Skip to main content

ಅಲ್ಲಾಹನ ಅನುಗ್ರಹ

ಭಿಕ್ಷುಕನೋರ್ವˌ ಒಂದು ಮನೆಗೆ ಯಾಚಿಸುತ್ತಾ ಹೋಗುತ್ತಾನೆ...

ಆತ ಆ ಮನೆಯನ್ನು ನೋಡುತ್ತಾನೆ  ಅದು ಮನೆ ಅಲ್ಲˌ ಅರಮನೆ.....
ನೋಡಿ ಮುಗಿಸಲು ಎರಡು ಕಣ್ಣು ಸಾಲದು......
ಹೊರಗಡೆ ಐಶರಾಮಿ ಕಾರುಗಳು ಸಾಲುಗಟ್ಟಿ ನಿಂತಿವೆ....
ಕೊಟ್ಟಾರದ ಹೊರಾಂಗಣದಲ್ಲಿ ಅರಮನೆಯ ಒಡೆಯ ಕಪ್ಪು ಕೂಲಿಂಗ್ ಗ್ಲಾಸೊಂದನ್ನ ಹಾಕಿ ಐಶಾರಾಮಿ ಕುರ್ಚಿಯಲ್ಲಿ ಕುಳಿತಿದ್ದಾನೆ....

ಅವನ ಪಕ್ಕದಲ್ಲಿ ಸುಂದರಿಯಾದಂತಹ ಪತ್ನಿಯೂ ಇದ್ದಾಳೆ......

ತಂದೆ—ತಾಯಿಯ ಸೇವೆಗೆ ಸದಾ ಸಿಧ್ಢರಾಗೋ ಮಕ್ಕಳೂ ಇದ್ದಾರೆ.......

ಇದನ್ನೆಲ್ಲಾ ಗಮನಿಸಿದ ಭಿಕ್ಷುಕ ಹೇಳಿದˌ "ಓ ಯಜಮಾನಾರೇ.... ಓ ಯಜಮಾನರೇ...... ನೀವೆಷ್ಟು ಭಾಗ್ಯವಂತರುˌ ದೇವರು ನಿಮಗೆ ಎಷ್ಟು ಅನುಗ್ರಹ ನೀಡಿದ್ದಾನೆ. ನಿಜಕ್ಕೂ ನೀವು ಭಾಗ್ಯವಂತ...

ನಿಮಗೆ ಅಲ್ಲಾಹನು ಅರಮನೆ ನೀಡದಿದ್ದಾನಲ್ಲವೇ..? ನನಗೆ ಒಂದಿಂಚು ಭೂಮಿಯೂ ಇಲ್ಲ.

ನಿಮಗೆ ಅಲ್ಲಾಹನು ಐಶಾರಾಮಿ ಕಾರು ನೀಡಿದ್ದಾನಲ್ಲವೇ...?ನನಗೆ ಸರಿಯಾದ ಚಪ್ಪಲಿಯೂ ಇಲ್ಲ...

ನಿಮಗೆ ಸುಂದರಿಯಾದ ಪತ್ನಿಯೂ ಇದ್ದಾಳೆˌ ನನಗೆ ಯಾರು ಹೆಣ್ಣು ಕೊಡುವವರು, ಆದ್ದರಿಂದ ಮಕ್ಕಳೂ ಇಲ್ಲ.
ನಿಜಕ್ಕೂ ನೀವು ಭಾಗ್ಯವಂತರು...

ಇದನ್ನ ಕೇಳಿದ ಯಜಮಾನ ಭಿಕ್ಷುಕನೊಂದಿಗೆ ಹೇಳಿದ -  *" ಅಲ್ಲಾಹನು ನನಗೆ ನೀಡದಂತಹ ಒಂದು ದೊಡ್ಡ ಅನುಗ್ರಹವನ್ನ ನಿನಗೆ ನೀಡಿದ್ದಾನೆ"*

ಭಿಕ್ಷುಕ ಅಚ್ಚರಿಯೊಂದಿಗೆˌ ಅದೇನೆಂದು ಕೇಳುತ್ತಾನೆ.

ಯಜಮಾನˌ ತನ್ನ ಕನ್ನಡಕವನ್ನ ತೆಗೆದು ಹೇಳುತ್ತಾನೆˌ *"ಅಲ್ಲಾಹನು ನನಗೆ ಎರಡೂ ಕಣ್ಣನ್ನು ನೀಡಿಲ್ಲˌ ನಾನು ಕುರುಡ"...ˌ ನನ್ನ ಎಲ್ಲಾ ಅನುಗ್ರಹವನ್ನ ನಿನಗೆ ನೀಡುವೆ. ನಿನ್ನ ಎರಡೂ ಕಣ್ಣುಗಳನ್ನು ನನಗೆ ನೀಡುವೆಯಾ...?*

ಭಿಕ್ಷುಕ ಏನೂ ಮಾತನಾಡದೇ ಅಲ್ಲಿಂದ ಹೊರಬಂದ...
ದೇವರು ಆ ಯಜಮಾನನಿಗೆ ನೀಡಿದಂತಹ ಅನುಗ್ರಹ ನನ್ನ ಎರಡು ಕಣ್ಣಿಗೆ ಸಮಾನವಲ್ಲ ಎಂಬ ವಾಸ್ತವವನ್ನು ಭಿಕ್ಷುಕ ಮನದಟ್ಟು ಮಾಡಿಕೊಂಡ...

*ಮನುಷ್ಯ ಎಲ್ಲದಕ್ಕೂ ಬೆಲೆಕಟ್ಟುತ್ತಾನೆ... ಆದರೆ ಸ್ರಷ್ಟಿಕರ್ತ ನಮಗೆ ಪುಕ್ಕಟೆಯಾಗಿ ಕೊಂಟಂತಹ ಎಂದೂ ಬೆಲೆಕಟ್ಟಲಾಗದ ನಮ್ಮ ದೇಹದ ಒಂದೊಂದು ಅಂಗಾಂಗದ ಬಗೆಗೆ ನಮಗೆ ಎಚ್ಚರವೇ ಇರೋಲ್ಲ... ಅದನ್ನು ಅನುಗ್ರಹಿಸಿದ ಜಗದೊಡೆಯನ ಬಗೆಗೆ ಕೂಡ...*

*The world fastest driver* ವಿಶ್ವದ ಅತ್ಯಂತ ವೇಗದ ಚಾಲಕ ಎಂಬ ಖ್ಯಾತಿಯ *"ಮೈಕಲ್ ಚುಮಾಕರ್"* ಒಮ್ಮೆ ಅಫಘಾತಕ್ಕೊಳಗಾಗಿ ಕೋಮದಲ್ಲಿದ್ದರು. ಕುತ್ತಿಗೆಯ ಭಾಗದ ನರಗಳು ಛಿದ್ರಗೊಂಡ ಕಾರಣˌ ಅದನ್ನ ಸರಿಪಡಿಸಲು ಆಸ್ಪತ್ರೆಯಲ್ಲಿ ತಗುಲಿದಂತಹ ಒಟ್ಟು ಮೊತ್ತ 109 ಕೋಟಿ ರೂ.
ಆದರೂ ಸರಿಯಾದ ರೀತಿಯಲ್ಲಿ ಚುಮಾಕರ್ ನಿಗೆ ಇಂದು ತಲೆಎತ್ತಲು ಸಾಧ್ಯವಿಲ್ಲ...

ಹಾಗಾದರೆ ಕುತ್ತಿಗೆಯಲ್ಲಿನ ನರಗಳ
ಬೆಲೆ ಎಷ್ಟು.....?
ನಮ್ಮ ಎರಡು ಕಣ್ಣುಗಳ ಬೆಲೆ...?
Brain ಅಥವಾ ಕಿಡ್ನಿಯ ಬೆಲೆ...?
ನಮ್ಮ ಶರೀರದ ಕುರಿತು ಚಿಂತಿಸುವಾಗ ನಾವು ಕೋಟ್ಯಧಿಪತಿಗಳೇ.....!

*"ಇರುವ ಭಾಗ್ಯವ ನೆನೆದು ಬಾರೆನೆಂಬುವುದನು ಬಿಡು"* ಎಂಬ ಡಿ.ವಿ.ಜಿ.ಯವರ ವಚನ ಅಕ್ಷರಶಃ ಸತ್ಯ...

*ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞರಾಗಿರಬೇಕೇ ವಿನಹಃ ಕೃತಘ್ನರಾಗಬಾರದಲ್ಲವೇ*...
🙏🙏🙏

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...