Skip to main content

ಅಧ್ಬುತಗಳಿಗೆ ಮಾರುಹೋಗದ ಸುನ್ನತ್ ಜಮಾಅತಿನ ಆಲಿಂಗಳು

🔸ಅಧ್ಬುತಗಳಿಗೆ ಮಾರುಹೋಗದ ಸುನ್ನತ್ ಜಮಾಅತ್'ನ ಆಲಿಂಗಳು....🔸

       ಹೌದು..ಮೇಲಿನ ಮಾತಿನಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.ಜನಸಾಮಾನ್ಯರು ಅದ್ಬುತಗಳನ್ನು ಕಂಡು ಮಾರುಹೋಗುತ್ತಾರೆ ಆದರೆ,ಸುನ್ನತ್ ಜಮಾಅತ್'ನ ಆಲಿಂಗಳು ಒಂದು  ಸಂಗತಿಯನ್ನು ಪರಾಮರ್ಶಿಸಿ ಅದು ಸರಿಯೋ,ತಪ್ಪೋ ಎಂದು ಮನಗಾಣುತ್ತಾರೆ.ನಿಜ ಅದು ಇಮಾಮ್ ಇಬ್ನ್ ಹಾಜ್(ರ.ಅ)ರವರ ಗ್ರಂಥ ಮದ್ಹಲ್'ನ ಒಂದು ಸಂಭವ ನೋಡಿದರೆ ಸಾಮಾನ್ಯ ಜನರಾದ ನಾವು ಅದನ್ನು ಅರ್ಥೈಸಬಹುದು.
ಅದೇನೆಂದರೆ;ಸುನ್ನತ್ ಜಮಾಅತ್'ನ ಆಲಿಂರ ಶಿಷ್ಯ ಇಷಾ ನಮಾಝ್ ಮಾಡಿ ಮಲಗಿದಾಗ ಶಿಷ್ಯನ ಬಳಿ ಉಸ್ತಾದರು ಬರುತ್ತಾರೆ,ಆ ಸಮಯದಲ್ಲಿ ಒಂದು ದೊಡ್ಡ ಪಕ್ಷಿಬಂದು ಅವರ ಬಳಿ ನಿಲ್ಲುತ್ತದೆ.ಆ ಉಸ್ತಾದರು ಅ ಶಿಷ್ಯನನ್ನು ಕರೆದುಕೊಂಡು ಆ ಪಕ್ಷಿಯ ಮೇಲೆ ಕುಳಿತುಕೊಳ್ಳುತ್ತಾರೆ,ನಂತರ ಪಕ್ಷಿ ತುಂಬ ದೂರ ಚಲಿಸಿ ಒಂದು ಸ್ಥಳದಲ್ಲಿ ಕೆಳಗಿಳಿಸುತ್ತದೆ.ಅವರು ಇಳಿದಂತಹ ಸ್ಥಳ ತುಂಬ ಸುಂದರವಾದಂತಹ,ಸುಗಂದಭರಿತವಾದಂತಹ ಸ್ಥಳ ಮತ್ತು ಸ್ವರ್ಗದಂತೆ ಭಾಸವಾಗುತ್ತಿತ್ತು.ಆ ಸಮಯದಲ್ಲಿ ಶಿಷ್ಯ ಕೇಳಿದ ಉಸ್ತಾದರಲ್ಲಿ ನಾವು ನಮಾಝ್ ನಿರ್ವಹಿಸೋಣಲ್ಲವೇ?
ಅದಕ್ಕೆ ವಿದ್ವಾಂಸರು "ನಾನು ಕಲಿತ ಇಸ್ಲಾಂನಲ್ಲಿ ಸ್ವರ್ಗಕ್ಕೆ ತಲುಪುವರೆಗೆ ಮಾತ್ರ ನಮಾಝ್ ನಂತರ ನಮಾಝ್ ಇಲ್ಲವೆಂದು ಹೇಳಿದರು.ಆ ಮಾತನ್ನು ಶಿಷ್ಯನು ಲೆಕ್ಕಿಸದೇ ನಮಾಝ್ ನಿರ್ವಹಿಸಲು ನಿಂತೇ ಬಿಟ್ಟರು.ನಂತರ ಸುಬುಹಿಯ ಸಮಯವಾದಾಗ ಪಕ್ಷಿ ಮತ್ತೆ ಬಂತು.ಆ ಸಮಯದಲ್ಲಿ ಶಿಷ್ಯನು ಹೇಳುತ್ತಾರೆ;ನಮ್ಮನ್ನು ಬಿಟ್ಟುಹೋದ ಪಕ್ಷಿ ನಮ್ಮನ್ನು ಕರೆದುಕೊಂಡು ಹೋಗಲು ಪುನಃ ಬಂದಿದೆ,ನಾವು ಹೋಗೋಣಲ್ಲವೇ?
ಇದಕ್ಕೆ ವಿದ್ವಾಂಸರು "ನಾನು ಕಲಿತ ದೀನಿನಲ್ಲಿ ಒಮ್ಮೆ ಸ್ವರ್ಗ ಪ್ರವೇಶಿಸಿದರೆ ನಂತರ ಹೊರಹೋಗಲು ಇಲ್ಲ,ನಾನು ಬರುವುದಿಲ್ಲವೆಂದು ಹೇಳಿದರು.
ಅದಕ್ಕೆ ಶಿಷ್ಯನು ನಾವು ಹೋಗಿಲ್ಲದಿದ್ದರೆ ತೊಂದರೆ ಆಗುತ್ತದೆ ಮತ್ತು ಸಮಸ್ಯೆ ಉದ್ಬವಿಸುತ್ತದೆ.
ಏನೂ ಸಮಸ್ಯೆ ಬಂದರು ನಾನು ಹೊರಬರುವುದಿಲ್ಲವೆಂದು ದೃಡವಾಗಿ ವಿದ್ವಾಂಸರು ನಿಂತು ಬಿಟ್ಟರು.ಇದು ಕೇಳಿ ಪಕ್ಷಿ ರೆಕ್ಕೆ ಬಡಿಯಲು ಆರಂಭಿಸಿತು.ಸುಬುಹಾನಲ್ಲಾಹ್!ಭೂಮಿ ಕಂಪಿಸಿದಂತೆ ಭಾಸವಾಯಿತು ಆದರೆ ಆ ವಿದ್ವಾಂಸರು ಅಲುಗಾಡಲಿಲ್ಲ.ಅವರಾಗಿದ್ದಾರೆ ಸುನ್ನತ್ ಜಮಾಅತ್'ನ ಆಲಿಂಗಳು.ಕೊನೆಯಲ್ಲಿ ಆ ಪಕ್ಷಿ ಹಾಗೆಯೇ ಹಾರಿಹೋಯಿತು.ನಂತರ ಆ ವಿದ್ವಾಂಸರನ್ನು ಅವಗಣಿಸಿಹೋದ ಶಿಷ್ಯನನ್ನು ಕರೆದು  "ಅರಿವಿಲ್ಲದೇ ಅಧ್ಬುತದ ಹಿಂದೆ ಹೋದರೆ ಸ್ವರ್ಗವೆಂಬುದು ಅಶುಧ್ಧಿ ಇರುವ ಸ್ಥಳದಲ್ಲಾಗಿರುತ್ತದೆ"ಎಂದು ಹೇಳಿ ಆ ಶಿಷ್ಯನನ್ನು ಪುನಃ ವಾಪಸ್ಸು ಕರೆದುಕೊಂಡು ಬರುತ್ತಾರೆ.ಒಟ್ಟಾರೆಯಾಗಿ ಆ ಶಿಷ್ಯನ ತಹಜ್ಜುದ್ ನಮಾಝ್ ಅಶುದ್ದಿಯಲ್ಲಿ ನಿರ್ವಹಿಸುವಂತೆ ಮಾಡಲು ಇಬ್ಲೀಸ್(ಲ.ಅ) ಅಶುದ್ದಿ ಸ್ಥಳವನ್ನು ಕನಸಿನಲ್ಲಿ ಸ್ವರ್ಗದಂತೆ ಭಾಸವಾಗುವಂತೆ ತೋರಿಸಿದ್ದನು.ಇದನ್ನು ನೋಡಿದರೆ ನಮಗೆ ಕಲಿಯಲಿಕ್ಕಿರುವುದು ಸುನ್ನತ್ ಜಮಾಅತ್'ನ ವಿದ್ವಾಂಸರನ್ನು ಕಡೆಗಣಿಸಿದರೆ ನಮ್ಮ ಅವಸ್ಥೆಯು ಆಶಿಷ್ಯನ ಅವಸ್ಥೆಯಂತೆಯೇ ಆಗಿರುತ್ತದೆ.
ಇತ್ತೀಚಿಗಿನ ಶತಮಾನಗಳಲ್ಲಿ ಕೆಲವೊಂದು ಗುಂಪುಗಳು ರಂಗಪ್ರವೇಶ ಮಾಡಿದಾಗ ಅಲ್ಲಿಯು ವಿದ್ವಾಂಸರು ಅದರ ವಿರುದ್ದ ಧ್ವನಿಯೆತ್ತಿದ್ದರು.ಅದರ ನಿಲುವು ಮೊದಲಿಗೆ ಸಾಮಾನ್ಯ ಜನರಿಗೆ ಅರ್ಥವಾಗುತ್ತಿರಲಿಲ್ಲ,ನಂತರದ ದಿನಗಳಲ್ಲಿ ನಿದಾನವಾಗಿ ಅರ್ಥೈಸುತ್ತ ಬಂದರು.
🔻ಮೊದಲಿಗೆ ಕೆಲವರು ಕುರ್ಆನ್,ಹದೀಸಿನ ಜನರು ನಾವೆಂದು ಬಂದರು.ಆಗಲೇ ವಿದ್ವಾಂಸರು ವಿರೋದಿಸಿದರು.ಆ ಸಮಯದಲ್ಲಿ ಸಾಮಾನ್ಯ ಜನರು ತಿಳಿದರು ಅವರು ಪಾಪದ ಜನರು,ಅವರಾಯಿತು ಅವರ ಕೆಲಸವಾಯಿತೆಂದು ಇದ್ದು ದಾಡಿ ಬಿಟ್ಟು ಮಣಿಗಂಟಿನ ಕೆಳಗೆ ವಸ್ತ್ರ ಇಳಿಸದಂತೆ ಸುನ್ನತ್ ಪಾಲಿಸುವವರು ಎಂದು.ಇದು ನೋಡಿ ಕೆಲವರು ಆಕರ್ಷಿತರಾಗುವಾಗ ಇವರದು ಆರಂಭವಾಯಿತು ಅದು ಶಿರ್ಕ್ ಇದು ಕಿರ್ಕ್ ಎಂದು.ನಮ್ಮಿಂದ ಅಗಲಿದ ಮಹಾತ್ಮರು ಶಿರ್ಕ್ ಮಾಡಿದವರೆಂದು.ಇದು ನೋಡಿದಾಗ ಚಿಂತಿಸುವ ಜನರಿಗೆ ಅಂದು ವಿದ್ವಾಂಸರು ಎದುರಿಸಿದ ಕಾರಣ ಮನವರಿಕೆಯಾಯಿತು.
🔻ನಂತರ ಕೆಲವರು ಬಂದು ಮಾತೆತ್ತಿದರೆ ಸುನ್ನೀ  ವಿದ್ವಾಂಸರ ಹೆಸರು ಹೇಳುತ್ತಿದ್ದರು.ಆ ಸಮಯದಲ್ಲಿ ಜನರು ತಿಳಿದರು ಯಾವುದಾದರೇನು ಎರಡು ಸುನ್ನತ್ ಜಮಾಅತ್'ಅಲ್ಲವೇ ಎಂದು.ಆ ಸಮಯದಲ್ಲಿ ಪಂಡಿತರು ವಿರೋದಿಸಿದರು.ನಂತರ ನೋಡಿದಾಗ ಆರಂಭವಾಯಿತು ಇವರದು ಸಯ್ಯಿದರ ನಿಂದನೆ,ವಿದ್ವಾಂಸರ ನಿಂದನೆ ಮತ್ತು ಮಸೀದಿ,ಮದ್ರಸ ದ್ವಂಸ ಮಾಡುವ ಕಾರ್ಯ.ಆ ಸಮಯದಲ್ಲಿ ಚಿಂತನಾ ಶಕ್ತಿಇರುವವರು ಸತ್ಯವನ್ನು ಮನಗಂಡಿದ್ದರು.
🔻ಇತ್ತೀಚಿಗೆ ಕೆಲವರು ಬಂದರು ನಮ್ಮದು ಧರ್ಮರಕ್ಷಣೆ  ಅಝೆಂಡಾ,ನಮ್ಮ ಉದ್ದೇಶ ಬೇರೇನು ಇಲ್ಲ.ಇಂತಹ ಸಮಯದಲ್ಲೂ ವಿದ್ವಾಂಸರು ವಿರೋದಿಸಿದರು.ಆ ಸಮಯದಲ್ಲಿ ಸಾಮಾನ್ಯರು ಯೋಚಿಸಿದರು ಅರೆ ಇದೆಂತಾ ವಿರೋದವೆಂದು.ರಕ್ಷಣೆ ಒಳ್ಳೆಕೆಲಸವಲ್ಲವೇ ಎಂದು ಆಸಮಯದಲ್ಲಿ ಇವರ ರೆಡಿಮೇಡ್ ಪಾಂಡಿತ್ಯತನ ಆರಂಭವಾಯಿತು.ಸುನ್ನೀ ವಿದ್ವಾಂಸರು ಕೆಲವೊಂದು ಆಯತ್ ಮರೆಮಾಚಿದ್ದಾರೆಂದು,ಮಹಿಳೆಯರು ತಮ್ಮ ಹಕ್ಕುಗಳಿಗೆ ವೇದಿಕೆ ಹತ್ತಬಹುದೆಂದು ಮತ್ತು ದೀನ್ ಯಾರು ಬೇಕಾದರು ಹೇಳಬಹುದೆಂದು ವಾದಿಸಿದಾಗ ಇದನ್ನೆಲ್ಲ ನೋಡುತ್ತಿದ್ದ ಚಿಂತಕನಿಗೆ ಈ ಮೇಲಿನ ಎಲ್ಲಾ ಗುಂಪುಗಳನ್ನು ವಿರೋದಿಸಿದ ಕಾರಣ ಅರಿವಾಯ್ತು.

ಇದರಿಂದ ನಾವು ಮನಗಾಣಬೇಕಾಗಿದೆ ಸುನ್ನತ್ ಜಮಾಅತ್'ನ ಆಲಿಂಗಳ ಪ್ರತಿಯೊಂದು ನಿಲುವಿಗು ಆಧಾರವಿದೆಯೆಂದು.ಸುನ್ನತ್ ಜಮಾಅತ್'ನ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷದ ಹಿಂದೆ ಹೋಗುವ ಸಂಘಟನೆ ಅಲ್ಲ.ಅದು ಮುಸ್ಲಿಮನ ಪರಮೋನ್ನತ ಗುರಿಯಾದ ಆಖಿರ ವಿಜಯಕ್ಕೆ ಶ್ರಮಿಸುವ ಸಂಘಟನೆಯಾಗಿದೆ.ಅದರೊಂದಿಗೆ ದುನ್ಯಾವು ಕೂಡ ವಿಜಯಿಯಾಗಲು ಶ್ರಮಿಸುವ ಸಂಘಟನೆಯಾಗಿದೆ.ಆದ್ದರಿಂದ ಸುನ್ನತ್ ಜಮಾಅತ್'ನ ಆಲಿಂಗಳ ಹಿಂದೆ ದೃಡವಾಗಿ ನಿಂತು ಕಾರ್ಯಾಚರಿಸುವವರು ನಾವಾಗೋಣ.ಸುನ್ನತ್ ಜಮಾಅತ್'ನ ಸಂಘಟನೆಗಳಿಗೆ ನೇತೃತ್ವ ಕೊಟ್ಟು ಪೋಷಿಸಿದ ಬಹುಮಾನ್ಯರಾದ ತಾಜುಲ್ ಉಲಮಾ(ನ.ಮ),ನೂರುಲ್ ಉಲಮಾ(ನ.ಮ),ಶಂಸುಲ್ ಉಲಮಾ(ನ.ಮ),ಸಿ.ಎಮ್.ವಲಿಯುಲ್ಲಾಹ್(ಖ.ಸಿ),ವಡಗೆರೆ ಮೊಹಮ್ಮದ್ ಹಾಜಿ(ಖ.ಸಿ)ರವರ ಬರಕತ್'ನಿಂದ ಅಲ್ಲಾಹು ನಮ್ಮ ಇಹಪರ ವಿಜಯಿಗೊಳಿಸಲಿ.ಆಮೀನ್
ದುವಾ ವಸಿಯ್ಯತ್'ನೊಂದಿಗೆ....

✒...ಶಮೀರ್ ಶಂಸುದ್ದೀನ್ ಶೃಂಗೇರಿ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...