Skip to main content

_ಆಡುವ ಮಾತಿನಲ್ಲಿ ಸೂಕ್ಷ್ಮತೆಯಿರಲಿ

_ಆಡುವ ಮಾತಿನಲ್ಲಿ ಸೂಕ್ಷ್ಮತೆಯಿರಲಿ._

*ಒಂದೇ ಒಂದು ಮಾತಿನಿಂದ ಅವನ ಎಲ್ಲಾ ಇಬಾದತ್‌ಗಳು ನಶಿಸಿ ಹೋದವು....⏬⏬*

( ಆತ್ಮೀಯ ಸ್ನೇಹಿತರಿಬ್ಬರ ಜೀವನದ ಕಥೆ ಪ್ರಸಂಗದ ಕೊಡೆಯಿಂದ ನಿಮ್ಮ ಮುಂದೆ. )

✒ *ರಜಬ್ ನಾವುಂದ (ಜ್ಞಾನದಾಹಿ)*

_( ಬದಲಾಗುವವರಿಗೆ ಇದರಲ್ಲೊಂದು ಬದಲಾವಣೆಯ ಪಾಠವಿದೆ. ಸಮಯವನ್ನು ತೆಗೆದಿಟ್ಟು ಒಮ್ಮೆ ಓದಿ ನೋಡಿ.)_

_ಚಿಕ್ಕಂದಿನಿಂದಲೇ ಇವರಿಬ್ಬರು ಸ್ನೇಹಿತರು ಎಲ್ಲಾ ವಿಷಯಗಳಲ್ಲಿ ಆತ್ಮೀಯವಾಗಿ ಬೆರೆತು ಕೊಂಡು ಬೆಳೆದು ಬಂದವರಾಗಿದ್ದರು. ಅದರಲ್ಲಿ ಒಬ್ಬನು ತನ್ನ ಜೀವನ ಶೈಲಿಯನ್ನು ಆಲ್ಲಾಹನ ದೀನಿನ ಮಾರ್ಗದಲ್ಲಿ ತೊಡಗಿಸಿಕೊಂಡು ಬಂದವನಾಗಿದ್ದು. ಸದಾ ಸಮಯ ಅಲ್ಲಾಹನನ್ನು ಸ್ಮರಿಸುತ್ತಾ , ಅಲ್ಲಾಹನು ನೀಡಿದ ಅನುಗ್ರಹಕ್ಕೆ ಸ್ಥುತಿಸುತ್ತಾ ದೀನಿನ ಪಾದದಡಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡವನಾಗಿದ್ದ._

_ಇನ್ನೊಬ್ಬನು ಅವನಿಗೆ ವಿರುದ್ಧವಾಗಿ ಪೋಲಿ ಜೀವನವನ್ನು ಮೈಗೂಡಿಸಿಕೊಂಡು ನಡೆಯುತ್ತ ಅನಾಚಾರ ಅಕ್ರಮಗಳಲ್ಲಿ ತೊಡಗಿಸಿಕೊಂಡು ನಮಾಝ್ , ವೃತ , ಪುಣ್ಯ ಕಾರ್ಯಗಳನ್ನು ಯಾವುದನ್ನು ಮೈಗೂಡಿಸಿಕೊಳ್ಳದೇ ಅವೆಲ್ಲವನ್ನು ನಿರ್ಲಕ್ಷ್ಯಿಸಿ ಅನಾಚಾರಗಳಲ್ಲಿಯೇ ಸಾಗುತ್ತ ನೆಡೆಯುತ್ತಿರುವವನಾಗಿದ್ದನು._

_ಒಳ್ಳೆಯ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಸ್ನೇಹಿತನು ತನ್ನ ಆತ್ಮೀಯ ಗೆಳೆಯನ ಬಳಿ ದೈನಂದಿನವಾಗಿ ಒಳ್ಳೆಯ ಉಪಚಾರವನ್ನು ನೀಡುತ್ತಾ , ಅಲ್ಲಾಹನಿಗೆ ವಿಧೇಯನಾಗಿ ಜೀವಿಸು , ಜೀವನದಲ್ಲಿ ಉತ್ತಮ ಕಾರ್ಯಗಳನ್ನೇ ಮಾಡು , ಅನಾಚಾರಗಳಲ್ಲಿ ಭಾಗಿಯಾಗದೆ ಒಳ್ಳೆಯನಾಗಿ ಜೀವನ ರೂಪಿಸು ಎಂದು ಅವನಿಗೆ ತಿಳಿ ಹೆಳುತ್ತಲೇ ಇದ್ದನು._

_ಆದರೆ ಕೆಟ್ಟ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಸ್ನೇಹಿತನು ಅದೆಲ್ಲದಕ್ಕೂ ಒಂದೇ ಉತ್ತರ ನೀಡುತ್ತಾ. *ನನಗೆ ನನ್ನ ಕಾರ್ಯವನ್ನು ನೋಡಲು ಅಲ್ಲಾಹನಿದ್ದಾನೆ.* ಎಂಬ ಉತ್ತರವನ್ನು ನೀಡುತ್ತಾ ಅವನ ಎಲ್ಲಾ ಸಂದೇಶಗಳಿಗೆ ಈ ಮಾತನ್ನು ನೀಡುತ್ತಾ ಬರುತ್ತಿದ್ದನು._

_ಹೀಗೆ ಇವರಿಬ್ಬರು ಆತ್ಮೀಯರಾಗಿಯೇ ಬೆಳೆದು ಬರುತ್ತಾ ಇವನು ಅವನಿಗೆ ಉತ್ತಮ ಸಂದೇಶ ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದು ಅವನು ಇವನಿಗೆ *ತನಗೆ ಅಲ್ಲಾಹನಿದ್ದಾನೆ ಎಲ್ಲಾ ಕಾರ್ಯಗಳನ್ನು ನೋಡುತ್ತಾ.* ಎಂದು ಹೇಳುತ್ತಾ ತಾಕಿತು ಮಾಡುತ್ತಾ ಬರುತ್ತಿದ್ದನು._

_ಹೀಗೆ ದಿನಗಳುರುತ್ತಾ ಒಂದು ದಿನ ಒಳ್ಳೆಯ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಸ್ನೇಹಿತನು ತನ್ನ ಆತ್ಮೀಯ ಗೆಳೆಯನು ಮಾಡುವ ಅನಾಚಾರದ ಕೆಲಸವನ್ನು ಕಣ್ಣೆದುರು ನೋಡುತ್ತಾನೆ. ಇಷ್ಟು ದಿನ ಅವನು ಅನಾಚಾರದಲ್ಲಿ ಭಾಗಿಯಾಗಿರುವುದನ್ನು ಮಾತ್ರ ತಿಳಿದಿದ್ದು; ಅವನು ಮಾಡುವ ಅನಾಚಾರವನ್ನು ನೋಡಿರಲಿಲ್ಲ. ಈಗ ಅವನು ನೋಡಿ ತನ್ನ ಆತ್ಮೀಯ ಗೆಳೆಯನಿಗೆ ಹೇಳುತ್ತಾನೆ. *ನೀನು ಮಾಡುವ ಈ ಅನಾಚಾರವನ್ನು ಎಂದಿಗೂ ಅಲ್ಲಾಹನು ಕ್ಷಮಿಸಲಾರನು.* ಎಂದು ಅವನಿಗೆ  ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅನಾಚಾರದಲ್ಲಿ ಭಾಗಿಯಾಗಿರುವ ಸ್ನೇಹಿತನು ತನ್ನ ಆತ್ಮೀಯ ಗೆಳೆಯನಲ್ಲಿ ಅದೇ ಹೇಳುತ್ತಾನೆ. *ನನ್ನ ಕಾರ್ಯದ ಬಗ್ಗೆ ನೀನು ಯೋಚಿಸಬೇಡ. ನನಗೆ ಅಲ್ಲಾಹನಿದ್ದಾನೆ.* ಎಂದು ಹೇಳಿ ಇಬ್ಬರೂ ಅಲ್ಲಿಂದ ಬೇರ್ಪಡುತ್ತಾರೆ._

_ಇವರಿಬ್ಬರ ಭೂಲೋಕದ ಜೀವನವನ್ನು ಕೊನೆಯಾಗಿಸಿ, ಪರಲೋಕದ ಜೀವನಕ್ಕಿರುವ ಯಾತ್ರೆ ಹೊರಡುತ್ತಾರೆ. ( ಇಬ್ಬರ ಮರಣದ ನಂತರ )_

_ಇವರಿಬ್ಬರ ವಿಚಾರಣೆ ನಡೆಯುವ ಸಂದರ್ಭದಲ್ಲಿ ಭೂಲೋಕದಲ್ಲಿ ಅಲ್ಲಾಹನ ಮಾರ್ಗದಲ್ಲಿ ಜೀವನ ತೊಡಗಿಸಿಕೊಂಡವನು ನರಕದಲ್ಲಿಯೂ , ಅನಾಚಾರಗಳಲ್ಲಿ ಭಾಗಿಯಾಗಿರುವ ಅವನ  ಆತ್ಮೀಯ ಗೆಳೆಯನಾದವನು ಸ್ವರ್ಗದಲ್ಲಿಯೂ ಆಗಿರುತ್ತಾರೆ._

_ಅಲ್ಲಾಹನ ಮಾರ್ಗದಲ್ಲಿ ಜೀವನ ತೊಡಗಿಸಿಕೊಂಡವನು ನಾನು ನರಕಕ್ಕೆ ಹೋಗಲು , ಅನಾಚಾರಗಳಲ್ಲಿ ಭಾಗಿಯಾಗಿರುವ ನನ್ನ ಸ್ನೇಹಿತ ಸ್ವರ್ಗವನ್ನು ಪಡೆಯಲು  ಕಾರಣವನ್ನು ಕೇಳಿದಾಗ; ಅಲ್ಲಾಹನು ಹೇಳುವನು; ನಿನ್ನ ಆತ್ಮೀಯ ಗೆಳೆಯ ಅನಾಚಾರದಲ್ಲಿ ಭಾಗಿಯಾಗಿರುವುದನ್ನ ಕಂಡಾಗ ನೀನು *ಅಲ್ಲಾಹನು ಎಂದಿಗೂ ನಿನ್ನನ್ನು ಕ್ಷಮಿಸಲಾರನು* ಎಂದು ಆಡಿದ  ಮಾತಿನಿಂದಾಗಿದೆ. ನೀನು ನರಕಕ್ಕೆ ಹೋಗಲು ಕಾರಣ. *ಆ ಸಮಯದಲ್ಲಿ ನಿನ್ನ ಎಲ್ಲಾ ಅಮಲುಗಳು ನಿನ್ನ ಸ್ನೇಹಿತನಿಗೂ , ನಿನ್ನ ಸ್ನೇಹಿತನು ಮಾಡಿದ ಎಲ್ಲಾ ಪಾಪಗಳು ನಿನ್ನ ಮೇಲೆ ವಿಧಸಲ್ಪಟ್ಟಿತ್ತು. ಎಂದು*_

_ಕೇವಲ ಒಂದು ಒಂದೇ ಮಾತಿನಿಂದ ಅವನ ಎಲ್ಲಾ ಕರ್ಮಗಳೂ ಕಡಿದು ಹೋಗಿವೆ ಎಂದಾದರೆ; ನಾವು ಚಿಂತಿಸಬೇಕಾಗಿದೆ. ಸೋಶಿಯಲ್ ಮೀಡಿಯಾ ಬಳಕೆ ಮಾಡುವವರು ಅದೆಷ್ಟು ಬಾರಿ ಆಲಿಮ್‌ಗಳ ಬಗ್ಗೆ ಸೈಯಿದ್ ಕುಟುಂಬದ ಕಣ್ಮಣಿಗಳ ಬಗ್ಗೆ ಫಿತ್ನ ಫಸಾದ್ ಮಾಡುತ್ತಾ , ಅವರ ಹಸಿ ಮಾಂಸವನ್ನು ಬಕ್ಷಿಸುವ ಯುವ ಸಮೂಹವೇ ಚಿಂತಿಸಬೇಕಾಗಿದೆ._

*ನಾವು ಮಾಡಿರುವ ಸಾಸಿವೆ ಕಾಳಿನಷ್ಟಿರುವ ಅಮಲನ್ನು ಇನ್ನೊಬ್ಬರಿಗೆ ನೀಡಿ ನಮ್ಮ ಈಮಾನನ್ನು ನಷ್ಟ ಪಡಿಸಿಕೊಳ್ಳದಿರೋಣ.*

_ಅಲ್ಲಾಹು ನಮ್ಮೆಲ್ಲರನ್ನು ಅವನ ಇಷ್ಟ ದಾಸರಲ್ಲಿ ಒಂದುಗೂಡಿಸಲಿ. ಮರಣದ ಸಮಯದಲ್ಲಿ ಈಮಾನಿನೊಂದಿಗೆ ಮರಣ ಹೊಂದಲು ತೌಫಿಕ್ ನೀಡಿ ಅನುಗ್ರಹಿಸಲಿ._

ದುಆ ಇರಲಿ ಸದಾ......
✒ *ರಜಬ್ ನಾವುಂದ (ಜ್ಞಾನದಾಹಿ)*

_ಹೇಳಿರಿ ನಬಿ ﷺ ರವರ ಮೇಲೆ ಮೂರು ಸ್ವಲಾತ್ ........_

📿☪📿 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿☪📿

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...