ಬಿಳು ಬಿಳುಪಿನ ಸಲ್ಮಾನುಲ್ ಫಾರಿಸ್ ರನ್ನು [ರಅ] ಕಪ್ಪುಕಪ್ಪಗಿರುವ ಬಿಲಾಲ್ ರನ್ನು [ರಅ] ಒಂದೇ ಸಾಲಿನಲ್ಲಿ ನಿಲ್ಲಿಸಿ ವರ್ಣ ತಾರತಮ್ಯ ಮಾಡಬಾರದೆಂದು ವಿಶ್ವಕ್ಕೆ ಕಲಿಸಿದ ನಮ್ಮ ಪ್ರವಾದಿ ﷺ
🌹ತಾಯಿಯ ಕಾಲು ಬುಡದಲ್ಲಿ ಆಗಿದೆ ಸ್ವರ್ಗವೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣಬಾರದೆಂದು ಕಲ್ಪಿಸಿ, ಅದರಲ್ಲಿ ಜಾತಿ ನೋಡಬಾರದೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ಕದ್ದದ್ದು ನನ್ನ ಮಗಳು ಫಾತಿಮಾ [ರಅ] ಆದರೂ ಕೈ ಕಡಿಯುವೆನೆಂದು ವಿಶ್ವಕ್ಕೆ ನೀತಿ ಕಲಿಸಿದ ನಮ್ಮಪ್ರವಾದಿ ﷺ
🌹ಮರಣ ಹೊಂದಿದ ಮಕ್ಕಳು ನಮ್ಮ ಧರ್ಮದಲ್ಲಿ ಒಳಪಟ್ಟವರಲ್ಲವೆಂದು ಅನುಯಾಯಿಗಳು ಹೇಳಿದಾಗ, ಮಕ್ಕಳಿಗೆ ಎಂತಹಾ ಧರ್ಮ ಎಂದು ಕೇಳಿ ಅನುಯಾಯಿಗಳಿಗೆ ತಾಕಿತ್ತು ನೀಡಿದ ನಮ್ಮ ಪ್ರವಾದಿ ﷺ
🌹ಮಾತಪಿತರಲ್ಲಿ "ಛೆ " ಎಂಬ ಮಾತು ಕೂಡ ಹೇಳಬಾರದೆಂದು ಹೇಳಿ ಸ್ನೇಹದ ಪಾಠ ಕಲಿಸಿದ ನಮ್ಮ ಪ್ರವಾದಿ ﷺ
🌹ಮರಣ ಸಮಯದಲ್ಲಿಯೂ ನನ್ನ ಸಮುದಾಯ ಎಂದು ನೆನದು ಅತ್ತ, ಬದಲಿಗಾರನಿಲ್ಲದ ನಮ್ಮ ಪ್ರವಾದಿ ﷺ
🌹ಪತಿಯನ್ನು ಶಪಿಸಬಾರದೆಂದು, ಪತ್ನಿಯನ್ನು ನೋಟದಿಂದ ವಾದರು ನೋಯಿಸಬಾರದೆಂದು ಕಲಿಸಿ ಕುಟುಂಬ ಬಂಧದ ಮಹತ್ವ ಕಲಿಸಿದ ನಮ್ಮ ಪ್ರವಾದಿ ﷺ
🌹ತಂದೆಯವರ ಬೆವರು ಕುಟುಂಬದ ಆಸರೆ ಎಂದು ನೆನಪಿಸಲು ಕಲಿಸಿದ ನಮ್ಮ ಪ್ರವಾದಿ ﷺ
🌹ಒಬ್ಬ ಮುಸ್ಲಿಮೇತರ ಶವ ಮಂಚದಲ್ಲಿ ಹೊತ್ತು ಕೊಂಡು ಜನರು ನಡೆದುಕೊಂಡು ಹೋಗುವಾಗ ಎದ್ದು ನಿಂತ ಪೈಗಂಬರ್ ﷺ ರವರ ಹತ್ತಿರ ಬಂದು ಅದು ಮುಸ್ಲಿಂನದಲ್ಲ ಎಂದು ಅನುಯಾಯಿಗಳು ಹೇಳಿದಾಗ ಅವನೊಬ್ಬ ಮನುಷ್ಯನಲ್ಲವೇ? ಎಂದು ಕೇಳಿ, ಮನುಷ್ಯರನ್ನು ಬಹುಮಾನಿಸಲು ಕಲಿಸಿದ ನಮ್ಮ ಪ್ರವಾದಿ ﷺ
🌹ಗಂಡ ತಲಾಕ್ ಹೇಳುವ ಹಾಗೆ ಅವನಿಂದ ನಿನಗೆ ತ್ರಪ್ತಿಕರವಾದ ಜೀವನ ಲಬಿಸದಿದ್ದರೆ ತಿರುಗಿ ನಿನಗೂ ಗಂಡನನ್ನು ತಲಾಕ್ [ಫಾಸ್ಕ್] ಹೇಳಬಹುದೆಂದು ಕಲಿಸಿ, ಗಂಡನಿಗೂ ಹೆಣ್ಣಿಗೂ ಸಮಾನ ನ್ಯಾಯ ಒದಗಿಸಿದ ನಮ್ಮ ಪ್ರವಾದಿ ﷺ
🌹ಒಬ್ಬರ ಹತ್ತಿರ ಮುಗುಳ್ನಗೆ ಬಿರುವುದು ಅದು ದಾನವಾಗಿವೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ನಿನಗೆ ನಿನ್ನ ಧರ್ಮ ಅವರಿಗೆ ಅವರ ಧರ್ಮ, ಬೇರೆಯೊಬ್ಬರ ಧರ್ಮವನ್ನು ಅಪಹಾಸ್ಯ ಮಾಡಬಾರದೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ಸ್ತ್ರೀ ಎಂದರೆ ಬಹುಮಾನಿಸುವವಳು, ಆದರಿಸಬೇಕಾದವಳು ಎಂದು 1400 ವರ್ಷದ ಮೊದಲೇ ಕಲಿಸಿದ ನಮ್ಮ ಪ್ರವಾದಿ ﷺ
🌹ದಾರಿಯಲ್ಲಿ ಒಂದು ಮುಳ್ಳು ತಡಸ್ಥವಾಗಿ ಕಂಡರೂ ಕೂಡ ಆ ತಡಸ್ಥವನ್ನು ಸರಿಸದೆ ಮುಂದಕ್ಕೆ ಹೋಗಬಾರದೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ಆದಷ್ಟು ಖರ್ಚು ಕಡಿಮೆ ಮಾಡಿದ ವಿವಾಹವಾಗಿದೆ, ಬಹಳ ಮಹತ್ವವೇರಿದ ವಿವಾಹವೆಂದು ಸಮುದಾಯಕ್ಕೆ ಕಲಿಸಿದ ನಮ್ಮ ಪ್ರವಾದಿ ﷺ
🌹ಅರಿವು ಒಬ್ಬ ವಿಶ್ವಾಸಿಯ ಸಂಪತ್ತಾಗಿದೆ, ಅದು ಎಲ್ಲಿ ಸಿಕ್ಕಿದರೂ ಹೆಕ್ಕಿ ತೆಗೆಯಬೇಕೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ಹೆಣ್ಣಿನ ಸುರಕ್ಷಿತ್ವವಾಗಿದೆ ಸಮುದಾಯದ ಸುರಕ್ಷೆಯೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ಹೆಣ್ಣು ಮಕ್ಕಳು ಇರುವ ಕುಟುಂಬವಾಗಿದೆ ಉತ್ತಮ ಕುಟುಂಬವೆಂದು ಕಲಿಸಿದ ನಮ್ಮ ಪ್ರವಾದಿ ﷺ
🌹ನಿನ್ನ ಬೆರಳುಗಳಲ್ಲಿ ನಿನ್ನನ್ನು ತಿಳಿದುಕೊಳ್ಳುವ ನಿಶಾನಿ ಇದೆಯೆಂದು ಕಲಿಸಿ ವಿಜ್ಞಾನಿಯಾದ ನಮ್ಮ ಪ್ರವಾದಿ ﷺ
🌹ಅನಾಥ ಮಕ್ಕಳ ಎದುರಿನಲ್ಲಿ ಸ್ವಂತ ಮಕ್ಕಳನ್ನು ಕೂಡ ಲಾಲಿಸಬಾರದೆಂದು ಕಲಿಸಿದ ಕಾರುಣ್ಯ ನಿಧಿಯಾದ ನಮ್ಮ ಪ್ರವಾದಿ ﷺ
ಎಷ್ಟು ಬರೆದರೂ, ಎಷ್ಟು ಹೇಳಿದರೂ, ಮುಗಿಯದ ನಮ್ಮ ಪ್ರವಾದಿಯವರ ಮಹಿಮೆಯನ್ನು ವಿಮರ್ಶಿಸಲು ಯಾರ ಪೆನ್ನಿಗೋ, ಪತ್ರಿಕೆಗೂ, ನಾಲಗೆಗೊ ಒಮ್ಮೆಯೂ ಸಾದ್ಯವಿಲ್ಲ.
ಕಾರುಣ್ಯದ ನಿಧಿಯಾದ ಪ್ರವಾದಿಯರನ್ನುﷺ ರವರನ್ನು
ಅರಿಯಿರಿ, ತಿಳಿಯಿರಿ, ಕಲಿಯಿರಿ. ನಿಮಗೂ ಅವರ ಹತ್ತಿರ ಸ್ನೇಹವಾಗಬಹುದು.
ಇನ್ ಷಾ ಅಲ್ಲಾಹ್.
ಮಾತುಗಳಿಂದ ನಲ್ಮೆಯನ್ನು ಮಾತ್ರ ಸಮುದಾಯಕ್ಕೆ ವಿತರಿಸಿದ ತಮಗೆ ಸಾವಿರಾರು ಸಲಾಂ.
*ಸಲ್ಲಲ್ಲಾಹು ವಲೈಬ ಸಲ್ಲಾಮ್ ಸಲ್ಲಲ್ಲಾಹು ವಲಾ ಮುಹಮ್ಮದ್.*
✍ಗಫೂರ್ ಬಾಯಾರು
♥♥♥♥♥♥♥
Comments