ಚರಿತ್ರೆ
📚📚📚📚📚📚📚
ನನ್ನ ಪ್ರವಾದಿ ﷺ ಸುಗಂಧವಾಗಿದ್ದರು
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
"ಆ ಪವಿತ್ರ ಜೀವನ ಹಾಗೂ ವಫಾತ್ತ್ ಅವರ ಮನಸ್ಸಿನ ಹಾಗೆಯೇ ಸುಗಂಧವಾಗಿತ್ತು"
ಮುತ್ತು ನಬಿ ﷺ ರವರ ಹೃದಯವನ್ನು ನೋಡಿದವರು ಎಷ್ಟು ಜನರಿದ್ದಾರೆ?
ಮಾತಾಪಿತರು ಇಲ್ಲದೆ ಬೆಳೆದ ಬಾಲ್ಯಕಾಲದ ರಾತ್ರಿಗಳಲ್ಲಿ ಪಿತೃವರ್ಯರಾದ ಅಬೂತ್ವಾಲಿಬಿನೊಂದಿಗೆ ಮಲಗುತ್ತಿರುವಾಗ..,
ಪಕ್ಕದ ಕೋಣೆಯಲ್ಲಿ ಅಬ್ದುಲ್ ಮುತ್ತಲಿಬಿನ ಮಗಳು ಅವರ ತಂದೆ ತಾಯಿಗಳೊಂದಿಗೆ ನಿದ್ರಿಸುತ್ತಿದಾಗ..,
ಒಂಟಿಯಾಗಿ ನಿದ್ರಿಸುತ್ತಿದ್ದ "ಮುಹಮ್ಮದ್" ﷺ
ಎಂಬ ಬಾಲಕನ ಕಣ್ಣುಗಳಿಂದ ಯಾರೂ ಕೂಡ ಕಾಣದೆ ಉದುರಿದ ಕಣ್ಣೀರು ನಾವು ಯಾರೂ ಕಂಡವರಲ್ಲ..
➖ತಿಳಿಯಿರಿ""
*"ಆ ಕಣ್ಣಿರಿನ ಒಂದೊಂದು ಬಿಂದುಗಳಿಗೂ ಸುಗಂಧದ ಪರಿಮಳವಿತ್ತು"*
ಕೋಟ್ಯಾಧಿಪತಿಯಾದ ಖದೀಜಾಬೀವಿ (ರ) ಅವನ್ನು ವಿವಾಹ ಮಾಡಿದಾಗ..
ರಾತ್ರಿಯ ಪ್ರಮಾಣಿಗಳ ಔತನ ಕೂಟದಲ್ಲಿ ಅಬೂಜಹಲ್ ಮತ್ತು ಸಂಗಡಿಗರು..
🌴ದರಿದ್ರರಾದ ಮುಹಮ್ಮದರನ್ನು ﷺ ಮಾತ್ರವಾ ಖದೀಜರಿಗೆ ರ. ಸಿಕ್ಕಿರುವುದು!!
ಎಂದು ಅಪಹಾಸ್ಯ ಮಾಡಿದಾಗ, ಅಭಿಮಾನವಾದ ಆ ಮುತ್ತು ಮಾಣಿಕ್ಯವನ್ನು ಬೆಂಬಲಿಸಿ ಖದೀಜ ಬೀವಿ ರ. ರವರು ಹೇಳಿದರು;
🌴ನನ್ನ ಪತಿ ದರಿದ್ರನಲ್ಲ, ನನ್ನ ಎಲ್ಲಾ ಸೊತ್ತಿನ ವಾರೀಸುದಾರರು ಮುಹಮ್ಮದವರಾಗಿದ್ದಾರೆ ﷺ ಎಂದು!!!!..
🌴ನಬಿ ﷺ ರವರ ಮನಸ್ಸಿನ *ಸುಗಂಧ* ಸಂಪೂರ್ಣವಾಗಿ ಅರಿತ ಖದೀಜ ಬೀವಿ (ರ) ರವರು, ಮುತ್ತು ನಬಿ ﷺಯವರಿಗೆ ಒಂದೇ ಸಮಯದಲ್ಲಿ ಪತ್ನಿಯು, ತಾಯಿಯು, ತಂದೆಯೂ ಆಗಿದ್ದರು.
ಖದೀಜ ರ. ರವರು ವಫಾತ್ತಾದಾಗ, ಹೆಣ್ಣು ಮಕ್ಕಳನ್ನು ತಬ್ಬಿ ಹಿಡಿದು ಅತ್ತ ರಾತ್ರಿಗಳಲ್ಲಿ..
🌴ನನ್ನ ಖದೀಜಾ.. ಎಂದು ಹೇಳಿ ಕಣ್ಣೀರಿಟ್ಟ ನಬಿ ﷺ ಯವರನ್ನು ನಾವು ತಿಳಿದಿಲ್ಲ.
""ಆ ಪವಿತ್ರ ನಬಿ ﷺ ರವರನ್ನು ತಿಳಿದಿರುವುದು ಮಗಳಾದ ಫಾತ್ತಿಮಾ ಬೀವಿ ರ. ಆಗಿದ್ದರು.
ಅದರಿಂದಲೇ ಮುತ್ತು ನಬಿ ﷺ ರವರನ್ನು ದಫನ್ ಮಾಡಿ ಬಂದವರೊಂದಿಗೆ..,
🌴ನಬಿ ﷺ ರವರ ಮಗಳು ಮಣ್ಣು ಹಾಕಲು ನಿಮಗೆ ಹೇಗೆ ಸಾಧ್ಯವಾಯಿತು?? ಎಂದು ಕೇಳಿ ಆ ಮಹದಿ ಕಣ್ಣೀರಿಟದ್ದು.
ಆರು ತಿಂಗಳು ಕಳೆದು ವಫಾತ್ತಿನವರೆಗೆ ಯಾರೊಂದಿಗೂ ಏನು ಮಾತನಾಡದೆ ಜೀವಿಸಿರುವುದು.
' ಅದಷ್ಟು ಬೇಗ ಮರಣ ಹೊಂದಿ ತಂದೆಯವರೊಂದಿಗೆ ಸೇರಲು ಆ ಪುತ್ರಿ ಆಗ್ರಹಿಸಿರುವುದು ಆ ಮನಸ್ಸಿನ *ಸುಗಂಧ* ಅರಿತಿರುವುದರಿಂದಾಗಿದೆ.
🌴ಆ *ಸುಗಂಧ ಪರಿಮಳ* ಸಿಕ್ಕಿದಾಗ ಆಗಿದೆ ಅಕ್ರಮಿಯಾಗಿದ್ದ ಉಮರ್ ರ. ಖಲೀಫಾ ಉಮರ್ ರ. ಆಗಿ ಬದಲಾಗಿರುವುದು.
🌴ಶತ್ರುಗಳು ಶಿಲುಬೆಗೆ ಹೇರಿಸಿ ಒಂದೊಂದು ಅಂಗಾಂಗಗಳನ್ನು ತುಂಡಿರಿಸುವಾಗಲು,
ನನಗಿದು ಸಮಸ್ಯೆ ಅಲ್ಲ, ಆದರೆ ನನ್ನ ನಬಿ ﷺ ಯವರ ಕಾಲಿನಲ್ಲಿ ಒಂದು ಮುಳ್ಳು ತರಚುವುದು ಕೂಡಾ ನನಗೆ ಸಹಿಸಲಿಕಾಗಲ್ಲ..!! ಎಂದು ಹೇಳಿದ ಖುಬೈಬ್ ರ. ರವರಿಗೆ ಶಕ್ತಿ ತುಂಬಿರುವುದು ಆ *ಸುಗಂಧ*ವಾಗಿತ್ತು.
🌴 ಉಹ್'ದ್ ಯುದ್ಧ ರಣಂಗದಲ್ಲಿ ನಬಿ ﷺ ರವರು ಕೊಲ್ಲಲ್ಪಟ್ಟರು ಎಂಬ ವಾರ್ತೆ ಕೇಳಿ ನಬಿ ﷺ ಯವರನ್ನು ಹುಡುಕಿಕೊಂಡು ನಡೆದ ಸ್ತ್ರಿ, ತನ್ನ ಪತಿ, ಮಕ್ಕಳು ವಧಿಸಲ್ಪಟ ವಿವರ ತಿಳಿದೂ ಗಂಭೀರವಾಗದೆ..,
ನಬಿ ﷺ ರವರನ್ನು ಕಂಡಾಗ..!
ಯಾರು ಮರಣ ಹೊಂದಿದರೂ ನನಗೆ ತೊಂದರೆ ಇಲ್ಲ. ನಬಿ ﷺ ಯವರಿಗೆ ಏನು ಸಂಭವಿಸಲಿಲ್ಲವಲ್ಲವೇ
ಎಂದು ತಿಳಿದು ಆಶ್ವಾಸನೆ ಗೊಡಿರುವುದು ಆ *ಸುಗಂಧ*ದ ಪರಿಮಳದಿಂದಾಗಿತ್ತು.
🌴ಮುತ್ತು ನಬಿ ﷺ ರವರನ್ನು ನಮ್ಮ ಶರೀರಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿರಿ..
🌴ಮುತ್ತು ನಬಿ ﷺ ಯವರನ್ನು ಪ್ರೀತಿಸುವವರನ್ನು ಪ್ರೀತಿಸಿರಿ..
ಆ *ಸುಗಂಧ* ಎಲ್ಲಾ ಕಡೆ ಪಸರಿಸಲಿ.
ಆ *ಸುಗಂದ* ಪರಸ್ಪರ ಮೊಳಗಲಿ..
ಒಮ್ಮೆಯೂ ಮಾಯದೆ,
ಒಮ್ಮೆಯೂ ಮರೆಯದೆ,
ಬದಲಿ ಇಲ್ಲದ ಪ್ರಿಯ ನಬಿ ﷺ ಯವರ 🌷 *ಸುಗಂಧ* ಪ್ರಪಂಚವಿಡಿ ಪ್ರಕಾಶಿಸಲಿ....
صلي الله علي محمد 💚 💔 صلى الله عليه وسلم ❤
صلي الله علي محمد 💚 💛 صلي الله عليه وسلم ❤
صلي الله علي محمد 💚 💔 صلى الله عليه وسلم ❤
✍ಗಫೂರ್ ಬಾಯಾರ್
Comments