Skip to main content

ರಕ್ತಸ್ರಾವ ಮತ್ತು ಉಪವಾಸ

ರಕ್ತಸ್ರಾವ ಮತ್ತು ಉಪವಾಸ...

   💥 *ನನಗೆ ಸಾಮಾನ್ಯವಾಗಿ ಏಳು ದಿನಗಳ ಕಾಲ ಋತುಸ್ರಾವವಿರುತ್ತದೆ. ಈ ಬಾರಿ ಶಅಬಾನ್ ತಿಂಗಳ ಕೊನೆಗೆ ಋತುಸ್ರಾವ ಆರಂಭವಾಗಿ ರಮಳಾನ್ ಎರಡರಂದು ರಕ್ತಸ್ರಾವ ನಿಂತಿತು. ನಾನು ಸ್ನಾನ ಮಾಡಿ ರಮಳಾನ್ ಮೂರನೇ ಉಪವಾಸ ಹಿಡಿದಿದ್ದೇನೆ. ಆದರೆ ಉಪವಾಸ ಮುಗಿದು ರಾತ್ರಿಯಾದಾಗ ಪುನಃ ರಕ್ತಸ್ರಾವವೂ ಕಂಡು ಬಂತು. ಹಾಗಿದ್ದಲ್ಲಿ ಹೀಗೆ ಕಂಡ ರಕ್ತಸ್ರಾವ ಹೈಳ್ ಆಗಿರುವುದೇ..? ಹೈಳ್ ಆಗಿದ್ದಲ್ಲಿ ನಾನು ಹಿಡಿದ ಮೂರನೇ ದಿನದ ಉಪವಾಸದ ವಿಧಿ ಏನು..? ಅಶುದ್ಧಿ ಕಾಲದಲ್ಲಿ ಉಪವಾಸ ಹಿಡಿದ ಪಾಪ ನನಗಿದೆಯೇ..? ಈ ಉಪವಾಸ ಸಿಂಧುವೇ..? ಇದನ್ನು ನಾನು ಖಳಾ ಸಂಧಾಯ ಮಾಡಬೇಕೇ..? ರಾತ್ರಿ ಪುನಃ ಕಂಡ ರಕ್ತಸ್ರಾವ ಸುಬುಹಿ ಬಾಂಗಿಗೆ ಮುನ್ನ ಕಾಣಿಸದೇ ಪೂರ್ಣ ಶುದ್ಧಿ ಕಂಡಲ್ಲಿ ನಾನು ಉಪವಾಸ ಆರಂಭಿಸಬೇಕೇ..? ಈ ಬಗ್ಗೆ ವಿವರಣೆ ನೀಡುವಿರಾ...?*

➡ ಹೈಳ್ ರಕ್ತಸ್ರಾವದ ಗರಿಷ್ಟ ಅವಧಿ ಹದಿನೈದು ದಿನಗಳಾಗಿವೆ. ಈ ಹದಿನೈದು ದಿನಗಳೊಳಗೆ ರಕ್ತ ಸ್ರಾವವು ನಿಂತು ಶುದ್ಧಿಯೂ ಕಂಡು ಬಂದು ಪುನಃ ರಕ್ತ ಸ್ರಾವವಾದರೆ ಪ್ರಸ್ತುತ ಶುದ್ಧಿ ಕಂಡ ಅವಧಿಯನ್ನೂ ಹೈಳಿನ ಅವಧಿ ಎಂದೇ ಪರಿಗಣಿಸಲಾಗುತ್ತದೆ. ಉದಾಹರಣೆಗೆ ಏಳು ದಿನ ರಕ್ತಸ್ರಾವ ಕಂಡು ಬಂದು ಬಳಿಕ ರಕ್ತ ಸಂಪೂರ್ಣ ನಿಂತು ಶುದ್ಧಿ ಕಂಡಿದ್ದು ಒಂದು ದಿನದ ಬಳಿಕ ಪುನಃ ರಕ್ತಸ್ರಾವವಾದರೆ ಶುದ್ಧಿಯೂ ಕಂಡು ಬಂದ ಒಂದು ದಿನವೂ ಹೈಳಿನ ಅವಧಿಯಲ್ಲೇ ಸೇರುತ್ತದೆ. ರಕ್ತಸ್ರಾವ ಆರಂಭಗೊಂಡು ಹದಿನೈದು ದಿನಗಳ ತನಕ ಇದೇ ಕ್ರಮವನ್ನು ಪರಿಗಣಿಸಲ್ಪಡುವುದು. ಹದಿನೈದು ದಿನಗಳ ಅವಧಿಯೊಳಗೆ ರಕ್ತ ಸ್ರಾವವು ನಿಂತು ಪೂರ್ಣವಾಗಿ ಶುದ್ಧಿಯಾಗಿದೆಯೆಂದು ತಿಳಿದು ಬಂದರೆ ಸ್ನಾನ ಮಾಡಿ ನಮಾಝ್ ಆರಂಭಿಸಬೇಕು. ಪ್ರಭಾತಕ್ಕೆ ಮುನ್ನ ಶುದ್ಧಿ ಕಂಡು ಬಂದರೆ ಉಪವಾಸ ಆರಂಭಿಸಬೇಕು. ಹೀಗೆ ಕಂಡು ಬಂದ ಶುದ್ಧಿಯೂ ಮಗ್ರಿಬ್ ತನಕವಿದ್ದು ಬಳಿಕ ರಕ್ತಸ್ರಾವ ಕಂಡರೆ ಪ್ರಸ್ತುತ ಶುದ್ಧಿಯೂ ಕಂಡು ಬಂದ ಅವಧಿ ವಾಸ್ತವದಲ್ಲಿ ಶುದ್ಧಿ ಅಲ್ಲವೆಂದೂ ಅದು ಹೈಳಿನ ಅವಧಿಯೇ ಆಗಿತ್ತೆಂದೂ ಹೈಳ್ ಇನ್ನೂ ಮುಗಿದಿಲ್ಲವೆಂದೂ ಮನವರಿಕೆಯಾಗುತ್ತದೆ. ಆದರೆ ಶುದ್ಧಿಯೂ ಕಂಡು ಬಂದ ಕಾರಣ ಅವಳು ಸ್ನಾನ ಮಾಡಿ ಅವಳು ನಮಾಝ್, ಉಪವಾಸ ಹಿಡಿದದ್ದು ಅವಳ ಪ್ರಮಾದವೋ ಪಾಪವೋ ಅಲ್ಲ. ಶುದ್ಧಿ ಕಂಡು ಬಂದರೆ ಸ್ನಾನ ಮಾಡಿ ನಮಾಝ್ ಹಾಗೂ ಉಪವಾಸ ಆರಂಭಿಸಲು ಅವಳೊಂದಿಗೆ ಆಜ್ಞೆಯಿದೆ. ಬಳಿಕ ರಕ್ತಸ್ರಾವವಾದರೆ ಅದನ್ನವಳು ಉಪೇಕ್ಷಿಸಬೇಕು ಅಷ್ಟೆ. ಪ್ರಶ್ನೆಯಲ್ಲಿ ತಿಳಿಸಿದಂತೆ ಪ್ರಭಾತಕ್ಕೆ ಮುನ್ನ ಶುದ್ಧಿ ಕಂಡು ಉಪವಾಸ ಆರಂಭಿಸಿ ಮರುದಿನ ಮಗ್ರಿಬಿನ ಬಳಿಕ ರಕ್ತ ಕಂಡರೆ ಆ ಉಪವಾಸವೂ ಸಿಂಧುವಾಗಿರುವುದಿಲ್ಲ. ತನ್ನ ಉಪವಾಸ ಸಿಂಧುವಲ್ಲವೆಂದು ರಕ್ತ ಸ್ರಾವವಾದ ಬಳಿಕವೇ ಅವಳಿಗೆ ತಿಳಿದು ಬರುತ್ತದೆಯಷ್ಟೆ. ಆ ಉಪವಾಸವನ್ನು ಬಳಿಕ ಅವಳು ಖಳಾ ಸಂದಾಯ ಮಾಡಬೇಕು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...