ಮೌಲಿದ್ ಏಕೆ...
💥 *ಮೌಲಿದ್ ಓದುವುದರ ಉದ್ದೇಶವೇನು..? ಇದರಿಂದ ಆಧ್ಯಾತ್ಮಿಕತೆ ಪಡೆಯುವುದು ಹೇಗೆ ಸಾಧ್ಯ..? ವಿವರಿಸುವಿರಾ...?*
➡ ಯಾರ ಮೌಲಿದ್ ಓದಲಾಗುತ್ತದೆಯೋ ಅವರ ಸ್ತುತಿ ಕೀರ್ತನೆಯನ್ನು ಹೇಳುವುದಾಗಿದೆ ಮೌಲಿದ್ ಪಾರಾಯಣದ ಉದ್ದೇಶ.
ಪ್ರವಾದಿ ಮುಹಮ್ಮದ್ ﷺ ರವರ ಮೌಲಿದ್ ಪಾರಾಯಣದಲ್ಲಿ ಅವರ ಜನನ ಮತ್ತು ಆ ಸಂದರ್ಭದಲ್ಲಿ ನಡೆದ ಘಟನೆಗಳು, ಅವರ ವಿಶೇಷ ಸ್ವಭಾವ ಗುಣಗಳು, ಅವರನ್ನು ಪ್ರೀತಿಸುವುದರಿಂದುಂಟಾಗುವ ಒಳಿತುಗಳು, ಪಾರತ್ರಿಕ ಪುಣ್ಯಗಳು, ಅವರ ಜೀವನ ಸಂದೇಶಗಳು ಹೀಗೆ ಪ್ರವಾದಿ ﷺ ರವರ ಬಗ್ಗೆಯಿರುವ ಅನೇಕಾನೇಕ ವಿಷಯಗಳನ್ನು ಹೇಳಲಾಗುತ್ತದೆ. ಇದನ್ನು ಓದುವಾಗಲೂ, ಓದಿದ್ದನ್ನು ಆಲಿಸಿ ಅರ್ಥೈಸುವಾಗಲೂ ಆ ಪವಿತ್ರ ಜೀವನ ಸಂದೇಶಗಳು ಸತ್ಯ ವಿಶ್ವಾಸಿಗಳಿಗೆ ಫಲವನ್ನು ನೀಡುತ್ತದೆ. ಹಾಗೂ ಪ್ರವಾದಿ ﷺ ರವರ ಪವಿತ್ರವಾದ ವ್ಯಕ್ತಿತ್ವದೊಂದಿಗೆ ಮಾನಸಿಕ ನಿಕಟತೆಯುಂಟಾಗಿ ಅದು ಜೀವನದಲ್ಲಿ ಪ್ರಭಾವವನ್ನು ಬೀರಲು ಸಾಧ್ಯವಾಗುತ್ತದೆ. ಅಲ್ಲಾಹನು ತನ್ನ ಅತೀ ನಿಕಟರಾದ ಪ್ರವಾದಿ ﷺ ರವರ ಸ್ತುತಿ ಕೀರ್ತನೆಗಳನ್ನು ಹೇಳುವುದನ್ನು ಇಷ್ಟಪಡುತ್ತಾನೆ. ಹಾಗೂ ಅದಕ್ಕೆ ಪುಣ್ಯ ಫಲಗಳನ್ನು ನೀಡುತ್ತಾನೆ. ಮೌಲಿದ್ ನ ಸಭೆಗಳಲ್ಲಿ ಇಂತಹಾ ಸ್ತುತಿ ಕೀರ್ತನೆಗಳು, ಗುಣಗಾನಗಳು, ಸ್ವಲಾತ್ ಗಳು ಧಾರಾಳವಾಗಿ ಇರುತ್ತದೆ. ಇವೆಲ್ಲವೂ ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗೂ ಪಾರತ್ರಿಕ ಪುಣ್ಯಗಳ ಸಮಾಹಾರಕ್ಕೂ ಉತ್ತಮ ಹಾದಿಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ..?
Comments