Skip to main content

ನಿಮ್ಮ ಮನೆಯಲ್ಲಿ ಅಟಾಚ್ಡ್ ಬಾಂತ್ರೂಂ ಇದೆಯೇ

ನಿಮ್ಮ ಮನೆಯಲ್ಲಿ ಅಟಾಚ್ಡ್ ಬಾಂತ್ರೂಂ ಇದೆಯೇ
💥💥💥💥💥💥💥💥

ಹಾಗಾದರೆ ಗಮನಿಸಿ. . . . ಜಾಗೃತರಾಗಿ. . .

ಸುರಕ್ಷೆ ಮತ್ತು ಸೌಕರ್ಯಾರ್ಥ ನಾವು ಶೌಚಾಲಯವನ್ನು ಮನೆಯ ಒಳಗಡೆ ನಿರ್ಮಿಸುತ್ತೇವೆ, ಅದರಲ್ಲಿ ಯಾವುದೇ ತಪ್ಪು ಇಲ್ಲ. ಆದರೆ ನಾವು ಗಮನಿಸಬೇಕಾದ ಕೆಲವೊಂದು ವಿಷಯಗಳಿವೆ .

ಮಾಲಿನ್ಯವಿರುವ ಸ್ಥಳಗಳಲ್ಲೂ ಶೌಚಾಲಯಗಳಲ್ಲೂ ಪಿಶಾಚಿಗಳು ವಾಸವಾಗಿರುತ್ತದೆ . ಭೂಮಿಗೆ ಓಡಿಸಲ್ಪಟ್ಟ ಪಿಶಾಚಿಗೆ ಅಲ್ಲಾಹನು ಅನುಮತಿಯಿಟ್ಟ ವಾಸ ಸ್ಥಳ ಶೌಚಾಲಯಗಳೆಂದೂ ಪ್ರವಾದಿ ವಚನಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ .
 تهذيب الآثار لابن جرير الطبري 2/644

ಅದರಿಂದಾಗಿದೆ ಶೌಚಾಲಯ ಪ್ರವೇಶಿಸುವಾಗ "ಅಲ್ಲಾಹ್. . . . ಗಂಡು ಪಿಶಾಚಿ ಮತ್ತು ಹೆಣ್ಣು ಪಿಶಾಚಿನಿಂದ ನಾನು ನಿನ್ನಲ್ಲಿ ರಕ್ಷಣೆ ಕೇಳುತ್ತಿದ್ದೇನೆ" ಎಂಬ ಅರ್ಥವಿರುವ ದಿಕ್ರನ್ನು ಹೇಳಬೇಕೆಂದು ಪ್ರವಾದಿ(ಸಅ) ರವರು ಕಲಿಸಿರುವುದು .
رواه أحمد وأبو داود وابن ماجه

ಶೌಚಾಲಯದ ಬಾಗಿಲು ತೆರೆದಿಟ್ಟರೆ , ಪಿಶಾಚಿ ತನ್ನ ವಾಸ ಸ್ಥಳದಿಂದ ಹೊರಗೆ ಬಂದು ಮನೆಯೊಳಗಿನ ಕೊಠಡಿಗಳಲ್ಲಿ ನಡೆದಾಡಲು ಸಾಧ್ಯತೆಯಿದೆ . ಈ ರೀತಿ ನಡೆದಲ್ಲಿ ಶಾರೀರಿಕ ಅಸ್ವಸ್ಥತೆ ಉಂಟಾಗುವುದು , ತಡೆಯಲಿರುವ ಒಂದೇ ಒಂದು ದಾರಿ ಎಂದರೆ ಶೌಚಾಲಯದ ಬಾಗಿಲು ಮುಚ್ಚಿ ಬಿಡುವುದು . ಮುಚ್ಚಿರುವ ಬಾಗಿಲು ತೆರೆಯಲು ಪಿಶಾಚಿನಿಂದ ಸಾಧ್ಯವಿಲ್ಲ ಎಂದು ನಬಿ (ಸಅ) ತಙ್ಙಳ್ ರವರು ಹೇಳಿದ್ದಾರೆ.
 رواه البخاري ومسلم

ಪ್ರವಾದಿ(ಸಅ) ರವರು ಬಾಗಿಲು ಹಾಕಲು ಹೇಳಿರುವುದು ಪಿಶಾಚು ಮನುಷ್ಯನೊಂದಿಗೆ ಬೆರೆದಾಡದಿರಲು ಎಂದು ಇಬ್ನು ದಖೀಖ(ರಅ) ರವರು ಹೇಳಿದ್ದಾರೆ . ಮನುಷ್ಯರಿಗಿಲ್ಲದ ಹಲವಾರು ಸಾಮರ್ಥ್ಯಗಳು ಪಿಶಾಚಿಗಿದ್ದರೂ ಮುಚ್ಚಿರುವ ಬಾಗಿಲನ್ನು ತೆರೆಯೋ ಸಾಮರ್ಥ್ಯ ಮಾತ್ರ ಪಿಶಾಚಿಗಿಲ್ಲ.
شرح صحيح البخاري لابن بطال ر

ಅಲ್ಲಾಹನ ನಾಮ ಹೇಳಿ ಮುಚ್ಚಲ್ಪಟ್ಟ ಬಾಗಿಲು ಖಂಡಿತವಾಗಿಯೂ ಪಿಶಾಚಿನಿಂದ ತೆರೆಯಲು ಅಸಾಧ್ಯದ ಕೆಲಸವಾಗಿದೆ . ಯಾವುದೇ ಒಂದು ಕಾರ್ಯ ಮಾಡುವಾಗ ಅಲ್ಲಾಹನ ನಾಮ ಹೇಳಿದರೆ ಪಿಶಾಚಿಗೂ ಮನುಷ್ಯನಿಗೂ ಮಧ್ಯೆ ಒಂದು ತಡೆಗೋಡೆಯ ಸೃಷ್ಟಿಯಾಗುವುದು . 
فتح الباري شرح صحيح البخاري

ಮಾತ್ರವಲ್ಲ ಮನುಷ್ಯನ ನೆಗೆಟೀವ್ ಎನರ್ಜಿ ಹೊರಹೊಮ್ಮುವ ಸ್ಥಳವಾಗಿದೆ ಶೌಚಾಲಯಗಳು , ಶೌಚಾಲಯದ ಬಾಗಿಲು ತೆರೆದಿಡುವುದರಿಂದ ನೆಗೆಟೀವ್ ಎನರ್ಜಿ ಮನೆಯೊಳಗಿನ ವಾತಾವರಣದೊಂದಿಗೆ ಬೆರೆತು

🔴ಮನುಷ್ಯನಿಗೆ ಅಸ್ವಸ್ಥತೆ ಉಂಟುಮಾಡುತ್ತದೆ .

🔴ಯಾವುದೇ ಕೆಲಸ ಮಾಡಲು ಉತ್ಸಾಹವಿರುವುದಿಲ್ಲ, 

🔴ಎಲ್ಲಾ ವಿಷಯಗಳಲ್ಲೂ ಸಂದೇಹ ಉಂಟುಮಾಡುತ್ತದೆ,

🔴ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಗುತ್ತಲೇ ಇರುತ್ತದೆ,

🔴ನಿಯಂತ್ರಿಸಲಾಗದ ಕೋಪ ಜಾಸ್ತಿಯಾಗಿರುತ್ತದೆ,

🔴ಆರಾಧನೆಗೆ ತೊಡಕು ಉಂಟುಮಾಡುತ್ತದೆ,

⚡ಇವುಗಳಿಂದ ಮುಕ್ತರಾಗಬೇಕೇ. . . . ?⚡

👍✌ *ಶೌಚಾಲಯದ ಬಾಗಿಲು ಯಾವಾಗಲೂ ಮುಚ್ಚಿಡುವುದು ಅತ್ಯುತ್ತಮ*

_*💡ಇಸ್ಲಾಮಿನ ನಿರ್ಧೇಶಗಳನ್ನು ಪಾಲಿಸಿ ನೆಮ್ಮದಿಯ ಜೀವನವನ್ನು ನಡೆಸಲು ಅಲ್ಲಾಹನು ತೌಫೀಖ್ ನೀಡಿ ಅನುಗ್ರಹಿಸಲಿ. . . . ಆಮೀನ್*_

*✍ವೋಯ್ಸ್ ಓಫ್ ಮಿತ್ತಬೈಲ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...