನೀಡಿ, ಆಹ್ಲಾದದಿಂದ ಸಲಾಂ ಹೇಳಿ ಕೈಯಿಡಿದು, ಒಳಗೆ ನಡೆದು, ತನ್ನ ಸನಿಹ ಕುಳ್ಳಿರಿಸಿ ಸಂತೋಷದಿಂದ ಕುಶಲೋಪಚಾರಿ ನಡೆಸುತ್ತಿದ್ದರು.. ಆ ದಿನ ತವರು ಮನೆಯಲ್ಲಿ ಹಬ್ಬದ ವಾತಾವರಣ
ಮುತ್ತು ನೆಬಿ ﷺ ತಂಙಳರ ಅನುಯಾಯಿ, ಅಭಿಮಾನಿಗಳಾದ ನಮ್ಮಲ್ಲಿ ಯಾರಾದರೂ ತವರು ಮನೆಗೆ ಬರುವ ಹೆಣ್ಣು ಮಕ್ಕಳೊಂದಿಗೆ ಬೇಸರ ತೋರಿಸುವವರಿದ್ದರೆ, ಇಂದಿನಿಂದಲೇ ಬದಲಾಗಿರಿ,
ಮನೆಗೆ ಬರುವ ಹೆಣ್ಣು ಮಗಳನ್ನು ಯಾವ ರೀತಿ ಸ್ವೀಕರಿಸಬೇಕೆಂದು ನಾವು ಪ್ರೀತಿಸುವ , ನಾವು ಅಭಿಮಾನ ಪಡುವ ಮುತ್ತು ನೆಬಿ ﷺ ನಮಗೆ ಮಾದರಿಯಾಗಿ ತೋರಿಸಿದ್ದಾರೆ, ಮುತ್ತು ನೆಬಿ ﷺ ತೋರಿಸಿದ ಅದೇ ಮಾದರಿಯಲ್ಲಿ ತವರು ಮನೆಗೆ ಬರುವ ಮಗಳನ್ನೊಮ್ಮೆ ಸ್ವೀಕರಿಸಿ ನೋಡಿ,, ಆಹಾ ಅದರಲ್ಲೇನೊಂದು ಆನಂದ, ಮಗಳ ಮನಸ್ಸಲ್ಲಿ ತಂದೆಯೊಂದಿಗಿನ ಭಾಂದವ್ಯದ ಬೆಸುಗೆ ಗಟ್ಟಿಗೊಳ್ಳುತ್ತೆ, ಆ ಮಗಳ ಆನಂದ ತುಂದಿಲಗೊಂಡ ಮನಸ್ಸಿನ ಸಂತೋಷ ಸಾಕು ತಂದೆ ನಿನಗೆ  ಎರಡು ಲೋಕದಲ್ಲಿ ವಿಜಯಗೊಳ್ಳಲು.‌‌‌‌‌
ಮದುವೆಯಾಗಿ ಹೋದ ಮಗಳ ತಂದೆಯಂದಿರೆ ಇಂದಿನಿಂದಲೇ ಪ್ರತೀಜ್ಞೆ ಮಾಡಿ, ನನ್ನ ಮಗಳು ಮನೆಗೆ ಬರುವಾಗ, ಮುತ್ತು ನೆಬಿ  ﷺ ತೋರಿಸಿ ಕೊಟ್ಟಂತೆ ಸ್ವೀಕರಿಸುವೆ,ಇದು ಕೂಡ ಮುತ್ತು ನೆಬಿ ﷺ ತಂಙಳರ ಸುನ್ನತ್...
ಆ ಮುತ್ತು ನೆಬಿﷺ ತಂಙಳರನ್ನೂ ನಮ್ಮನ್ನು ಅಲ್ಲಾಹನು ಸ್ವರ್ಗದಲ್ಲಿ ಒಗ್ಗೂಡಿಸಲಿ ಆಮೀನ್....
🌱🌱🌱🌱🌱🌱🌱🌱🌱🌱

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...