ಪ್ರವಾದಿ ಪ್ರೇಮಿಗಳು
(ಇದು ಆಶಿಖುರ್ರಸೂಲರ ಪ್ರೀತಿಯ ಲೇಖನ)
ಮೂಲ ಲೇಖಕರು: ಆತೂರು ಇಬ್ರಾಹಿಂ ಸಖಾಫಿ
☘☘☘☘☘☘☘☘☘☘☘
*ಪ್ರೇಮ ರಸವನ್ನು ಹೀರಿದ ರಝಾ ಬರೇಲ್ವಿ*
ಆ ಪ್ರವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪವಿತ್ರ ರೌಳಾ ಸಂದರ್ಶಿಸುವ ಅವಕಾಶ ಲಭಿಸಿತು. ಹಲವಾರು ವರ್ಷಗಳಿಂದ ಹೃದಯದಲ್ಲಿ ಮಡುಗಟ್ಟಿ ನಿಂತಿದ್ದ ಅಭಿಲಾಷೆಯಾಗಿತ್ತದು. ಹಲವಾರು ಸಲ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕನಸಿನಲ್ಲಿ ದರ್ಶಿಸಿದ ಆ ಮಹಾನುಭಾವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಎಚ್ಚರದಲ್ಲಿ ಕಾಣಲು ಬಹಳಷ್ಟು ಆಗ್ರಹಿಸಿದರು. ಧಾರಾಳ ಸ್ವಲಾತ್ ಹೇಳುತ್ತಾ, ಪ್ರಕೀರ್ತನಾ ಕಾವ್ಯಗಳನ್ನು ಹಾಡುತ್ತಾ ಬಹಳ ನಿರೀಕ್ಷೆಯೊಂದಿಗೆ ಅಂದು ರಾತ್ರಿ ಪುಣ್ಯ ರೌಳಾದಲ್ಲಿ ನಿದ್ರಿಸಿದರು. ಆ ರಾತ್ರಿಯಲ್ಲಿ ಅವರ ಅಭಿಲಾಷೆಯು ನೆರವೇರಲಿಲ್ಲ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಒಮ್ಮೆ ನೇರವಾಗಿ ನೋಡಬೇಕೆಂಬ ಉತ್ಕ್ರಷ್ಠವಾದ ಅಭಿಲಾಷೆಯೊಂದಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಕೀರ್ತನೆಯೊಂದಿಗೆ ಮರುದಿವಸವೂ ಅವರು ರೌಳಾದಲ್ಲಿ ಕಳೆದರು. ಅಂದು ಕೂಡಾ ಅವರಿಗೆ ಆ ಭಾಗ್ಯ ಲಭಿಸಲಿಲ್ಲ.
ಅತಿಯಾದ ಮನೋವೇದನೆಯೊಂದಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಪ್ರಶಂಸಿಸುವ ಕಾವ್ಯದ ಸಾಲುಗಳನ್ನು ಹಾಡತೊಡಗಿದರು... "ನಾನು ಮದೀನಾದ ದಾರಿಗಳಲ್ಲಿ ಅಲೆಯುತ್ತಿರುವ ಓರ್ವ ಯಾಚಕನಾಗಿದ್ದೇನೆ. ಆದರೆ ಈ ದಾರಿಯಲ್ಲಿ ಭಿಕ್ಷೆ ಬೇಡುವವರು ಪ್ರಗಲ್ಬರಾದ ರಾಜರುಗಳಾಗಿದ್ದಾರೆ."
"ಏನು ಯಾರೂ ಕೂಡಾ(ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಾಗಿದ್ದಾರೆ ಉದ್ದೇಶ) ನನ್ನೊಂದಿಗೆ (ಓ ರೌಳಾದವರೇ). ನಿನ್ನ ವಿವರವೇನೆಂದು ಕೇಳದೇ ಇದ್ದುದು....?"
"ಅದೇ ರೀತಿ ಎಷ್ಟೊಂದು ಒಳಿತಿನ ಹಕ್ಕಿಗಳು ಇಲ್ಲಿ ಅಲೆಯುತ್ತದೆ"
(ಪ್ರವಾದಿ ಪ್ರೇಮದಲ್ಲಿ ತಾನು ಯಾವುದೇ ಲೆಕ್ಕಕ್ಕಿಲ್ಲವೆಂದು ಕವನದ ಮೂಲಕ ಕವಿಯು ವಿನಯವನ್ನು ಪ್ರಕಟಿಸುತ್ತಿದ್ದಾರೆ.)
ಈ ಸಾಲುಗಳನ್ನು ಹೇಳುವುದೇ ತಡ ಪ್ರೇಮಿಗಳ ಪ್ರೇಮಭಾಜನರಾದ, ಮೋಹಿಗಳ ಇಷ್ಟ ಸಾಫಲ್ಯವಾದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವರ ಮುಂದೆ ಪ್ರತ್ಯಕ್ಷರಾದರು. ರಝಾರವರ ನಯನಗಳು ತುಂಬಿ ಹರಿಯಿತು...
ಪೂರ್ಣ ಚಂದ್ರನಂತೆ ಆ ಪವಿತ್ರ ಮುಖವು ಪ್ರಕಾಶಿಸಿತು. ತನ್ನ ಹೃದಯವೆಂಬ ಸಿಂಹಾಸನದಲ್ಲಿ ಆಸೀನರಾಗಿದ್ದ ರಾಜಕುಮಾರರನ್ನು ಕಣ್ತುಂಬಾ ನೋಡಿ ಸಂತೃಪ್ತಿ ಪಡೆದರು. ಪವಿತ್ರ ಮುಖವನ್ನು ದರ್ಶಿಸಿದ ರಝಾ ಬರೇಲ್ವಿ(ರ)ರವರು ಪ್ರಜ್ಞಾಹೀನರಾದರು. ಪ್ರವಾದಿ ಪ್ರೇಮ ಲಹರಿಯಲ್ಲಿ ಮಿಂದೆದ್ದ ಆ ಅನುರಾಗಿಯು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮುಂದೆ ಸಾಷ್ಟಾಂಗ ಮಾಡಲು ಮುಂದಾದರು. ಆದರೆ ನನ್ನ ಸೃಷ್ಟಿಕರ್ತನು ನನಗೆ ಅದಕ್ಕೆ ಅನುಮತಿ ನೀಡಲಿಲ್ಲ ತಾನೇ? ನನ್ನ ಸೃಷ್ಟಿಕರ್ತನ ಅನುಮತಿ ಲಭಿಸುತ್ತಿದ್ದರೆ.... ಅಥವಾ ಧರ್ಮವು ಅದಕ್ಕೆ ಅನುಮತಿ ನೀಡುವುದಾದರೆ ನಾನು ತಮಗೆ ಸುಜೂದ್ ಮಾಡುತ್ತಿದ್ದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸೌಂದರ್ಯವನ್ನು ವರ್ಣಿಸುತ್ತಾ ಆ ಪ್ರವಾದಿ ಪ್ರೇಮಿ ಹಾಡಿದರು.....
*ಲಕ ಬದ್'ರುನ್ ಫಿಲ್ ವಜ್ಹಿಲ್ ಅಜ್ಮಲ್*
*ಖತ್ವೇ ಹಲಾಯೆ ಮಹ್ ಸುಲ್ ಫಬ್'ರೆ ಅಜಲ್*
*ತುರೇ ಚಂದನ್ ಚಂದ್ರ್ ಪರೋ ಕಂಡಲ್*
*ರಹ್ಮತ್ ಕೀ ಬರಣ್ ಬರ್'ಝಾ ಜಾನಾ...*
ತಮ್ಮ ಸೌಂದರ್ಯ ಸಂಪೂರ್ಣವಾದ ಮುಖವು ಪೌರ್ಣಮಿ ಉದಯಿಸಿದ್ದಾಗಿದೆ. ತಮ್ಮ ಸುಂದರವಾದ ಗಡ್ಡ ಅದರ ಸುತ್ತಲೂ ಸುತ್ತಿ ನಿಂತ ಕಪ್ಪಾದ ಸುಂದರ ಮೋಡಗಳಾಗಿವೆ. ತಮ್ಮ ಗೌರವಯುತವಾದ ಶಿರಸ್ಸು, ತಮ್ಮ ಚಂದ್ರ ಪ್ರಕಾಶವು ಸುತ್ತಿ ನಿಂತ ಶ್ರೀಗಂಧಕ್ಕಿಂತಲೂ ಪರಿಮಳಯುಕ್ತವಾದ ಪವಿತ್ರ ತುಟಿಗಳಿಂದ ಕಾರುಣ್ಯದ ನಿರಂತರ ಮಳೆಯನ್ನು ವರ್ಷಿಸುವಂತಾಗಲಿ.....
*"ರಖೀ ಗುಲ್'ಕೇ ಜೋಸೆ ಹುಸ್'ನ್'ನೇ ಗುಲ್'ಸಲ್'ಮೇರಿ ಜಾಬಾಕಿ ಚಟ್ಟಕ್'ತಾ ಫಿರ್ ಕಹಾಂ ಗುಂಜಾ ಕೋಯಿ ಬಾಗೇ ರಿಸಾಲತ್ತ್ ಕಾ"*
ಆ ಪುಷ್ಪವು ಅದರ ಅಂತಿಮ ಸೌಂದರ್ಯದೊಂದಿಗೆ ಇನ್ನೊಂದು ಹೂವಿನ ಅವಶ್ಯಕತೆಯಿಲ್ಲದ ರೀತಿಯಲ್ಲಿ ಸಂಪೂರ್ಣತೆಯೊಂದಿಗೆ ಅರಳಿದಾಗ ನಂತರ ಪ್ರವಾದಿ ಶೃಂಕಲೆಯೆಂಬ ಹೂದೋಟದಲ್ಲಿ ಮತ್ತೊಂದು ಪ್ರವಾದಿಯೆಂಬ ಹೂ ಅರಳುವುದಾದರೂ ಎಲ್ಲಿಂದ....?
ಮೌಲಾನಾ ಅಹ್ಮದ್ ರಝಾಖಾನ್ ಬರೇಲ್ವೀ(ರ)ರವರು ಸಂಪೂರ್ಣವಾದ ಪ್ರವಾದಿ ಪ್ರೇಮಿಯಾಗಿದ್ದರು. ಐವತ್ತಕ್ಕಿಂತ ಅಧಿಕ ವಿಜ್ಞಾನ ಶಾಖೆಗಳಲ್ಲಿ ನೈಪುಣ್ಯತೆಗಳನ್ನು ಗಳಿಸಿದ ವಿಜ್ಞಾನ ಸಾಗರವಾಗಿದ್ದರು. ಹದಿನಾಲ್ಕನೇ ಶತಮಾನದ ಮುಜದ್ದಿದ್(ಪರಿಷ್ಕರಣಾವಾದಿ). ಹಲವಾರು ಸಲ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ದರ್ಶಿಸುವ ಭಾಗ್ಯ ಲಭಿಸಿದ ಪ್ರವಾದಿ ಪ್ರೇಮಿ. ಮುಹಿಬ್ಬುರ್ರಸೂಲಿಲ್ ಮುಸ್ತಫಾ ಎಂಬ ಸುಂದರ ನಾಮದ ಒಡೆಯ. ಪ್ರವಾದಿ ಪ್ರೇಮದಲ್ಲಿ ವಿಹರಿಸುವವರಿಗೆ ಮತ್ತಷ್ಟು ಉತ್ತೇಜನ ನೀಡಿದ ಕವಿ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕೀರ್ತನೆಯನ್ನು ಜೀವನದ ಹೊಣೆಗಾರಿಕೆಯಾಗಿ ವಹಿಸಿಕೊಂಡ ಮಹಾನುಭಾವಿ. ಕಂಝಲ್ ಈಮಾನ್, ಹದಾಯಿಕೇ ಬಖ್'ಸಿಸ್, ಮುಸ್ತಫಾ ಜಾನಾ....ಸಲಾಮೇ ರಝಾ....ಮುಂತಾದ ಹಲವಾರು ಗ್ರಂಥದ ರಚನೆಗಾರ. ಈ ವಿಶೇಷತೆಗಳಿಂದೆಲ್ಲಾ ಶೋಭಿಸಿ ಪ್ರಖ್ಯಾತರಾದ ಮಹಾನುಭಾವರಾಗಿದ್ದರು ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ(ರ).
ನಿಜವಾದ ಸತ್ಯವಿಶ್ವಾಸಿಯ ಹೃದಯವು ಮದೀನಾದೆಡೆಗೆ, ಪವಿತ್ರ ರೌಳಾದೆಡೆಗೆ ಆಕರ್ಷಿಸಿ ಆಗ್ರಹಿಸಿ ಕೊಂಡಿರುತ್ತದೆ.... ಮದೀನಾ ಎಂಬ ಚಿಂತೆ ಹೃದಯಾಂತರಾಳದ ಸ್ಥಾನ ಹಿಡಿದಿರುವುದು ಪ್ರವಾದಿ ಪ್ರೇಮದ ಸ್ಪಷ್ಟವಾದ ಲಕ್ಷಣವಾಗಿದೆ. ಅಹ್ಮದ್ ರಝಾಖಾನ್ ಬರೇಲ್ವಿ(ರ) ಮದೀನಾವನ್ನು ಬಹಳಷ್ಟು ಪ್ರೀತಿಸುತ್ತಿದ್ದರು. ಮದೀನಾದ ಹಳೆಯ ಹೆಸರಾದ "ಯಸ್'ರಿಬ್" ಎಂದು ಕರೆಯುವುದು ಕೂಡಾ ತಪ್ಪೆಂದು ಭಾವಿಸಿದವರಾಗಿದ್ದರು. ಅವರ ಚಿಂತೆ ಹಾಗೂ ಮನಸ್ಸೆಲ್ಲವೂ ಮದೀನಾದಲ್ಲಾಗಿತ್ತು. ಮದೀನಾಕ್ಕೆ ತಲುಪಲು ಆಗ್ರಹಿಸಿ ಆ ಮಹಾನುಭಾವರು ಈ ರೀತಿ ಹಾಡಿದರು......
*'ಮದದ್ ಏ ಜೋಸಿ ಸೆ ಗಿರ್'ಯ ಬಹಾದ ಕೋಹ್ ಔರ್ ಸಹ್*
*ರಾ ನಸ್'ರ್ ಆಜಾಯ ಜಲ್ ವಬೇ ಹಿಜಾಬ್ ಉಸ್'ಪಾಕ್ ತುರ್'ಬತ್ತ್'ಕಾ'*
(ಊರು ಕೇರಿ ಪರ್ವತ ಪ್ರದೇಶಗಳಲ್ಲಿ ಹರಿಯಲು ಅನುಯೋಜ್ಯವಾದ ಕಣ್ಣೀರು ನಿರರ್ಗಳವಾಗಿ ಹರಿಯುವಿಕೆಯಿಂದಾದರೂ ತಡೆಯು ನೀಗಿ ಪವಿತ್ರವಾದ ಆ ರೌಳಾ ಪ್ರಕಾಶಿಸುವುದನ್ನು ಕಾಣಲು ಅಲ್ಲಾಹನೇ ನೀನು ಸಹಾಯ ಮಾಡು...!)
'ಆತ್ಮವೂ ಹೃದಯವೂ ಚಿಂತನೆಯೂ ಎಲ್ಲವೂ ತಲುಪಿತು ಏನು..... ರಿಳಾ ನೀನು ಹೋಗುವುದಿಲ್ಲವೇ....?'
ಅವರು ರಚಿಸಿದ 'ಮುಸ್ಥಫಾ ಜಾನೇ'. ಎಂಬ ಪ್ರಕೀರ್ತನಾ ಕಾವ್ಯಮಂಜರಿಯು ಪ್ರಪಂಚದ ಅಂಗೀಕಾರ ಪಡೆದ ಗ್ರಂಥವಾಗಿದೆ. ಭಾರತದ ಹತ್ತು ಹಲವು ರಾಜ್ಯಗಳಲ್ಲಿರುವ ಸುನ್ನೀ ಮಸೀದಿಗಳಲ್ಲಿ ನಮಾಝ್'ಗಳ ನಂತರ, ಸಮ್ಮೇಳನಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ, ದ್ಸಿಕ್ರ್ ಹಲ್ಕಾಗಳಲ್ಲಿ , ಸ್ವಲಾತ್ ಮಜ್ಲಿಸ್ ಮುಂತಾದ ಮುಸ್ಲಿಮರ ಸಂಗಮ ಸ್ಥಳಗಳಲ್ಲೆಲ್ಲಾ ಉರ್ದುವಿನಲ್ಲಿರುವ ಬುರ್'ದಾಃ ಎಂಬ ವಿಶೇಷತೆಯಿರುವ 'ಸಲಾಮೇ ರಝಾ' ವನ್ನು ಆಕರ್ಷಕವಾಗಿ ಹಾಡಲಾಗುತ್ತದೆ. ಪ್ರವಾದಿ ಪ್ರಕೀರ್ತನೆಯಾಗಿತ್ತು ಅಹ್ಮದ್ ರಝಾಖಾನ್(ರ)ರಿಗೆ ಅತೀ ಇಷ್ಟವಾದ ಕಾರ್ಯ. ಅದು ಕೂಡಾ ಬಹಳ ಸಂಕೀರ್ಣತೆಯಿಂದ ಕೂಡಿದ್ದಾಗಿದೆ. ಇಮಾಮ್(ರ)ರವರು ಹೇಳುತ್ತಾರೆ.
"ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಹಾಡಿ ಹೊಗಳುವುದೆಂದರೆ ಖಡ್ಗದ ತುದಿಯಿಂದ ನಡೆಯುವುದಕ್ಕೆ ಸಮಾನವಾಗಿದೆ. ಅದು ಅಮಿತವಾದರೆ ಉನ್ನತ ವ್ಯಕ್ತಿತ್ವ ತಲುಪಿಸಬಹುದು. ಕಡಿಮೆಯಾದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಹತ್ವದಲ್ಲಿ ಕಡಿತಗೊಳಿಸಿದಂತಾಗುವನು."
ಪ್ರವಾದಿ ಪ್ರಕೀರ್ತನಾ ಕಾವ್ಯಗಳ ಮೂಲಕವೂ ಗ್ರಂಥ ರಚನೆಗಳ ಮೂಲಕವೂ ಸಾಮ್ರಾಟರಾಗಿದ್ದರು ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ(ರ). ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕೀರ್ತನೆಯನ್ನು ಜೀವನದ ಪಾತ್ರವಾಗಿ ಭಾವಿಸಿದ ಇಮಾಮರಿಗೆ "ಮುಹಿಬ್ಬುರ್ರಸೂಲಿಲ್ ಮುಸ್ತಫಾ" ಎಂಬ ಅನುಯೋಜ್ಯ ನಾಮ ಲಭಿಸಿದೆಯಾದರೂ ಅವರು ಸ್ವತಃ ಇಟ್ಟು ಕೊಂಡ ಹೆಸರು 'ಅಬ್ದುಲ್ ಮುಸ್ತಫಾ' (ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ದಾಸ) ಎಂದಾಗಿತ್ತು.
ಪವಿತ್ರ ಖುರ್'ಆನಿಗೆ ಅವರು ಬರೆದ ತಫ್ಸೀರ್(ವ್ಯಾಖ್ಯಾನ) 'ಕಂಝಲ್ ಈಮಾನ್' ವಿಶ್ವ ವಿಖ್ಯಾತವಾದ ಗ್ರಂಥವಾಗಿದೆ. ಉರ್ದುವಿನಲ್ಲಿರುವಂತೆ ಅದಕ್ಕೆ ಸಮಾನವಾಗಿ ಅರಬಿ, ಫಾರಿಸೀ ಭಾಷೆಗಳಲ್ಲಿಯೂ ಮಹಾನುಭಾವರು ರಚಿಸಿದ ಗ್ರಂಥಗಳೂ, ಕಾವ್ಯಗಳೂ ಪ್ರಸಿದ್ಧವಾಗಿದೆ. 55 ವಿಷಯಗಳಲ್ಲಿ ಸಾವಿರಕ್ಕಿಂತ ಅಧಿಕ ಗ್ರಂಥಗಳನ್ನು ರಚಿಸಿದ ಮಹಾನುಭಾವರು 1921 ರಲ್ಲಿ ಇಹಲೋಕ ವಾಸ ತ್ಯಜಿಸಿದರು. ಇನ್ನಾಲಿಲ್ಲಾಹಿ......
Comments