Skip to main content

ತಾಳ್ಮೆ ಕಳೆದು ಕೊಳ್ಳುವ ತಾಳ

*ತಾಳ್ಮೆ ಕಳೆದು ಕೊಳ್ಳುವ ತಾಳ*
🤝🤝🤝🤝🤝😭😭😭😭
ನಾನೊಂದು ಮದುವೆಗೆ ಹೋಗಿದ್ದೆ ಆ ಸಂದರ್ಭ ಮದುವೆಯಾಗಿ ಒಂದು ತಿಂಗಳಾದ ಮದುಮಗನನ್ನು ಕಂಡು ಪರಿಚಯ ಮಾಡಿಕೊಂಡೆ ಅನೇಕ ವಿಷಯಗಳ ಕುರಿತು ಮಾತನಾಡಿದೆವು ಆ ಮಾತಿನೆಡೆಯಲ್ಲಿ ಒಂದು ವಿಷಯವನ್ನು  ಹೇಳಿದಾಗ  ನನ್ನ ಮನನೊಂದಿತು. ಅಷ್ಟೂ ಮನ ನೋಯಲು ಕಾರಣವಾದ ವಿಷಯವೇನೆಂದು ಚಿಂತಿಸುತ್ತೀರಾ??
ಹಾಗಾದರೆ  ಕೇಳಿ
ಓ ಉಸ್ತಾದರೇ ನನ್ನ ಮದುವೆಯ ದಿನ ತಾಳಕ್ಕೆಂದು ಅನೇಕ ಜನರು ಬಂದಿದ್ದರು ಅವರೊಂದಿಗೆ   ರಾತ್ರಿ   9 30 ಕ್ಕೆ    ನನ್ನ ಮನೆಯಿಂದ ಮದುಮಗಳ  ಮನೆಗೆ ಹೊರಟೆವು ಹತ್ತು ನಿಮಿಷದ ದೂರವಿರುವ ಆ ಮನೆಗೆ ತಲುಪಿದ್ದು   3 30 ಕ್ಕೆ(ಎಲ್ಲಾ ಕಡೆ ಸುತ್ತಾಡಿಸಿ ಕಿರುಕುಳ ಕೊಟ್ಟು ಸತಾಯಿಸಿದರು ನಾನು ಅಸಹಾಯಕನಂತೆ ಕುಳಿತೆ)   ನಮ್ಮನ್ನು ನೋಡಲು  ಕಾದು ಕುಳಿತಿದ್ದ ಅನೇಕರು ಅವರವರ ಪಾಡಿಗೆ ಹೋದರು ಆ ಮನೆಯಲ್ಲಿ ನನ್ನ ಕನಸಿನ ರಾಜ ಕುಮಾರಿ   ಮತ್ತು ಅವಳ ತಂದೆ ತಾಯಿಯನ್ನು ಬಿಟ್ಟು ಎಲ್ಲರೂ ನಿದ್ದೆಗೆ ಜಾರಿದ್ದರು
 ಕಠಿಣವಾದ ನಿದ್ದೆಯನ್ನು ಬಿಟ್ಟು ನಮ್ಮನ್ನು ಕಾಯುತ್ತಿರುವ ಮಾವನ ಮುಖ ನೋಡಿದಾಗ ಮುಜುಗರವಾಯ್ತು  ಪೊಕಿರಿಗಳಾದ ನನ್ನ ಗೆಳೆಯರಿಂದ ನನಗೂ ನನ್ನ ಕುಟುಂಬಕ್ಕೂ ಅಪಮಾನವಾಯ್ತು

ಮೊನ್ನೆಯಷ್ಟೇ  ನಡೆದ ಮದುವೆಯಲ್ಲೊಂದು ಘಟನೆ
ಮದುವೆ ಮುಗಿದು ಮದುಮಗನು 10 ಲೀಟರ್ ಐಸ್ಕ್ರೀಂ ಹಿಡಿದು ಮದುಮಗಳ ಮನೆಗೆ ತಲುಪುತ್ತಾನೆ. ವರನು ವದುವಿನ ಬಳಿ ಹೋಗಬೇಕಾದರೆ 50 ಸಾವಿರ ಕೊಡಬೇಕೆಂದು ಅಲ್ಲಿರುವ ಮಹಿಳೆಯರು ಷರತ್ತು ವಿದಿಸಿದರಂತೆ.
ಮದುವೆಯ ಖರ್ಚು ವೆಚ್ಚ ಗಳಿಂದ ಕಂಗಾಲಾದ ಇವನು ಈ ಷರತ್ತು ಕೇಳಿದಾಗ ಆಕಾಶ ತಲೆ ಮೇಲೆ ಬಿದ್ದಂತಾಯಿತು
ಅವರ ಷರತ್ತನ್ನು ಪಾಲಿಸದೆ ರಾಜಕುಮಾರಿಯನ್ನು ಕಾಣುವಂತಿಲ್ಲ
ಕೊನೆಗೆ ಅವಳ ಮುಖ ನೋಡಲು  3 30 ಘಂಟೆಯಾಗಬೇಕಾಯಿತು

ಓ  ಜನರೇ ಈ ಎರಡೂ ಘಟನೆಯನ್ನು ನೋಡಿದರೆ ಹುಚ್ಚರನ್ನೂ ಕುಡುಕರನ್ನೂ ನಾಚಿಸುವಂತಹ ಘಟನೆಯಾಗಿದೆ
ಕಷ್ಟಪಟ್ಟು ದುಡಿದು ಸಂಪಾದಿಸಿ  ಮಹ್ರ್ ಕೊಟ್ಟು ಮದುವೆಯಾದ ರಾಜಕುಮಾರಿಯನ್ನು ನೊಡುವುದನ್ನು ಅವಳೊಂದಿಗೆ ಸೇರುವುದನ್ನು ತಡೆಯುವ ಹಕ್ಕು ಯಾರಿಗಿದೆ,
ಪ್ರಥಮ ರಾತ್ರಿಯನ್ನ ಆಚರಿಸುವ ಸಂದರ್ಭದಲ್ಲಿ ಅವರನ್ನು ಸುತ್ತಾಡಿಸುವುದು , ಕಿರುಕುಳ ಕೊಡುವುದು, ಅವರಿಂದ ನೀಚ ಕೃತ್ಯಗಳನ್ನು ಮಾಡಿಸುವುದು, ಅವರ ಆಸೆಗಳಿಗೆ ಕಡಿವಾಣ ಹಾಕುವುದು  ಅದೇ ರೀತಿ ಮಗಳ ಮದುವೆಗಾಗಿ ಓಡಿ ನಡೆದು, ನಿದ್ದೆಯಿಲ್ಲದೆ ದಿನಗಳನ್ನು ದೂಡಿದ ಆ ತಂದೆ ತಾಯಂದಿರ ಮನ ನೋಯಿಸಲು ಹೊರಟ ಪೋಕಿರಿ ಗೆಳೆಯರೇ ನಿಮ್ಮಿಂದ ಇಸ್ಲಾಮಿಗೆ ಸಿಗುವ ಲಾಭವಾದರೂ ಏನು ? ಏನೂ ಇಲ್ಲ
ಒಂದು ಕುಟುಂಬದ ಕಣ್ಣೀರಿಗೆ ಕಾರಣವಾದರೆ ಖಂಡಿತವಾಗಿಯೂ ನೀವು ಕಣ್ಣೀರಲ್ಲೇ ಮುಳುಗುವ ಪರಿಸ್ಥಿತಿ ಬಂದೊದಗುತ್ತದೆ ಅಲ್ಲಾಹು ಕಾಪಾಡಲಿ

ಓ ಮಹಿಳಾ ಮಣಿಗಳೇ ನಿಮಗೆ ಉನ್ನತ ಸ್ಥಾನವನ್ನು ಕೊಟ್ಟು ಗೌರವಿಸಿದ ಇಸ್ಲಾಮಿನ ಆಚಾರ ವಿಚಾರಗಳನ್ನು ತಿಳಿಯಿರಿ
ಮದುವೆಯಾದ ಹೆಣ್ಣನ್ನು ಮುಟ್ಟಲು ನಿಮ್ಮ ಅನುಮತಿ ಬೇಕಾಗಿಲ್ಲ. ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುವ ವರಿಗಿಂತಲೂ ನೀಚರಾಗಿದ್ದೀರಿ ನೀವು.
ಅವಳೊಂದಿಗೆ ಸುಖವಾಗಿರಲೆಂದು ಭಾವಿಸುವ ಯಾವ ಹೆಣ್ಣೂ ಈತರ ಮಾಡಲು ಸಾಧ್ಯವಿಲ್ಲ
ಕಾರಣ ಕೆಲವು ಕಡೆಗಳಲ್ಲಿ ಇಂತಹ ಪ್ರಸಂಗ ನಡೆದಾಗ ಇಂತಹ ಮನೆಯಿಂದ  , ಇಂತಹ ಗೆಳತಿಯರಿರುವ ಹೆಣ್ಣು ಬೇಡವೆಂದು ಹೋದ ಘಟನೆ ನಮ್ಮ ಮುಂದೆ ಯಿದೆ
ಇಂತಹ ಘಟನೆಯಿಂದ ಇದುವರೆಗೂ ಕನಸು ನನಸಾಗದ ಹೆಣ್ಣು ಮಕ್ಕಳಿದ್ದಾರೆ
ನಿಮ್ಮ ಮೋಜಿಗೋಸ್ಕರ ಮುಗ್ಧ ಹೆಣ್ಣುಮಕ್ಕಳನ್ನು ಬಲಿಕೊಡದಿರಿ.

ಇನ್ನೊಂದು ವಿಷಯ
  ನೀವು ಮದುಮಗಳ ಗೆಳೆತಿಯರಾದರೂ ಮದುಮಗನೊಂದಿಗೆ ಮಾತನಾಡುವುದು    ನಿಮಗೆ ನಿಷಿದ್ಧ ಮತ್ತೆಲ್ಲಿಂದ ಅವನಿಂದ ಹಣ, ಐಸ್ಕ್ರೀಂ ವಸೂಲಿ ಮಾಡುತ್ತೀರಿ ?
ಮದುಮಗಳೊಂದಿಗೆ ಮಳಗದೆ ಯಾರೊಂದಿಗೆ ಮಳಗಬೇಕೆಂದು ಆಸೆ?
ಅಥವಾ ವೇಶ್ಯೆಯರಂತೆ ಏಜೆಂಟರಂತೆ ಇವನಿಂದಲೂ ಹಣ ವಸೂಲಿ ಮಾಡುತ್ತೀರಾ??
ಯಾರನ್ನು ಹಿಯಾಲಿಸಿ ಬರೆದಿಲ್ಲ ತಿಳಿಯದೆ ಮಾಡಿದ್ದರೆ ತಿದ್ದಲು ಸಮಯವಿದೆ ತಿಳಿದೂ ಇದನ್ನು ಮುಂದುವರಿಸುವುದಾದರೆ ಮಾರಕ ರೋಗಗಳಿಗೆ ತುತ್ತಾಗಬಹುದು ಅಲ್ಲಾಹು ಕಾಪಾಡಲಿ ಆಮೀನ್
ಯಾರನ್ನು ಅಕ್ರಮಿಸದೆ ಯಾರಿಗೂ ತೊಂದರೆ ಕೊಡದೆ ಜೀವಿಸುವ
ತಾಳ ಮೇಳ ಎಂದೇಳಿ ಸಂತೋಷಕ್ಕೆ ಕೊಳ್ಳಿಯಿಡದರಿ .
ಮದುಮಗ ಒಬ್ಬನೇ ಹೋದರೂ ಆಕಾಶ ಕಳಚಿ ಬೀಳುವುದಿಲ್ಲ
ಸಂಪ್ರದಾಯದಂತೆ ಹೋಗುವುದಾದರೆ ಒಳ್ಳೆಯವರನ್ನೇ ಆಯ್ಕೆ ಮಾಡಿ....ಅಲ್ಲಾಹನು ತಾಉಫೀಕ್ ನೀಡಲಿ  ಅಮೀನ್ 👏

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...