ರಮಳಾನ್ ಗೈಡ್ - 3
☪ *ರಮಳಾನ್ ತೌಬಾದ ತಿಂಗಳು*
ರಮಳಾನ್ ತೌಬಾ ಮಾಡುವ ತಿಂಗಳಾಗಿದೆ.
ಪರಿಶುದ್ಧ ಖುರ್ ಆನ್ ತೌಬಾದ ಕುರಿತು ಹೇಳುವುದು ಹೀಗೆ....:
يَا أَيُّهَاالَّذِينَ آمَنُوا
🌳 *ಸತ್ಯವಿಶ್ವಾಸಿಗಳೇ,*
تُوبُوا إِلَى اللَّهِ
🌳 *ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ.*
تَوْبَةً نَصُوحَا
🌳 *ನಿಷ್ಕಳಂಕ ವಾದ ಪಶ್ಚಾತ್ತಾಪ*
ಮತ್ತೊಂದು ಆಯತ್ ನಲ್ಲಿ ಹೀಗಿದೆ.👇👇👇👇
اِسْتَغْفِرُوا رَبَّكُمْ
🌳 *ನೀವು ನಿಮ್ಮ ಸೃಷ್ಟಿಕರ್ತನೊಡನೆ ಕ್ಷಮೆ ಯಾಚಿಸಿರಿ*
ثُمَّ تُوبُوا اِلَيْهِ
🌳 *ನಂತರ ನೀವು ಖೇದ ಪಟ್ಟು ಅವನತ್ತ ಮರಳಿರಿ.*
ತೌಬ ಅಂದರೆ ಪಶ್ಚಾತ್ತಾಪ ವಾಗಿದೆ. ನಿಷ್ಕಳಂಕ ವಾಗಿ ಮನದಾಳದಿಂದ ಮೂಡಿ ಬರುವ ಖೇದ ವಾಗಿದೆ ತೌಬಾ.
☪ *ತಪ್ಪು ಮಾಡಿದ್ದೀರಾ....? ತೌಬಾ ಮಾಡಿ...*
ತಪ್ಪು ಮಾಡಿದವನಿಗಾಗಿ ಅಲ್ಲಾಹು ನೀಡುವ ಪಶ್ಚಾತ್ತಾಪದ ಅವಕಾಶವನ್ನು
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವಿವರಿಸುವುದು ಹೀಗೆ :
اِنَّ اللّٰهَ
🌳 *ನಿಶ್ಚಿಯವಾಗಿಯೂ ಅಲ್ಲಾಹನು.*
يَبْسُطُ يَدَهُ بِاللَيْلِ
🌳 *ರಾತ್ರಿಯಲ್ಲಿ ಅವನ ಔದಾರ್ಯ ವನ್ನು ವಿಶಾಲಗೊಳಿಸುವನು.*
لِيَتُوبَ مُسِيءُ النَّهَارِ
🌳 *ಹಗಲಿನಲ್ಲಿ ತಪ್ಪು ಮಾಡಿದವನ ಪಶ್ಚಾತ್ತಾಪ ಸ್ವೀಕರಿಸಲಿಕ್ಕಾಗಿ.*
وَيَبْسُطُ يَدَهُ بِالنَّهَارِ
🌳 *ಅಲ್ಲಾಹನು ಹಗಲಿನಲ್ಲಿ ಅವನ ಔದಾರ್ಯವನ್ನು ವಿಶಾಲ ಗೊಳಿಸುವನು.*
لِيَتُوبَ مُسِيءُ اللَّيْلِ
🌳 *ರಾತ್ರಿ ತಪ್ಪು ಮಾಡಿದವನ ತೌಬಾ ಸ್ವೀಕರಿಸಲಿಕ್ಕಾಗಿ.*
حَتَّي تَطْلُعَ الشَّمْسُ
🌳 *ಸೂರ್ಯ ಉದಿಸುವ ತನಕ.*
مِنْ مَغْرِبِهَا
🌳 *ಪಶ್ಚಿಮದಿಂದ*
رواه مسلم :ವರದಿ
🌹ಮತ್ತೊಂದು ಹದೀಸ್ ನೋಡಿ:🌹
مَنْ تَابَ
🌳 *ಒಬ್ಬನು ಪಶ್ಚಾತ್ತಾಪ ಪಟ್ಟರೆ.*
قَبْلَ اَنْ تَطْلُعَ الشَّمْسُ مِنْ مَغْرِبِهَا
🌳 *ಸೂರ್ಯನು ಪಶ್ಚಿಮ ದಿಂದ ಉದಯಿಸುವ ಮುಂಚೆ*
تَابَ اللَّهُ عَلَيْهِ
🌳 *ಅವನ ತೌಬಾ ವನ್ನು ಅಲ್ಲಾಹನು ಸ್ವೀಕರಿಸುವನು.*
ವರದಿ: *ಮುಸ್ಲಿಂ*
ತಪ್ಪು ಮಾಡಿದಾತನು ಯಾವ ಸಮಯದಲ್ಲಿ ಪಶ್ಚಾತ್ತಾಪ ಪಟ್ಟು ಮರಳಿದರೂ ಅಲ್ಲಾಹನು ಅವನಿಗೆ ಕ್ಷಮೆ ನೀಡುವನು. ಅಲ್ಲಾಹನ ರಹ್ಮತ್ ನಿಂದ ಯಾರೂ ನಿರಾಶರಾಗಬೇಕಾಗಿಲ್ಲ.
☪ *ನೀವು ಇನ್ನೂ ತೌಬಾ ಮಾಡಲಿಲ್ಲವೇ ?*
ಮನುಷ್ಯ ಎಂದ ಮೇಲೆ ಆತನಿಂದ ತಪ್ಪು ಗಳು ಸಂಭವಿಸುವುದು ಸಹಜ. ಅರಿತೋ,ಅರಿಯದೆಯೋ ತಪ್ಪು ಗಳು ನಡೆದು ಹೋಗುತ್ತವೆ. ಸಣ್ಣ ಪುಟ್ಟ ತಪ್ಪು ಗಳು ವುಳೂ ಮಾಡುವಾಗಲೂ, ಒಳಿತಿನ ಕಾರ್ಯಗಳನ್ನು ಮಾಡುವಾಗಲೂ ಕ್ಷಮಿಸಲ್ಪಡುತ್ತವೆ. ದೊಡ್ಡ ತಪ್ಪು ಗಳಿಗೆ ತೌಬಾವೇ ಬೇಕಾಗಿದೆ.
ತೌಬಾ ಎಂದರೆ ಮನದಾಳದಿಂದ ಬರುವ ಖೇದವಾಗಿದೆ. ಪಶ್ಚಾತ್ತಾಪ ಪಟ್ಟು ಮರಳುವುದಾಗಿದೆ ತೌಬಾ. ಪ್ರತೀ ಶುಕ್ರವಾರ ಮಸೀದಿ ಇಮಾಮರು ನಮಗೆ ತೌಬಾ ಹೇಳಿ ಕೊಡುತ್ತಾರೆ. ಅದೇ ರೀತಿಯಲ್ಲಿಯೇ ತೌಬಾ ಆಗಬೇಕೆಂದೇನು ಇಲ್ಲ.. ನಮಗೆ ತಿಳಿದ ರೀತಿಯಲ್ಲಿ ನಾವು ತೌಬ ಮಾಡಬಹುದು.
ಎಷ್ಟೇ ದೊಡ್ಡ ತಪ್ಪು ಮಾಡಲಿ ಅಲ್ಲಾಹನು ಕ್ಷಮಿಸುವನು.ಅವನ ರಹ್ಮತ್ ನ ನೋಟ ದಾಸನ ಮೇಲೆ ಸದಾ ಇರುತ್ತದೆ. ತಪ್ಪು ಸಂಭವಿಸಿದ ಮೇಲೆ ಅದರ ಬಗ್ಗೆ ಖೇದ ಪಟ್ಟು ಪಶ್ಚಾತ್ತಾಪ ಪಡುವ ದಾಸನು ಅಲ್ಲಾಹನಿಗೆ ಹೆಚ್ಚು ಪ್ರೀತಿಯುಳ್ಳವನಾಗುತ್ತಾನೆ.
ತನ್ನ ದಾಸನ ತೌಬಾ ದಿಂದ ಅಲ್ಲಾಹನು ಎಷ್ಟು ಸಂತೋಷ ಗೊಳ್ಳತ್ತಾನೆಂಬುದನ್ನು ಹದೀಸ್ ವಿವರಿಸುವುದು ಹೀಗೆ ; *ಮರುಭೂಮಿ ಯಲ್ಲಿ ಸಂಚರಿಸುವ ಯಾತ್ರಿಕನ ವಾಹನ ನಷ್ಟವಾಗಿ ಆತ ಮರಣವನ್ನು ಎದುರು ನೋಡುತ್ತಿರುವಾಗಲೇ ಆತನ ವಾಹನ ಮರಳಿ ಸಿಕ್ಕರೆ ಆತನಿಗೆ ಉಂಟಾಗುವ ಸಂತೋಷ ವನ್ನು ವಿವರಿಸಲು ಸಾಧ್ಯವೇ ? ದಾಸನ ತೌಬಾ ದಿಂದ ಅಲ್ಲಾಹನು ಅದಕ್ಕಿಂತಲೂ ಹೆಚ್ವು ಸಂತೋಷ ಗೊಳ್ಳುವನು.*
ತೌಬಾ ವನ್ನು ಶುಕ್ರವಾರ ದಿನಕ್ಕೋ, ರಮಳಾನ್ ಇಪ್ಪತ್ತೇಳನೇಯ ದಿನಕ್ಕೋ ನಿಗದಿ ಪಡಿಸುವ ಬದಲು ದಿನಾಲು ತೌಬಾ ಮಾಡುವವರಾಗಿರಿ. ರಮಳಾನ್ ನಲ್ಲಿ ತೌಬಾ ಹೆಚ್ಚಿಸಿರಿ.
ಅಲ್ಲಾಹನು ಕ್ಷಮಿಸದ ಕೆಲವು ತಪ್ಪು ಗಾರರಿದ್ದಾರೆ. ಒಬ್ಬರು ಮಾಡಿದ ತಪ್ಪನ್ನು ಎಲ್ಲರ ಬಳಿ ಹೇಳಿ ನಡೆಯುವ ಗೀಬತ್ ಗಾರ, ಒಬ್ಬರ ಅಭಿಮಾನದ ಮೇಲೆ ಆರೋಪದಿಂದ ಕಳಂಕ ತಂದವನು, ಒಬ್ಬರ ಹಕ್ಕನ್ನು ತನ್ನ ಬಳಿಯೇ ಇರಿಸಿದವನು. ಇವರಿಗಿರುವ ತೌಬಾ ಇವರಿಂದ ಅನ್ಯಾಯಕ್ಕೊಳಗಾದವರಿಂದ ಕ್ಷಮೆ ಕೇಳುವುದಾಗಿದೆ.
✡ *ಗರ್ಭಿಣಿ ಮಹಿಳೆಯ ಉಪವಾಸ*
ಗರ್ಭಿಣಿ ಮಹಿಳೆಯರು ಉಪವಾಸ ಆಚರಿಸಬೇಕು ಅದು ಅವರಿಗೆ ಕಡ್ಡಾಯ ವಾಗಿದೆ. ಉಪವಾಸ ಆಚರಿಸುವುದರಿಂದ ಶರೀರಕ್ಕೆ ಕೇಡಾಗುತ್ತದೆ,ಅನಾರೋಗ್ಯ ವಂತಳಾಗುತ್ತಾಳೆ ಎಂದಾದರೆ ಅವಳಿಗೆ ಉಪವಾಸ ತೊರೆಯಬಹುದು. ರಮಳಾನ್ ಬಳಿಕ ಅದನ್ನು ಖಳಾ ಪೂರೈಸಿದರೆ ಸಾಕು.
ಇನ್ನು ಹೊಟ್ಟೆಯಲ್ಲಿರುವ ಶಿಶು ವಿಗೆ ಉಪವಾಸ ದಿಂದ ತೊಂದರೆ ಯಾಗುತ್ತದೆ ಅಥವಾ ಮಗುವಿನ ಆರೋಗ್ಯ ಕ್ಕೆ ಹಾನಿಯಾಗುತ್ತದೆ ಎಂದಾದರೂ ಉಪವಾಸ ತೊರೆಯಬಹುದು. ಆದರೆ , ಇಲ್ಲೊಂದು ನಿಬಂಧನೆ ಇದೆ. ಮಗುವಿನ ಆರೋಗ್ಯ ದ ದೃಷ್ಟಿಯಿಂದ ಉಪವಾಸ ಬಿಟ್ಟರೆ ಉಪವಾಸ ಖಳಾ ಪೂರೈಸುವುದರೊಂದಿಗೆ *650* ಗ್ರಾಮ್ ಆಹಾರ ಧಾನ್ಯವನ್ನು ಬಡವರಿಗೆ ನೀಡಬೇಕು.
ಉಪವಾಸ ದಿಂದ ಎದೆ ಹಾಲು ಕುಡಿಯುವ ಮಗುವಿಗೆ ಹಾಲು ಲಭಿಸುವುದಿಲ್ಲ ಅಥವಾ ಅದರ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಹೆದರಿಕೆ ಯಿಂದ ಉಪವಾಸ ತೊರೆದರೆ ಖಳಾ ಪೂರೈಸುವುದರೊಂದಿಗೆ *650* ಗ್ರಾಮ್ ಆಹಾರ ಧಾನ್ಯ ವನ್ನು ಬಡವರಿಗೆ ದಾನ ನೀಡಬೇಕು.
✡ *ವೃದ್ಧರ ಮತ್ತು ರೋಗಿಗಳ ಉಪವಾಸ*
ವೃದ್ಧಾಪ್ಯದಿಂದ ಬಳಲಿ ಉಪವಾಸ ಆಚರಿಸಲು ಸಾಧ್ಯವಿಲ್ಲದವರು ನಮ್ಮ ನಡುವೆ ಇದ್ದಾರೆ.ಅಂತವರು ಉಪವಾಸ ಕ್ಕೆ ಬದಲಿಯಾಗಿ ಪ್ರತೀ ದಿನ ಪ್ರತೀ ಉಪವಾಸ ಕ್ಕೆ 650 ಗ್ರಾಮ್ ಆಹಾರ ಧಾನ್ಯ ವನ್ನು ಬಡವರಿಗೆ ನೀಡಬೇಕು.
ಉಪವಾಸ ಆಚರಿಸಲು ಸಾಧ್ಯವಾಗದ ರೋಗಿಗಳಿದ್ದಾರೆ. ರೋಗವು ಗುಣವಾಗುವ ನಿರೀಕ್ಷೆ ಇದ್ದರೆ ಗುಣ ವಾದ ಮೇಲೆ ಅವರು ಉಪವಾಸ ಖಳಾ ಪೂರೈಸಿದರೆ ಸಾಕು. ಇನ್ನು ಗುಣವಾಗದ ರೋಗ ವಾಗಿದ್ದರೆ, ಗುಣ ವಾಗುವ ಯಾವುದೇ ನಿರೀಕ್ಷೆ ಇಲ್ಲದಿದ್ದರೆ ಅಂತವರೂ ಪ್ರತೀ ಉಪವಾಸಕ್ಕೆ ತಲಾ 650 ಗ್ರಾಮ್ ಆಹಾರ ಧಾನ್ಯ ವನ್ನು ಬಡವರಿಗೆ ನೀಡಬೇಕು.

Comments