ಕರ್ಜೂರದ ಆರೋಗ್ಯ ರಹಸ್ಯಗಳು
🔹🔹🔹🔹🔹🔹🔹🔹
ಕರ್ಜೂರ ಬಳಸಿ' ಸೌಂಧರ್ಯ ಮತ್ತು ಆರೋಗ್ಯ ವ್ರದ್ಧಿಸಿ.
----------------------------------------
ಉಪವಾಸಿಗನ ಝಹರಿ (ಅತ್ತಾಳ)ಮತ್ತು ಇಫ್ತಾರ್(ವರ್ಜ) ಕರ್ಜೂರದಿಂದಾಗಿರುವುದು ಸುನ್ನತ್ ಆಗಿದೆ . ಇತರ ಆಹಾರ ಪಧಾರ್ಥ ಗಳಿಂದ ಅತ್ತಾಳ ಮತ್ತು ಉಪವಾಸ ತೂರೆಯುವಿಕೆ ಸಾಧ್ಯವಾಗಿದೆಯಾದರೂ ಕರ್ಜೂರವನ್ನೇ ಯಾಕಾಗಿ ಪ್ರವಾದಿ ಸಅ ರವರು ಆಯ್ಕೆಗೂಳಿಸಿದರು ? ಅದಕ್ಕಿರುವ ಕಾರಣವಾದರೂ ಏನಿರಬಹುದು?ಈ ನಿಗೂಢತೆ ಬಯಲಾಗಬೇಕಾದರೆ
ಕರ್ಜೂರದ ವೈಧ್ಯಕೀಯ ಗುಣ ಗಳ ಕುರಿತು ಅಧ್ಯಯನ ನಡೆಸಬೇಕು ಆವಾಗ ಪ್ರವಾದಿ ಸಅ ಕರ್ಜೂರದಲ್ಲಿ ಕಂಡಿದ್ದ ಆರೋಗ್ಯದ ರಹಸ್ಯ ಗುಣ ಏನೆಂದು ನಮಗೆ ಸ್ಪಷ್ಟಾಗುತ್ತದೆ.
ಉಪವಾಸ ಎನ್ನುವುದು ಮನುಷ್ಯನನ್ನು ಶಾರೀರಿಕವಾಗಿ ಅಸ್ವಸ್ತ ಗೂಳಿಸಿ ಮಾನಸೀಕವಾಗಿ ದೌರ್ಬಲ್ಯ ಗೂಳಿಸುವ ಒಂದು ಪ್ರಧಾನ ಪ್ರಕ್ರಿಯೆ ಯಾಗಿದೆ. ಅನ್ನ ಪಾನೀಯಗಳೆಲ್ಲವನ್ನೂ ತೂರೆದು ಗಂಟಲು,ನಾಡಿ ನರಗಳೆಲ್ಲವೂ ಒಣಗಿ,ರಕ್ತ ಸಂಚಾರಗಳೆಲ್ಲವೂ ಕಡಿಮೆಯಾದಾಗ ಶರೀರ ಆಯಾಸಗೂಂಡು ಶಕ್ತಿ ಕಳಕೂಳ್ಳುತ್ತದೆ ಇದರಿಂದ ಮನುಷ್ಯನ ಆಸೆ ಕೆಟ್ಟಭಾವನೆ ಗಳೆಲ್ಲವೂ ಕ್ಷಯಿಸಿ ಕೆಡುಕುಗಳಿಂದ ಹೆಚ್ಚು ದೂರವಾಗಿರಿಸಲು ಸಹಕಾರಿಯಾಗುತ್ತದೆ.
(ಆದ್ದರಿಂದಲೇ ಒಂದು ತಿಂಗಳ ಉಪವಾಸ ಕರ್ಮವನ್ನು ಕಡ್ಡಾಯ ಗೂಳಿಸಿ ಆತ್ಮ ಶುಚೀಕರಣಗೂಳಿಸಲು ಅಲ್ಲಾಹು ಆಜ್ಞೆಯಿತ್ತಿರುವುದು)
ಕರ್ಜೂರವು ಪ್ರಕ್ಟೋನ್,ಸುಕ್ರೋನ್,
ಗ್ಲೂಕೋಸ್' ಪೋಷಕಾಂಶ ಗಳನ್ನು ಧಾರಾಳವಾಗಿ ಹೂಂದಿರುವುದರಿಂದ ಇದು ತಿಂದವನಿಗೆ ತಕ್ಷಣವೇ ಶಕ್ತಿ ಮರಳಿ ಬರುತ್ತದೆ.ವ್ರತ ಹಿಡಿದವನಿಗೆ
ವ್ರತದಿಂದಾಗಿ ಉಂಟಾದ ತಲೆನೋವು ,ಆಯಾಸ ನೀಗಿ ಉಲ್ಲಾಸ ಮರುಕಳಿಸುತ್ತದೆ ಮೂಲೆ ಗಳು ಗಟ್ಟಿಯಾಗುತ್ತವೆ,
ಇದರಲ್ಲಿರುವ ನೈಸರ್ಗಿಕವಾದ ಸಕ್ಕರೆ ಅಂಶ ಅಡಕವಾಗರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುವಲ್ಲಿ ಪ್ರಭಲ ಪಾತ್ರ ವಹಿಸುತ್ತದೆ ಅಲ್ಲದೇ ಇದರಲ್ಲಿ ಫೈಬರ್ ಅಂಶವು ಅಡಕಗೂಂಡಿರುತ್ತದೆ ಇದು ಉತ್ಸಾಹವನ್ನು ಹೆಚ್ಚಿಸಲು ನೆರವಾಗುತ್ತದೆ,ಈ ರೀತಿ ಪ್ರಯೋಜನ ಲಭಿಸಲು
ದಿನವೂಂಕ್ಕೆ ಮೂರು ಕರ್ಜೂರವಾದರೂ ಸೇವಿಸಬೇಕೆಂಬುದಾಗಿದೆ ವೈಜ್ಞಾನಿಕ ನಿಲುವು . ಉಪವಾಸ ತೂರೆಯುವಾಗ ಒಂದಕ್ಕಿಂತ ಹೆಚ್ಚು ಅಂದರೆ ಮೂರು ಕರ್ಜೂರವಾದರೂ ತಿನ್ನಬೇಕು ಇದು ಸುನ್ನತ್ ಕೂಡಾ ಆಗಿದೆ.ಹೀಗಿರುವಾಗ ಕರ್ಜೂರದಲ್ಲೇ ಉಪವಾಸ ತೂರೆದರೆ ಮೇಲಿನ ಲಾಭಗಳನ್ನೆಲ್ಲಾ ಪಡೆದು ಉತ್ಸಾಹಿಯಾಗಬಹುದು ಉತ್ಸಾಹದಿಂದ ತರಾವೀಹ್ ನಮಾಝ್ ಕೂಡಾ ಮಾಡಬಹುದು.ಬದಲಾಗಿ ಎಣ್ಣೆಯಲ್ಲಿ ಕರಿದ ಆಹಾರ ಪಧಾರ್ಥಗಳನ್ನು ಮಾತ್ರ ತಿಂದು ಉಪವಾಸ ತೂರೆದರೆ ಅಮಲಿನ ಮೇಲೆ ಅಮಲೇರಿಸಿಕೂಂಡು ಮಂಚದಲ್ಲಿ ಬಿದ್ದು ಹೂರಳಾಡಬಹುದೇ ವಿನಹ ತಾಕತ್ತು ಮರುಕಳಿಸಲು ಸಾಧ್ಯವಿಲ್ಲ.ಹೆಚ್ಚಿನ ಜನರಿಗೆ ತರಾವೀಹ್ ನಮಾಝ್ ಭಾರವಾಗುವುದು ಆ ಕಾರಣಕ್ಕಾಗಿ.ಹಸಿ ಮತ್ತು ಒಣಗಿದ ಕರ್ಜೂರ ಗಳು ಗುಣದಲ್ಲೂ ಮೇನ್ಮೆಯಲ್ಲೂ ಸಮಾನವಾಗಿದೆಯಾದರೂ ಒಣಗಿದಕ್ಕಿಂತ ಹಣ್ಣಾದ ಹಸಿ ಕರ್ಜೂರವೇ ಉತ್ತಮವಾಗಿರುತ್ತದೆ.
*ಇನ್ನಿತರ ಔಷದೀಯ ಗುಣಗಳು*
*ದೇಹದಲ್ಲಿ ರಕ್ತ ಕಡಿಮೆ ಇರುವವರು ಪ್ರತಿದಿನ ಕರ್ಜೂರ ಸೇವನೆ ಮಾಡಿದರೆ ರಕ್ತಹೀನತೆಯಿಂದ ಮುಕ್ತಿ ಹೂಂದಬಹುದು.
*ಕೂದಲುದುರುವ ಸಮಸ್ಯೆಯೂ ಕರ್ಜೂರ ಸೇವನೆಯಿಂದ ನಿವಾರಣೆಯಾಗುತ್ತದೆ
ಕಬ್ಬಿನಾಂಶ ಮತ್ತು ವಿಟಮಿನ್.ಬಿ ಪೋಷಕಾಂಶ ಅಡಕಗೂಂಡಿರುವುದೇ ಇದಕ್ಕಿರುವ ಕಾರಣ.
*ಶೀತ,ಕೆಮ್ಮು,ಗಂಟಲುನೋವಿರುವವರ ಶರೀರಕ್ಕೆ ಉಷ್ನಾಂಶ ಅಗತ್ಯವಾಗಿರುವುದರಿಂದ ಕರ್ಜೂರ ಸೂಕ್ತ ಔಷದಿಯಾಗಿದೆ.ಶರೀರಕ್ಕೆ ಬೇಕಾದ ಉಷ್ಣತೆಯನ್ನು ಅದು ನೀಡುತ್ತದೆ
*ತೂಕ ವ್ರಧ್ದಿಸುತ್ತದೆ
*ಮಲಬದ್ಧತೆ ನಿವಾರಿಸುತ್ತದೆ
*ಹ್ರದ್ರೋಗ ವಿರುವವರ ಹ್ರಧಯಕ್ಕೆ ಬಲ ನೀಡುತ್ತದೆ
ಅರಬ್ ದೇಶಗಳಲ್ಲಿ ಹ್ರದ್ರೋಗ ಮತ್ತು ಕ್ಯಾಂಸರ್ ಕಡಿಮೆಯಾಗಳು ಕಾರಣ ಅವರು ಹೆಚ್ಚಾಗಿ ಕರ್ಜೂರ ತಿನ್ನುವವರಾಗಿದ್ದಾರೆ.
ಆರೋಗ್ಯ ಸಮಸ್ಯೆ ನಿವಾರಿಸುವುದರ ಹೂರತು ಶರೀರಕ್ಕೆ ಕಾಂತಿಯನ್ನೂ ನೀಡುವುದರಲ್ಲಿಯೂ ಕರ್ಜೂರದ ಪಾತ್ರ ಅಪಾರ.
*ಗರ್ಬಿಣಿಯರಿಗೆ ಅತ್ಯುತ್ತಮ ಫ್ರೂಟೀನ್*
ಬಾಣಂತಿ ಮಹಿಳೆಯರು ಪ್ರತಿದಿನವೂ ಇದನ್ನು ಸೇವಿಸುವುದರಿಂದ ಗರ್ಭಕೋಶ ಬಲಗೂಳ್ಳುತ್ತದೆ ಹಾಗಾಗಿ ಸುಲಭವಾಗಿ ಹೆರಿಗೆ ಮಾಡಲು ಸಾಧ್ಯವಾಗುತ್ಕದೆ.
ಅಲ್ಲದೇ ಹುಟ್ಟುವ ಮಕ್ಕಳು ಕೂಡಾ ಬುದ್ದಿವಂತರೂ,ಸೌಂದರ್ಯವಂತರೂ ಆಗಿರುತ್ತಾರೆ.
اطعمو نساءكم التمر فان من كان طعامها خرج ولدها حليما
(جامع الكبير ٣٣٨١)
ನಿಮ್ಮ ಮಹಿಳೆಯರಿಗೆ ಕರ್ಜೂರ ತಿನ್ನಿಸಿ ಏಕೆಂದರೆ ಕರ್ಜೂರ ತಿಂದ ಮಹಿಳೆಯ ಮಗುವು ಬುಧ್ದಿವಂತನಾಗಿರುತ್ತಾನೆ
(ಹದೀಸ್)
*(ಸಂಪೂರ್ಣ ಆಹಾರ)*
ಸಾಂಪ್ರದಾಯಿಕ ಅನ್ನ ಆಹಾರವಿಲ್ಲದಿದ್ದರೂ ಕರ್ಜೂರವಿದ್ದರೆ ಸಾಕು ಅದನ್ನು ತಿಂದು ನೀರು ಕುಡಿದು ಬದುಕಬಹುದು
ಹಾಗೇ ಕರ್ಜೂರ ತಿಂದು ಮಾತ್ರ ಬದುಕಿರುವವರು ನಮ್ಮ ಪೂರ್ವಿಕರಲ್ಲಿ 'ಕಳೆದು ಹೋಗಿದ್ದಾರೆ.ಪ್ರವಾದಿ( ಸಅ) ಮತ್ತು ಸಹಾಬತ್ತ್ ತಿಂಗಳುಗಟ್ಟಲೆ ಆಹಾರವಿಲ್ಲದಾಗ ಕರ್ಜೂರವನ್ನೇ ತಿಂದು ಹಸಿವು ನೀಗಿಸುತ್ತಿದ್ದರು
ಒಂದು ಮನೆಯಲ್ಲಿ ಕರ್ಜೂರವಿದೆಯೆಂದರೆ ಅವರಲ್ಲಿ ಅನ್ನವಿದೆ ಎಂದರ್ಥ
ಇಲ್ಲದಿದ್ದರೆ ಅವರು ಹಸಿದವರು ಎಂದರ್ಥ.
بيت ليس فيه تمر جياع اهله
ಕರ್ಜೂರವಿಲ್ಲದ ಮನೆ ಅದರ ನಿವಾಸಿಗಳು ಹಸಿದವರಾಗಿದ್ದಾರೆ.
(ಮುಸ್ಲಿಂ)
*ಕರ್ಜೂರಗಳ ರಾಜ' ಅಜ್ವತುಲ್ ಮದೀನ*
ಮದೀನದಲ್ಲಿ ಮಾತ್ರ ಬೆಳೆಯುವ ಅಜ್ವಾ ಎನ್ನುವ ಕರ್ಜೂರವು ಹಲವಾರು ಔಷದೀಯ ಗುಣ ಗಳನ್ನು ಹೂಂದಿದೆ .ಅದನ್ನು ಸ್ವರ್ಗದಿಂದ ತರಲಾಗಿದೆ ಎನ್ನುವ ಅಭಿಪ್ರಾಯವೂ ಇದೆ.ಇದು ಸಿಹ್ರ್ ಮತ್ತು ವಿಷ ಬಾಧೆಯನ್ನು ತಡೆಯುತ್ತದೆ.
من تصبه سبع تمرات عجوة لم يضره ذالك اليوم سم ولا سحر
ಬೆಳಿಗ್ಗೆ ಯಾರಾದರೂ ಏಳು ಅಜ್ವಾ ಕರ್ಜೂರ ಗಳನ್ನು ತಿಂದರೆ ಆ ದಿನ ಅವನಿಗೆ ವಿಷ ಮತ್ತು ಸಿಹ್ರ್ ಫಲಿಸದು.
ಉಪವಾಸ ತೂರೆಯುವಾಗಲೂ ಅತ್ತಾಳ ಉಣ್ಣುವಾಲೂ ಪ್ರತಿ ದಿನವೂ ನಾವು ಕರ್ಜೂರವನ್ನು ಮರೆಯದಿರೋಣ.
✒ಖಲೀಲ್ ದಾರಿಮಿ ಆಲಡ್ಕ
Comments