*🌹ತರಾವೀಹ್_ನಮಾಝ್🌹*
*🚫ವಹ್ಹಾಬಿಗಳ ಪುರಾವೆ ಮತ್ತು ಸತ್ಯಾಂಶ🚫*
ಈ ಹದೀಸ ಸಾಮಾನ್ಯ ಜನರನ್ನು ವಂಚಿಸುವ ಕಟ್ಟಾಕಾಪಟ್ಯ ವಂಚನೆಯೂ ಆಗಿದೆ. ಈ ಹದೀಸನ್ನು ಪರಿಶೀಲಿಸಿದರೆ ಈ ಕಾರ್ಯ ವ್ಯಕ್ತವಾಗುತ್ತದೆ.ಪ್ರಸ್ತುತ ಹದೀಸ್ ಕೆಳಗಿನಂತಿದೆ.👇🏻
*ಹದೀಸ್👇🏻*
كتاب التهجد
حَدَّثَنَا عَبْدُ اللَّهِ بْنُ يُوسُفَ، قَالَ أَخْبَرَنَا مَالِكٌ، عَنْ سَعِيدِ بْنِ أَبِي سَعِيدٍ الْمَقْبُرِيِّ، عَنْ أَبِي سَلَمَةَ بْنِ عَبْدِ الرَّحْمَنِ، أَنَّهُ أَخْبَرَهُ أَنَّهُ، سَأَلَ عَائِشَةَ ـ رضى الله عنها ـ كَيْفَ كَانَتْ صَلاَةُ رَسُولِ اللَّهِ صلى الله عليه وسلم فِي رَمَضَانَ فَقَالَتْ مَا كَانَ رَسُولُ اللَّهِ صلى الله عليه وسلم يَزِيدُ فِي رَمَضَانَ وَلاَ فِي غَيْرِهِ عَلَى إِحْدَى عَشْرَةَ رَكْعَةً، يُصَلِّي أَرْبَعًا فَلاَ تَسَلْ عَنْ حُسْنِهِنَّ وَطُولِهِنَّ، ثُمَّ يُصَلِّي أَرْبَعًا فَلاَ تَسَلْ عَنْ حُسْنِهِنَّ وَطُولِهِنَّ، ثُمَّ يُصَلِّي ثَلاَثًا، قَالَتْ عَائِشَةُ فَقُلْتُ يَا رَسُولَ اللَّهِ أَتَنَامُ قَبْلَ أَنْ تُوتِرَ. فَقَالَ " يَا عَائِشَةُ، إِنَّ عَيْنَىَّ تَنَامَانِ وَلاَ يَنَامُ قَلْبِي ".
🌹ಅಬೂಸಲಮ(ರ)ರವರಿಂದ ವರದಿ:ಒಮ್ಮೆ ಅವರು ಆಯಿಶಾ(ರ)ರವರಲ್ಲಿ ಕೇಳಿದರು. ಪವಿತ್ರ ರಂಝಾನ್ ನಲ್ಲಿ ಪ್ರವಾದಿ(ಸ)ರವರ ನಮಾಝ್ ಹೇಗಿತ್ತು?ಆಯಿಶಾ(ರ) ಹೇಳಿದರು-ರಂಝಾನ್ ನಲ್ಲೂ,ರಂಝಾನ್ ಅಲ್ಲದ ಸಮಯದಲ್ಲೂ 11ರಕಾತ್ ಗಿಂತ ಹೆಚ್ಚುಸುತ್ತಿರಲಿಲ್ಲ.(ಮೊದಲು) 4 ರಕಾತ್ ನಿರ್ವಹಿಸುವರು.ಅದರ ಅಂಧವನ್ನು ದೀರ್ಘತೆಯನ್ನು ನೀನು ಕೇಳಬೇಡ.(ತುಂಬಾ ದೀರ್ಘವಾಗಿತ್ತು ಎಂದರ್ಥ) ನಂತರ 4ರಕಾತ್ ನಿರ್ವಹಿಸುವರು ಅದರ ಸೌಂದರ್ಯವನ್ನು ದೀರ್ಘತೆಯನ್ನು ಕೇಳಬೇಡ.ನಂತರ 3ತಕಾತ್ ನಿರ್ವಹಿಸುವರು.ಆಯಿಶಾ(ರ) ಹೇಳುತ್ತಾರೆ-ನಾನು ಒಮ್ಮೆ ಪ್ರವಾದಿ (ಸ)ರವರಲ್ಲಿ ಕೇಳಿದೆ "ಪ್ರವಾದಿವರ್ಯರೇ ತಾವು ವಿತ್ರ್ ನಮಾಝ್ ಮಾಡುವುದಕ್ಕಿಂತ ಮುಂಚೆ ನಿದ್ದೆ ಮಾಡುತ್ತೀರಾ?" ಆಗ ಪ್ರವಾದಿ(ಸ) ಹೇಳಿದರು-ನನ್ನ ಕಣ್ಣುಗಳೆರಡು ನಿದ್ದೆ ಮಾಡುವುದಾದರೂ,ನನ್ನ ಹೃದಯ ನಿದ್ದೆ ಮಾಡುವುದಿಲ್ಲ.
*📔(ಸಹಿಹ್_ಬುಖಾರಿ)*
⭕ಕಣ್ಣು ಬಿಟ್ಟು ನೋಡುವ ಯಾವನಿಗೂ ಇದು ವಿತ್ರ್ (ತಹಜ್ಜುದ್) ನಮಾಝಿನ ಕುರಿತು ವರದಿಯಾದ ಹದೀಸೆಂದು ಮನದಟ್ಟಾಗಬಹುದು.ಯಾಕೆಂದರೆ ಈ ವರದಿಯಲ್ಲಿ ಆಯಿಶಾ(ರ) ರವರು ನಬಿ(ಸ)ರವರು 11ರಕಾತ್ *ತರಾವೀಹ್ ನಮಾಝ್* ಮಾಡಿದ್ದರೆಂದು ಹೇಳಿಯೇ ಇಲ್ಲ..
‼Note‼
♻👉🏻ಅಬೂಸಲಮರ(ರ) ಪ್ರಶ್ನೆ ತಹಜ್ಜುದ್(ವಿತ್ರ್) ನಮಾಝ್ ವಿಷಯದ ಬಗ್ಗೆ ಆಗಿದೆ.ಒಂದು ವೇಳೆ ತರಾವೀಹ್ ವಿಷಯದ ಬಗ್ಗೆ ಆಗಿದ್ದರೆ.ಉಮ್ಮುಲ್ ಮುಅ್ಮೀನ್(ರ) ರವರು ತರಾವೀಹ್ ವಿಷಯದ ಬಗ್ಗೆ ಮಾತ್ರ ಉತ್ತರಿಸಬೇಕಿತ್ತು.ಆದರೆ ಅಲ್ಲಿ ಉತ್ತರ ಕೊಟ್ಟಿದ್ದು ಹೀಗೆ- *ರಂಝಾನ್ ಮತ್ತು ರಂಝಾನ್ ಅಲ್ಲದ ಸಮಯದಲ್ಲೂ* ಎಂದಾಗಿದೆ.ಅಂದರೆ ನಬಿಯೇ_ರಹ್ಮತ್(ಸ.ಅ) ರಂಝಾನ್ ನಲ್ಲಿ ಹಾಗೂ ಇತರ ಶವ್ವಾಲ್,ದುಲ್ಹಜ್ಜ,ರಜಬ್ ಇತ್ಯಾದಿ...ತಿಂಗಳುಗಳಲ್ಲೂ ಈ ರೀತಿ ನಮಾಝ್ ನಿರ್ವಹಿಸುತ್ತಿದ್ದರು ಎಂದರ್ಥ.
♻👉🏻ಒಂದುವೇಳೆ ಇದು ತರಾವೀಹ್ ನಮಾಝ್ ಆಗಿದ್ದರೆ *ರಂಜಾನ್ ಅಲ್ಲದ ಸಮಯದಲ್ಲಿ ಎಂಬ ದ್ಸಿಕ್ರ್* ಇರುತ್ತಿರಲಿಲ್ಲ.ಯಾಕೆಂದರೆ ತರಾವೀಹ್ ರಂಝಾನ್ ಅಲ್ಲದ ಸಮಯದಲ್ಲಿ ನಿರ್ವಹಿಸಲಾಗುವುದಿಲ್ಲ.
*ಏನು ವಹ್ಹಾಬಿಗಳೇ,ನೀವು ರಂಝಾನ್ ನೊಂದಿಗೆ ಇತರ ತಿಂಗಳುಗಳಲ್ಲಿ ತರಾವೀಹ್ ನಮಾಝ್ ನಿರ್ವಹಿಸುತ್ತೀರಾ?*
♻👉🏻ಹದೀಸ್ ನಲ್ಲಿ 4+4 ರಕಾತ್ ಮತ್ತು ಅಂದವಾಗಿ ತುಂಬಾ ದೀರ್ಘತೆಯಿಂದ ನಿರ್ವಹಿಸುತ್ತಿದ್ದರು.ಅದರ ನಂತರ 3 ರಕಾತ್ ವಿತ್ರ್ ಒಟ್ಟಿಗೆ ನಿರ್ವಹಿಸುತ್ತಿದ್ದರು ಎಂದಿದೆ.ಈಗ ತಿಳಿಯಿತಾ ಇಲ್ಲಿ ವಿತ್ರ್ 3 ರಕಾತ್ ಸಾಬೀತಾಯಿತು.ಅದು ಕೂಡ ರಂಝಾನ್ ಮತ್ತು ಅಲ್ಲದ ಸಮಯದಲ್ಲೂ ಎರಡರಲ್ಲೂ ಸಾಬೀತಾಯಿತು.
*ವಹ್ಹಾಬಿಗಳೇ ನೀವು 3ರಕಾತ್ ವಿತ್ರ್ ನಿರ್ವಹಿಸುವುದನ್ನು ಬಿದ್ಅತ್ಎಂದು ಬೊಗಳುತ್ತೀರಾ ಮತ್ತು 1 ರಕಾತ್ ವಿತ್ರ್ ಸ್ವೀಕರಿಸುತ್ತೀರಾ ಅಲ್ಲವೇ?*
♻👉🏻ಈ ಹದೀಸ್ ನ ಕೊನೆಯಲ್ಲಿ ಓದಿದರೆ ಅರ್ಥವಾಗುತ್ತದೆ.ಏನೆಂದರೆ ಆಯಿಶಾ(ರ) ರವರು ಪ್ರವಾದಿ(ಸ)ರೊಂದಿಗೆ ಕೇಳಿದರು-ಪ್ರವಾದಿಯವರೇ ವಿತ್ರ್ ನಮಾಝ್ ಮಾಡದೇ ತಾವು ನಿದ್ರಿಸುವುದಾ? ಆಗ ನಬಿ(ಸ)ರು ನಾನು ನಿದ್ರಿಸುತ್ತೇನೆ ಆದರೆ ನನ್ನ ಹೃದಯ ನಿದ್ರಿಸುವುದಿಲ್ಲ..ನಂತರ 11 ರಕಾತ್ ನಿರ್ವಹಿಸುತ್ತಿದ್ದರು.
*ರಾತ್ರಿಯಲ್ಲಿ ಎದ್ದು ತರಾವೀಹ್ ನಮಾಝ್ ಮಾಡುವ ತಮ್ಮ ಅಮ್ಮನ ಒಳ್ಳೆಯ ವಹ್ಹಾಬಿ ಮಕ್ಕಳು ಯಾರಾದರೂ ಇದ್ದಾರೆಯೇ?*
ಯಾಕೆಂದರೆ ಎಲ್ಲಾ ವಹ್ಹಾಬಿಗಳು ತರಾವೀಹ್ ಮಲಗುವ ಮುಂಚೆಯೇ ನಿರ್ವಹಿಸುತ್ತಾರೆ.
ಆದ್ದರಿಂದ ಈ ಪುರಾವೆ ನಿಮ್ಮ ಕಾರ್ಯಕ್ಕೆ ಬರುವುದಿಲ್ಲ.👇🏻
♻👉🏻ಈ ಹದೀಸನ್ನು ಇಮಾಂ ಬುಖಾರಿ(ರ)ರವರು *ತರಾವೀಹ್* ಅಧ್ಯಾಯದಲ್ಲಿ ಉಲ್ಲೇಖಿಸಿದ್ದರಿಂದ ವಹ್ಹಾಬಿಗಳು ಇದನ್ನು ತರಾವೀಹ್ ನಮಾಝ್ ಪುರಾವೆ ಎಂದು ಹೇಳುತ್ತಿದ್ದಾರೆ.ಆದರೆ ಅದೇ ಇಮಾಂ ಬುಖಾರಿ(ರ) ರವರು ಅಧ್ಯಾಯ *ತಹಜ್ಜುದ್* ನಲ್ಲಿ ಇದೇ ಹದೀಸನ್ನು ಉಲ್ಲೇಖಿಸಿದ್ದಾರೆ.ಅದರ ವಿಷಯದ ಬಗ್ಗೆ ವಹ್ಹಾಬಿಗಳು ತುಟಿಕ್ ಪಿಟಿಕ್ ಅನ್ನುತ್ತಿಲ್ಲ.
*ಈ ಹದೀಸ್ ಕುರಿತು ವಿದ್ವಾಂಸರಾದ👇🏻*
🔹 ಬಹು| ಇಬ್ನ್ ಹಜರ್(ರ)ಹೇಳುತ್ತಾರೆ:ವಿತ್ರ್ ನ ಗರಿಷ್ಠ ಸಂಖ್ಯೆ 11ರಕಾತ್ ಆಗಿದೆ.ಪ್ರವಾದಿ(ಸ)ರು ರಂಝಾನ್ ನಲ್ಲೂ ಅಲ್ಲದ ಸಮಯದಲ್ಲೂ 11ರಕಾತ್ ಗಿಂತ ಹೆಚ್ಚುಸುತ್ತಿರಲಿಲ್ಲ ಎಂಬ ಆಯಿಶಾ(ರ) ರವರಿಂದ ವರದಿಯಾದ ಹದೀಸಾಗಿದೆ ಇದಕ್ಕೆ ಆಧಾರ.(ತುಹ್ಫಾ).
ಈ ರೀತಿ ಪ್ರಸ್ತುತ ಹದೀಸ್ ವಿತ್ರ್ ನ ಕುರಿತಾಗಿದೆ.ಎಂದು ವಿದ್ವಾಂಸರು ಪ್ರಖ್ಯಾಪಿಸಿರುವಾಗ ಅದನ್ನು ತರಾವೀಹ್ ನಮಾಝ್ ಗೆ ಪುರಾವೆಯನ್ನಾಗಿ ಉದ್ದರಿಸುವುದು ಅತೀ ಮೂರ್ಖತನವಾಗಿದೆ.ಏಕೆಂದರೆ ಈ ಹದೀಸ್ ನಲ್ಲಿ ಪ್ರವಾದಿ(ಸ)ರು 4+4 ರಕಾತ್ ಗಳಾಗಿ ನಿರ್ವಹಿಸುತ್ತಿದ್ದರು ಎಂದಿದೆ.ಆದ್ದರಿಂದ ತರಾವೀಹ್ ನಮಾಝ್ ಅಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.ಕಾರಣ ತರಾವೀಹ್ ಎಂಬುವುದು 2+2 ರಕಾತ್ ಗಳಾಗಿ ನಿರ್ವಹಿಸುವ ನಮಾಝ್ ಆಗಿದೆ.
⭕ಇಮಾಂ ನವವಿ(ರ) ಹೇಳುತ್ತಾರೆ "ಯಾರಾದರೂ ತರಾವೀಹ್ ನಮಾಝ್ ನ್ನು ಒಂದೇ ಸಲಾಂ ನಿಂದ 4 ರಕಾತ್ ಗಳಾಗಿ ನಿರ್ವಹಿಸಿದರೆ ಅದು ಸಿಂಧುವಲ್ಲ"(ತಹ್ಕೀಖ್)
⭕ಇಬ್ನ್ ಹಜರ್(ರ) ಹೇಳುತ್ತಾರೆ "ತರಾವೀಹ್ ನಮಾಝ್ ನ ಪ್ರತೀ 2ರಕಾತ್ ಗೊಮ್ಮೆ ಸಲಾಂ ಹೇಳುವುದು ಕಡ್ಡಾಯವಾಗಿದೆ..."
ಅಲ್ಲಾಹನು ವಹ್ಹಾಬಿಗಳ ವಂಚನೆಯಿಂದ ಮುಗ್ದ ಮುಸ್ಲಿಮರ ನಬಜ ರಕ್ಷಿಸಲಿ.ಆಮೀನ್.
Scan page👇🏻
*📔(ಸಹಿಹ್_ಬುಖಾರಿ)*
*✍🏻Straight Path Ahlu Sunnah*
🎈💞🎈💞🎈💞🎈
Comments