Skip to main content

ತಂದೆಯೊಂದಿಗೆ ಡ್ರೆಸ್ ಖರೀದಿ


ಹಬ್ಬಕ್ಕೆ ಬಟ್ಟೆ ಖರೀದಿಸಲು ಹೋಗೋಣ ಅಂತ ಹೇಳಿದಾಗ ತಂಗಿ ಹೇಳಿದಳು-" ತಂದೆಯ ಜೊತೆ ಹೋಗುವುದಾದರೆ ನಾನು ಬರಲ್ಲ... ನನಗೆ ಇಷ್ಟವಾದವುಗಳನ್ನು ಖರೀದಿಸಲು ತಂದೆ ಒಪ್ಪಲ್ಲ... "

ನನ್ನ ಮತ್ತು ಅಮ್ಮನ ಒತ್ತಾಯದಿಂದ ತಂಗಿ ಮನಸಿಲ್ಲದ ಮನಸಿನಿಂದ ಬಂದಳು... 
ಬಟ್ಟೆ ಅಂಗಡಿಗೆ ತಲುಪಿದೆವು. ಅಮ್ಮನಿಗೆ ಒಂದು ಸೀರೆ ಮತ್ತು ನನಗೆ ಒಂದು ಶರ್ಟ್ ಸೆಲೆಕ್ಟ್ ಮಾಡಿದೆವು....

" ನನಗೆ ಇದು ಸಾಕು ... " ಎಂದಿನ ಹಾಗೆ ಬೆಲೆ ಹೆಚ್ಚಿಗಿದ್ದ ಒಂದು ಫ್ರೋಕ್ ಎದೆಗೆ ಅಪ್ಪಿ ಹಿಡಿದು ತಂಗಿ ಹೇಳಿದಳು.

" ಏ...ಇದು ಬೇಡ... ಬೇರೆ ಯಾವುದಾದರೂ ಸೆಲೆಕ್ಟ್ ಮಾಡ್ಕೋ"- ಅದರ ಮೇಲೆ ಬರೆದಿದ್ದ ರೇಟನ್ನು ನೋಡುತ್ತಾ ತಂದೆ ಹೆಳಿದರು.

" ನನಗೆ ಇದುವೇ ಸಾಕು. ಇದನ್ನು ಕೊಡಿಸದಿದ್ದರೆ ನನಗೆ ಬೇರೆ ಯಾವುದೂ ಬೇಡ....- ತಂಗಿ ಹಟ ಮಾಡತೊಡಗಿದಳು....

" ನಾನು ಹೇಳೋದನ್ನು ಕೇಳಿದರೆ ಸಾಕು‌ ಸುಮ್ನೆ ತಲೆ ಕೆಡಿಸಬೇಡ ...." - ತಂದೆ ಸ್ವಲ್ಪ ಜೋರಾಗಿಯೇ ಹೇಳಿದರು...

ತಂಗಿ ಮುಖ ಊದಿಸಿಕೊಂಡು ಮನಸಿಲ್ಲದೆ ಬೇರೊಂದು ಚೂಡಿದಾರ ಸೆಲೆಕ್ಟ್ ಮಾಡಿದಳು...

ಇದರ ಮಧ್ಯೆ ತನ್ನ ಮಗಳಿಗೆ ಇಷ್ಟವಾದ ದೊಡ್ಡ ಬೆಲೆಯ ಫ್ರೋಕ್ ಖರೀದಿಸಲಾಗದೆ , ತನ್ನ ಕೈಯಲ್ಲಿದ್ದ ಹಣವನ್ನು ಲೆಕ್ಕ ಮಾಡಿ ನೋಡುತ್ತಾ ದುಃಖಿಸಿದ ತಂದೆಯನ್ನು ಯಾರೂ ಗಮನಿಸಲಿಲ್ಲ..

ನಮಗೆಲ್ಲಾ ಒಂದೊಂದು ಐಟಂಗಳನ್ನು ಖರೀದಿಸುವಾಗಲೂ ತಂದೆಗಾಗಿ ಏನನ್ನೂ ಖರೀದಿಸಿರಲಿಲ್ಲ... ತಂದೆ ಹಾಕುವ ಶರ್ಟ್ ನ ಬಟ್ಟೆ ಈ ಅಂಗಡಿಯಲ್ಲಿ ಸಿಗುವುದೂ ಇಲ್ಲ.. ಮೀಟರ್ ಗೆ ನಲವತ್ತೈದು ರುಪಾಯಿಯದ್ದಾಗಿದೆ ಅವರ ಬಟ್ಟೆ... ಅದೂ ಎರಡು ಮೂರು ವರ್ಷಕ್ಕೊಮ್ಮೆ ಒಂದು ಶರ್ಟ್ ಮತ್ತು ಎರಡು ಲುಂಗಿ ಮಾತ್ರ.....

ಅಲ್ಲಿಂದ ಹೊರಟ ನಾವು ಚಪ್ಪಲಿ ಅಂಗಡಿಗೆ ಹೋದೆವು... ಅಮ್ಮನಿಗೆ ಚಪ್ಪಲಿ ಖರೀದಿಸುವುದಕ್ಕಾಗಿ ಹೋಗಿದ್ದು... ಆದರೆ-
ಅಲ್ಲಿ ತಂಗಿ ಹಟ ಮಾಡಿದಾಗ ಆಕೆಗೂ ಚಪ್ಪಲಿ ಖರೀದಿಸಿದರು...
ನನಗೆ ಅಲ್ಲಿದ್ದ ಚಪ್ಪಲೊಂದನ್ನು ಇಷ್ಟಪಟ್ಟು ಅದರ ಮೇಲೆ ಕೈಯಾಡಿಸಿದ್ದನ್ನು ತಂದೆ ನೋಡಿಯೂ ನೋಡದಂತೆ ಮಾಡಿದ್ದನ್ನು ನಾನು ಗಮನಿಸಿದೆ.‌‌. ತಂದೆಯ ಕಷ್ಟಗಳನ್ನು ಚೆನ್ನಾಗಿ ಅರಿತಿದ್ದ ನಾನು ಆಸೆಯಿದ್ದರೂ ಚಪ್ಪಲಿಗಾಗಿ ಹೇಳಿಯೂ ಇಲ್ಲ...

ಹಬ್ಬಕ್ಕೆ ಅಡುಗೆ ಸಾಮಾನುಗಳನ್ನು ಖರೀದಿಸಲು ದಿನಸಿ ಅಂಗಡಿಗೆ ಹೋದೆವು ಎಲ್ಲವನ್ನೂ ಖರೀದಿಸಿ ರಿಯಾಯಿತಿಗಾಗಿ ಅಂಗಡಿಯ ಮಾಲಕನತ್ರ ಚರ್ಚೆ ಮಾಡುತ್ತಿರುವ ತಂದೆಯನ್ನು ನೋಡಿ ಅಪಹಾಸ್ಯದಿಂದ ಅಕ್ಕಪಕ್ಕದಲ್ಲಿದ್ದವರು ನಗುತ್ತಿದ್ದುದನ್ನು ನಾನು ನೋಡಿದೆ ...

ಇಷ್ಟೆಲ್ಲಾ ಕಂಜೂಸ್ ಮಾಡಿಯಾದರೂ ನಮಗೆ ಮತ್ತು ಮನೆಗೆ ಬೇಕಾದ ಸಾಮಾನುಗಳನ್ನು ಏನೂ ಕಡಿಮೆಯಾಗದಂತೆ ತಂದೆ ಕರೆಕ್ಟಾಗಿ ಖರೀದಿಸಿದ್ದರು...

ಬಿರಿಯಾನಿ ಬೇಕು ಅಂತ ನಾವೆಲ್ಲರೂ ಹಟ ಮಾಡಿದಾಗ ನನಗೆ, ಅಮ್ಮನಿಗೆ ಮತ್ತು ತಂಗಿಗೆ ಬಿರಿಯಾನಿ ಕೊಡಿಸಿ,  ನನಗೆ ಹಸಿವಿಲ್ಲ ಅಂತ ಹೇಳಿ ಒಂದು ಬ್ಲೇಕ್ ಟೀ ಮಾತ್ರ ಕುಡಿದು ನಾವು ಸಂತೋಷದಿಂದ ತಿನ್ನುತ್ತಿರುವುದನ್ನು ನೋಡುತ್ತಾ ತನ್ನ ಹಸಿವನ್ನು ಇಂಗಿಸಿದರು...

ಕೊನೆಗೆ ಪೇಟೆಯಿಂದ ಮನೆಗೆ ಹೋಗಲು ಬಸ್ ಗಾಗಿ ಕಾಯುತ್ತಿರುವಾಗ ಅಮ್ಮ ತಂದೆಯತ್ರ ಹೇಳಿದರು - " ರೀ ನಿಮಗೆ ಡಾಕ್ಟರ್ ಹತ್ತಿರ ಹೋಗಬೇಡವೇ... ನಿಮ್ಮ ಕೆಮ್ಮು ಕಡಿಮೆಯಾಗುತ್ತಿಲ್ಲವಲ್ಲಾ...  ಹೋಗೋಣ ಮದ್ದು ತೆಗೊಳ್ಳೋಣ"

" ಈಗ ಬೇಡ ಮತ್ತೆ ತೆಗೊಳ್ಳುವೆ. ಈಗ ಕೆಮ್ಮು ಕಡಿಮೆಯಾಗಿದೆ " ಖಾಲಿಯಾದ ಜೇಬಿನ ಮೇಲೆ ಕೈಯಾಡಿಸುತ್ತಾ ತಂದೆ ಹೇಳುವಾಗ ಅವರ ಮುಖದ ಭಾವನೆಯಿಂದ ನಾನು ಅರ್ಥ  ಮಾಡಿಕೊಂಡೆ... ಕೆಮ್ಮು ಕಡಿಮೆಯಾಗಿಲ್ಲ ಬದಲಾಗಿ ಜೇಬಿನಲ್ಲಿ ದುಡ್ಡು ಕಡಿಮೆಯಾಗಿದೆ ಅಂತ....

ಹಬ್ಬವೆಲ್ಲಾ ಮುಗಿದು ಸುಮಾರು ಒಂದು ತಿಂಗಳಾಗಿರಬಹುದು ಅಂದು ಯಾವ ಫ್ರೋಕ್ ಗಿಗೋಸ್ಕರ ತಂಗಿ ಹಟ ಹಿಡಿದಿದ್ದಳೋ ಅದೇ ಫ್ರೋಕನ್ನು ತಂದು ಅಮ್ಮನ ಕೈಗೆ ಕೊಡುವುದನ್ನು ನಾನು ಕಂಡೆ..
ನಾನು ಮನೆಯ ಹೊರಗಡೆ ಬಂದಾಗ ಮತ್ತೊಂದನ್ನು ಕೂಡಾ ನೋಡಿದೆ... ಅಂದು ಚಪ್ಪಲಿ ಅಂಗಡಿಯಲ್ಲಿ  ನಾನು ಇಷ್ಟಪಟ್ಟು ಕೈಯಾಡಿಸಿದ ಆ ಚಪ್ಪಲಿ ಜಗಲಿಯಲ್ಲಿ ಇಟ್ಟಿದ್ದರು... ಅದರ ಪಕ್ಕದಲ್ಲಿ ಸವೆದು ತೂತಾದ ತಂದೆಯ ಹಳೆಯ ಚಪ್ಪಲಿಯೂ ಇತ್ತು......

ಮರುದಿನ ಕೆಲಸಕ್ಕೆಂದು ಮನೆಯಿಂದ ಹೊರಡುವಾಗ ತಂದೆ ಜೋರಾಗಿ ಕೆಮ್ಮುತ್ತಿದ್ದರು....

ತಂದೆಯು ನಮಗೋಸ್ಕರ ಮಾಡುವ ತ್ಯಾಗಕ್ಕೆ ಎಂದಿಗೂ ಬೆಲೆ ಕಟ್ಟಲಾಗದು.....,
ಅಲ್ಲವಾ.....!!?

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...