Skip to main content

ಹಝ್ರತ್ತ್ ಮುಜದ್ದಿದ್ ಅಲ್'ಫಿ ಸಾನಿ ಇಮಾಮ್ ಶೈಖ್ ಅಹ್ಮದ್ ಫಾರೂಖಿ, ಸರ್'ಹಿಂದಿ (ರ) ಸರ್'ಹಿಂದ್. ಚಂಡೀಗಡ್, ಪಂಜಾಬ್



ಹಝ್ರತ್ತ್ ಮುಜದ್ದಿದ್ ಅಲ್'ಫಿ ಸಾನಿ ಇಮಾಮ್ ಶೈಖ್ ಅಹ್ಮದ್ ಫಾರೂಖಿ, ಸರ್'ಹಿಂದಿ (ರ) ಸರ್'ಹಿಂದ್. ಚಂಡೀಗಡ್, ಪಂಜಾಬ್

✍ಗಫೂರ್ ಬಾಯಾರ್
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه

ಇಸ್ಲಾಂ ಭಾರತದಲ್ಲಿ ಸಂದಿಗ್ದ ಪರಿಸ್ಥಿತಿಯಲ್ಲಿದ್ದಂತಹ ಕಾಲದಲ್ಲಿ ಸತ್ಯ ಧರ್ಮದ ಮಹನೀಯ ದರ್ಶನಗಳಿಗೆ ಪುನರ್ಜೀವನ ನೀಡಿದ ಸಮುದ್ಧಾರಕರಾಗಿದ್ದಾರೆ ಹಝ್ರತ್ತ್ ಮುಜದ್ದಿದ್ ಅಲ್'ಫಿ ಸಾನಿ ಶೈಖ್ ಅಹ್ಮದ್ ಸರ್'ಹಿಂದಿ ರ. ರವರು.

ಪ್ರಸಿದ್ಧರಾದ ಸೂಫೀವರ್ಯರು, ವೈಜ್ಞಾನಿಕ ರಂಗದಲ್ಲಿ ಲೋಕದಾದ್ಯಂತ ಕ್ರಾಂತಿಯನ್ನು ಸೃಷ್ಟಿಸಿದ ಅತ್ಯುತ್ತಮ ಬರಹಗಾರರು, ಅತ್ಯಧಿಕ ಶಿಷ್ಯಂದಿರುಗಳಿರುವ ಮಹಾ ವಿದ್ವಾಂಸರು, ವಿವಿಧ ತ್ವರೀಖತ್ತುಗಳಿಂದ ಅನೇಕ ಜನರಿಗೆ ಆತ್ಮೀಯ ಬೆಳಕನ್ನು ಪಸರಿಸಿದ ಆತ್ಮಜ್ಞಾನಿ ಮುಂತಾದ ಹಲವಾರು ವಿಶೇಷತೆಗಳಿಂದ ಉತ್ತರ ಭಾರತದ ಇಸ್ಲಾಮಿಕ ಚರಿತ್ರೆಯಲ್ಲಿ ಮಹತ್ತರವಾದ ಸ್ಥಾನಗಳಿಂದ ವಿರಾಜಮರಾದ ವ್ಯಕ್ತಿಯಾಗಿದ್ದಾರೆ  ಮಹಾನರು.

*"ಎರಡನೇ ಸಹಸ್ರಾಬ್ದದ ಪರಿಷ್ಕರ್ತರಾಗಿದ್ದಾರೆ." ಎಂದಾಗಿದೆ "ಮುಜದ್ದಿದ್  ಅಲ್'ಫಿ ಸಾನಿ" ಎಂಬ ಪದದ ಅರ್ಥ.*

ಪ್ರಮುಖ ಸೂಫೀವರ್ಯರಾದ ಮಖ್'ದೂಮ್ ಶೈಖ್ ಅಬ್ದುಲ್ ಅಹ್ಮದ್ (ರ) ಎಂಬವರ ಮಗನಾಗಿ ಹಿಜರಿ ವರ್ಷ 971ರ
 (ಎ.ಡಿ.1564) ಮುಹರಂ 10ಕ್ಕೆ ಪಂಜಾಬಿನ ಸರ್'ಹಿಂದಿ ಎಂಬಲ್ಲಿ ಜನಿಸಿದರು.
ಇಸ್ಲಾಮಿನ ಎರಡನೇ ಖಲೀಫರಾದ ಉಮರ್ ಇಬ್ನು ಖತ್ತಾಬ್ (ರ) ರವರಲ್ಲಿಗೆ ತಲುಪುದಾಗಿದೆ ಮಹಾನರ ಪಿತೃ ಪರಂಪರೆ.
ಸರ್'ಹಿಂದ್ ಎಂಬ ಸ್ಥಳ ಒಂದು ಕಾಲದಲ್ಲಿ ಧಾರಾಳ ಸಿಂಹಗಳು ವಿಹರಿಸುತ್ತಿರುವ ವನ ಪ್ರದೇಶವಾಗಿತ್ತು. *ಶೇರೆ ಹಿಂದ್* (ಸಿಂಹಗಳ ಹಿಂದ್) ಎಂಬ ವಿಶ್ಲೇಷಣೆಯಿಂದ ಸರ್'ಹಿಂದ್ ಆಗಿರುವುದೆಂದು ಹೇಳಲಾಗುತ್ತಿದೆ.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲಿತಿರುವುದು ತನ್ನ ತಂದೆಯಿಂದಾಗಿತ್ತು. ಆತ್ಮೀಯವೂ, ಬೌಧಿಕವು ಆದ ಜ್ಞಾನಗಳನ್ನು ಕೂಡಾ ತಂದೆಯಿಂದಲೇ ಕರಗತ ಮಾಡಿದರು.
ಆತ್ಮೀಯ ಸರಣಿಯ ಪಿತ್ರಾರ್ಜಿತ ಜ್ಞಾನವನ್ನು  ತನ್ನ ಮಗನಿಗೆ ಸನ್ಮಾನಿಸಿ ತಂದೆಯವರು ಇಹಲೋಕ ತ್ಯಜಿಸಿದರು.

*ಹಝ್ರತ್ತ್ ಬಖಿ ಬಿಲ್ಲ (ರ)* ಅವರೊಂದಿಗೆ ಸೇರಿಕೊಳ್ಳುವ ಮೂಲಕವಾಗಿದೆ ಮಹಾನರಿಗೆ ಆತ್ಮೀಯ ಆಕರ್ಷಣೆ ಉಂಟಾಗಿರುವುದು.
ಹಜ್ಜ್ ಯಾತ್ರೆ ಆಗ್ರಹಿಸಿ ಸರ್'ಹಿಂದಿ'ಯಿಂದ ದೆಹಲಿಗೆ ಹೋದ ಸಂದರ್ಭದಲ್ಲಿ ಮೌಲಾನಾ *ಹಸನ್ ಕಾಶ್ಮೀರಿ (ರ)*ಯವರೊಂದಿಗಿರುವ ವಾಸ ಅದಕ್ಕೊಂದು ನಿಮಿತ್ತವಾಗಿತ್ತು. ಹಝ್ರತ್ತ್ ಬಖಿ ಬಿಲ್ಲ (ರ) ರವರ ಕುರಿತು ಕೇಳಿ ತಿಳಿದ ನಂತರ ಅವರನ್ನು ಕಾಣಲು, ಅವರ ಶಿಷ್ಯತ್ವವನ್ನು ಸ್ವೀಕರಿಸಲು ಮಹಾನರಿಗೆ ಅತಿಯಾದ ಆಗ್ರಹ ಮನಸ್ಸಲ್ಲಿ ಉದ್ಭವಿಸಿತು.
ತಡಮಾಡದೆ ಹಝ್ರತ್ತ್ ಬಖಿ ಬಿಲ್ಲ (ರ ) ರವರನ್ನು ಕಂಡು ಮೂರು ತಿಂಗಳವರೆಗೆ ಅವರೊಂದಿಗೆ ಆತ್ಮೀಯ ಶಿಕ್ಷಣದಲ್ಲಿ ಕಳೆದರು.
ಶಿಷ್ಯನ ಆತ್ಮೀಯ ಜ್ಞಾನದಲ್ಲಿ ಆಕರ್ಷಣೆಯಾದ ಅವರು ಆತ್ಮೀಯ ಸರಣಿಯನ್ನು ಅನುಸರಿಸಿಕೊಂಡು ಮುನ್ನಡೆಯಲು ಸಮ್ಮತ ಸೂಚಿಸಿ ಅನುಗ್ರಹಿಸಿದರು.

ದೆಹಲಿಗೆ ಮರಳಿ ತಲುಪಿದ ನಂತರ ಹೆಚ್ಚು ಉತ್ಸಾಹದಿಂದ ಜ್ಞಾನ ಪ್ರಸರಣ, ಪ್ರಭೋದನೆ, ಪ್ರವರ್ತನೆಗಳಲ್ಲಿ ಮುಳುಗಿದರು.
ಜನರನ್ನು ಸನ್ಮಾರ್ಗಕ್ಕೆ ಆಹ್ವಾನಿಸಿದರು. ಜನರ ನಡುವೆ ತನ್ನ ಜ್ಞಾನವನ್ನು ಪಸರಿಸುತ್ತಾ, ಬೋಧಿಸುತ್ತಾ ಜೀವಿಸುತ್ತಿದ್ದಾಗ ಹಝ್ರತ್ತ್ ಬಖಿ ಬಿಲ್ಲ (ರ) ರವರಿಂದ ಒಂದರ ಮೇಲೆ‌ ಒಂದರಂತೆ ಎರಡು ಪತ್ರಗಳು ಲಭಿಸಿತು. ಅದರಲ್ಲಿ ತನ್ನ ಹತ್ತಿರ ತಲುಪಲಿರುವ ನಿರ್ದೇಶನವಾಗಿತ್ತು  ಬರೆದಿರುವುದು. ಆ ನಿರ್ದೇಶನದಂತೆ ಗುರುವನ್ನು ಕಂಡು ಅವರ ಆಜ್ಞೆಯನುಸಾರ ಅವರ ಮಗಳನ್ನು ವಿವಾಹವಾದರು. ಗುರು ಮತ್ತು ಶಿಷ್ಯರ ಕೊನೆಯ ಭೇಟಿಯಾಗಿತ್ತು ಅದು. ನಂತರ ಮಹಾನರು ಸ್ವತಃ ಊರಾದ ಸರ್'ಹಿಂದಿಗೆ ಆಗಮಿಸಿದರು.

ಶೈಖ್ ಅಹ್ಮದ್ ಸರ್'ಹಿಂದಿ (ರ) ರವರು ಅಂದು ಈಗಿನ ಪಾಕಿಸ್ತಾನದ ಲಾಹೋರಿನಲ್ಲಿ ಇರುವಾಗ ಹಝ್ರತ್ತ್ ಬಖಿ ಬಿಲ್ಲ (ರ)ರವರಯ ವಫಾತ್ತಾದ ವಿಷಯ ತಿಳಿದು ಮಹಾನರು ದೆಹಲಿ ತಲುಪಿ ಗುರುವಿನ ಖಬರಿನ ಹತ್ತಿರ ಹೋಗಿ ಗುರುವಿಗಾಗಿ ಅಲ್ಲಾಹನ ಬಳಿ ಪ್ರಾರ್ಥಿಸಿದರು.
ಅಲ್ಪ ಸಮಯ ಅಲ್ಲಿ ಉಳಿದು ಅಲ್ಲಿಂದ ಮರಳಿದರು.
ಹಿಜರಿ ವರ್ಷ👇
10ನೇ ಶತಮಾನದಲ್ಲಿ ಅಕ್ಬರ್'ನ ಆಡಳಿತಕಾಲದಲ್ಲಿ ದಿನುಲ್ ಇಸ್ಲಾಂಮಿನ  ಅನುಯಾಯಿಗಳಿಗೆ ಹಲವಾರು ಕಷ್ಟಗಳು ಸಹಿಸಬೇಕಾಗಿತ್ತು. ಏಕ ಇಲಾಹಿ ಆರಾಧನೆಯ ವಿರುದ್ದ ನಿಂದನೆಯ, ನಿರ್ಮಿತನಾಗಿ ರಂಗ ಪ್ರವೇಶಗೈದ *ಅಕ್ಬರ್ ಚಕ್ರವರ್ತಿ, "ದೀನೇ ಇಲಾಹಿ"* ಎಂಬ ಹೆಸರಿನಲ್ಲಿ ಹೊಸ ಧರ್ಮದೊಂದಿಗೆ ಅವತಾರವಾದ ಸಂದರ್ಭವಾಗಿತ್ತು ಅದು. ಅನಿಸ್ಲಾಮಿಕ ವಾದಗಳು, ಅಗ್ನಿ, ಮರ, ಜಲ, ಮೊದಲಾದವುಗಳನ್ನು ಆರಾಧಿಸುವ ಭೀಕರ ಅವಸ್ಥೆ ಉಂಟಾಯಿತು. ಪರಿಶುದ್ಧ
ಇಸ್ಲಾಮಿನ ವಿರುದ್ದವಾದ ಆಕ್ರಮಣವನ್ನು ಎದುರಿಸಲು ನಿರ್ಭಯರಾದ ಸಮಾಜೋದ್ಧಾರಕರ ರಂಗ ಪ್ರವೇಶವನ್ನು ವಿಶ್ವಾಸಿಗಳು ಎದುರು ನೋಡುತ್ತಿದ್ದ ಸಮಯವು ಆಗಿತ್ತು ಅದು.
ಇಂತಹದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ಲಾಮಿಕ ಮೌಲ್ಯಗಳನ್ನು ಎತ್ತಿ ಹಿಡಿದು ವಿಶ್ವಾಸಿಗಳನ್ನು ಸತ್ಯ ಹಾದಿಯಲ್ಲಿ ಮುನ್ನೆಡೆಸಲು ತನ್ನ ಜೀವನವನ್ನೇ ತ್ಯಾಗ ಮಾಡಿದ ಮಹಾ ಪುರುಷರಾಗಿದ್ದಾರೆ ಶೈಖ್ ಅಹ್ಮದ್ ಸರ್ಹಿಂದಿ (ರ).

ಅನೇಕ ಕೃತಿಗಳ ರಚನೆಗಾರರಾದ ಮಹಾನರ ಹಲವಾರು ಪತ್ರಗಳು ಗ್ರಂಥಕ್ಕಿಂತಲೂ ಹೆಚ್ಚು ಪ್ರಸಿದ್ದಿ ಪಡೆದಿದೆ.
ಸೂಫಿವರ್ಯರುಗಳ, ವಿದ್ವಾಂಸರುಗಳ ಪತ್ರಗಳಿಗೆ *ಮಕ್ತೂಬಾತ್ತ್* ಎಂದು ಸಾಧಾರಣವಾಗಿ ಹೇಳುವುದುಂಟು.
ಮಹಾನರ *ಮಕ್ತೂಬಾತುಗಳು* ಉಳಿದವರಿಗಿಂತ ವೈರುದ್ಯವಾಗಿತ್ತು.
ವಿವಿಧ ವಿಷಯಗಳಲ್ಲಿ ತನ್ನ ನಿಲುವು ಮತ್ತು ವೀಕ್ಷಣೆಗಳು ಹಾಗೂ ಭಾಷಾಪರವಾದ ಉನ್ನತಿಯಿಂದಾಗಿತ್ತು ಪತ್ರಗಳು ಪ್ರಸಿದ್ಧವಾಗಿರುವುದು. ಮಹಾನವರ ಪತ್ರಗಳು ಗ್ರಂಥ ರೂಪದಲ್ಲಿ ಸಂಗ್ರಹಿಸಿಡಲಾಗಿದೆ. ಮೂರು ಭಾಗಗಳಾಗಿದೆ ಆ ಗ್ರಂಥ ಸಂಗ್ರಹ.
*ಭಾಗ ಒಂದರಲ್ಲಿ 313 ಪತ್ರಗಳಿವೆ. ಮಹಾನವರ ಶಿಷ್ಯರಾದ ಖಾಜ ಯಾರ್ ಮುಹಮ್ಮದ್ ಬದಕ್ಷಿ ತಲ್'ಖಾನಿ (ರ) ಎಂಬ ಮಹಾನರಾಗಿದ್ದಾರೆ ಇದನ್ನು ಶೇಖರಿಸಿಟ್ಟಿರುವುದು.*
*"ದುರ್ ಅನ್ ಮಆರಿಫ್" ಎಂದಾಗಿದೆ ಈ ಗ್ರಂಥಕ್ಕೆ ಹೆಸರಿಟ್ಟಿರುವುದು.*
*ಭಾಗ ಎರಡರಲ್ಲಿ 99 ಪತ್ರಗಳು ಒಳಗೊಂಡಿತು. "ನೂರ್ ಅನ್ ಖಲ್ಲಾಖ್" ಎಂಬ ನಾಮದಲ್ಲಿರುವ 2ನೇ ಗ್ರಂಥವನ್ನು ಸಂಗ್ರಹಿಸಿರುವುದು ಖಾಜ ಅಬ್ದುಲ್ ಹಯ್ಯಾ (ರ) ಎಂಬವರಾಗಿದ್ದಾರೆ.*
 *ಭಾಗ 3ರಲ್ಲಿ 124 ಪತ್ರಗಳಿತ್ತು. ಖಾಜ ಮುಹಮ್ಮದ್ ಹಾಶಿಮ್ (ರ) ರವರಾಗಿದ್ದಾರೆ ಇದನ್ನು  ಒಟ್ಟು ಗೂಡಿಸಿರುವುದು*
*"ಮಹ್'ರಿಫತ್ತುಲ್ ಹಖಾಈಖ್" ಎಂದಾಗಿದೆ ಈ ಗ್ರಂಥದ ಹೆಸರು.*

ಪತ್ರಗಳ ಹೊರತು ಹಲವಾರು ಗ್ರಂಥಗಳು ಮಹಾನವರು ರಚಿಸಿದ್ದಾರೆ.
*ಮುಬಾದೊ ಮಆದ್, ಮಆರಿಫೆ ಲಖ್'ದಿಯ್ಯ, ಮಕಾಶಿಫಾತ್ತೆ ಗೈಬಿಯ್ಯ, ಶರಹ್ ರುಬಾಇಯಾತ್ತೆ ಹಸ್'ರತ್ತ್, ಖಾಜ ಬಖಿ ಬಿಲ್ಲ, ರಿಸಾಲ ತೆಲಿಲಿಯ, ರಿಸಾಲ ಇಸ್'ಬತ್ತುಲ್ ನುಬುವ್ವತ್ತ್, ರಿಸಾಲ, ಬಾ ಸಿನ್'ಸಿಲಾಯೆ ಅಹಾದಿಸ್* ಮುಂತಾದವುಗಳಲ್ಲಿ ಕೆಲವೊಂದಾಗಿದೆ.

*ಸುಹ್'ರವರ್'ದಿಯ್ಯ, ಖಾದಿರಿಯ್ಯ, ಚಿಶ್'ತ್ತಿಯ, ತ್ವರಿಖತ್ತುಗಳ ಶೈಖಾಗಿದ್ದರು ಮಹಾನರು*
ಹನಫಿ ಮದ್'ಹಬ್' ಆಗಿತ್ತು ಮಹಾನುಭಾವರು
ಕರ್ಮ ಸರಣಿಯಾಗಿ ಸ್ವೀಕರಿಸಿರುವುದು.

ಹಿಜರಿ ವರ್ಷ 1079ರ ರಬಿಉಲ್ ಅವ್ವಲ್ 9ಕ್ಕೆ (A.D. 1624) ಮುಜದ್ದಿದ್ ಅಲ್'ಫಿ ಸಾನಿ ಶೈಖ್ ಅಹ್'ಮದ್ ಸರ್'ಹಿಂದಿ (ರ) ರವರು ಈ ನಶ್ವರ ಲೋಕದಿಂದ ಯಾತ್ರೆಯಾದರು.

ದಾರಿ: ಚಂಡೀಗಡ್'ನಿಂದ 43 ಕಿ.ಮೀ ದೂರ ಸಂಚರಿಸಿದರೆ ಸಿಗುವಂತಹ ಪ್ರದೇಶವೇ ಸರ್'ಹಿಂದಿ.

🌷ಮುಗಿಯಿತು.

✍ಗಫೂರ್ ಬಾಯಾರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...