Skip to main content

ರಮಳಾನ್

_ತಿಳಿಯಿರಿ.... ಅರಿಯಿರಿ.... ನೆನಪಿನಲ್ಲಿಡಿ...._

ಶ್ರೇಷ್ಠತೆಯನ್ನು ಪಡೆದ ಉಪವಾಸ , ಮಹತ್ವವೇರಿದ ಪುಣ್ಯ ರಾತ್ರಿ ಪವಿತ್ರವಾದ ತಿಂಗಳುಗಳು ಇವುಗಳನ್ನು ನಷ್ಟ ಪಡಿಸಿಕೊಳ್ಳುತ್ತಿರುವವರೊಮ್ಮೆ
*ಅರಿಯಿರಿ.... ತಿಳಿಯಿರಿ.... ನೆನಪಿನಲ್ಲಿಡಿ....*

_ಭೂ ಲೋಕದ ಆಢಂಭರಕ್ಕೆ ಮಾರುಹೋಗಿ ಅದೆಷ್ಟೋ ಪಾಪ ಕೃತ್ಯಗಳನ್ನು ತಿಳಿದು ತಿಳಿದು ಮಾಡಿರುವ ನಾನು , ನಾವುಗಳು ಅದನ್ನು ನೆನೆದು ಪಶ್ಚಾತ್ತಾಪ ಪಟ್ಟು ಅಲ್ಲಾಹನೆಡೆಗೆ ಮರಲು ಬೇಕಾಗಿ ನಮಗೆ ಸಿಗುವ ಕೆಲವೊಂದು ಪುಣ್ಯವೇರಿದ ತಿಂಗಳು , ಉಪವಾಸ , ರಾತ್ರಿಗಳನ್ನು ನಿರ್ಲಕ್ಷ್ಯದಿಂದ ನೋಡಿ ಅದರ ಪ್ರತಿಫಲವನ್ನು ಪಡೆಯದೆ ಕಡೆಗಣಿಸುತ್ತಿರುವೆವು._

_ಈಗಾಗಲೇ ನಮ್ಮಿಂದ ಕಳೆದು ಹೋಗುತ್ತಿರುವ ಪವಿತ್ರ ವೇರಿದ ರಜಬ್ ತಿಂಗಳು ಹಲವಾರು ಪುಣ್ಯ ಪ್ರತಿಫಲಗಳನ್ನು ಪಡೆದುಕೊಂಡು ಅಲ್ಲಾಹನ ಅಪಾರ ಅನುಗ್ರಹದಿಂದ ನಮ್ಮೆಡೆಗೆ ಬಂದಿತ್ತು. ಆದರೆ ನಾವದನ್ನು ಬೇಕಾದ ರೀತಿಯಲ್ಲಿ ಅದರ ಸದುಪಯೋಗ ಪಡಿಸಿಕೊಳ್ಳದೇ ದೈನಂದಿನ ಕಾರ್ಯದಲ್ಲಿ ನಿರತವಾಗಿದ್ದೆವು._
_ರಜಬ್ ತಿಂಗಳಲ್ಲಿ ಯಾವುದಾದರೊಂದು ದಿನ ವೃತಾನುಷ್ಠಾನ ಕೈಗೊಂಡವನಿಗೆ ಸ್ವರ್ಗ ಲೋಕದಲ್ಲಿ ರಜಬ್ ಎಂಬ ಹೆಸರಿನ ನದಿ ಇದೆ. ಆತನಿಗೆ ಆ ನದಿಯಿಂದ ನೀರನ್ನು ಕುಡಿಸಲಾಗುವುದು. ಆದರೆ ನಾವು ಈ ಒಂದು ತಿಂಗಳಲ್ಲಿ ಒಂದು ವೃತಾನುಷ್ಠಿಸಲು ಮುಂದಾಗಲಿಲ್ಲ. ಇನ್ನು ಅದರ ಉಪಯೋಗ ಪಡೆಯಬೇಕೆಂದರೆ ಅಲ್ಲಾಹನು ದೀರ್ಘ ಆಯುಷ್ಯವನ್ನು ನೀಡಿದರೆ ಮಾತ್ರ ಒಂದು ವರ್ಷ ಕಾಯಬೇಕು._

*_ಅದೇ ರೀತಿ ಪವಿತ್ರವಾದ ಪುಣ್ಯವೇರಿದ ಇಸ್ರಾ‌ಅ್ ಮಿಅ್‌ರಾಜ್‌ನ ದಿವಸದ ಉಪವಾಸ 60 ತಿಂಗಳುಗಳ ಕಾಲ ಉಪವಾಸ ಆಚರಿಸಿದ ಪ್ರತಿಫಲ ಸಿಗುವ ಅಂದಿನ ಉಪವಾಸವನ್ನು ಅದರ ಮಹತ್ವವನ್ನು ಅರಿತರು ಕೂಡ ಆ ದಿನದ ವೃತಾನುಷ್ಠಿಸಲು ಆಲಸ್ಯ ತನ ತೋರಿಸಿದ ಅದೆಷ್ಟೋ ಯುವಕ ಯುವತಿಯರು ನಮ್ಮೆಡೆಯಲ್ಲಿದ್ದಾರೆ. ಆದರೆ ಮತ್ತೆ ಆ ಉಪವಾಸ ಆಚರಿಸಿಲು ಅದೆಷ್ಟು ಸಾಧಿಸಿದರು ಸಾಧ್ಯವಾಗದು. ಮತ್ತೆ ಅದಕ್ಕೆ ಒಂದು ವರ್ಷವೇ ಕಾಯಬೇಕಾಗಿದೆ._*

ಬರಹದ ಉದ್ದೇಶ....
   
    _ಜೀವನದಲ್ಲಿ ಆಲಸ್ಯ ತುಂಬಿಕೊಂಡು ಅಲ್ಲಾಹನು ನಮಗೆ ನೀಡುತ್ತಿರುವ ಪುಣ್ಯ ತಿಂಗಳುಗಳ ಮಹತ್ವವೇರಿದ ಪ್ರತಿಫಲವನ್ನು ಪಡೆಯಲು ಹಿಂಜರಿಯುತ್ತಿದ್ದೇವೆ. ಇಬ್ಲೀಸಿನ ಲಾನತುಲ್ಲಾಹಿ ಅಲೈಹಿ ಶರ್ರಿನಿಂದ ಅವನ ಹಾದಿಯಲ್ಲೇ ಸಂಚರಿಸುತ್ತಿದ್ದೇವೆ._

_ಕಳೆದು ಹೋದ ದಿನಗಳಲ್ಲಿ ಮಾಡಿರುವ ಪಾಪ ಕೃತ್ಯಗಳನ್ನು ಮನ್ನಿಸಿಕೊಳ್ಳಲು ಅಲ್ಲಾಹನೆಡೆಗೆ ಮರಳಲು ಸಿಗುವ ತಿಂಗಳುಗಳಿವು. ಕಳೆದು ಹೋದ ದಿನಗಳನ್ನು ಮತ್ತೆ ತರಲು ಸಾಧ್ಯವಿಲ್ಲ. ಇನ್ನೂ ನಮ್ಮ ಮುಂದಿರುವ *ಪವಿತ್ರ ಶಾಬಾನ್* ತಿಂಗಳ ಪುಣ್ಯ ಪ್ರತಿಫಲವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದೇ ಅದರ ಸದುಪಯೋಗವನ್ನು ಪಡೆದುಕೊಳ್ಳೋಣ. ಪ್ರತಿಯೊಂದು ದಿನಕ್ಕಿರುವ ಮಹತ್ವವನ್ನು , ಉಪವಾಸವನ್ನು , ಪುಣ್ಯವೇರಿದ ರಾತ್ರಿಗಳನ್ನು ಗಣನೆಗೆ ತೆಗೆದುಕೊಂಡು ಅದರ ಪ್ರತಿಫಲವನ್ನು ಪಡೆದುಕೊಳ್ಳೋಣ._

*ಅಲ್ಲಾಹನೆಡೆಗೆ ಮರಲು ಬೇಕಾಗಿ ನಮ್ಮೆಡೆಗೆ ಬಂದಿರುವ ಪವಿತ್ರವಾದ ತಿಂಗಳುಗಳ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉತ್ತಮ ಸ್ವಭಾವವನ್ನು ರೂಪಿಸಿಕೊಂಡು ಅಲ್ಲಾಹನು ಅಲ್ಲಾಹನ ರಸೂಲ್ ﷺِ ರವರು ಇಷ್ಟ ಪಡುವಂತಹ ಜೀವನವನ್ನು ನಡೆಸಲು ಮುಂದಾಗೋಣ. ಅಲ್ಲಾಹು ತೌಫಿಕ್ ನೀಡಿ ಅನುಗ್ರಹಿಸಲಿ.*
*۞ْآمِيـــــنْ  يَا رَبَّ الْعَالَمِين۞*

✒ *ರಜಬ್ ನಾವುಂದ(ಜ್ಞಾನದಾಹಿ)*

_ಹೇಳಿರಿ ನಬಿ ﷺ ರವರ ಮೇಲೆ ಮೂರು ಸ್ವಲಾತ್ ........_

📿☪📿 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿☪📿

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...