ತರಾವೀಹ್ ನಮಾಜ್
🌷🌷🌷🌷🌷🌷🌷🌷🌷🌷🌷🌷🌷
ರಮಳಾನ್ ತಿಂಗಳ ರಾತ್ರಿಗಳಲ್ಲಿ ನಿರ್ವಹಿಸಲ್ಪಡುವ ಪ್ರತ್ಯೇಕವಾದ ಒಂದು ನಮಾಜಿಗೆ ತರಾವೀಹ್ ಎಂದು ಹೆಸರು.
🔹 *ತರಾವೀಹ್ ನಮಾಜು 20 ರಕಅತ್ ಗಳಿವೆ. 2 ರಕಅತ್ ಗಳಂತೆ 10 ಸಲಾಂ ಗಳಲ್ಲಿ ಇಪ್ಪತ್ತು ರಕಅತ್ ಗಳನ್ನು ಪೂರ್ಣಗೊಳಿಸಬೇಕು.*
🔹ರಮಳಾನಿನಲ್ಲಿ ನಿರ್ವಹಿಸಲ್ಪಡುವ ಈ ನಮಾಜಿಗೆ ಬಹಳ ಶ್ರೇಷ್ಠತೆ ಇದೆ. ಪ್ರವಾದಿ ವರ್ಯರು صلي الله عليه وسلم) ಹೇಳಿದರು. *"ಸತ್ಯ ವಿಶ್ವಾಸ ಹಾಗೂ ಪ್ರತಿಫಲಾಪೇಕ್ಷೆಯಿಂದ ಯಾರಾದರೂ ರಮಳಾನ್ ತಿಂಗಳಲ್ಲಿ ತರಾವೀಹ್ ನಮಾಜು ನಿರ್ವಹಿಸಿದರೆ ಅವನ ಗತ ಪಾಪಗಳೆಲ್ಲಾ ಮನ್ನಿಸಲ್ಪಡುತ್ತದೆ."* (ಬುಖಾರಿ)
🔹ತರಾವೀಹ್ ನಮಾಜು ಪುರುಷರಿಗೆ ಸುನ್ನತ್ತಿರುವಂತೆ ಮಹಿಳೆಯರಿಗೂ ಸುನ್ನತ್ತಿದೆ. ಆದ್ದರಿಂದ ಅವರು ಅವರ ಮನೆಗಳಲ್ಲಿ ತರಾವೀಹ್ ನಮಾಝನ್ನು ನಿರ್ವಹಿಸಬೇಕು.
🔹 *ಕುರ್ಆನ್ ಪಾರಾಯಣದಿಂದ ತರಾವೀಹ್ ನಮಾಜಿನ ನಿಲ್ಲುವಿಕೆಯನ್ನು ದೀರ್ಘಿಸುವುದು ಅತ್ಯಂತ ಪುಣ್ಯದಾಯಕವಾಗಿದೆ.*
"ಫಾತಿಹಾ ಸೂರತ್, ಅತ್ತಹಿಯಾತ್ಗಳನ್ನು ಸರಿಯಾದ ಕ್ರಮದಲ್ಲಿ ಪಾರಾಯಣ ಮಾಡದೆ ಹಾಗೂ ರುಕೂಅ್, ಎರಡು ಸುಜೂದ್ ಗಳು ಅವುಗಳ ಮಧ್ಯೆ ಕುಳಿತುಕೊಳ್ಳುವುದು ಮೊದಲಾದವುಗಳಲ್ಲಿ ಕಡ್ಡಾಯವಾದ ನಿಶ್ಫಲತೆಯನ್ನು ಉಪೇಕ್ಷಿಸಿ ತರಾವೀಹ್ ನಮಾಜು ನಿರ್ವಹಿಸುವುದು ಕಂಡು ಬರುತ್ತದೆ. ಇಂತಹ ಎಕ್ಸ್ಪ್ರೆಸ್ ನಮಾಜುಗಳಿಂದ ಯಾವುದೇ ಲಾಭವಿಲ್ಲ ಎಂಬುದನ್ನು ಅರಿತಿರಬೇಕು. "
*🕒ತರಾವೀಹ್ ನಮಾಜಿನ ಸಮಯ:* ಇಶಾ ನಮಾಜಿನ ಪ್ರಥಮ ಸಮಯದ್ಲಲೇ
ನಿರ್ವಹಿಸುವುದು ಉತ್ತಮ ಕ್ರಮವಾಗಿದೆ.
—————————————————
*♦ತರಾವೀಹ್ ನಮಾಜಿನ ವಿಧಾನ ♦*
—————————————————
🔹"ತರಾವೀಹ್ ಎಂಬ ಸುನ್ನತ್ ನಮಾಝನ್ನು ಎರಡು ರಕಅತ್ ಅಲ್ಲಾಹನಿಗಾಗಿ ನಾನು ನಿರ್ವಹಿಸುವೆನು" ಎಂದು ನಿಯ್ಯತ್ ಮಾಡಿ (ಜಮಾತ್ ಆಗಿ ನಿರ್ವಹಿಸುವುದಾದರೆ "ಇಮಾಮ್ ಆಗಿ ನಿರ್ವಹಿಸುವೆನು" ಎಂದು ಇಮಾಮ್ ನಿಲ್ಲುವವರು, "ಇಮಾಮರೊಂದಿಗೆ ನಾನು ನಿರ್ವಹಿಸುವೆನು" ಎಂದು ಉಳಿದವರು ನಿಯ್ಯತ್ ಮಾಡಬೇಕು)
🔹ತಕ್ಬೀರತುಲ್ ಇಹ್ರಾಮ್ ಹೇಳಿ ಫಾತಿಹಾ ಓದಬೇಕು. ಬಳಿಕ ಒಂದು ಸೂರತ್ ಓದಬೇಕು.
🔹ಇದಾದ ಬಳಿಕ ರುಕೂ ಇಅತಿದಾಲ್ ಎರಡು ಸುಜೂದ್ ಅವುಗಳ ಮಧ್ಯೆ ಕೂರುವುದು ಮೊದಲಾದವುಗಳನ್ನು ಇತರ ನಮಾಜಿನಂತೆಯೇ ಪೂರ್ಣರೂಪದಲ್ಲಿ ನಿರ್ವಹಿಸಿ ಎರಡನೇ ರಕಾತ್'ಗೆ ಎದ್ದು ನಿಲ್ಲಬೇಕು.
(ಮೊದಲನೇ ರಕಅತ್'ನಲ್ಲಿ ಓದಿದ ಸೂರತ್'ನ ಅನಂತರದ ಸೂರತಾಗಿರುವುದು ಉತ್ತಮ.) ಮತ್ತು ಈ ರಕಅತ್ ಪೂರ್ಣಗೊಳಿಸಿ ಕೊನೆಯ ಅತ್ತಹಿಯಾತ್'ಗೆ ಕುಳಿತುಕೊಳ್ಳುವ ಸ್ಥಿತಿಯಲ್ಲಿ ಕುಳಿತುಕೊಂಡು ಅತ್ತಹಿಯಾತ್ ಹೇಳಿ ಸಲಾಂ ಹೇಳುವುದು.
🔹ಬಳಿಕ ಓರ್ವ
صلو علي سيدنا محمد
(ಸ್ವಲ್ಲೂ ಅಲಾ ಸಯ್ಯಿದಿನಾ ಮುಹಮ್ಮದ್) ಎಂದು ಹೇಳುವುದು ಮತ್ತು ಉಳಿದವರು ಅದಕ್ಕುತ್ತರವಾಗಿ
اللهم صل وسلم وبارك عليه
( ಅಲ್ಲಾಹುಮ್ಮ ಸ್ವಲ್ಲಿ ವಸಲ್ಲಿಂ ವಬಾರಿಕ್ ಅಲೈಹಿ). ಎಂದು ಹೇಳುತ್ತಾ ಎದ್ದು ನಿಲ್ಲುವುದು.
🔹ಬಳಿಕ ಮೊದಲಿನಂತೆ ನಿಯ್ಯತ್ ಮಾಡಿ ಮೇಲಿನ ಅದೇ ಕ್ರಮದಲ್ಲಿ ಎರಡು ರಕಅತ್ ನಿರ್ವಹಿಸಬೇಕು. ಹೀಗೆ ನಾಲ್ಕು ರಕಾತ್ ಪೂರ್ಣವಾದ ಬಳಿಕ ಓರ್ವ,
صلو علي النبي المصطف المختار سيدنا محمد وآله
(ಸ್ವಲ್ಲೂ ಅಲನ್ನಬಿಯಿಲ್ ಮುಸ್ತಫಲ್ ಮುಖ್ತಾರಿ ಸಯ್ಯಿದಿನಾ ಮುಹಮ್ಮದಿನ್ ವ'ಆಲಿಹೀ)
ಎಂದು ಹೇಳುವುದು. ಮತ್ತು ಉಳಿದವರು ಅದಕ್ಕೆ ಉತ್ತರವಾಗಿ
اللهم صل علي سيدنا محمدٍ وعلي آل سيدنا محمد وبارك وسلم عليه
(ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯದಿನಾ ಮುಹಮ್ಮದಿನ್ ವಅಲಾ ಆಲಿ ಸಯ್ಯದಿನಾ ಮುಹಮ್ಮದಿನ್ ವಬಾರಿಕ್ ವಸಲ್ಲಿಮ್ ಅಲೈಹಿ) ಎಂದು ಮೂರು ಬಾರಿ ಹಾಗೂ
اشهد ان لآ اله الاّ الله استغفر الله اللهم اني اسالك الجنة و اعوذبك من النار
( ಅಶ್ಹದು ಅನ್'ಲಾ ಇಲಾಹ ಇಲ್ಲಲ್ಲಾಹು ಅಸ್ತಗುಫಿರುಲ್ಲಾಹ್ ಅಲ್ಲಾಹುಮ್ಮ ಇನ್ನಿ ಅಸ್'ಅಲುಕಲ್ ಜನ್ನತ ವ ಅಊಝುಬಿಕ ಮಿನನ್ನಾರ್.)
ನಂತರ ಪ್ರಥಮ ಹತ್ತರಲ್ಲಿ
اللهم ارحمني يا ارحم الراحمين
( ಅಲ್ಲಾಹುಮ್ಮ ಅರ್'ಹಂನಿ ಯಾ ಅರ್'ಹಮ ರಾಹಿಮೀನ್) 3 ಬಾರಿ ಹೇಳಬೇಕು.
🔹ಇದೇ ಕ್ರಮದಲ್ಲಿ ಇನ್ನು ಇಂತಹ ರಕಾತ್ಗಳನ್ನು ಐದು ಬಾರಿ ನಿರ್ವಹಿಸಿದಾಗ ಇಪ್ಪತ್ತು ರಕಾತ್ ಗಳು ಪೂರ್ಣಗೊಳ್ಳುತ್ತದೆ. ನಾಲ್ಕು ರಕಾತ್ ಗಳು ಮುಗಿದ ಮೇಲೆ ಎದ್ದು ನಿಲ್ಲುವಾಗಲೂ ಎರಡು ರಕಾತ್ ಗಳ ಬಳಿಕ ಹೇಳಿದಂತಹ ಸ್ವಲಾತ್ ಹೇಳಬೇಕು. ಪ್ರತಿಯೊಂದು ರಕಾತ್'ಗಳಲ್ಲೂ ಫಾತಿಹಾದ ಬಳಿಕ ಬೇರೆ ಬೇರೆ ಸೂರತ್ ಓದಬೇಕು. ಇಪ್ಪತ್ತನೇ ರಕಾತ್'ನಿಂದ ಸಲಾಂ ಹೇಳಿದ ಕೂಡಲೇ استغفر الله العظيم ಎಂದು ಮೂರು ಬಾರಿ ಹೇಳಿ ಈ ದಿಕ್ರ್ ಹೇಳಬೇಕು.
اللهم انت السلام ومنك السلام واليك يرجع السلام حينا ربنا باِالسلام تباركت ربنا وتعاليت ياذ الجلال والاْكرام. اللهم اعني علي ذكرك وشكرك وحسن عبادتك وتوفيق طاعتك وإيمانك يآ الله
(ಅಲ್ಲಾಹುಮ್ಮ ಅಂತಸ್ಸಲಾಮ್ ವಮಿನ್'ಕಸ್ಸಲಾಮ್ ವಇಲೈಕ ಯರ್ಜಿಉ'ಸ್ಸಲಾಮ್ ಹಯ್ಯಿನಾ ರಬ್ಬನಾ ಬಿಸ್ಸಲಾಮ್ ತಬಾರಕ್'ತ ರಬ್ಬನಾ ವತಆಲೈತ ಯಾ ಝಲ್'ಜಲಾಲಿ ವಲ್ ಇಕ್'ರಾಮ್. ಅಲ್ಲಾಹುಮ್ಮ ಅಇನ್ನೀ ಅಲಾ ಝಿಕ್'ರಿಕ ವಶುಕ್'ರಿಕ ವಹುಸ್'ನಿ ಇಬಾದತಿಕ ವತವ್'ಫೀಕೀ ತ್ವಾಅತಿಕ ಯಾ ಅಲ್ಲಾಹ್)
✍(ಸಂಗ್ರಹ)
🕋 *ISLAMIC GROUP*🌺
Comments