ತವಸ್ಸುಲ್_ಇಸ್ತಿಗಾಸ
💞💞💞
*ರೌಳಾ_ಷರೀಫ್ صَلَّى اللّٰهُ عَلَيْهِ وَسَلَّمَ (ನಬಿ ಸ.ಅರ)ಖಬರ್ ಬಳಿಹೋಗಿ ನಮ್ಮ ಮಘ್ಫಿರತ್ ಗಾಗಿ ಸಹಾಯಾಭ್ಯರ್ಥನೆ ಮಾಡುವುದು.*
🍀🍀🍀
Al-Quran:
وَمَآ أَرْسَلْنَا مِن رَّسُولٍ إِلاَ لِيُطَاعَ بِإِذْنِ ٱللَّهِ وَلَوْ أَنَّهُمْ إِذ ظَّلَمُوۤاْ أَنْفُسَهُمْ جَآءُوكَ فَٱسْتَغْفَرُواْ ٱللَّهَ وَٱسْتَغْفَرَ لَهُمُ ٱلرَّسُولُ لَوَجَدُواْ ٱللَّهَ تَوَّاباً رَّحِيماً {
*ಇಮಾಮ್_ಖುರ್ತುಬಿ(ರ.ಅ) ಸೂರಹ್_ಅನ್ನ್ನಿಸಾದ 64 ನೇ ಸೂಕ್ತದ ತಫ್ಸೀರ್ ನಲ್ಲಿ ವಿವರಿಸುತ್ತಾರೆ.*👇🏻👇🏻
*ಅಬೂ_ಸ್ವಾದಿಕ್ ಅಲಿ(ರ)ರವರಿಂದ ನಿವೇದನೆ:*
ಅಲಿ ರಳಿಯಲ್ಲಾಹು ಅನ್ಹು ಹೇಳುತ್ತಾರೆ,ಪ್ರವಾದಿ(ಸ.ಅ)ರವರನ್ನು ದಫನಮಾಡಿ 3 ದಿನ ಕಳೆದಾಗ ಗ್ರಾಮೀಣ ಅರಬಿಯೊಬ್ಬ ಬಂದು ಅವರ ಗೋರಿಯ ಮೇಲೆ ಹೊರಳಾಡಿ ಅಲ್ಲಿಂದ ಮಣ್ಣೆತ್ತಿಕೊಂಡು ತಲೆಗೆ ಸವರಿದ. ಅನಂತರ ಆತ ಹೀಗೆ ಹೇಳುತ್ತಿರುವುದನ್ನು ನಾವು ಅಲಿಸಿದೆವು,
*ಓ ಅಲ್ಲಾಹನ ಸಂದೇಶವಾಹಕರೇ,* ನೀವು ಹೇಳುತ್ತಿರುವುದನ್ನು ಆಲಿಸಿ ನಾವು ವಿಷಯಗಳನ್ನು ಅರಿತುಕೊಂಡೆವು. ತಮ್ಮಿಂದ ನಾವು ಅದನ್ನು ಮೈಗೂಡಿಸಿಕೊಂಡೆವು. ಅಲ್ಲಾಹನು ತಮಗೆ ಅವತೀರ್ಣಗೊಳಿಸುವುದರಲ್ಲಿ ಹೀಗಿತ್ತು.
"ಜನರು ಅವರ ದೇಹದೊಂದಿಗೆ ಆಕ್ರಮಗೈದು ನಿಮ್ಮನ್ನು ಸಮೀಪಿಸುತ್ತಾರೆ...(ಹೀಗೆ ಆ ಗ್ರಾಮೀಣ ಅರಾಬಿಯು ಅಯತಿನ ಅಂತ್ಯದವರೆಗೆ ಪಾರಾಯಣ ಮಾಡಿದ). ಓ ಅಲ್ಲಾಹನ ಸಂದೇಶವಾಹಕರೇ ನಾನು ನನ್ನ ದೇಹವನ್ನು (ಪಾಪಗಳಿಂದ) ಆಕ್ರಮಿಸಿದ್ದೇನೆ. ನನಗೆ ಕ್ಷಮೆಯಾಚಿಸಲು ನಾನೀದೋ ನಿಮ್ಮನ್ನು ಸಮೀಪಿಸಿರುವೆನು. ಆಗ ಖಬ್'ರ್'ನಿಂದ ನಿಶ್ಚಯವಾಗಿಯೂ *"ನಿಮ್ಮನ್ನು ಅಲ್ಲಾಹನು ಕ್ಷಮಿಸಿಬಿಟ್ಟಿದ್ದಾನೆ"* ಎಂಬ ಶಬ್ದವು ಮೊಳಗಿತು.
(ಅಂದರೆ ಸಹಾಭ್ಯರ್ಥನೆ ಮಾಡಿದರಿಂದ ಉತ್ತರ ಲಭಿಸಿತು ಎಂದರ್ಥ)
*ಸುಬ್ ಹಾನಲ್ಲಾಹ್..🌹👍*
📚 *(ತಪ್ಸೀರ್ ಅಲ್-ಕುರ್ತುಬಿ, ಅಲ್-ಜಾಮಿಉ ಫೀ ಅಹ್ಕಾಮಿಲ್ ಕುರ್'ಆನ್ ಸಂಪುಟ-006, ಪುಟ ಸಂಖ್ಯೆ-439)*
ಈ ಗ್ರಾಮೀಣ ಅರಬಿಯ ಈ ಪ್ರಸಿದ್ದ ಘಟನೆಯನ್ನು ಈ ಕೆಳಗೆ ನೀಡಲಾದ ಇಮಾಮರು ತಮ್ಮ ಕುರ್'ಅನೀನ ತಫ್ಸಿರ್'ನಲ್ಲಿ ಮತ್ತು ಪ್ರಸಿದ್ದ ಗ್ರಂಥಗಳಲ್ಲಿ ದಾಖಲಿಸಲಾಗಿದೆ.
►ಇಮಾಮ್ ಆಬು ಹಯ್ಯನ್ ಅಲ್-ಅಂದ'ಲೂಸಿ(ರ)ರವರ ತಫ್ಸಿರ್ ಬಹ್ರುಲ್ ಮುಹೀತ್ (3/269)
►ಇಮಾಮ್ ಜಲಾಲುದ್ದೀನ್ ಸುಯೂಥಿ(ರ) ರವರ ತಫ್ಸಿರ್ ದೂರ್ ಅಲ್-ಮಂತೂರ್(ಸುರಹ್ ಅನ್-ನ್ನಿಸಾದ 64 ನೇ ಸೂಕ್ತ)
►ಇಮಾಮ್ ನವವಿ(ರ) ರವರ ಅಲ್-ಮಜ್ಮು ಸಂಪುಟ-8, ಪುಟ-274
►ಇಮಾಮ್ ಬೈಹಖಿ(ರ) ಶುಹುಬುಲ್ ಇಮಾನ್, ಸಂಪುಟ 3, ಪುಟ-495-496, ಹದೀಸ್-4178
►ಇಬ್ನ್ ಕುದಮಃ(ರ)ರವರ ಅಲ್-ಮುಘ್ನಿ-ಸಂಪುಟ-5, ಪುಟ-465
►ಇಬ್ನ್ ‘ಅಸಕೀರ್(ರ)ರವರ ತಹ್ಡಿಬ್ ತಾರಿಖ್ ಡಿಮಷ್ಕ್ ಅಲ್-ಕಬೀರ್(46/7)
►ಇಮಾಮ್ ಇಬ್ನ್ ಹಜರ್ ಅಲ್-ಹಯ್ತಮಿ(ರ) ರವರ ಅಲ್-ಜವ್‌ಹರುಳ್ ಮುನಝ್ಝಮ್ ಪುಟ-51
ಇವರ್ಯಾರು ಈ ಪ್ರಸಿದ್ದ ಘಟನೆಯನ್ನು ಶಿರ್ಕ್,ಬಿದ್ ಅತ್ ಎಂದು ಹೇಳಿಲ್ಲ.
*📚[Tafsir al-Qurtubi, al-Jami li Ahkam al-Quran Volume 006, Page No. 439, Under the Verse, 4:64]*
*✍🏻Straight Path Ahlu Sunnah*
🎈🌹🎈🌹🎈🌹🎈🌹🎈
Comments